ಯೆಶಾಯ 32:1-20

  • ರಾಜ ಮತ್ತು ಅಧಿಪತಿಗಳು ನಿಜವಾದ ನ್ಯಾಯದಿಂದ ಆಳ್ತಾರೆ (1-8)

  • ಚಿಂತೆಯಿಲ್ಲದ ಸ್ತ್ರೀಯರಿಗೆ ನೀಡಿದ ಎಚ್ಚರಿಕೆ (9-14)

  • ಪವಿತ್ರಶಕ್ತಿ ಸುರಿಸಿದಾಗ ಸಿಕ್ಕಿದ ಆಶೀರ್ವಾದಗಳು (15-20)

32  ನೋಡಿ! ರಾಜ+ ನೀತಿಯಿಂದ ಆಳ್ವಿಕೆ ಮಾಡ್ತಾನೆ,+ಅಧಿಪತಿಗಳು ನ್ಯಾಯದಿಂದ ಪರಿಪಾಲಿಸ್ತಾರೆ.  2  ಅವ್ರಲ್ಲಿ ಪ್ರತಿಯೊಬ್ರೂ ಬಿರುಗಾಳಿಯಿಂದ ಮರೆಮಾಡೋ ಆಸರೆ ತರ ಇರ್ತಾರೆ,ಭಾರಿ ಮಳೆಯಾಗುವಾಗ ಸಿಗೋ ಆಶ್ರಯದ ತರ ಇರ್ತಾರೆ,ಮರುಭೂಮಿಯ ನೀರಿನ ತೊರೆಗಳ ತರ ಇರ್ತಾರೆ,+ಬರಡು ಭೂಮಿಯಲ್ಲಿ ನೆರಳು ಕೊಡೋ ದೊಡ್ಡ ಬಂಡೆ ತರ ಇರ್ತಾರೆ.  3  ಆಗ ನೋಡುವವರ ಕಣ್ಣುಗಳು ಯಾವತ್ತಿಗೂ ಮುಚ್ಚಲ್ಲ,ಕೇಳುವವರ ಕಿವಿಗಳು ಗಮನಕೊಟ್ಟು ಕೇಳಿಸ್ಕೊಳ್ಳುತ್ತೆ.  4  ದುಡುಕು ಸ್ವಭಾವದವರ ಹೃದಯ ಜ್ಞಾನದಿಂದ ಕೂಡಿದ ವಿಷ್ಯಗಳ ಬಗ್ಗೆ ಆಲೋಚಿಸುತ್ತೆ,ತೊದಲ್ತಾ ಮಾತಾಡುವವರು ಸರಾಗವಾಗಿ ಸ್ಪಷ್ಟವಾಗಿ ಮಾತಾಡ್ತಾರೆ.+  5  ಇನ್ನು ಮುಂದಕ್ಕೆ ಕೆಟ್ಟವನನ್ನ ಉದಾರಿ ಅಂತ ಕರಿಯಲ್ಲ,ನೀತಿ ನಿಯಮ ಇಲ್ಲದವನನ್ನ ಶ್ರೇಷ್ಠ ವ್ಯಕ್ತಿ ಅಂತ ಕರಿಯಲ್ಲ.  6  ಯಾಕಂದ್ರೆ ಕೆಟ್ಟವ ಅರ್ಥವಿಲ್ಲದ ಮಾತನ್ನ ಆಡ್ತಾನೆ,ಧರ್ಮಭ್ರಷ್ಟತೆ ಉತ್ತೇಜಿಸೋಕೆ, ಯೆಹೋವನ ಬಗ್ಗೆ ಮನಬಂದಂತೆ ಮಾತಾಡೋಕೆಹಸಿದವನಿಗೆ ಆಹಾರ ಸಿಗದೆ ಇರೋ ತರ ಮಾಡೋಕೆ,ಬಾಯಾರಿದವನಿಗೆ ಕುಡಿಯೋಕೆ ನೀರು ಸಿಗದೆ ಇರೋ ತರ ಮಾಡೋಕೆ,ಅವನು ತನ್ನ ಹೃದಯದಲ್ಲಿ ಸಂಚು ಮಾಡ್ತಾನೆ,+  7  ನೀತಿ ನಿಯಮ ಇಲ್ಲದವನ ವಿಧಾನಗಳು ಕೆಟ್ಟದ್ದಾಗಿರುತ್ತೆ,+ಅವನು ನಾಚಿಕೆಗೆಟ್ಟ ನಡತೆಯನ್ನ ಪ್ರೋತ್ಸಾಹಿಸ್ತಾನೆ. ತನ್ನ ಸುಳ್ಳುಮಾತುಗಳಿಂದ ಕಷ್ಟದಲ್ಲಿ ಇರೋರನ್ನ ನಾಶಮಾಡ್ತಾನೆ,+ಸರಿಯಾಗಿ ಮಾತಾಡೋ ಬಡವರನ್ನೂ ಹಾಳುಮಾಡ್ತಾನೆ.  8  ಆದ್ರೆ ಉದಾರಿಯ ಉದ್ದೇಶಗಳು ಉದಾರವಾಗೇ ಇರುತ್ತೆ,ಅವನು ಧಾರಾಳವಾಗಿ ಧಾರಾಳತನ ತೋರಿಸ್ತಾನೆ.*  9  “ಚಿಂತೆಯಿಲ್ಲದ ಸ್ತ್ರೀಯರೇ, ಎದ್ದೇಳಿ, ನನ್ನ ಮಾತು ಕೇಳಿ! ಹಾಯಾಗಿರೋ ಹೆಣ್ಣುಮಕ್ಕಳೇ,+ ನಾನು ಹೇಳೋದನ್ನ ಗಮನಕೊಟ್ಟು ಕೇಳಿಸ್ಕೊಳ್ಳಿ! 10  ಹಾಯಾಗಿರೋ ನೀವು ಒಂದು ವರ್ಷ ಆದಮೇಲೆ ಸ್ವಲ್ಪ ದಿನ ತತ್ತರಿಸಿ ಹೋಗ್ತೀರ,ಯಾಕಂದ್ರೆ ದ್ರಾಕ್ಷಿಯ ಕೊಯ್ಲು ಮುಗಿಯುತ್ತೆ, ಆದ್ರೆ ಒಂದೇ ಒಂದು ದ್ರಾಕ್ಷಿನೂ ನಿಮ್ಮ ಕೈಸೇರಲ್ಲ.+ 11  ಚಿಂತೆಯಿಲ್ಲದ ಸ್ತ್ರೀಯರೇ, ಭಯದಿಂದ ನಡುಗಿ! ಹಾಯಾಗಿರುವವರೇ, ತತ್ತರಿಸಿ ಹೋಗಿ! ನಿಮ್ಮ ಬಟ್ಟೆಗಳನ್ನ ಬಿಚ್ಚಿ,ನಿಮ್ಮ ಸೊಂಟಕ್ಕೆ ಗೋಣಿ ಸುತ್ಕೊಳ್ಳಿ.+ 12  ಒಳ್ಳೇ ಬೆಳೆ ಬರೋ ಹೊಲಗಳಿಗಾಗಿ, ಸಮೃದ್ಧ ದ್ರಾಕ್ಷಿಬಳ್ಳಿಗಾಗಿನಿಮ್ಮ ಎದೆಗಳನ್ನ ಬಡ್ಕೊಳ್ತಾ ಗೋಳಾಡಿ. 13  ಯಾಕಂದ್ರೆ ನನ್ನ ಜನ್ರ ನೆಲವನ್ನ ಮುಳ್ಳುಗಳು ಮತ್ತು ಕುರುಚಲು ಪೊದೆಗಳು ತುಂಬಿಕೊಳ್ಳುತ್ತೆ. ಸಂಭ್ರಮಿಸೋ ಪ್ರತಿಯೊಂದು ಮನೆಯನ್ನ ಅವು ಮುಚ್ಚಿಬಿಡುತ್ತೆ. ಹೌದು, ಉಲ್ಲಾಸಿಸೋ ಪಟ್ಟಣವನ್ನ ಮುಚ್ಚಿಬಿಡುತ್ತೆ.+ 14  ಅವ್ರ ಭದ್ರ ಕೋಟೆಯನ್ನ ತೊರೆಯಲಾಗುತ್ತೆಗಿಜಿಗುಟ್ಟೋ ಪಟ್ಟಣವನ್ನ ಬಿಟ್ಟುಬಿಡಲಾಗುತ್ತೆ.+ ಓಫೇಲ್‌+ ಮತ್ತು ಕಾವಲುಗೋಪುರ ಶಾಶ್ವತವಾಗಿ ಕೆಲಸಕ್ಕೆ ಬಾರದ ಜಾಗಗಳಾಗುತ್ತೆ,ಅಲ್ಲಿ ಕಾಡುಕತ್ತೆಗಳು ಆನಂದಿಸುತ್ತೆ,ಹಿಂಡುಗಳು ಮೇಯುತ್ತೆ.+ 15  ದೇವರು ನಮ್ಮ ಮೇಲೆ ತನ್ನ ಪವಿತ್ರ ಶಕ್ತಿಯನ್ನ ಸುರಿಸಿದ ಮೇಲೆ,+ಮರಳುಗಾಡು ಹಣ್ಣಿನ ತೋಟವಾಗಿ ಬದಲಾಗುತ್ತೆ,ಹಣ್ಣಿನ ತೋಟ ದಟ್ಟವಾದ ಕಾಡಾಗುತ್ತೆ.+ 16  ಆಗ ಕಾಡಲ್ಲಿ ನ್ಯಾಯ ನೆಲೆಸುತ್ತೆ,ಹಣ್ಣಿನ ತೋಟದಲ್ಲಿ ನೀತಿ ವಾಸಿಸುತ್ತೆ.+ 17  ನಿಜವಾದ ನೀತಿಯಿಂದಾಗಿ ಶಾಂತಿ ಸಿಗುತ್ತೆ,+ನಿಜವಾದ ನೀತಿಯ ಫಲವಾಗಿ ಸದಾಕಾಲವಿರೋ ನೆಮ್ಮದಿ ಮತ್ತು ಭದ್ರತೆ ಸಿಗುತ್ತೆ.+ 18  ನನ್ನ ಜನ್ರು ಪ್ರಶಾಂತವಾದ ಸ್ಥಳದಲ್ಲಿ ವಾಸಿಸ್ತಾರೆ,ಸುರಕ್ಷಿತವಾದ ತಾಣಗಳಲ್ಲಿ, ನೆಮ್ಮದಿಯಿರೋ ವಿಶ್ರಾಂತಿ ಸ್ಥಳಗಳಲ್ಲಿ ನೆಲೆಸ್ತಾರೆ.+ 19  ಆದ್ರೆ ಆಲಿಕಲ್ಲಿನ ಮಳೆ ಕಾಡನ್ನ ನಾಶಮಾಡುತ್ತೆ,ಪಟ್ಟಣವನ್ನ ಸಂಪೂರ್ಣವಾಗಿ ನೆಲಸಮ ಮಾಡುತ್ತೆ. 20  ನೀರಿರೋ ಕಡೆಗಳಲ್ಲಿ ಬೀಜವನ್ನ ಬಿತ್ತುವವರೇ, ನೀವು ಭಾಗ್ಯವಂತರು,ತಮ್ಮ ಹೋರಿಯನ್ನ ಮತ್ತು ಕತ್ತೆಯನ್ನ ಕಟ್ಟದೆ ಬಿಟ್ಟುಬಿಡುವವರು ಸಂತೋಷವಾಗಿ ಇರ್ತಾರೆ.”+

ಪಾದಟಿಪ್ಪಣಿ

^ ಅಥವಾ “ಒಳ್ಳೇ ಕೆಲಸಗಳನ್ನ ಮಾಡೋದ್ರಲ್ಲಿ ನಿರತನಾಗಿ ಇರ್ತಾನೆ.”