ಯೆಹೋವನ ಗುಣಗಳನ್ನು ಆಳವಾಗಿ ಗಣ್ಯಮಾಡಿ
“ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ.”—ಎಫೆ. 5:1.
1. (1) ಯೆಹೋವನ ಗುಣಗಳು ಎಂದ ತಕ್ಷಣ ಯಾವ ಗುಣಗಳು ನೆನಪಿಗೆ ಬರುತ್ತವೆ? (2) ದೇವರ ಗುಣಗಳ ಕುರಿತು ಹೆಚ್ಚು ತಿಳಿದುಕೊಳ್ಳುವುದರಿಂದ ನಮಗೆ ಯಾವ ಪ್ರಯೋಜನವಿದೆ?
ಯೆಹೋವನ ಗುಣಗಳು ಎಂದ ಕೂಡಲೆ ನಮಗೆ ಪ್ರೀತಿ, ನ್ಯಾಯ, ವಿವೇಕ, ಶಕ್ತಿ ನೆನಪಾಗುತ್ತದೆ. ಆದರೆ ಯೆಹೋವನಲ್ಲಿ ಇನ್ನೂ ಅನೇಕ ಸುಂದರ ಗುಣಗಳಿವೆ. ಇಲ್ಲಿಯವರೆಗಿನ ನಮ್ಮ ಪ್ರಕಾಶನಗಳಲ್ಲಿ ಯೆಹೋವನಲ್ಲಿರುವ 40ಕ್ಕಿಂತ ಹೆಚ್ಚು ಗುಣಗಳ ಕುರಿತು ತಿಳಿಸಲಾಗಿದೆ. ಹಾಗಾದರೆ ಕುಟುಂಬ ಅಧ್ಯಯನದಲ್ಲಿ ವೈಯಕ್ತಿಕ ಅಧ್ಯಯನದಲ್ಲಿ ಈ ಮನಮುಟ್ಟುವ ಗುಣಗಳ ಕುರಿತು ಎಷ್ಟೊಂದು ತಿಳಿದುಕೊಳ್ಳಲು ಸಾಧ್ಯವಿದೆ ಅಲ್ಲವೆ! ಯೆಹೋವನ ಗುಣಗಳ ಕುರಿತು ಆಳವಾದ ಅಧ್ಯಯನ ಮಾಡುವುದರಿಂದ ನಮಗೆ ಯಾವ ಪ್ರಯೋಜನವಿದೆ? ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನ ಕಡೆಗೆ ಗಣ್ಯತಾಭಾವ ಹೆಚ್ಚುತ್ತದೆ. ಆಗ ನಾವಾತನಿಗೆ ಇನ್ನೂ ಆಪ್ತರಾಗಲು ಬಯಸುತ್ತೇವೆ. ಆತನ ಗುಣಗಳನ್ನು ಅನುಕರಿಸಬೇಕೆಂಬ ಹಂಬಲ ತೀವ್ರವಾಗುತ್ತದೆ.—ಯೆಹೋ. 23:8; ಕೀರ್ತ. 73:28.
2. (1) ಯೆಹೋವನ ಗುಣಗಳ ಕಡೆಗೆ ನಮ್ಮ ಗಣ್ಯತೆಯನ್ನು ಬೆಳೆಸುವುದು ಹೇಗೆ? (2) ನಾವು ಏನನ್ನು ಚರ್ಚಿಸಲಿದ್ದೇವೆ?
2 “ಗಣ್ಯತೆ” ಅಂದರೇನು? ‘ಒಂದು ವಿಷಯದ ಮೌಲ್ಯವನ್ನು ಅರಿತು ಮಾನ್ಯಮಾಡುವುದೇ.’ ಇಂಥ ಗಣ್ಯತೆ ದಿನೇದಿನೇ ಹೆಚ್ಚಾಗಸಾಧ್ಯ. ಅದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ನೋಡೋಣ: ಹೊಸದೊಂದು ಅಡುಗೆಯನ್ನು ತಯಾರಿಸಿ ನಿಮ್ಮ ಮುಂದೆ ಇಡಲಾಗಿದೆ ಅಂದುಕೊಳ್ಳಿ. ನೀವದರ ಸುವಾಸನೆಯನ್ನು ಆಘ್ರಾಣಿಸಿದಂತೆ, ಪ್ರತಿಯೊಂದು ತುತ್ತನ್ನು ಸವಿದಂತೆ, ಮತ್ತೆ ನೀವೇ ಆ ಅಡುಗೆಯನ್ನು ತಯಾರಿಸಿ ಆಸ್ವಾದಿಸಿದಾಗ ಅದರ ಕಡೆಗಿನ ನಿಮ್ಮ ಗಣ್ಯತೆ ಹೆಚ್ಚಾಗುತ್ತಾ ಹೋಗುತ್ತೆ. ಹಾಗೆಯೇ ಯೆಹೋವನ ಗುಣವೊಂದರ ಕಡೆಗೆ ನಾವು ಗಣ್ಯತೆಯನ್ನು ಬೆಳೆಸಿಕೊಳ್ಳಬೇಕಾದರೆ ಅದರ ಒಳ್ಳೆ ಪರಿಚಯ ಮಾಡಿಕೊಳ್ಳಬೇಕು. ಮೆಲುಕು ಹಾಕಬೇಕು ನಂತರ ಸ್ವತಃ ಅನುಕರಿಸಬೇಕು. (ಎಫೆ. 5:1) ಈ ಲೇಖನದ ಮತ್ತು ಮುಂದಿನ ಎರಡು ಲೇಖನಗಳ ಉದ್ದೇಶ ಅದೇ. ಯೆಹೋವನ ಪ್ರಾಮುಖ್ಯ ಗುಣಗಳಲ್ಲದೆ ಇತರ ಗುಣಗಳನ್ನು ಸಹ ಮಾನ್ಯಮಾಡಲು ಅವು ನಮಗೆ ನೆರವಾಗುತ್ತವೆ. ಪ್ರತಿ ಗುಣದ ಬಗ್ಗೆ ನಾವು ಚರ್ಚಿಸುವಾಗ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯೋಣ: ಆ ಗುಣದ ಅರ್ಥ ಏನು? ಅದನ್ನು ಯೆಹೋವನು ಹೇಗೆ ತೋರಿಸುತ್ತಾನೆ? ಯೆಹೋವನ ಆ ಗುಣವನ್ನು ನಾವು ಹೇಗೆ ತೋರಿಸಬಲ್ಲೆವು?
ಯೆಹೋವನು ಸ್ನೇಹಪರನು
3, 4. (1) ಒಬ್ಬ ವ್ಯಕ್ತಿ ಸ್ನೇಹಪರನೋ ಎಂದು ಹೇಗೆ ಕಂಡುಹಿಡಿಯೋದು? (2) ಯೆಹೋವನು ಹೇಗೆ ‘ತಾನು ಸ್ನೇಹಪರನು’ ಎಂಬ ಆಶ್ವಾಸನೆಯನ್ನು ಕೊಟ್ಟಿದ್ದಾನೆ?
3 ಮೊದಲಿಗೆ “ಸ್ನೇಹಪರತೆ” ಎಂಬ ಗುಣದ ಬಗ್ಗೆ ನೋಡೋಣ. ಒಬ್ಬ ವ್ಯಕ್ತಿ ಸ್ನೇಹಪರನೋ ಎಂದು ಕಂಡುಹಿಡಿಯೋದು ಹೇಗೆ? ಯಾರು ದಯೆ ತೋರಿಸುತ್ತಾರೋ, ಯಾರೊಂದಿಗೆ ಮಾತಾಡಲು ನಾವು ಹಿಂಜರಿಕೆಯಿಲ್ಲದೇ ಹೋಗುತ್ತೇವೋ ಅವರನ್ನು ಸ್ನೇಹಪರ ವ್ಯಕ್ತಿ ಅಂತ ಹೇಳಬಹುದು. ಕೆಲವೊಮ್ಮೆ ಅವರ ಮಾತುಗಳಿಂದ, ಹಾವಭಾವಗಳಿಂದ ಅಥವಾ ಸನ್ನೆಗಳಿಂದ ಕಂಡುಹಿಡಿಯಬಹುದು.
4 ಯೆಹೋವನು ಸ್ನೇಹಪರತೆಯನ್ನು ಹೇಗೆ ತೋರಿಸುತ್ತಾನೆ? ಯೆಹೋವನು ನಮ್ಮ ವಿಶಾಲ ವಿಶ್ವದ ಸರ್ವಶಕ್ತ ಸೃಷ್ಟಿಕರ್ತನಾದರೂ ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳಲು ಮತ್ತು ಅವುಗಳಿಗೆ ಉತ್ತರ ನೀಡಲು ಸಿದ್ಧನಿದ್ದಾನೆ. ಅದಕ್ಕಾಗಿ ಕಾದಿರುತ್ತಾನೆ ಸಹ. (ಕೀರ್ತನೆ 145:18; ಯೆಶಾಯ 30:18, 19 ಓದಿ.) ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ನಾವು ಆತನೊಂದಿಗೆ ಎಷ್ಟು ಬೇಕೋ ಅಷ್ಟು ಅಳುಕಿಲ್ಲದೆ ಮಾತಾಡಬಹುದು. ಆತನೆಂದೂ ಸಿಟ್ಟಾಗಲ್ಲ. (ಕೀರ್ತ. 65:2; ಯಾಕೋ. 1:5) ಜನರು ತನ್ನೊಂದಿಗೆ ಸ್ನೇಹ ಬೆಳೆಸಬೇಕೆಂದು ಯೆಹೋವನ ಬಯಕೆ. ಆ ಬಯಕೆಯನ್ನು ಕೀರ್ತನೆಗಾರನ ಬರಹಗಳಲ್ಲಿ ನಾವು ಗಮನಿಸಬಹುದು. ‘ಆತನು ನಮ್ಮನ್ನು ಕಟಾಕ್ಷಿಸುತ್ತಾನೆ’ ಅಥವಾ ಗಮನಿಸುತ್ತಾನೆ. ಆತನ ‘ಬಲಗೈ ನಮಗೆ ಆಧಾರವಾಗಿದೆ’ ಎಂದು ಅವನು ಬರೆದನು. (ಕೀರ್ತ. 34:15; 63:8) ಯೆಹೋವನನ್ನು ಕುರುಬನಿಗೆ ಹೋಲಿಸುತ್ತಾ ಪ್ರವಾದಿ ಯೆಶಾಯ ಹೇಳಿದ್ದು: ಆತನು “ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು.” (ಯೆಶಾ. 40:11) ತುಂಬ ಆರೈಕೆಮಾಡುವ ಕುರುಬನ ಮಡಿಲಲ್ಲಿ ಸುಖವಾಗಿ ಕುಳಿತುಕೊಂಡಿರುವ ಒಂದು ಕುರಿಮರಿಯಂತೆಯೇ ನಾವು ಆತನಿಗೆ ಆಪ್ತರಾಗಿರುವಂತೆ ಯೆಹೋವನು ಬಯಸುತ್ತಾನೆ. ಎಷ್ಟು ಸ್ನೇಹಪರನಾಗಿರುವ ತಂದೆ ನಮಗಿದ್ದಾನೆ! ಈ ಗುಣವನ್ನು ನಾವು ಹೇಗೆ ಅನುಕರಿಸುವುದು?
ಅತ್ಯುತ್ತಮ ಗುಣ
5. ಹಿರಿಯರು ಸ್ನೇಹಪರರಾಗಿ ಇರೋದು ಮುಖ್ಯ ಯಾಕೆ?
5 ಇತ್ತೀಚಿಗೆ ಬೇರೆಬೇರೆ ದೇಶಗಳಲ್ಲಿರುವ ಹುರುಪಿನ ಕೆಲವು ಪ್ರಚಾರಕರಿಗೆ ಒಂದು ಪ್ರಶ್ನೆ ಕೇಳಲಾಯಿತು. ಅದೇನೆಂದರೆ ‘ಹಿರಿಯರಲ್ಲಿ ಯಾವ ಗುಣ ಇರಲೇಬೇಕೆಂದು ನೀವು ಬಯಸ್ತೀರಿ?’ ಅಂತ. ಅನೇಕರು ಹೇಳಿದ್ದು: “ಅವರು ಸ್ನೇಹಪರರಾಗಿರಬೇಕು, ಯಾವುದೇ ಯೆಶಾ. 32:1, 2) ಏಕೆಂದು ಒಬ್ಬ ಸಹೋದರಿ ಹೇಳುತ್ತಾರೆ. “ಹಿರಿಯರು ಸ್ನೇಹಪರರಾಗಿ ಇರುವಾಗಲೇ ನಾವು ಅವರನ್ನು ಸಮೀಪಿಸಲು ಆಗುತ್ತೆ. ಆಗಮಾತ್ರ ಅವರಲ್ಲಿರುವ ಇತರ ಗುಣಗಳಿಂದ ಪ್ರಯೋಜನ ಪಡೆಯಲು ಆಗುತ್ತೆ.” ಆ ಸಹೋದರಿಯ ಮಾತಲ್ಲಿ ಎಷ್ಟು ಅರ್ಥ ಇದೆ ಅಲ್ಲಾ? ಆದರೆ ಸ್ನೇಹಪರರಾಗಿರೋದು ಹೇಗೆ?
ಹಿಂಜರಿಕೆಯಿಲ್ಲದೆ ಅವರೊಂದಿಗೆ ಮಾತಾಡಲು ಮನಸ್ಸಾಗಬೇಕು.” ಹೌದು ಈ ಗುಣ ಎಲ್ಲ ಪ್ರಚಾರಕರಲ್ಲಿ ಇರಬೇಕು ನಿಜ. ಆದರೂ ಹಿರಿಯರಿಗೆ ಇದು ತುಂಬ ಪ್ರಾಮುಖ್ಯ. (6. ಸ್ನೇಹಪರರಾಗಿ ಇದ್ದೇವೆ ಎಂದು ಹೇಗೆ ತೋರಿಸಿಕೊಡಬಹುದು?
6 ಸ್ನೇಹಪರರಾಗಿ ಇದ್ದೇವೆ ಎಂದು ತೋರಿಸಿಕೊಡುವ ಒಂದು ವಿಧ ಇತರರಲ್ಲಿ ಯಥಾರ್ಥ ಆಸಕ್ತಿ ತೋರಿಸುವುದು. ಸಭಾಹಿರಿಯರು ಇತರರ ಬಗ್ಗೆ ಕಾಳಜಿವಹಿಸುವಲ್ಲಿ ಮತ್ತು ನೆರವಾಗಲು ಯಾವಾಗಲೂ ಸಿದ್ಧರಾಗಿರುವಲ್ಲಿ ಅವರು ಸ್ನೇಹಪರರು ಎಂಬುದನ್ನು ಸಹೋದರ ಸಹೋದರಿಯರೂ ಗ್ರಹಿಸುತ್ತಾರೆ. (ಮಾರ್ಕ 10:13-16) 12 ವರ್ಷ ಪ್ರಾಯದ ಕಾರ್ಲೋಸ್ ಹೇಳುವುದು: “ಹಿರಿಯರು ಎಲ್ಲರ ಹತ್ರ ಪ್ರೀತಿಯಿಂದ ಮಾತಾಡ್ತಾರೆ. ನಮ್ಮನ್ನು ನೋಡಿ ಮುಗುಳ್ನಗುತ್ತಾರೆ. ಅದಕ್ಕೇ ನನಗೆ ಅವರೆಂದರೆ ಇಷ್ಟ.” ಹೌದು ಹಿರಿಯರು ತಾವು ಸ್ನೇಹಪರರು ಎಂದು ಹೇಳಿದರೆ ಸಾಲದು. ಅವರು ಅದನ್ನು ತೋರಿಸಿಕೊಡಬೇಕು. (1 ಯೋಹಾ. 3:18) ಆದರೆ ಈ ಗುಣವನ್ನು ನಾವು ತೋರಿಸುವುದು ಹೇಗೆ?
7. (1) ಬ್ಯಾಜ್ ಧರಿಸಿರುವುದು ಜನರು ನಮ್ಮನ್ನು ಮಾತಾಡಿಸುವಂತೆ ಪ್ರಚೋದಿಸುತ್ತೆ ಏಕೆ? (2) ಇದರಿಂದ ನಾವೇನು ಕಲಿಯಸಾಧ್ಯ?
7 ಈ ಉದಾಹರಣೆ ಗಮನಿಸಿ. ಒಬ್ಬ ಸಹೋದರನು ಅಧಿವೇಶನವನ್ನು ಮುಗಿಸಿ ತನ್ನ ಊರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದನು. ಆ ಸಹೋದರನು ಅಧಿವೇಶನದ ಬ್ಯಾಜ್ ಅನ್ನು ಧರಿಸಿದ್ದನು. ಅದರ ಮೇಲೆ ‘ದೇವರ ರಾಜ್ಯ ಬರಲಿ’ ಎಂದು ಬರೆದಿತ್ತು. ಅದನ್ನು ವಿಮಾನದಲ್ಲಿದ್ದ ಪರಿಚಾರಕ ನೋಡಿ ‘ದೇವರ ರಾಜ್ಯ ಖಂಡಿತ ಬರಲಿ’ ಎಂದು ಹೇಳಿ ‘ಈ ವಿಷಯದ ಬಗ್ಗೆ ನಂತರ ಸ್ವಲ್ಪ ಮಾತಾಡೋಣ್ವಾ’ ಅಂದನು. ಹೇಳಿದಂತೆಯೇ ನಂತರ ಅವನು ಈ ಕುರಿತು ಮಾತಾಡಿದನು. ಹಾಗೂ ಸಹೋದರರು ಕೊಟ್ಟ ಪತ್ರಿಕೆಗಳನ್ನು ಸಂತೋಷದಿಂದ ತಕ್ಕೊಂಡನು. ಇಂಥ ಅನುಭವ ನಮ್ಮಲ್ಲಿ ತುಂಬ ಜನರಿಗೆ ಆಗಿದೆ. ಆದರೆ ಬ್ಯಾಜ್ ನೋಡಿ ಜನರು ಯಾಕೆ ನಮ್ಮ ಹತ್ತಿರ ಮಾತಾಡುತ್ತಾರೆ? ಏಕೆಂದರೆ, ಬ್ಯಾಜ್ ಹಾಕಿರುವುದೇ “ಯಾವ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆಂದು ನನ್ನನ್ನು ಕೇಳಿ. ನನ್ನೊಂದಿಗೆ ಮಾತಾಡಿ” ಎಂದು ಜನರನ್ನು ಆಮಂತ್ರಿಸಿದಂತೆ. ನಾವು ನಮ್ಮ ನಂಬಿಕೆಗಳ ಬಗ್ಗೆ ತಿಳಿಸಲು ಇಷ್ಟಪಡುತ್ತೇವೆ ಎಂಬ ಸಂದೇಶವನ್ನು ಈ ಬ್ಯಾಜ್ ಜನರಿಗೆ ರವಾನಿಸುತ್ತದೆ. ಅದೇ ರೀತಿ ಹಿರಿಯರ ಹಾವ-ಭಾವಗಳೇ “ನನ್ನೊಂದಿಗೆ ಹಿಂಜರಿಕೆಯಿಲ್ಲದೆ ಮಾತಾಡಿ” ಎಂಬ ಸಂದೇಶವನ್ನು ಸಹೋದರ ಸಹೋದರಿಯರಿಗೆ ಕೊಡಬೇಕು. ಅಂಥ ಹಾವ-ಭಾವಗಳಲ್ಲಿ ಕೆಲವು ಯಾವುವು?
8. (1) ಹಿರಿಯರು ಇತರರ ಕಡೆಗೆ ಗಾಢ ಆಸಕ್ತಿ ತೋರಿಸೋದು ಹೇಗೆ? (2) ಅದು ಸಭೆಯ ಮೇಲೆ ಯಾವ ಪ್ರಭಾವಬೀರುತ್ತೆ?
8 ಒಂದುಕಡೆ ಇದ್ದ ಸಂಸ್ಕೃತಿ ಇನ್ನೊಂದು ಕಡೆ ಇರಲಿಕ್ಕಿಲ್ಲ. ಆದರೆ ನಮ್ಮ ಮುಗುಳ್ನಗೆ, ಆಮಂತ್ರಿಸುವ ಹಸ್ತಲಾಘವ, ವಂದಿಸುವುದು ಸಹೋದರ-ಸಹೋದರಿಯರ ಕಡೆಗೆ ನಮಗೆ ಕಾಳಜಿ ಇದೆ ಎಂದು ತೋರಿಸಿಕೊಡುತ್ತದೆ. ಆದರೆ ಯಾರು ಮೊದಲ ಹೆಜ್ಜೆ ತೆಗೆದುಕೊಳ್ಳಬೇಕು? ಯೇಸುವಿನ ಮಾದರಿ ಗಮನಿಸಿ. ಶಿಷ್ಯರೊಂದಿಗೆ ಮಾತಾಡಲು ಯೇಸುವೇ “ಅವರ ಹತ್ತಿರಕ್ಕೆ” ಹೋದನೆಂದು ಮತ್ತಾಯ ವರದಿಸಿದನು. (ಮತ್ತಾ. 28:18) ಅದೇರೀತಿ ಹಿರಿಯರು ಇತರರನ್ನು ಮಾತಾಡಿಸಲು ಅವರಾಗಿಯೇ ಮುಂದೆಹೋಗಬೇಕು. ಹಾಗೆ ಮಾಡುವಾಗ ಸಭೆಯಲ್ಲಿ ಯಾವ ಪ್ರಭಾವ ಆಗುತ್ತೆ? 88 ವರ್ಷದ ಪಯನೀಯರ್ ಸಹೋದರಿ ಹೇಳುತ್ತಾರೆ: “ನಾನು ಕೂಟಗಳಿಗೆ ಹೋದಾಗ ಹಿರಿಯರು ಮುಗುಳ್ನಗುತ್ತಾರೆ, ನನ್ನನ್ನು ಆಮಂತ್ರಿಸಿ ಪ್ರೋತ್ಸಾಹದ ಮಾತುಗಳನ್ನು ಆಡುತ್ತಾರೆ. ಹಾಗಾಗಿ ಅವರೆಂದರೆ ನನಗೆ ತುಂಬ ಇಷ್ಟ.” ಇನ್ನೊಬ್ಬ ನಂಬಿಗಸ್ತ ಸಹೋದರಿ ಹೇಳೋದು: “ಹಿರಿಯರು ನನ್ನನ್ನು ಮುಗುಳ್ನಗುತ್ತಾ ಆಮಂತ್ರಿಸುತ್ತಾರೆ. ಅದೇನೋ ಚಿಕ್ಕ ವಿಷ್ಯ ಅಂತ ಅನಿಸಬಹುದು. ಆದರೆ ಅದು ನನಗೆ ದೊಡ್ಡ ವಿಷಯ.”
ಸ್ನೇಹಪರತೆ ಮತ್ತು ಲಭ್ಯತೆ
9, 10. (1) ಯೆಹೋವನು ಯಾವ ಒಳ್ಳೇ ಮಾದರಿ ಇಟ್ಟಿದ್ದಾನೆ? (2) ಹಿರಿಯರು ಹೇಗೆ ತಮ್ಮನ್ನು ಇತರರಿಗೆ ಲಭ್ಯಗೊಳಿಸಿಕೊಳ್ಳಬಹುದು?
9 ಸಹೋದರ ಸಹೋದರಿಯರಿಗೆ ಅಗತ್ಯವಿರುವಾಗ ನಾವು ಲಭ್ಯರಾಗಿಲ್ಲವೆಂದರೆ ಅವರು ನಮ್ಮೊಂದಿಗೆ ಮಾತಾಡಲಿಕ್ಕಿಲ್ಲ. ಈ ವಿಷಯದಲ್ಲಿ ಯೆಹೋವನು ಒಳ್ಳೇ ಮಾದರಿಯಿಟ್ಟಿದ್ದಾನೆ. “ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ” ಎನ್ನುತ್ತೆ ಬೈಬಲ್. (ಅ. ಕಾ. 17:27) ಹಿರಿಯರು ಸಹೋದರ ಸಹೋದರಿಯರೊಂದಿಗೆ ಮಾತಾಡಲು ತಮ್ಮನ್ನು ಲಭ್ಯಗೊಳಿಸುವ ಒಂದು ವಿಧ ಕೂಟದ ಮೊದಲು ಮತ್ತು ನಂತರ ಅವರಿಗಾಗಿ ಸಮಯ ಮೀಸಲಾಗಿಡುವುದೇ. ಚಿಕ್ಕವರೇ ಆಗಿರಲಿ ವಯಸ್ಸಾದವರೇ ಆಗಿರಲಿ ಮುಕ್ತವಾಗಿ ಮಾತಾಡಿ. ಪಯನೀಯರ್ ಸಹೋದರರೊಬ್ಬರು ಹೇಳುತ್ತಾರೆ: “ಯಾವಾಗ ಹಿರಿಯರು ‘ಹೇಗಿದ್ದೀರಿ?’ ಎಂದು ಕೇಳಿ, ನನ್ನ ಪ್ರತಿಕ್ರಿಯೆಗಾಗಿ ಕಾಯುತ್ತಾರೋ ಆವಾಗ ನನ್ನ ಕಡೆಗೆ ಅವರಿಗಿರುವ ಕಾಳಜಿ ಗೊತ್ತಾಗುತ್ತೆ.” ಸುಮಾರು 50 ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಸಹೋದರಿ ಹೇಳಿದ್ದು: “ಹಿರಿಯರು ಕೂಟದ ನಂತರ ನನ್ನೊಂದಿಗೆ ಮಾತಾಡಕ್ಕೆ ಸಮಯ ಮಾಡಿಕೊಳ್ಳುವಾಗ ಅವರು ನನ್ನನ್ನು ಮಾನ್ಯ ಮಾಡ್ತಾರೆ ಅಂತ ಅನಿಸುತ್ತೆ.”
10 ಕ್ರೈಸ್ತ ಹಿರಿಯರು ತಮ್ಮ ಇತರ ಜವಾಬ್ದಾರಿಗಳ ಕಡೆಗೂ ಗಮನ ಕೊಡಬೇಕಾಗುತ್ತೆ. ಆದರೆ ಸಭೆಗೆ ಬಂದಾಗ ಸಹೋದರ ಸಹೋದರಿಯರಿಗೆ ಗಮನ ಕೊಡುವುದನ್ನು ಅವರೆಂದೂ ಮರೆಯಬಾರದು.
ಯೆಹೋವನು ನಿಷ್ಪಕ್ಷಪಾತಿ
11, 12. (1) ನಿಷ್ಪಕ್ಷಪಾತಿ ಆಗಿರುವುದು ಅಂದರೇನು? (2) ನಿಷ್ಪಕ್ಷಪಾತದ ಬಗ್ಗೆ ಯೆಹೋವನು ನಮಗೆ ಹೇಗೆ ಮಾದರಿಯಾಗಿದ್ದಾನೆ?
11 ನಿಷ್ಪಕ್ಷಪಾತ ಯೆಹೋವನ ಇನ್ನೊಂದು ಎದ್ದು ಕಾಣುವ ಗುಣ. ನಿಷ್ಪಕ್ಷಪಾತ ಅಂದರೇನು? ಅಂದರೆ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವುದು, ಒಬ್ಬರನ್ನು ಹೆಚ್ಚಾಗಿ ಮತ್ತು ಇನ್ನೊಬ್ಬರನ್ನು ಕೀಳಾಗಿ ನೋಡದೇ ಇರುವುದು. ನಿಜ ನಿಷ್ಪಕ್ಷಪಾತ ಗುಣದಲ್ಲಿ ಎರಡು ಅಂಶಗಳಿವೆ. ಒಂದು ಮನೋಭಾವ ಇನ್ನೊಂದು ಕ್ರಿಯೆ. ಇವೆರಡೂ ಪ್ರಾಮುಖ್ಯ. ಒಬ್ಬ ವ್ಯಕ್ತಿ ಮನೋಭಾವದಲ್ಲಿ ನಿಷ್ಪಕ್ಷಪಾತಿ ಆಗಿರುವಲ್ಲಿ ಮಾತ್ರ ಇತರರೊಂದಿಗೆ ಸ್ವಲ್ಪವೂ ಪಕ್ಷಪಾತವಿಲ್ಲದೆ ವರ್ತಿಸುತ್ತಾನೆ. ಬೈಬಲಿನ ಗ್ರೀಕ್ ಶಾಸ್ತ್ರಗ್ರಂಥದಲ್ಲಿರುವ “ಪಕ್ಷಪಾತಿಯಲ್ಲ” ಎಂಬ ಪದದ ಅರ್ಥ ‘ಮುಖ ನೋಡಿ ಮಣೆ ಹಾಕದಿರುವುದು’ ಅಂದರೆ ಒಬ್ಬರಿಗಿಂತ ಇನ್ನೊಬ್ಬರನ್ನು ಶ್ರೇಷ್ಠರಂತೆ ನೋಡದಿರುವುದು. (ಅ. ಕಾ. 10:34) ಹಾಗಾಗಿ ಒಬ್ಬ ನಿಷ್ಪಕ್ಷಪಾತಿ, ಇತರರ ಹೊರಗಿನ ತೋರಿಕೆಯನ್ನಲ್ಲ, ಅವರ ಗುಣಗಳನ್ನು, ಮನೋಭಾವವನ್ನು ನೋಡುತ್ತಾನೆ.
12 ನಿಷ್ಪಕ್ಷಪಾತ ತೋರಿಸುವುದರಲ್ಲಿ ಯೆಹೋವ ದೇವರು ಅಗ್ರಗಣ್ಯ ಮಾದರಿ. ಆತನು “ಪಕ್ಷಪಾತಿಯಲ್ಲ,” ಮುಖ“ದಾಕ್ಷಿಣ್ಯ ನೋಡುವವನಲ್ಲ” ಎನ್ನುತ್ತದೆ ಬೈಬಲ್. (ಅಪೊಸ್ತಲರ ಕಾರ್ಯಗಳು 10:34, 35; ಧರ್ಮೋಪದೇಶಕಾಂಡ 10:17 ಓದಿ.) ಮೋಶೆಯ ಕಾಲದಲ್ಲಿ ನಡೆದ ಒಂದು ಘಟನೆ ಇದಕ್ಕೆ ನಿದರ್ಶನ.
13, 14. (1) ಚಲ್ಪಹಾದನ ಐದು ಹೆಣ್ಣುಮಕ್ಕಳಿಗೆ ಯಾವ ಸಮಸ್ಯೆ ಎದುರಾಯಿತು? (2) ಯೆಹೋವನು ಹೇಗೆ ನಿಷ್ಪಕ್ಷಪಾತವನ್ನು ತೋರಿಸಿದನು?
13 ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಇನ್ನೇನು ಪ್ರವೇಶಿಸಲಿದ್ದಾಗ ಒಡಹುಟ್ಟಿದ ಐವರು ಅವಿವಾಹಿತ ಸಹೋದರಿಯರಿಗೆ ಒಂದು ಚಿಂತೆ ಕಾಡಿತು. ಏನದು? ವಾಗ್ದತ್ತ ದೇಶದಲ್ಲಿ ಎಲ್ಲ ಇಸ್ರಾಯೇಲ್ಯ ಕುಟುಂಬಕ್ಕೆ ಸಿಗುವಂತೆಯೇ ತಮ್ಮ ಕುಟುಂಬಕ್ಕೂ ಸ್ವಾಸ್ತ್ಯ ಸಿಗುವುದೆಂದು ಅವರಿಗೆ ತಿಳಿದಿತ್ತು. (ಅರ. 26:52-55) ಆದರೆ ಒಂದು ಸಮಸ್ಯೆ. ಮನಸ್ಸೆ ಕುಲದವನಾಗಿದ್ದ ಅವರ ತಂದೆ ಚಲ್ಪಹಾದನು ಈಗಾಗಲೇ ತೀರಿಕೊಂಡಿದ್ದನು. ಪದ್ಧತಿಗನುಸಾರ ಕುಟುಂಬದ ಆಸ್ತಿ ತಂದೆಯಿಂದ ಪುತ್ರರಿಗೆ ಹೋಗುತ್ತದೆ. ಆದರೆ ಚಲ್ಪಹಾದನಿಗೆ ಪುತ್ರರಿರಲಿಲ್ಲ, ಐದು ಮಂದಿ ಹೆಣ್ಣುಮಕ್ಕಳಿದ್ದರು. (ಅರ. 26:33) ಹಾಗಾದರೆ ಕುಟುಂಬದ ಸ್ವಾಸ್ತ್ಯವನ್ನು ಸಂಬಂಧಿಕರಿಗೆ ಹಂಚಲಿದ್ದರೋ? ಈ ಐವರು ಪುತ್ರಿಯರ ಗತಿ?
14 ಆ ಐವರು ಸಹೋದರಿಯರು ಮೋಶೆಗೆ: “ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ?” ಎಂದು ಕೇಳಿದರು. ನಂತರ, “ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕೆಂದು ಕೇಳಿಕೊಂಡರು.” ಆಗ ಮೋಶೆ ‘ನಿಮಗಾಗಿ ನಿಯಮಗಳನ್ನು ಅರ. 27:2-5) ನಂತರ ಏನಾಯಿತು? ಯೆಹೋವನು ಉತ್ತರಿಸಿದ್ದು: “ಚಲ್ಪಹಾದನ ಹೆಣ್ಣುಮಕ್ಕಳು ಹೇಳುವದು ನ್ಯಾಯ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು; ತಂದೆಯ ಸ್ವಾಸ್ತ್ಯವು ಅವರಿಗೆ ಬರಲಿ.” ನಂತರ ಯೆಹೋವನು “ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವಾಸ್ತ್ಯವು ಅವನ ಮಗಳಿಗೆ ಆಗಬೇಕು” ಎಂಬ ನಿಯಮವನ್ನು ಸಹ ಕೊಟ್ಟನು. (ಅರ. 27:6-8; ಯೆಹೋ. 17:1-6) ಅಂದಿನಿಂದ ಇಂಥ ಸ್ಥಿತಿ ಎದುರಿಸಿದ ಅನೇಕ ಸ್ತ್ರೀಯರಿಗೆ ಅವರ ತಂದೆಯ ಸ್ವಾಸ್ತ್ಯ ದೊರೆಯಿತು.
ಬದಲಾಯಿಸಲು ಆಗುವುದಿಲ್ಲ’ ಅಂತ ಹೇಳಿಲ್ಲ. ಬದಲಾಗಿ “ಅವರ ಪ್ರಾರ್ಥನೆಯನ್ನು ಯೆಹೋವನ ಬಳಿಯಲ್ಲಿ” ವಿಚಾರಿಸಿದನು. (15. (1) ದಿಕ್ಕಿಲ್ಲದ ತನ್ನ ಸೇವಕರ ಕಡೆಗೆ ಯೆಹೋವನಿಗೆ ಯಾವ ನೋಟ ಇದೆ? (2) ಯೆಹೋವನು ನಿಷ್ಪಕ್ಷಪಾತಿ ಎಂಬುದನ್ನು ಬೇರೆ ಯಾವ ಬೈಬಲ್ ವೃತ್ತಾಂತಗಳು ತೋರಿಸುತ್ತವೆ?
15 ಎಂಥ ದಯಾಭರಿತ ನಿಷ್ಪಕ್ಷಪಾತದ ತೀರ್ಪು ಅದಾಗಿತ್ತಲ್ಲವೇ! ಯೆಹೋವನು ಇತರ ಇಸ್ರಾಯೇಲ್ಯರನ್ನು ವೀಕ್ಷಿಸಿದಂತೆಯೇ ಸಂಕಷ್ಟದಲ್ಲಿದ್ದ ಈ ಸ್ತ್ರೀಯರನ್ನು ವೀಕ್ಷಿಸಿದನು. ಅದೇ ಕಾಳಜಿ, ಗೌರವ ಇವರಿಗೂ ಸಿಕ್ಕಿತು. (ಕೀರ್ತ. 68:5) ಈ ನಿಜಾಂಶವನ್ನು ಬಿಚ್ಚಿಟ್ಟ ಬೈಬಲ್ ಉದಾಹರಣೆ ಇದೊಂದೇ ಅಲ್ಲ. ಇನ್ನೂ ಅನೇಕ ಇವೆ. ಅವುಗಳೆಲ್ಲವು ಈ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತವೆ: ಯೆಹೋವನಿಗೆ ತನ್ನ ಸೇವಕರೆಲ್ಲರೂ ಒಂದೇ.—1 ಸಮು. 16:1-13; ಅ. ಕಾ. 10:30-35, 44-48.
ಯೆಹೋವನನ್ನು ಅನುಕರಿಸೋಣ
16. ನಾವು ನಿಷ್ಪಕ್ಷಪಾತದ ಗುಣವನ್ನು ಬೆಳೆಸಿಕೊಳ್ಳಲು ಮತ್ತು ಅದನ್ನು ಇನ್ನೂ ಹೆಚ್ಚು ತೋರಿಸಲು ಏನು ಮಾಡಬಹುದು?
16 ಯೆಹೋವನ ಈ ಗುಣವನ್ನು ಅನುಕರಿಸುವುದು ಹೇಗೆ? ನಿಷ್ಪಕ್ಷಪಾತದಲ್ಲಿ ಎರಡು ಅಂಶಗಳಿವೆ. ಒಂದು, ನಮ್ಮಲ್ಲಿ ನಿಷ್ಪಕ್ಷಪಾತ ಮನೋಭಾವ ಇರುವುದು. ಇನ್ನೊಂದು ಇತರರನ್ನು ನಿಷ್ಪಕ್ಷಪಾತದಿಂದ ಉಪಚರಿಸುವುದು. ಈ ಗುಣ ನಮ್ಮಲ್ಲಿದ್ದರೆ ಮಾತ್ರ ಅದನ್ನು ಇತರರ ಕಡೆಗೆ ತೋರಿಸಲು ಸಾಧ್ಯ. ನಾನು ಪಕ್ಷಪಾತ ತೋರಿಸುವುದಿಲ್ಲ, ನಾನು ತೆರೆದ, ಮುಕ್ತ ಮನಸ್ಸಿನವನು ಎಂದು ನಮಗನಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಮನೋಭಾವ ಹೇಗಿದೆ ಎಂದು ತಿಳಿದುಕೊಳ್ಳಲು ನಮಗೇ ಕಷ್ಟವಾಗುತ್ತದೆ. ಹಾಗಾದರೆ ಏನು ಮಾಡಬಹುದು? ಯೇಸು ಏನು ಮಾಡಿದನು ನೆನಪಿಸಿಕೊಳ್ಳಿ. ತನ್ನ ಬಗ್ಗೆ ಜನರು ಏನು ಹೇಳುತ್ತಾರೆಂದು ತಿಳಿದುಕೊಳ್ಳಲಿಕ್ಕಾಗಿ “ಮನುಷ್ಯಕುಮಾರನು ಯಾರೆಂದು ಜನರು ಹೇಳುತ್ತಾರೆ?” ಎಂದು ಶಿಷ್ಯರ ಹತ್ತಿರ ಕೇಳಿದನು. (ಮತ್ತಾ. 16:13, 14) ನಾವೂ ಹಾಗೇ ಮಾಡಬಹುದು. ನಮ್ಮಲ್ಲಿ ಎಂಥ ಮನೋಭಾವವಿದೆ ಎಂದು ತಿಳಿದುಕೊಳ್ಳಲು, ಮುಚ್ಚುಮರೆಯಿಲ್ಲದೆ ಮಾತಾಡುವ ಒಬ್ಬ ಸ್ನೇಹಿತನ ಹತ್ತಿರ ‘ನಾನು ಪಕ್ಷಪಾತ ತೋರಿಸುತ್ತೇನಾ? ಬೇರೆಯವರಿಗೆ ನನ್ನ ಬಗ್ಗೆ ಯಾವ ಅಭಿಪ್ರಾಯವಿದೆ?’ ಎಂದು ಕೇಳಬಹುದು. ಆಗ ಅವನು, ‘ನೀನು ಸ್ವಲ್ಪ ಪಕ್ಷಪಾತ ತೋರಿಸುತ್ತಿ. ಸ್ಥಾನ, ಜಾತಿ, ಅಂತಸ್ತಿಗೆ ಪ್ರಾಮುಖ್ಯತೆ ಕೊಡುತ್ತಿ ಎಂದು ನನಗನಿಸುತ್ತೆ’ ಎಂದು ಹೇಳಿದರೆ? ಯೆಹೋವನಲ್ಲಿ ಪಟ್ಟುಬಿಡದೆ ಪ್ರಾರ್ಥಿಸಿ. ನಿಮ್ಮ ಮನೋಭಾವವನ್ನು ಬದಲಾಯಿಸಿಕೊಂಡು ಆತನಲ್ಲಿರುವ ನಿಷ್ಪಕ್ಷಪಾತದ ಗುಣವನ್ನು ಬೆಳೆಸಿಕೊಳ್ಳಲು ಸಹಾಯಮಾಡುವಂತೆ ಬೇಡಿ.—ಮತ್ತಾ. 7:7; ಕೊಲೊ. 3:10, 11.
17. ಇತರರೊಂದಿಗೆ ನಾವು ಯಾವೆಲ್ಲ ವಿಧಗಳಲ್ಲಿ ನಿಷ್ಪಕ್ಷಪಾತದಿಂದ ನಡೆದುಕೊಳ್ಳಬಹುದು?
17 ಕ್ರೈಸ್ತ ಸಭೆಯಲ್ಲಿ ಯೆಹೋವನ ನಿಷ್ಪಕ್ಷಪಾತವನ್ನು ಅನುಕರಿಸುವುದು ಹೇಗೆ? ಎಲ್ಲ ಸಹೋದರ-ಸಹೋದರಿಯರೊಟ್ಟಿಗೆ ಪ್ರೀತಿತುಂಬಿದ ಕಾಳಜಿ ಹಾಗೂ ಗೌರವದಿಂದ ನಡೆದುಕೊಳ್ಳುವ ಮೂಲಕ. ಅತಿಥಿಸತ್ಕಾರ ತೋರಿಸುವ ವಿಧದಲ್ಲಿ ಸಹ ನಾವು ಯೆಹೋವನನ್ನು ಅನುಕರಿಸಬಹುದು. ನಮ್ಮದೇ ಹಿನ್ನೆಲೆಯವರನ್ನು, ಶ್ರೀಮಂತರನ್ನು ಮಾತ್ರ ಕರೆಯದೆ ಎಲ್ಲರಿಗೆ ನಮ್ಮ ಪ್ರೀತಿಯನ್ನು ಹಂಚಬೇಕು. ಮುಖ್ಯವಾಗಿ ಬಡವರಿಗೆ, ವಿಧವೆಯರಿಗೆ, ಅನಾಥರಿಗೆ ವಿಶಾಲ ಹೃದಯದಿಂದ ಪ್ರೀತಿ ತೋರಿಸಬೇಕು. (ಗಲಾತ್ಯ 2:10; ಯಾಕೋಬ 1:27 ಓದಿ.) ಸುವಾರ್ತೆ ಸಾರುವಾಗ ಈ ಗುಣವನ್ನು ಹೇಗೆ ತೋರಿಸಬಹುದು? ಎಲ್ಲ ಹಿನ್ನೆಲೆಯ ಜನರಿಗೆ, ವಿದೇಶೀಯರಿಗೂ ಪಕ್ಷಪಾತವಿಲ್ಲದೆ ಸಾರುವ ಮೂಲಕ. ಹಾಗೆ ಮಾಡಲು ನಮ್ಮಲ್ಲಿ ಸುಮಾರು 600 ಭಾಷೆಗಳಲ್ಲಿ ಸಾಹಿತ್ಯವಿದೆ. ಇದೇ ನಿಷ್ಪಕ್ಷಪಾತದ ಒಂದು ರುಜುವಾತು!
18. ಯೆಹೋವನ ಸ್ನೇಹಪರತೆ ಮತ್ತು ನಿಷ್ಪಕ್ಷಪಾತವನ್ನು ಗಣ್ಯಮಾಡುತ್ತೀರೆಂದು ಹೇಗೆ ತೋರಿಸಿಕೊಡುತ್ತೀರಿ?
18 ಯೆಹೋವನ ಸ್ನೇಹಪರತೆ ಹಾಗೂ ನಿಷ್ಪಕ್ಷಪಾತದ ಬಗ್ಗೆ ಧ್ಯಾನಿಸಲು ಸಮಯ ಮಾಡಿಕೊಳ್ಳುವಾಗ ಆತನ ಕಡೆಗಿನ ನಮ್ಮ ಗಣ್ಯತೆ ದುಪ್ಪಟ್ಟಾಗುತ್ತೆ. ಗಣ್ಯತೆ ಹೆಚ್ಚಾದಂತೆ ಆತನನ್ನು ಇನ್ನೂ ಚೆನ್ನಾಗಿ ಅನುಕರಿಸುವ ನಮ್ಮ ನಿರ್ಧಾರ ಬಲವಾಗುತ್ತೆ. ನಮ್ಮ ಜೊತೆವಿಶ್ವಾಸಿಗಳ ಕಡೆಗೆ ಮತ್ತು ನಾವು ಯಾರಿಗೆ ಸಾರುತ್ತೇವೊ ಅವರ ಕಡೆಗೆ ಈ ಗುಣಗಳನ್ನು ತೋರಿಸಲು ಆಗುತ್ತೆ.