ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಪಾಠ 13

ಸ್ಪಷ್ಟವಾದ ವೈಯಕ್ತಿಕ ಅನ್ವಯ

ಸ್ಪಷ್ಟವಾದ ವೈಯಕ್ತಿಕ ಅನ್ವಯ

ಜ್ಞಾನೋಕ್ತಿ 3:21

ಏನು ಮಾಡಬೇಕು: ನೀವು ಹೇಳುತ್ತಿರುವ ವಿಷಯ ಕೇಳುಗರ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಅರ್ಥಮಾಡಿಸಿ. ಕಲಿತ ವಿಷಯವನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ತಿಳಿಸಿ.

ಹೇಗೆ ಮಾಡಬೇಕು:

  • ನಿಮ್ಮ ಕೇಳುಗರ ಬಗ್ಗೆ ಯೋಚಿಸಿ. ನೀವು ಹೇಳುವ ವಿಷಯವನ್ನು ಜನರು ಯಾಕೆ ಕೇಳಿಸಿಕೊಳ್ಳಬೇಕು ಎಂದು ಯೋಚಿಸಿ. ಮುಖ್ಯವಾಗಿ ಯಾವ ಅಂಶಗಳಿಂದ ಅವರಿಗೆ ಪ್ರಯೋಜನವಾಗುತ್ತದೆ ಎಂದು ಯೋಚಿಸಿ.

  • ನಿಮ್ಮ ಭಾಗ ಮುಗಿಯುವ ವರೆಗೂ ಕೇಳುಗರು ಏನು ಮಾಡಬೇಕೆಂದು ತೋರಿಸಿ. ಭಾಗದ ಆರಂಭದಿಂದಲೇ, ‘ಈ ವಿಷಯ ನನಗೇ ಹೇಳಿದಂತಿದೆ’ ಎಂದು ಕೇಳುಗರಿಗೆ ಅನಿಸಬೇಕು. ಪ್ರತಿ ಮುಖ್ಯಾಂಶವನ್ನು ತಿಳಿಸುವಾಗ ಅದನ್ನು ಹೇಗೆ ಅನ್ವಯಿಸಿಕೊಳ್ಳಬೇಕೆಂದು ಸಹ ಹೇಳಿ. ಮೇಲುಮೇಲಿಗೆ ವಿಷಯವನ್ನು ಹೇಳಿಕೊಂಡು ಹೋಗಬೇಡಿ.