ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 20

ಸೂಕ್ತವಾದ ಸಮಾಪ್ತಿ

ಸೂಕ್ತವಾದ ಸಮಾಪ್ತಿ

ಪ್ರಸಂಗಿ 12:13, 14

ಏನು ಮಾಡಬೇಕು: ನಿಮ್ಮ ನಿರೂಪಣೆಯ ಕೊನೆಯಲ್ಲಿ, ಕೇಳುಗರು ಕಲಿತ ವಿಷಯವನ್ನು ಒಪ್ಪಿಕೊಂಡು ಅನ್ವಯಿಸಿಕೊಳ್ಳಲು ಪ್ರೋತ್ಸಾಹಿಸಿ.

ಹೇಗೆ ಮಾಡಬೇಕು:

  • ನೀವು ಮಾತಾಡಿದ ವಿಷಯಕ್ಕೂ ಸಮಾಪ್ತಿಗೂ ಸಂಬಂಧ ಇರಬೇಕು. ಮುಖ್ಯಾಂಶಗಳನ್ನು ಮತ್ತು ಮುಖ್ಯ ವಿಷಯವನ್ನು ಪುನಃ ಹೇಳಿ ಅಥವಾ ಅದನ್ನು ಬೇರೆ ಮಾತುಗಳಲ್ಲಿ ಹೇಳಿ.

  • ಪ್ರಚೋದಿಸಿ. ಏನು ಮಾಡಬೇಕೆಂದು ಸ್ಪಷ್ಟವಾಗಿ ಹೇಳಿ. ಅದಕ್ಕಿರುವ ಬಲವಾದ ಕಾರಣಗಳನ್ನು ಕೊಡಿ. ನಿಶ್ಚಿತಾಭಿಪ್ರಾಯದಿಂದ ಮಾತಾಡಿ.

  • ಸರಳವಾಗಿರಲಿ, ಸಂಕ್ಷಿಪ್ತವಾಗಿರಲಿ. ಸಮಾಪ್ತಿಯಲ್ಲಿ ಹೊಸ ಮುಖ್ಯಾಂಶಗಳನ್ನು ತರಬೇಡಿ. ಏನು ಮಾಡಬೇಕೆಂದು ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸ್ಪಷ್ಟವಾಗಿ ಹೇಳಿ.