ಮಾಹಿತಿ ಇರುವಲ್ಲಿ ಹೋಗಲು

ಸಂದರ್ಶನ | ರಾಕೆಲ್‌ ಹಾಲ್‌

ತನ್ನ ನಂಬಿಕೆಯನ್ನ ಪರೀಕ್ಷಿಸಿದ ಯೆಹೂದಿ ಸ್ತ್ರೀ

ತನ್ನ ನಂಬಿಕೆಯನ್ನ ಪರೀಕ್ಷಿಸಿದ ಯೆಹೂದಿ ಸ್ತ್ರೀ

ರಾಕೆಲ್‌ ಹಾಲ್‌ ಅವರ ತಾಯಿ ಇಸ್ರಾಯೇಲಿನಲ್ಲಿದ್ದ ಯೆಹೂದಿ ಸ್ತ್ರೀ ಆಗಿದ್ದರು. ಅವರ ತಂದೆ ಯೆಹೂದಿ ಧರ್ಮವನ್ನು ಸ್ವೀಕರಿಸಿದ ಆಸ್ಟ್ರಿಯ ದೇಶದವರಾಗಿದ್ದರು. ಅವರ ತಾತ ಮತ್ತು ಅಜ್ಜಿ ಝಯೋನಿಸ್ಟ್‌ ಪಂಗಡದವರಾಗಿದ್ದರು. 1948ರಲ್ಲಿ ಅವರು ಇಸ್ರಾಯೇಲಿಗೆ ಬಂದರು. ಅದೇ ವರ್ಷ ಇಸ್ರಾಯೇಲ್‌ ದೇಶಕ್ಕೆ ಸ್ವಾತಂತ್ರ್ಯ ಸಿಕ್ತು. ರಾಕೆಲ್‌ ಹಾಲ್‌ ಯಾಕೆ ತಮ್ಮ ನಂಬಿಕೆಯನ್ನ ಪರೀಕ್ಷಿಸಿದರು ಅಂತ ಎಚ್ಚರ! ಪತ್ರಿಕೆ ಜೊತೆ ಹೇಳಿಕೊಂಡಿದ್ದಾರೆ.

ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ?

ನಾನು 1979ರಲ್ಲಿ ಅಮೆರಿಕದಲ್ಲಿ ಹುಟ್ಟಿದೆ. ನನಗೆ ಮೂರು ವಯಸ್ಸಿದಾಗ ಅಪ್ಪ-ಅಮ್ಮ ಡಿವೋರ್ಸ್‌ ತಗೊಂಡ್ರು. ನಮ್ಮಮ್ಮ ನನ್ನನ್ನ ಯೆಹೂದಿ ಸಂಪ್ರದಾಯದ ಪ್ರಕಾರ ಬೆಳೆಸಿದರು. ನನ್ನನ್ನ ಯೆಶಿವಾಸ್‌ ಅಥವಾ ಯೆಹೂದಿ ಶಾಲೆಗೆ ಸೇರಿಸಿದರು. ನನಗೆ ಏಳು ವಯಸ್ಸಾದಾಗ ನಾವು ಇಸ್ರೇಲ್‌ ದೇಶಕ್ಕೆ ಹೋದ್ವಿ. ಅಲ್ಲಿ ಒಂದು ವರ್ಷ ಇದ್ವಿ. ಕೃಷಿಗೆ ಸಂಬಂಧಪಟ್ಟ ವಿಷಯಗಳನ್ನ ಕಲಿಸುತ್ತಿದ್ದ ಕಿಬುಟ್ಸ್‌ ಶಾಲೆಗೆ ಸೇರಿಕೊಂಡೆ. ನಂತರ ನಾವಿಬ್ಬರೂ ಮೆಕ್ಸಿಕೋಗೆ ಹೋದ್ವಿ.

ಅಲ್ಲಿ ಯೆಹೂದಿ ಆರಾಧನಾ ಮಂದಿರ ಇಲ್ಲದೇ ಇದ್ದರೂ ಯೆಹೂದಿ ಸಂಪ್ರದಾಯವನ್ನೇ ಪಾಲಿಸುತ್ತಿದ್ದೆ. ಸಬ್ಬತ್‌ ದಿನದಲ್ಲಿ ಮೇಣದ ಬತ್ತಿಗಳನ್ನ ಹಚ್ಚುತ್ತಿದ್ದೆ, ಟೋರಾ ಓದುತ್ತಿದ್ದೆ, ಪ್ರಾರ್ಥನೆಗಂತಾನೇ ಇರೋ ಸಿದ್ದೂರ್‌ ಅನ್ನೋ ಪುಸ್ತಕವನ್ನ ಬಳಸಿ ಪ್ರಾರ್ಥನೆ ಮಾಡುತ್ತಿದ್ದೆ. ನಂದೇ ಸತ್ಯಧರ್ಮ ಅಂತ ನನ್ನ ಕ್ಲಾಸ್‌ಮೇಟ್ಸಿಗೆ ಹೇಳುತ್ತಿದ್ದೆ. ಯೇಸುವಿನ ಸೇವೆ ಮತ್ತು ಬೋಧನೆ ಬಗ್ಗೆ ತಿಳಿಸುವ ಹೊಸ ಒಡಂಬಡಿಕೆಯನ್ನು ನಾನು ಯಾವತ್ತೂ ಓದಿರಲಿಲ್ಲ. ಯಾಕಂದರೆ ನಾನು ಅದನ್ನು ಓದಿ ತಲೆ ಕೆಡಿಸಿಕೊಳ್ಳುತ್ತೀನಿ ಅಂತ ಅಮ್ಮ ಅದನ್ನ ಓದಬೇಡ ಅಂತ ಹೇಳುತ್ತಿದ್ದರು.

ನೀವು ಯಾಕೆ ಹೊಸ ಒಡಂಬಡಿಕೆಯನ್ನ ಓದಬೇಕು ಅಂದುಕೊಂಡ್ರಿ?

ನಂಗೆ 17 ವರ್ಷ ಇದ್ದಾಗ ನನ್ನ ವಿದ್ಯಾಭ್ಯಾಸವನ್ನು ಮುಗಿಸೋಕೆ ಅಮೆರಿಕಾಗೆ ಹೋದ್ವಿ. ಅಲ್ಲಿ ನನ್ನ ಫ್ರೆಂಡ್‌ ಒಬ್ರು, ಯೇಸುವಿನ ಬಗ್ಗೆ ತಿಳಿದುಕೊಂಡಿದ್ದಕ್ಕೆ ಅವರ ಜೀವನ ತುಂಬ ಚೆನ್ನಾಗಿದೆ ಅಂತ ನನಗೆ ಹೇಳಿದರು.

ಅದಕ್ಕೆ ನಾನು “ಯೇಸುವನ್ನ ನಂಬಿದವರೆಲ್ಲ ದಾರಿತಪ್ಪಿದವರು” ಅಂದೆ.

ಆಗ ಅವರು “ನೀನು ಯಾವತ್ತಾದ್ರೂ ಹೊಸ ಒಡಂಬಡಿಕೆಯನ್ನು ಓದಿದ್ದೀಯ?” ಅಂತ ಕೇಳಿದರು.

ನಾನು “ಇಲ್ಲ” ಅಂದೆ.

ಹಾಗಾದ್ರೆ “ನಿನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ನೀನು ಹೇಗೆ ಅಭಿಪ್ರಾಯ ಹೇಳ್ತಿಯಾ?” ಅಂತ ಕೇಳಿದರು.

ಅವರು ಹೇಳಿದ ಮಾತಿನ ಬಗ್ಗೆ ನಾನು ಯೋಚನೆ ಮಾಡಿದೆ. ‘ಯಾವತ್ತೂ ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಅಭಿಪ್ರಾಯ ಹೇಳುತ್ತಿರಲಿಲ್ಲವಲ್ಲಾ’ ಅಂತ ನನ್ನ ಬಗ್ಗೆನೇ ನಂಗೆ ನಾಚಿಕೆ ಆಯ್ತು. ಆಮೇಲೆ ನಾನು ಅವರ ಹತ್ತಿರ ಹೊಸ ಒಡಂಬಡಿಕೆ ಬೈಬಲನ್ನ ತಗೊಂಡು ಓದೋಕೆ ಶುರು ಮಾಡಿದೆ.

ನೀವು ಓದಿದ್ದರ ಬಗ್ಗೆ ನಿಮಗೆ ಹೇಗನಿಸಿತು?

ಹೊಸ ಒಡಂಬಡಿಕೆಯನ್ನು ಬರೆದವರು ಯೆಹೂದ್ಯರು ಅಂತ ಗೊತ್ತಾದಾಗ ನನಗೆ ತುಂಬ ಆಶ್ಚರ್ಯ ಆಯಿತು. ನಾನು ಜಾಸ್ತಿ ಓದಿದಷ್ಟು ಯೇಸು ಬಗ್ಗೆ ಜಾಸ್ತಿ ತಿಳಿದುಕೊಂಡೆ. ಆತನು ಒಬ್ಬ ದೀನ, ಜನರನ್ನ ಪ್ರೀತಿಸೋ ಯೆಹೂದ್ಯ ಅಂತ ಗೊತ್ತಾಯ್ತು. ಆತನು ಜನರಿಗೆ ಸಹಾಯ ಮಾಡಿದನೇ ಹೊರತು ಯಾವತ್ತೂ ಕೆಟ್ಟದ್ದನ್ನ ಮಾಡಿಲ್ಲ ಅಂತ ಅರ್ಥಮಾಡಿಕೊಂಡೆ. ಆಮೇಲೆ ನಾನು ಲೈಬ್ರರಿಗೆ ಹೋಗಿ ಆತನ ಬಗ್ಗೆ ತಿಳಿಸೋ ಪುಸ್ತಕಗಳನ್ನ ಓದಿದೆ. ಅದರಲ್ಲಿ ಯಾವುದರಲ್ಲೂ ಯೇಸುನೇ ಮೆಸ್ಸೀಯ ಅಂತ ಹೇಳೋ ಯಾವ ವಿಷಯನೂ ಇರಲಿಲ್ಲ. ಕೆಲವರು ಯೇಸುನೇ ಸರ್ವಶಕ್ತ ದೇವರು ಅಂತ ಹೇಳುತ್ತಿದ್ದರು. ಇದು ಹೇಗೆ ಸಾಧ್ಯ ಅಂತ ನಾನು ಯೋಚಿಸುತ್ತಿದ್ದೆ. ಹಾಗಾದ್ರೆ ಯೇಸು ಯಾರಿಗೆ ಪ್ರಾರ್ಥನೆ ಮಾಡಿದ್ದು? ತನಗೇನಾ? ಅಷ್ಟೇ ಅಲ್ಲ ಯೇಸು ಸತ್ತು ಹೋದನು. ಆದರೆ ಬೈಬಲ್‌ ದೇವರ ಬಗ್ಗೆ ಆತನಿಗೆ “ಸಾವೇ ಇಲ್ಲ” * ಅಂತ ಹೇಳುತ್ತಲ್ವಾ?

ಆ ಪ್ರಶ್ನೆಗೆಲ್ಲ ನಿಮಗೆ ಹೇಗೆ ಉತ್ತರ ಸಿಕ್ತು?

ಸತ್ಯದಲ್ಲಿ ಯಾವತ್ತೂ ಗೊಂದಲ ಅನ್ನೋದು ಇರೋದಿಲ್ಲ. ಅದಕ್ಕೆ ಸತ್ಯ ಏನು ಅಂತ ಹುಡುಕೋಕೆ ನಾನು ತೀರ್ಮಾನ ಮಾಡಿದೆ. ನಾನು ಮೊದಲನೇ ಸಾರಿ ಸಿದ್ದೂರ್‌ ಸಹಾಯ ಇಲ್ಲದೆ ಕಣ್ಣೀರಿಟ್ಟು ದೇವರ ಹತ್ತಿರ ಪ್ರಾರ್ಥಿಸಿದೆ. ಕೂಡಲೇ ಯಾರೋ ನನ್ನ ಮನೆ ಬಾಗಿಲನ್ನ ತಟ್ಟಿದರು. ಆಗ ನಾನು ಹೋಗಿ ನೋಡಿದರೆ ಇಬ್ಬರು ಯೆಹೋವನ ಸಾಕ್ಷಿಗಳು. ಅವರು ನನಗೆ ಅಪೇಕ್ಷಿಸು ಕಿರುಹೊತ್ತಗೆ ಕೊಟ್ರು. ಆಮೇಲೆ ನಾನು ಅವರ ಜೊತೆ ಚರ್ಚೆ ಮಾಡಿದಾಗೆಲ್ಲ ಯೆಹೋವನ ಸಾಕ್ಷಿಗಳು ಬೈಬಲಿನಲ್ಲಿ ಇರೋದನ್ನ ಮಾತ್ರ ನಂಬುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಾಯ್ತು. ಉದಾಹರಣೆಗೆ, ಯೇಸು ತ್ರಿಯೇಕದ ಒಂದು ಭಾಗ ಅಂತ ಅವರು ನಂಬಲ್ಲ. ಬದಲಿಗೆ ಆತನು “ದೇವರ ಮಗ” * ಮತ್ತು ಆತನನ್ನ ‘ದೇವರು ಮೊದಲು ಸೃಷ್ಟಿ ಮಾಡಿದನು’ * ಅಂತ ನಂಬುತ್ತಾರೆ ಅನ್ನೋದು ಗೊತ್ತಾಯ್ತು.

ಆಮೇಲೆ ನಾನು ಮೆಕ್ಸಿಕೋಗೆ ವಾಪಸ್‌ ಹೋದೆ. ಅಲ್ಲಿ ಯೆಹೋವನ ಸಾಕ್ಷಿಗಳ ಜೊತೆ ಮೆಸ್ಸೀಯನ ಬಗ್ಗೆ ಇರೋ ತುಂಬ ಪ್ರವಾದನೆಗಳನ್ನು ಕಲಿತೆ. ‘ಆಗ ಮೆಸ್ಸೀಯನ ಬಗ್ಗೆ ಇಷ್ಟೊಂದು ಪ್ರವಾದನೆಗಳು ಇತ್ತಾ’ ಅಂತ ನನಗೆ ಆಶ್ಚರ್ಯ ಆಯ್ತು. ಆದರೂ ನನ್ನ ಮನಸ್ಸಿನಲ್ಲಿ ಒಂದು ಸಂಶಯ ಇತ್ತು. ಈ ಇಲ್ಲಾ ಭವಿಷ್ಯವಾಣಿಗಳನ್ನು ಯೇಸು ಮಾತ್ರ ನೆರವೇರಿಸಲಿಕ್ಕೆ ಸಾಧ್ಯವಿತ್ತಾ? ಈ ಭವಿಷ್ಯವಾಣಿಗಳೆಲ್ಲ ತನ್ನಲ್ಲೇ ನೆರವೇರೋ ಹಾಗೆ ಯೇಸು ಏನಾದರೂ ಯೋಜನೆ ಮಾಡಿದನಾ?

ನೀವು ಕಲಿಯುತ್ತಾ ಇರೋದೇ ಸತ್ಯ ಅಂತ ನಿಮಗೆ ಹೇಗೆ ಮನವರಿಕೆ ಆಯಿತು?

ತನ್ನಲ್ಲೇ ನೆರವೇರೋ ತರ, ಯಾರಿಂದನೂ ಮೊದಲೇ ಯೋಜನೆ ಮಾಡೋಕೆ ಸಾಧ್ಯವಿರದ ಕೆಲವು ಭವಿಷ್ಯವಾಣಿಗಳನ್ನು ಅವರು ನನಗೆ ತೋರಿಸಿದರು. ಉದಾಹರಣೆಗೆ 700 ವರ್ಷಕ್ಕಿಂತ ಮುಂಚೆ ಮೆಸ್ಸೀಯ ಯೂದಾಯದ ಬೇತ್ಲೆಹೇಮಿನಲ್ಲಿ ಹುಟ್ಟುತ್ತಾನೆ ಅಂತ ಪ್ರವಾದಿ ಮೀಕ ಹೇಳಿದನು. * ಮೆಸ್ಸೀಯನಿಗೆ ತಾನೆಲ್ಲಿ ಹುಟ್ಟಬೇಕು ಅಂತ ನಿಯಂತ್ರಿಸೋಕೆ ಸಾಧ್ಯ ಇತ್ತಾ? ಮೆಸ್ಸೀಯನನ್ನ ಅಪರಾಧಿ ತರ ಅವಮಾನ ಮಾಡಿ ಕೊಲ್ಲಲಾಗುತ್ತದೆ. ಆದ್ರೆ ಶ್ರೀಮಂತರ ಜೊತೆ ಸಮಾಧಿ ಮಾಡಲಾಗುತ್ತೆ ಅಂತ ಯೆಶಾಯ ಹೇಳಿದನು. * ಈ ಎಲ್ಲಾ ಪ್ರವಾದನೆಗಳು ಚಾಚೂತಪ್ಪದೆ ಯೇಸುವಿನಲ್ಲಿ ನೆರವೇರಿತು.

ನನಗೆ ಸಹಾಯ ಮಾಡಿದ ಇನ್ನೊಂದು ವಿಷಯ ಯೇಸುವಿನ ವಂಶಾವಳಿ. ದಾವೀದನ ವಂಶಾವಳಿಯಲ್ಲಿ ಮೆಸ್ಸೀಯ ಹುಟ್ಟುತ್ತಾನೆ ಅಂತ ಬೈಬಲ್‌ ಹೇಳುತ್ತೆ. * ಹಿಂದಿನ ಕಾಲದಲ್ಲಿದ್ದ ಯೆಹೂದಿಯರು ವಂಶಾವಳಿಯ ದಾಖಲೆಯನ್ನು ಇಡುತ್ತಿದ್ದರು. ಜನರು ಯೇಸುವನ್ನು “ದಾವೀದನ ಮಗ” * ಅಂತ ಕರೆದರು. ಒಂದುವೇಳೆ ಯೇಸು ದಾವೀದನ ವಂಶಾವಳಿಯಲ್ಲಿ ಹುಟ್ಟಿರಲಿಲ್ಲ ಅಂದಿದ್ದರೆ ಅವನ ಶತ್ರುಗಳು ಇವನು ದಾವೀದನ ವಂಶಾವಳಿಯಲ್ಲಿ ಹುಟ್ಟಿದವನಲ್ಲ ಅಂತ ಕೂಗಾಡುತ್ತಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ.

ಯೇಸು ಸತ್ತು 37 ವರ್ಷ ಆದಮೇಲೆ ಅಂದ್ರೆ ಕ್ರಿ.ಶ. 70ರಲ್ಲಿ ರೋಮನ್‌ ಸೈನಿಕರು ಯೆರೂಸಲೇಮಿನ ಮೇಲೆ ಆಕ್ರಮಣ ಮಾಡಿದರು. ಆಗ ಯೇಸುವಿನ ವಂಶಾವಳಿ ಇದ್ದ ದಾಖಲೆ ಒಂದೋ ಕಳೆದು ಹೋಗಿರಬೇಕು, ಇಲ್ಲ ನಾಶ ಆಗಿರಬೇಕು. ಹಾಗಾಗಿ ಕ್ರಿ.ಶ. 70 ಕ್ಕಿಂತ ಮುಂಚೆನೇ ಮೆಸ್ಸೀಯ ಬಂದಿರಲೇಬೇಕು. ಅದಕ್ಕೆ ಆ ವಂಶಾವಳಿಯ ದಾಖಲೆಯನ್ನ ಬಳಸಿ ಆತನನ್ನು ಗುರುತಿಸೋಕೆ ಸಾಧ್ಯ ಆಯ್ತು.

ಕೊನೆಗೂ ನಿಮಗೆ ಏನು ಅರ್ಥ ಆಯ್ತು?

ಧರ್ಮೋಪದೇಶಕಾಂಡ 18:18, 19ರಲ್ಲಿ ದೇವರು ಇಸ್ರಾಯೇಲಿನಲ್ಲಿ, ಮೋಶೆಯಂಥ ಒಬ್ಬ ಪ್ರವಾದಿಯನ್ನ ನೇಮಿಸುತ್ತಾನೆ ಅಂತ ಮುಂಚೆನೇ ಹೇಳಿದನು. “ನನ್ನ ಹೆಸ್ರಲ್ಲಿ ಆ ಪ್ರವಾದಿ ಹೇಳೋ ನನ್ನ ಮಾತುಗಳನ್ನ ಯಾರು ಕೇಳಲ್ವೋ ಅವ್ನಿಂದ ಲೆಕ್ಕ ಕೇಳ್ತೀನಿ” ಅಂತ ದೇವರು ಹೇಳಿದನು. ಬೈಬಲನ್ನ ಚೆನ್ನಾಗಿ ಕಲಿತಾಗ ನಜರೇತಿನಲ್ಲಿರೋ ಯೇಸುನೇ ಆ ಪ್ರವಾದಿ ಅಂತ ನನಗೆ ಚೆನ್ನಾಗಿ ಅರ್ಥ ಆಯ್ತು.

^ ಮತ್ತಾಯ 1ನೇ ಅಧ್ಯಾಯದಲ್ಲಿ ಯೇಸುವಿನ ತಂದೆಯ ವಂಶಾವಳಿ ಇದೆ ಮತ್ತು ಲೂಕ 3ನೇ ಅಧ್ಯಾಯದಲ್ಲಿ ತಾಯಿಯ ವಂಶಾವಳಿ ಇದೆ. ಮತ್ತಾಯ 21:9.