ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 18

ಪ್ರಯೋಜನ ತರುವ ಮಾಹಿತಿ

ಪ್ರಯೋಜನ ತರುವ ಮಾಹಿತಿ

1 ಕೊರಿಂಥ 9:19-23

ಏನು ಮಾಡಬೇಕು: ಕೇಳಿಸಿಕೊಳ್ಳುವ ವಿಷಯದ ಬಗ್ಗೆ ಕೇಳುಗರು ಯೋಚಿಸುವಂತೆ ಮಾಡಿ. ಆಗ ಅವರಿಗೆ ‘ಒಳ್ಳೇ ವಿಷಯ ಕಲಿಯಕ್ಕಾಯಿತು’ ಎಂಬ ಭಾವನೆ ಬರುತ್ತದೆ.

ಹೇಗೆ ಮಾಡಬೇಕು:

  • ನಿಮ್ಮ ಕೇಳುಗರಿಗೆ ಈಗಾಗಲೇ ಏನು ಗೊತ್ತೆಂದು ಯೋಚಿಸಿ. ಅವರು ಈಗಾಗಲೇ ಕೇಳಿಸಿಕೊಂಡಿರುವ ವಿಷಯವನ್ನು ಸುಮ್ಮನೆ ಹೇಳಿಕೊಂಡು ಹೋಗುವ ಬದಲು ಅದನ್ನು ಹೊಸ ದೃಷ್ಟಿಕೋನದಿಂದ ನೋಡಲು ಸಹಾಯಮಾಡಿ.

  • ಸಂಶೋಧನೆ ಮಾಡಿ ಮತ್ತು ಧ್ಯಾನಿಸಿ. ಮುಖ್ಯ ವಿಚಾರಗಳನ್ನು ವಿವರಿಸಲು ಅಷ್ಟು ಗೊತ್ತಿಲ್ಲದ ವಿಷಯಗಳನ್ನು ಅಥವಾ ಇತ್ತೀಚೆಗೆ ನಡೆದ ಘಟನೆಗಳನ್ನು ಸಾಧ್ಯವಾದಾಗೆಲ್ಲ ಸೇರಿಸಿ. ನಿಮಗೆ ಕೊಟ್ಟಿರುವ ಮಾಹಿತಿಯ ಬಗ್ಗೆ ಯೋಚಿಸಿ. ಈ ಮಾಹಿತಿಗೂ ನೀವು ಸಂಶೋಧನೆ ಮಾಡಿ ಸೇರಿಸಲು ಬಯಸುವ ವಿಷಯಗಳಿಗೂ ಇರುವ ಸಂಬಂಧದ ಬಗ್ಗೆ ಯೋಚಿಸಿ.

  • ಮಾಹಿತಿಯಿಂದ ಎಷ್ಟು ಪ್ರಯೋಜನ ಇದೆ ಎಂದು ತೋರಿಸಿ. ಬೈಬಲಿನ ಸಲಹೆ ದಿನನಿತ್ಯ ಜೀವನದಲ್ಲಿ ಹೇಗೆ ಸಹಾಯವಾಗುತ್ತದೆ ಎಂದು ವಿವರಿಸಿ. ನಿಮ್ಮ ಕೇಳುಗರಿಗೆ ಅನ್ವಯಿಸುವಂಥ ಸನ್ನಿವೇಶಗಳು, ಮನೋಭಾವಗಳು ಮತ್ತು ಚಟುವಟಿಕೆಗಳ ಬಗ್ಗೆ ಚರ್ಚಿಸಿ.