ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 1

ಆಸಕ್ತಿ ಹುಟ್ಟಿಸುವ ಆರಂಭದ ಮಾತು

ಆಸಕ್ತಿ ಹುಟ್ಟಿಸುವ ಆರಂಭದ ಮಾತು

ಅ. ಕಾರ್ಯಗಳು 17:22

ಏನು ಮಾಡಬೇಕು: ಪೀಠಿಕೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಇರಬೇಕು. ನೀವು ಯಾವ ವಿಷಯದ ಬಗ್ಗೆ ಮಾತಾಡಲಿದ್ದೀರಿ ಎಂದು ಹೇಳಿ ಮತ್ತು ಅದಕ್ಕೆ ಯಾಕೆ ಗಮನ ಕೊಡಬೇಕೆಂದು ಸ್ಪಷ್ಟವಾಗಿ ಹೇಳಿ.

ಹೇಗೆ ಮಾಡಬೇಕು:

  • ಆಸಕ್ತಿ ಹುಟ್ಟಿಸಿ. ಕೇಳುಗರ ಆಸಕ್ತಿಯನ್ನು ಕೆರಳಿಸುವ ಪ್ರಶ್ನೆ, ನಿಜ-ಜೀವನದ ಅನುಭವ, ಸುದ್ದಿ ಅಥವಾ ಇನ್ಯಾವುದಾದರೂ ವಿಷಯವನ್ನು ಆರಿಸಿಕೊಳ್ಳಿ.

  • ವಿಷಯ ಹೇಳಿ. ನೀವು ಯಾವ ವಿಷಯದ ಬಗ್ಗೆ ಮಾತಾಡಲಿದ್ದೀರಿ ಮತ್ತು ಮಾತಾಡುವ ಉದ್ದೇಶ ಏನೆಂದು ಆರಂಭದಲ್ಲೇ ಸ್ಪಷ್ಟವಾಗಿ ಹೇಳಿ.

  • ವಿಷಯ ಯಾಕೆ ಮುಖ್ಯ ಎಂದು ಹೇಳಿ. ನೀವು ಹೇಳುವ ವಿಷಯ ಕೇಳುಗರ ಅಗತ್ಯಕ್ಕೆ ತಕ್ಕಂತೆ ಇರಲಿ. ಆ ವಿಷಯದಿಂದ ಅವರಿಗೆ ಏನು ಪ್ರಯೋಜನ ಸಿಗುತ್ತದೆ ಎಂದು ಅವರು ಅರ್ಥಮಾಡಿಕೊಳ್ಳಬೇಕು.