ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 10

ಧ್ವನಿಯ ಏರಿಳಿತ

ಧ್ವನಿಯ ಏರಿಳಿತ

ಯೆಹೆಜ್ಕೇಲ 9:1

ಏನು ಮಾಡಬೇಕು: ನಿಮ್ಮ ಧ್ವನಿಯ ಮಟ್ಟ, ಸ್ವರಭಾರ ಮತ್ತು ವೇಗವನ್ನು ಬದಲಾಯಿಸುವ ಮೂಲಕ ವಿಚಾರಗಳನ್ನು ಸ್ಪಷ್ಟವಾಗಿ ಹೇಳಿ ಮತ್ತು ಭಾವನೆಯನ್ನು ಕೆರಳಿಸಿ.

ಹೇಗೆ ಮಾಡಬೇಕು:

  • ಧ್ವನಿಯ ಮಟ್ಟವನ್ನು ಬದಲಾಯಿಸಿ. ಮುಖ್ಯಾಂಶಗಳಿಗೆ ಒತ್ತು ನೀಡಲು ಮತ್ತು ಸಭಿಕರ ಭಾವನೆಯನ್ನು ಬಡಿದೆಬ್ಬಿಸಲು ಗಟ್ಟಿಯಾಗಿ ಮಾತಾಡಿ. ಬೈಬಲಿನಲ್ಲಿರುವ ಒಂದು ನ್ಯಾಯತೀರ್ಪಿನ ಸಂದೇಶವನ್ನು ಓದುವಾಗಲೂ ಇದನ್ನೇ ಮಾಡಿ. ಕುತೂಹಲವನ್ನು ಕೆರಳಿಸಲು ಅಥವಾ ಭಯ ಆತಂಕವನ್ನು ತೋರಿಸಲು ತಗ್ಗುಧ್ವನಿಯಲ್ಲಿ ಮಾತಾಡಿ.

  • ಸ್ವರಭಾರವನ್ನು ಬದಲಾಯಿಸಿ. ನೀವು ಉತ್ಸಾಹ, ಚಿಂತೆ, ದುಃಖ ಇಂಥ ಭಾವನೆಗಳನ್ನು ವ್ಯಕ್ತಪಡಿಸುವಾಗ ಅದಕ್ಕೆ ತಕ್ಕ ಹಾಗೆ ಸ್ವರಭಾರವನ್ನು ಬದಲಾಯಿಸಿ.

  • ವೇಗವನ್ನು ಬದಲಾಯಿಸಿ. ಸಂತೋಷವನ್ನು ವ್ಯಕ್ತಪಡಿಸಲು ವೇಗವಾಗಿ ಮಾತಾಡಿ. ಪ್ರಾಮುಖ್ಯ ಅಂಶಗಳನ್ನು ಹೇಳುವಾಗ ಸ್ವಲ್ಪ ನಿಧಾನವಾಗಿ ಮಾತಾಡಿ.