ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 16

ಭರವಸೆ ಮತ್ತು ಪ್ರೋತ್ಸಾಹ

ಭರವಸೆ ಮತ್ತು ಪ್ರೋತ್ಸಾಹ

ಯೋಬ 16:5

ಏನು ಮಾಡಬೇಕು: ಸಮಸ್ಯೆ ಬಗ್ಗೆ ಹೆಚ್ಚು ಮಾತಾಡದೆ ಪರಿಹಾರದ ಬಗ್ಗೆ ಮಾತಾಡಿ. ಕೇಳುಗರಲ್ಲಿ ಭರವಸೆ ಮೂಡಿಸಿ.

ಹೇಗೆ ಮಾಡಬೇಕು:

  • ಕೇಳುಗರ ಬಗ್ಗೆ ಒಳ್ಳೇದು ನೆನಸಿ. ಸಹೋದರ-ಸಹೋದರಿಯರು ಯೆಹೋವನಿಗೆ ಇಷ್ಟವಾಗುವ ವಿಷಯಗಳನ್ನು ಮಾಡಲು ಬಯಸುತ್ತಾರೆ ಅನ್ನುವ ಭಾವನೆಯಿಂದ ಮಾತಾಡಿ. ಬುದ್ಧಿವಾದ ಕೊಡಬೇಕಾದಾಗಲೂ ಮೊದಲು ಶ್ಲಾಘಿಸಿ.

  • ನಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಮಾತಾಡಬೇಡಿ. ನಕಾರಾತ್ಮಕ ವಿಷಯಗಳನ್ನು ಕೆಲವೊಮ್ಮೆ ಹೇಳಬೇಕಾಗುತ್ತದೆ, ಆದರೆ ಅದರ ಬಗ್ಗೆ ತುಂಬ ಹೊತ್ತು ಮಾತಾಡುವ ಆವಶ್ಯಕತೆ ಇಲ್ಲ. ಒಟ್ಟಾರೆ ನಿಮ್ಮ ಭಾಷಣದಿಂದ ಜನರಿಗೆ ಪ್ರೋತ್ಸಾಹ ಸಿಗಬೇಕು.

  • ದೇವರ ವಾಕ್ಯವನ್ನು ಚೆನ್ನಾಗಿ ಉಪಯೋಗಿಸಿ. ಯೆಹೋವನು ಮಾನವರಿಗಾಗಿ ಏನು ಮಾಡಿದ್ದಾನೆ, ಮಾಡುತ್ತಿದ್ದಾನೆ, ಮಾಡಲಿದ್ದಾನೆ ಅನ್ನುವುದರ ಕಡೆಗೆ ಗಮನ ಹೋಗುವಂತೆ ಮಾಡಿ. ನಿಮ್ಮ ಭಾಷಣ ಕೇಳಿ ಜನರಲ್ಲಿ ಆಶಾಕಿರಣ ಮೂಡಬೇಕು, ಧೈರ್ಯ ಬರಬೇಕು.