ಯೆಶಾಯ 9:1-21

  • ಗಲಿಲಾಯದಲ್ಲಿ ಒಂದು ದೊಡ್ಡ ಬೆಳಕು (1-7)

    • ‘ಸಮಾಧಾನದ ಪ್ರಭುವಿನ’ ಜನನ (6, 7)

  • ಯೆಹೋವನ ಕೈ ಇಸ್ರಾಯೇಲ್ಯರ ವಿರುದ್ಧ (8-21)

9  ಹಾಗಿದ್ರೂ ಆ ಅಂಧಕಾರ ಈ ಹಿಂದೆ ಜೆಬುಲೂನ್‌ ಹಾಗೂ ನಫ್ತಾಲಿ ದೇಶವನ್ನ ನೀಚವಾಗಿ ನೋಡ್ತಿದ್ದ ಸಮಯದಲ್ಲಿ ಇದ್ದಂಥ ಅಂಧಕಾರದ ತರ ಇರಲ್ಲ ಮತ್ತು ದೇಶಕ್ಕೆ ವಿಪತ್ತು ಬಂದ ಸಮಯದಲ್ಲಿ ಇದ್ದಂಥ ಅಂಧಕಾರದ ತರನೂ ಇರಲ್ಲ.+ ಆದ್ರೆ ಆಮೇಲೆ ದೇವರು ಆ ದೇಶದ ಗೌರವ ಹೆಚ್ಚಿಸ್ತಾನೆ. ಆ ದೇಶ ಸಮುದ್ರದ ದಾರಿಯಲ್ಲಿ, ಯೋರ್ದನಿನ ಪ್ರಾಂತ್ಯದಲ್ಲಿ ಇರೋದು ಮತ್ತು ಅದನ್ನ ಅನ್ಯಜನಾಂಗಗಳ ಗಲಿಲಾಯ ಅಂತ ಕರಿತಾರೆ.   ಕತ್ತಲಲ್ಲಿ ನಡಿತಿದ್ದ ಜನ ದೊಡ್ಡ ಬೆಳಕನ್ನ ನೋಡಿದ್ರು. ಯಾವ ದೇಶದಲ್ಲಿ ತುಂಬ ಕತ್ತಲೆಇತ್ತೋ ಅಲ್ಲಿನ ಜನ್ರ ಮೇಲೆ ಬೆಳಕು ಪ್ರಕಾಶಿಸ್ತು.+   ನೀನು ಆ ದೇಶದ ಜನಸಂಖ್ಯೆಯನ್ನ ತುಂಬಿತುಳುಕೋ ತರ ಮಾಡಿದ್ದೀಯ,ಅದ್ರ ಸಂತೋಷನ ಹೆಚ್ಚಿಸಿದ್ದೀಯ. ಜನ ಸುಗ್ಗಿಕಾಲದಲ್ಲಿ,ಕೊಳ್ಳೆ ಹಂಚಿಕೊಳ್ಳುವಾಗ ಖುಷಿಪಡೋ ತರಆ ದೇಶದ ಜನ್ರು ನಿನ್ನ ಮುಂದೆ ಖುಷಿಪಡ್ತಾರೆ.   ಮಿದ್ಯಾನ್ಯರು ಸೋತುಹೋದ ದಿನ ಮಾಡಿದ ತರನೇನೀನು ಅವ್ರ ಭಾರವಾದ ನೊಗವನ್ನ,ಅವ್ರ ಹೆಗಲುಗಳ ಮೇಲಿನ ಬೆತ್ತವನ್ನ, ಅವ್ರ ಯಜಮಾನನ ಕೋಲನ್ನ ಮುರಿದುಹಾಕಿದೆ.+   ಭೂಮಿಯನ್ನ ನಡುಗಿಸೋ ರೀತಿಯಲ್ಲಿ ಹೆಜ್ಜೆಗಳನ್ನಿಡೋ ಸೈನಿಕರ ಚಪ್ಪಲಿಯನ್ನ,ರಕ್ತದಿಂದ ಒದ್ದೆಯಾಗಿರೋ ಅವ್ರ ಬಟ್ಟೆಯನ್ನಬೆಂಕಿ ನುಂಗಿಹಾಕುತ್ತೆ.   ಯಾಕಂದ್ರೆ ನಮಗಾಗಿ ಒಂದು ಮಗು ಹುಟ್ಟಿದೆ,+ನಮಗೆ ಒಬ್ಬ ಮಗನನ್ನ ಕೊಡಲಾಗಿದೆ,ಅವನ ಹೆಗಲ ಮೇಲೆ ಅಧಿಕಾರ ಇರುತ್ತೆ.*+ ಅವನನ್ನ ಅದ್ಭುತ ಸಲಹೆಗಾರ,+ ಬಲಿಷ್ಠ ದೇವರು,+ ಶಾಶ್ವತಕ್ಕೂ ಇರೋ ತಂದೆ, ಸಮಾಧಾನದ ಪ್ರಭು ಅನ್ನೋ ಹೆಸ್ರುಗಳಿಂದ ಕರೆಯಲಾಗುತ್ತೆ.   ಅವನ ಅಧಿಕಾರ ಹೆಚ್ಚಾಗ್ತಾ ಹೋಗುತ್ತೆ,ಶಾಂತಿಗೆ ಅಂತ್ಯ ಇರಲ್ಲ,+ಅವನು ತನ್ನ ಆಳ್ವಿಕೆಯಲ್ಲಿ ದಾವೀದನ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ,+ಅವನು ತನ್ನ ಸಾಮ್ರಾಜ್ಯವನ್ನ ದೃಢವಾಗಿ ಸ್ಥಾಪಿಸ್ತಾನೆ.+ ಅವನು ಇವತ್ತಿಂದ ನಿತ್ಯನಿರಂತರಕ್ಕೂನ್ಯಾಯದಿಂದ+ ಮತ್ತು ನೀತಿಯಿಂದ+ ಆಳ್ವಿಕೆ ಮಾಡ್ತಾನೆ. ಸೈನ್ಯಗಳ ದೇವರಾದ ಯೆಹೋವನ ಹುರುಪು ಇದನ್ನ ನಿಜ ಮಾಡುತ್ತೆ.   ಯೆಹೋವ ಯಾಕೋಬನ ವಿರುದ್ಧ ಒಂದು ಘೋಷಣೆ ಮಾಡಿದನು,ಅದು ಇಸ್ರಾಯೇಲ್ಯರ ವಿರುದ್ಧವಾಗಿತ್ತು.+   ಈ ಘೋಷಣೆ ಎಲ್ಲ ಜನ್ರಿಗೆಅಂದ್ರೆ ಎಫ್ರಾಯೀಮ್‌ ಮತ್ತು ಸಮಾರ್ಯದಲ್ಲಿ ಇರುವವರಿಗೆ ಗೊತ್ತಾಗುತ್ತೆ. ಅವರು ದುರಹಂಕಾರದಿಂದ, ತಮ್ಮ ಹೃದಯದ ಸೊಕ್ಕಿನಿಂದ ಹೀಗೆ ಹೇಳ್ತಾರೆ 10  “ಇಟ್ಟಿಗೆಯಿಂದ ಕಟ್ಟಿದ ಮನೆ ಬಿದ್ದುಹೋದ್ರೆ ಏನಂತೆನಾವು ಕಲ್ಲಿಂದ ಮನೆ ಕಟ್ಟೋಣ.+ ಅತ್ತಿ ಮರಗಳನ್ನ ಕತ್ತರಿಸಿ ಹಾಕಿದ್ರೆ ಏನಂತೆಅವುಗಳ ಜಾಗದಲ್ಲಿ ದೇವದಾರು ಮರಗಳನ್ನ ನೆಡೋಣ.” 11  ಯೆಹೋವ ರೆಚೀನನ ಶತ್ರುಗಳನ್ನ ಅವನ ವಿರುದ್ಧ ಎಬ್ಬಿಸ್ತಾನೆ,ಇಸ್ರಾಯೇಲಿನ ಶತ್ರುಗಳನ್ನ ಆಕ್ರಮಣ ಮಾಡೋಕೆ ಪ್ರೇರೇಪಿಸ್ತಾನೆ, 12  ಪೂರ್ವದಿಂದ ಅರಾಮ್ಯರು, ಪಶ್ಚಿಮದಿಂದ ಫಿಲಿಷ್ಟಿಯರು ಬರ್ತಾರೆ+ಅವರು ಬಾಯಿ ತೆರೆದು ಇಸ್ರಾಯೇಲನ್ನ ನುಂಗಿಬಿಡ್ತಾರೆ.+ ಇಷ್ಟೆಲ್ಲ ಆದ್ರೂ ಆತನ ಕೋಪ ತಣ್ಣಗಾಗಲ್ಲ,ಅವ್ರನ್ನ ಶಿಕ್ಷಿಸೋಕೆ ಆತನು ತನ್ನ ಕೈ ಎತ್ತುತ್ತಾನೆ.+ 13  ಯಾಕಂದ್ರೆ ಜನ ತಮ್ಮನ್ನ ಹೊಡೆಯುವವನ ಹತ್ರ ವಾಪಸ್‌ ಹೋಗಲ್ಲ,ಸೈನ್ಯಗಳ ದೇವರಾದ ಯೆಹೋವನನ್ನ ಅವರು ಹುಡ್ಕೊಂಡು ಹೋಗಲಿಲ್ಲ.+ 14  ಹಾಗಾಗಿ ಯೆಹೋವ ಒಂದೇ ದಿನದಲ್ಲಿ ಇಸ್ರಾಯೇಲಿನತಲೆ, ಬಾಲ, ಚಿಗುರು ಮತ್ತು ಜಂಬುಹುಲ್ಲನ್ನ* ಕಡಿದು ಹಾಕ್ತಾನೆ.+ 15  ಹಿರಿಯನೂ ಗೌರವಸ್ಥನೂ ಆಗಿರೋ ವ್ಯಕ್ತಿ ಅದ್ರ ತಲೆ ಆಗಿದ್ದಾನೆ,ತಪ್ಪಾದ ನಿರ್ದೇಶನ ಕೊಡೋ ಪ್ರವಾದಿ ಅದ್ರ ಬಾಲ ಆಗಿದ್ದಾನೆ.+ 16  ಅವ್ರನ್ನ ಮುನ್ನಡೆಸುವವರು ಜನ್ರನ್ನ ಅಲೆಯೋ ತರ ಮಾಡಿದ್ದಾರೆ,ಅವ್ರನ್ನ ಹಿಂಬಾಲಿಸುವವರು ಗಲಿಬಿಲಿ ಆಗಿದ್ದಾರೆ. 17  ಯೆಹೋವ ಅವ್ರ ಯುವಕರನ್ನ ನೋಡಿ ಸಂತೋಷಪಡಲ್ಲ,ಆತನು ಅವ್ರಲ್ಲಿರೋ ತಂದೆಯಿಲ್ಲದ ಮಕ್ಕಳಿಗೆ* ಮತ್ತು ವಿಧವೆಯರಿಗೆ ಕರುಣೆ ತೋರಿಸಲ್ಲಯಾಕಂದ್ರೆ ಅವ್ರೆಲ್ಲ ಧರ್ಮಭ್ರಷ್ಟರಾಗಿದ್ದಾರೆ, ದುಷ್ಟರಾಗಿದ್ದಾರೆ.+ ಅಷ್ಟೇ ಅಲ್ಲ ಅವ್ರೆಲ್ಲ ತಲೆಬುಡ ಇಲ್ಲದೆ ಮಾತಾಡ್ತಾರೆ. ಇಷ್ಟೆಲ್ಲ ಆದ್ರೂ ಆತನ ಕೋಪ ತಣ್ಣಗಾಗಲ್ಲ,ಅವ್ರನ್ನ ಶಿಕ್ಷಿಸೋಕೆ ಆತನು ತನ್ನ ಕೈ ಎತ್ತುತ್ತಾನೆ.+ 18  ಕೆಟ್ಟತನ ಬೆಂಕಿ ತರ ಉರಿತಿದೆ,ಅದು ಮುಳ್ಳುಪೊದೆಗಳನ್ನ, ಕಳೆಗಳನ್ನ ನುಂಗಿಹಾಕುತ್ತೆ. ಅದು ಕಾಡಿನ ಕುರುಚಲು ಗಿಡಗಳನ್ನ ಸುಟ್ಟುಬಿಡುತ್ತೆ,ಅವುಗಳ ಹೊಗೆ ಆಕಾಶದ ಕಡೆ ಏರಿಹೋಗುತ್ತೆ. 19  ಸೈನ್ಯಗಳ ದೇವರಾದ ಯೆಹೋವನ ರೋಷಕ್ಕೆದೇಶ ಹೊತ್ತಿ ಉರಿತಿದೆ,ಜನ್ರನ್ನ ಬೆಂಕಿ ನುಂಗಿಹಾಕುತ್ತೆ. ಒಬ್ಬ ವ್ಯಕ್ತಿ ತನ್ನ ಸಹೋದರನನ್ನೇ ಬಿಡಲ್ಲ. 20  ಒಬ್ಬ ತನ್ನ ಬಲಭಾಗದ ಮಾಂಸವನ್ನ ಕತ್ತರಿಸಿ ತಿಂತಾನೆಆದ್ರೆ ಅವನಿಗೆ ಹಸಿವು ತೀರಲ್ಲ,ಒಬ್ಬ ತನ್ನ ಎಡಭಾಗದ ಮಾಂಸವನ್ನ ತಿಂತಾನೆಆದ್ರೆ ಅವನಿಗೆ ತೃಪ್ತಿ ಆಗಲ್ಲ. ಪ್ರತಿಯೊಬ್ಬ ತನ್ನ ತೋಳಿನ ಮಾಂಸವನ್ನ ತಾನೇ ತಿಂತಾನೆ. 21  ಮನಸ್ಸೆ ಎಫ್ರಾಯೀಮನನ್ನ ನುಂಗಿಹಾಕ್ತಾನೆ,ಎಫ್ರಾಯೀಮ್‌ ಮನಸ್ಸೆಯನ್ನ ನುಂಗಿಹಾಕ್ತಾನೆ. ಅವರಿಬ್ರೂ ಸೇರಿ ಯೆಹೂದದ ವಿರುದ್ಧ ತಿರುಗಿಬೀಳ್ತಾರೆ.+ ಇಷ್ಟೆಲ್ಲ ಆದ್ರೂ ಆತನ ಕೋಪ ತಣ್ಣಗಾಗಲ್ಲ,ಅವ್ರನ್ನ ಶಿಕ್ಷಿಸೋಕೆ ಆತನು ತನ್ನ ಕೈ ಎತ್ತುತ್ತಾನೆ.+

ಪಾದಟಿಪ್ಪಣಿ

ಅಥವಾ “ಸರ್ಕಾರ ಇರುತ್ತೆ.”
ಬಹುಶಃ, “ಖರ್ಜೂರದ ಕೊಂಬೆ ಮತ್ತು ಆಪುಹುಲ್ಲು.”
ಅಥವಾ “ಅನಾಥರಿಗೆ.”