ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 9

ಸೂಕ್ತವಾದ ಚಿತ್ರ ಮತ್ತು ವಿಡಿಯೋ

ಸೂಕ್ತವಾದ ಚಿತ್ರ ಮತ್ತು ವಿಡಿಯೋ

ಆದಿಕಾಂಡ 15:5

ಏನು ಮಾಡಬೇಕು: ಪ್ರಾಮುಖ್ಯ ಅಂಶಗಳು ಮನಸ್ಸಲ್ಲಿ ಉಳಿಯಲು ಚಿತ್ರ, ವಿಡಿಯೋ ಮತ್ತು ಬೇರೆ ವಸ್ತುಗಳನ್ನು ಉಪಯೋಗಿಸಿ.

ಹೇಗೆ ಮಾಡಬೇಕು:

  • ನಿಮ್ಮ ಬೋಧನೆಯನ್ನು ಉತ್ತಮಗೊಳಿಸಲು ಈ ಸಾಧನಗಳನ್ನು ಉಪಯೋಗಿಸಿ. ಚಿತ್ರ, ಭೂಪಟ, ಕಾಲರೇಖೆ ಅಥವಾ ಬೇರೆ ವಸ್ತುಗಳನ್ನು ಪ್ರಾಮುಖ್ಯ ಅಂಶಗಳಿಗೆ ಒತ್ತು ಕೊಡಲಿಕ್ಕಾಗಿ ಉಪಯೋಗಿಸಬಹುದು. ಸಣ್ಣ-ಪುಟ್ಟ ಅಂಶಗಳಿಗೆಲ್ಲ ಇವನ್ನು ಉಪಯೋಗಿಸುವ ಆವಶ್ಯಕತೆ ಇಲ್ಲ. ನೀವು ತೋರಿಸುವ ಸಾಧನವನ್ನು ಮಾತ್ರವಲ್ಲ ಅದರ ಮೂಲಕ ನೀವು ಹೇಳಲು ಬಯಸುವ ಅಂಶವನ್ನೂ ಕೇಳುಗರು ಮನಸ್ಸಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡಿ.

  • ನೀವು ತೋರಿಸುವ ಸಾಧನ ನಿಮ್ಮ ಸಭಿಕರಿಗೆ ಕಾಣಿಸುವ ತರ ಇರಬೇಕು. ಉದಾಹರಣೆಗೆ, ನೀವು ವೇದಿಕೆಯಿಂದ ಒಂದು ಚಿತ್ರವನ್ನು ತೋರಿಸುವುದಾದರೆ ಅದು ಸಭಿಕರಿಗೆ ಕಾಣಿಸುವಷ್ಟು ದೊಡ್ಡದಾಗಿರಬೇಕು.