ಧರ್ಮೋಪದೇಶಕಾಂಡ 18:1-22

  • ಪುರೋಹಿತರ, ಲೇವಿಯರ ಪಾಲು

  • ಮಾಟಮಂತ್ರ ಮಾಡಬಾರದು (9-14)

  • ಮೋಶೆ ತರ ಒಬ್ಬ ಪ್ರವಾದಿ (15-19)

  • ಸುಳ್ಳು ಪ್ರವಾದಿಯನ್ನ ಗುರುತು ಹಿಡಿಯೋದು (20-22)

18  ಪುರೋಹಿತರಾಗಿ ಸೇವೆ ಮಾಡೋ ಲೇವಿಯರಿಗೆ, ಲೇವಿ ಕುಲಕ್ಕೆ ಇಸ್ರಾಯೇಲ್ಯರಿಗೆ ಸಿಗೋ ತರ ಯಾವ ಪಾಲೂ ಆಸ್ತಿನೂ ಸಿಗಲ್ಲ. ಬೆಂಕಿ ಮೂಲಕ ಯೆಹೋವನಿಗೆ ಮಾಡೋ ಅರ್ಪಣೆಗಳೇ ಅಂದ್ರೆ ಆತನಿಗೆ ಸಿಗೋ ಪಾಲೇ ಅವ್ರಿಗೆ ಆಹಾರ.+  ಹಾಗಾಗಿ ಅವ್ರ ಅಣ್ಣತಮ್ಮಂದ್ರಿಗೆ ಸಿಗೋ ತರ ಲೇವಿಯರಿಗೆ ಯಾವ ಆಸ್ತಿನೂ ಸಿಗಲ್ಲ. ಯೆಹೋವನೇ ಅವ್ರ ಆಸ್ತಿ. ಆತನೇ ಅವ್ರಿಗೆ ಆ ಮಾತು ಕೊಟ್ಟಿದ್ದಾನೆ.  ಯಾರಾದ್ರೂ ಹೋರಿ, ಕುರಿ ಬಲಿ ಕೊಟ್ರೆ ಅದ್ರ ಮುಂದಿನ ಕಾಲು, ದವಡೆ, ಹೊಟ್ಟೆನ ಪುರೋಹಿತರಿಗೆ ಕೊಡಬೇಕು. ಜನ್ರಿಂದ ಇವನ್ನ ಪಡಿಯೋ ಹಕ್ಕು ಅವ್ರಿಗಿದೆ.  ಅಷ್ಟೇ ಅಲ್ಲ ನೀವು ಧಾನ್ಯದ ಮೊದಲ ಬೆಳೆ, ಹೊಸ ದ್ರಾಕ್ಷಾಮದ್ಯ, ಮೊದ್ಲು ತೆಗೆದ ಎಣ್ಣೆ ಮತ್ತು ಮೊದಲ್ನೇ ಸಾರಿ ಕತ್ತರಿಸಿದ ಆಡು-ಕುರಿಗಳ ಉಣ್ಣೆಯನ್ನ ಪುರೋಹಿತರಿಗೆ ಕೊಡಬೇಕು. ಇವನ್ನೂ ಪಡಿಯೋ ಹಕ್ಕು ಅವ್ರಿಗಿದೆ.+  ನಿಮ್ಮ ದೇವರಾದ ಯೆಹೋವ ನಿಮ್ಮ ಎಲ್ಲ ಕುಲಗಳಿಂದ ಅವ್ರನ್ನ, ಅವ್ರ ಮಕ್ಕಳನ್ನ ಯೆಹೋವನ ಹೆಸ್ರಲ್ಲಿ ಯಾವಾಗ್ಲೂ ಸೇವೆ ಮಾಡೋಕೆ ಆರಿಸ್ಕೊಂಡಿದ್ದಾನೆ.+  ಇಸ್ರಾಯೇಲ್ಯರ ಯಾವುದಾದ್ರೂ ಒಂದು ಪಟ್ಟಣದಲ್ಲಿ ಇರೋ+ ಒಬ್ಬ ಲೇವಿ ಯೆಹೋವ ಆರಿಸ್ಕೊಳ್ಳೋ ಜಾಗಕ್ಕೆ*+ ಹೋಗೋಕೆ ಇಷ್ಟಪಟ್ರೆ  ಅವನು ಅಲ್ಲಿಗೆ ಹೋಗಬಹುದು. ಯೆಹೋವನ ಸೇವೆ ಮಾಡ್ತಿರೋ ತನ್ನ ಎಲ್ಲ ಲೇವಿ ಅಣ್ಣತಮ್ಮಂದಿರ ತರ ಅವನು ಕೂಡ ಅಲ್ಲಿ ತನ್ನ ದೇವರಾದ ಯೆಹೋವನ ಹೆಸ್ರಲ್ಲಿ ಸೇವೆ ಮಾಡಬಹುದು.+  ಆ ಜಾಗದಲ್ಲಿ ಅವನ ಅಣ್ಣತಮ್ಮಂದಿರಿಗೆ ಸಿಗೋಷ್ಟೇ ಆಹಾರ ಅವನಿಗೂ ಸಿಗುತ್ತೆ.+ ತಂದೆ-ತಾತಂದಿರಿಂದ ಸಿಕ್ಕಿದ ವಸ್ತುಗಳನ್ನ ಅವನು ಮಾರಿದ್ರಿಂದ ಬಂದ ಹಣ ಕೂಡ ಅವನಿಗೆ ಸಿಗುತ್ತೆ.  ನಿಮ್ಮ ದೇವರಾದ ಯೆಹೋವ ನಿಮಗೆ ಕೊಡೋ ದೇಶಕ್ಕೆ ಹೋದ್ಮೇಲೆ ಆ ದೇಶದಲ್ಲಿರೋ ಜನ್ರು ಮಾಡೋ ಅಸಹ್ಯ ಕೆಲಸಗಳನ್ನ ನೀವು ಮಾಡಬಾರದು.+ 10  ನಿಮ್ಮಲ್ಲಿ ಯಾರೂ ನಿಮ್ಮ ಮಗನನ್ನಾಗಲಿ ಮಗಳನ್ನಾಗಲಿ ಬೆಂಕಿಯಲ್ಲಿ ಆಹುತಿ ಕೊಡಬಾರದು.+ ಕಣಿಹೇಳೋರು,+ ಮಾಟಮಂತ್ರ ಮಾಡೋರು,+ ಶಾಸ್ತ್ರ ಹೇಳೋರು,+ ಮಂತ್ರವಾದಿಗಳು,+ 11  ವಶೀಕರಣ ಮಾಡೋರು, ಭವಿಷ್ಯ ಹೇಳೋರು,+ ಸತ್ತವ್ರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ಳೋರು+ ಅಥವಾ ಸತ್ತವ್ರನ್ನ ವಿಚಾರಿಸೋರು,+ ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. 12  ಇಂಥವರು ಯೆಹೋವನಿಗೆ ಅಸಹ್ಯ. ಬೇರೆ ಜನ್ರು ಇಂಥ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದಾನೇ ನಿಮ್ಮ ದೇವರಾದ ಯೆಹೋವ ಅವ್ರನ್ನ ನಿಮ್ಮಿಂದ ಓಡಿಸಿಬಿಡ್ತಾ ಇದ್ದಾನೆ. 13  ನೀವು ಯೆಹೋವ ದೇವರ ಮುಂದೆ ಕಳಂಕ ಇಲ್ಲದವರು ಅಂತ ತೋರಿಸಿ ಕೊಡಬೇಕು.+ 14  ನೀವು ಮುಂದೆ ಯಾರನ್ನ ಸೋಲಿಸ್ತೀರೋ ಆ ಜನ್ರು ಕಣಿ ಹೇಳೋರ ಹತ್ರ,+ ಮಾಟಮಂತ್ರ+ ಮಾಡೋರ ಹತ್ರ ಹೋಗಿ ಅವರು ಹೇಳೋ ಹಾಗೆ ಮಾಡ್ತಿದ್ದಾರೆ. ಆದ್ರೆ ನೀವು ಅಂಥ ಯಾವ ಕೆಲಸಾನೂ ಮಾಡೋಕೆ ನಿಮ್ಮ ದೇವರಾದ ಯೆಹೋವ ನಿಮಗೆ ಅನುಮತಿ ಕೊಟ್ಟಿಲ್ಲ. 15  ನಿಮ್ಮ ದೇವರಾದ ಯೆಹೋವ ನಿಮ್ಮ ಸಹೋದರರಿಂದಾನೇ ನನ್ನಂಥ ಒಬ್ಬ ಪ್ರವಾದಿನ ನಿಮಗಾಗಿ ನೇಮಿಸ್ತಾನೆ. ನೀವು ಅವನು ಹೇಳೋ ಹಾಗೆ ನಡೀಬೇಕು.+ 16  ಯಾಕಂದ್ರೆ ನೀವು ಹೋರೇಬಲ್ಲಿ ಸೇರಿ ಬಂದಾಗ+ ‘ನಮ್ಮ ದೇವರಾದ ಯೆಹೋವನ ಸ್ವರನ ನಾವು ಇನ್ನೂ ಕೇಳಿಸ್ಕೊಂಡ್ರೆ, ಈ ದೊಡ್ಡ ಬೆಂಕಿನ ಇನ್ನೂ ನೋಡಿದ್ರೆ ಸತ್ತು ಹೋಗ್ತೀವಿ’ + ಅಂತ ನಿಮ್ಮ ದೇವರಾದ ಯೆಹೋವನಿಗೆ ಹೇಳಿದ್ರಲ್ವಾ? 17  ಆಗ ಯೆಹೋವ ನನಗೆ ಹೀಗೆ ಹೇಳಿದನು: ‘ಅವರು ಹೇಳಿದ್ದು ಸರಿ. 18  ನಾನು ಅವ್ರ ಸಹೋದರರಿಂದಾನೇ ನಿನ್ನಂಥ ಒಬ್ಬ ಪ್ರವಾದಿನ ಅವ್ರಿಗಾಗಿ ನೇಮಿಸ್ತೀನಿ.+ ನನ್ನ ಮಾತುಗಳನ್ನ ಅವನಿಗೆ ಹೇಳ್ತೀನಿ,+ ನಾನು ಹೇಳೋ ಎಲ್ಲ ಆಜ್ಞೆಗಳನ್ನ ಅವನು ಅವ್ರಿಗೆ ಹೇಳ್ತಾನೆ.+ 19  ನನ್ನ ಹೆಸ್ರಲ್ಲಿ ಆ ಪ್ರವಾದಿ ಹೇಳೋ ನನ್ನ ಮಾತುಗಳನ್ನ ಯಾರು ಕೇಳಲ್ವೋ ಅವ್ನಿಂದ ಲೆಕ್ಕ ಕೇಳ್ತೀನಿ.+ 20  ಒಬ್ಬ ಪ್ರವಾದಿ ನಾನು ಹೇಳದೇ ಇರೋದನ್ನ ದುರಹಂಕಾರದಿಂದ ನನ್ನ ಹೆಸ್ರಲ್ಲಿ ಹೇಳಿದ್ರೆ, ಬೇರೆ ದೇವರುಗಳ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿದ್ರೆ ಅವನನ್ನ ಸಾಯಿಸಬೇಕು.+ 21  ಆದ್ರೆ “ಅವನು ಯೆಹೋವನ ಮಾತುಗಳನ್ನ ಹೇಳ್ತಿದ್ದಾನಾ ಇಲ್ವಾ ಅಂತ ಹೇಗೆ ತಿಳ್ಕೊಳ್ಳೋದು?” ಅನ್ನೋ ಯೋಚ್ನೆ ನಿಮಗೆ ಬಂದ್ರೆ ಇದನ್ನ ಮನಸ್ಸಲ್ಲಿಡಿ, 22  ಒಬ್ಬ ಪ್ರವಾದಿ ಯೆಹೋವನ ಹೆಸ್ರಲ್ಲಿ ಭವಿಷ್ಯ ಹೇಳಿ ಅವನು ಹೇಳಿದ ಹಾಗೆ ನಡಿದಿದ್ರೆ ಅದು ಯೆಹೋವನ ಮಾತಲ್ಲ, ಅವನು ಅದನ್ನ ದುರಹಂಕಾರದಿಂದ ಮಾತಾಡಿದ್ದಾನೆ. ಹಾಗಾಗಿ ನೀವು ಅವನಿಗೆ ಹೆದರಬಾರದು.’

ಪಾದಟಿಪ್ಪಣಿ

ಅದು, ಯೆಹೋವ ತನ್ನ ಆರಾಧನೆಗಾಗಿ ಆರಿಸ್ಕೊಳ್ಳೋ ಜಾಗ.