ಮತ್ತಾಯ 7:1-29

  • ಬೆಟ್ಟದ ಭಾಷಣ (1-27)

    • ತಪ್ಪು ಹುಡುಕೋದನ್ನ ನಿಲ್ಲಿಸಿ (1-6)

    • ಕೇಳ್ತಾ ಇರಿ, ಹುಡುಕ್ತಾ ಇರಿ, ತಟ್ಟುತ್ತಾ ಇರಿ (7-11)

    • ಸುವರ್ಣ ನಿಯಮ (12)

    • ಇಕ್ಕಟ್ಟಾದ ಬಾಗಿಲು (13, 14)

    • ಅವರು ಮಾಡೋ ಕೆಲಸಗಳಿಂದಾನೇ ಅವ್ರನ್ನ ಕಂಡುಹಿಡಿಬಹುದು (15-23)

    • ಬಂಡೆ ಮೇಲಿರೋ ಮನೆ, ಮರಳಿನ ಮೇಲಿರೋ ಮನೆ (24-27)

  • ಯೇಸು ಕಲಿಸೋ ರೀತಿ ನೋಡಿ ಜನ್ರು ಆಶ್ಚರ್ಯಪಟ್ರು (28, 29)

7  ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ,+ ಯಾಕಂದ್ರೆ ದೇವರು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ.  ನೀವು ಬೇರೆಯವ್ರಲ್ಲಿ ತಪ್ಪು ಹುಡುಕಿದ್ರೆ ದೇವರೂ ನಿಮ್ಮಲ್ಲಿ ತಪ್ಪು ಹುಡುಕ್ತಾನೆ.+ ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅವ್ರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ.*+  ಹಾಗಿರುವಾಗ ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ನಿನ್ನ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ಯಾಕೆ ನೋಡ್ತೀಯಾ?+  ನಿನ್ನ ಕಣ್ಣಲ್ಲೇ ಮರದ ಕಂಬ ಇಟ್ಟುಕೊಂಡು ನಿನ್ನ ಸಹೋದರನಿಗೆ ‘ಬಾ, ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ’ ಅಂತ ಹೇಗೆ ಹೇಳ್ತೀಯಾ?  ಕಪಟಿಯೇ, ಮೊದ್ಲು ನಿನ್ನ ಕಣ್ಣಿಂದ ಮರದ ಕಂಬ ತೆಗಿ. ಆಮೇಲೆ ನಿನ್ನ ಸಹೋದರನ ಕಣ್ಣಿಂದ ಮರದ ಚೂರನ್ನ ನೋಡಿ ತೆಗಿಯೋಕಾಗುತ್ತೆ.  ದೇವರಿಗೆ ಕೊಡೋದನ್ನ ನಾಯಿಗಳಿಗೆ ಹಾಕಬೇಡಿ. ನಿಮ್ಮ ಮುತ್ತುಗಳನ್ನ ಹಂದಿಗಳ ಮುಂದೆ ಚೆಲ್ಲಬೇಡಿ.+ ಚೆಲ್ಲಿದ್ರೆ ಅವು ಆ ಮುತ್ತುಗಳನ್ನ ತುಳಿದು ನಿಮ್ಮ ಮೇಲೆನೇ ದಾಳಿ ಮಾಡ್ತವೆ.  ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ.+ ಹುಡುಕ್ತಾ ಇರಿ, ನಿಮಗೆ ಸಿಗುತ್ತೆ. ತಟ್ಟುತ್ತಾ ಇರಿ, ತೆರಿಯುತ್ತೆ.+  ಯಾಕಂದ್ರೆ ಕೇಳೋ ಪ್ರತಿಯೊಬ್ಬನೂ ಪಡ್ಕೊಳ್ತಾನೆ,+ ಹುಡುಕೋ ಪ್ರತಿಯೊಬ್ಬನಿಗೆ ಸಿಗುತ್ತೆ, ತಟ್ಟೋ ಪ್ರತಿಯೊಬ್ಬನಿಗೆ ಬಾಗಿಲು ತೆರೆಯುತ್ತೆ.  ನಿಮ್ಮ ಮಗ ರೊಟ್ಟಿ ಕೇಳಿದ್ರೆ ಕಲ್ಲು ಕೊಡ್ತೀರಾ? 10  ಮೀನು ಕೇಳಿದ್ರೆ ಹಾವು ಕೊಡ್ತೀರಾ? 11  ಪಾಪಿಗಳಾಗಿರೋ ನೀವೇ ನಿಮ್ಮ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳೋರಿಗೆ ಅದಕ್ಕಿಂತ ಹೆಚ್ಚು ಒಳ್ಳೇ ವಿಷ್ಯಗಳನ್ನ ಕೊಡಲ್ವಾ?+ 12  ಹಾಗಾಗಿ ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ.+ ನಿಯಮ ಪುಸ್ತಕ ಮತ್ತು ಪ್ರವಾದಿಗಳು ಹೇಳಿರೋದು ಇದನ್ನೇ ಅಲ್ವಾ?+ 13  ಇಕ್ಕಟ್ಟಾದ ಬಾಗಿಲಿಂದ ಹೋಗಿ.+ ಯಾಕಂದ್ರೆ ನಾಶಕ್ಕೆ ಹೋಗೋ ಬಾಗಿಲು ಅಗಲ. ದಾರಿ ವಿಶಾಲ. ಆ ದಾರೀಲಿ ತುಂಬ ಜನ ಹೋಗ್ತಾರೆ. 14  ಜೀವಕ್ಕೆ ನಡೆಸೋ ಬಾಗಿಲು ಇಕ್ಕಟ್ಟು, ಆ ದಾರೀಲಿ ಹೋಗೋದು ತುಂಬ ಕಷ್ಟ. ಸ್ವಲ್ಪ ಜನ ಮಾತ್ರ ಆ ದಾರಿ ಕಂಡುಹಿಡಿತಾರೆ.+ 15  ಎಚ್ಚರವಾಗಿರಿ. ಕುರಿವೇಷ ಹಾಕಿ+ ನಿಮ್ಮ ಹತ್ರ ಸುಳ್ಳು ಪ್ರವಾದಿಗಳು ಬರ್ತಾರೆ.+ ಅವರು ತುಂಬ ಹಸಿದಿರೋ ತೋಳಗಳ ತರ ನಿಮ್ಮನ್ನ ನುಂಗೋಕೆ ಕಾಯ್ತಿದ್ದಾರೆ.+ 16  ಅವರು ಮಾಡೋ ಕೆಲಸಗಳಿಂದಾನೇ* ನೀವು ಅವ್ರನ್ನ ಕಂಡುಹಿಡಿತೀರ. ನಿಮಗೆ ಮುಳ್ಳುಗಿಡಗಳಲ್ಲಿ ದ್ರಾಕ್ಷಿಯಾಗಲಿ ಅಂಜೂರವಾಗಲಿ ಯಾವತ್ತೂ ಸಿಗಲ್ಲ.+ 17  ಒಳ್ಳೇ ಮರ ಒಳ್ಳೇ ಹಣ್ಣು ಕೊಡುತ್ತೆ. ಕೆಟ್ಟ ಮರ ಕೆಟ್ಟ ಹಣ್ಣು ಕೊಡುತ್ತೆ.+ 18  ಒಳ್ಳೇ ಮರ ಕೆಟ್ಟ ಹಣ್ಣು ಕೊಡಲ್ಲ. ಕೆಟ್ಟ ಮರ ಒಳ್ಳೇ ಹಣ್ಣು ಕೊಡಲ್ಲ.+ 19  ಒಳ್ಳೇ ಹಣ್ಣು ಕೊಡದ ಎಲ್ಲ ಮರಗಳನ್ನ ಕಡಿದು ಬೆಂಕಿಗೆ ಹಾಕ್ತಾರೆ.+ 20  ಅದೇ ತರ ಅವರು ಮಾಡೋ ಕೆಲಸಗಳಿಂದಾನೇ* ಅವ್ರನ್ನ ಕಂಡುಹಿಡಿತೀರ.+ 21  ನನ್ನನ್ನ ‘ಸ್ವಾಮಿ, ಸ್ವಾಮಿ’ ಅಂತ ಹೇಳೋರೆಲ್ಲ ದೇವರ ಆಳ್ವಿಕೆಯಲ್ಲಿ ಇರ್ತಾರಂತ ಅಂದ್ಕೊಬೇಡಿ. ಸ್ವರ್ಗದಲ್ಲಿರೋ ನನ್ನ ತಂದೆ ಇಷ್ಟದ ಪ್ರಕಾರ ಯಾರು ಮಾಡ್ತಾರೋ ಅವ್ರೇ ಇರ್ತಾರೆ.+ 22  ತುಂಬ ಜನ ನನಗೆ ‘ಸ್ವಾಮಿ, ಸ್ವಾಮಿ,+ ನಾವು ನಿನ್ನ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿಲ್ವಾ? ನಿನ್ನ ಹೆಸ್ರಲ್ಲಿ ಕೆಟ್ಟದೂತರನ್ನ ಬಿಡಿಸಿಲ್ವಾ? ನಿನ್ನ ಹೆಸ್ರಲ್ಲಿ ತುಂಬ ಅದ್ಭುತಗಳನ್ನ ಮಾಡಿಲ್ವಾ?’+ ಅಂತ ಹೇಳೋ ದಿನ ಬರುತ್ತೆ. 23  ಆದ್ರೆ ನಾನು ಅವ್ರಿಗೆ ‘ನೀವು ಯಾರಂತಾನೇ ನಂಗೊತ್ತಿಲ್ಲ! ಕೆಟ್ಟ ಕೆಲಸಗಳನ್ನ ಮಾಡುವವರೇ, ಇಲ್ಲಿಂದ ಹೋಗಿ’+ ಅಂತ ಹೇಳ್ತೀನಿ. 24  ಹಾಗಾಗಿ ನನ್ನ ಈ ಮಾತು ಕೇಳಿ ಅದೇ ತರ ನಡೆಯುವವನು ಬಂಡೆ ಮೇಲೆ ಮನೆ ಕಟ್ಟಿದ ಬುದ್ಧಿವಂತನ ತರ ಇರ್ತಾನೆ.+ 25  ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು. ಆದ್ರೆ ಅದು ಕುಸಿಲಿಲ್ಲ. ಯಾಕಂದ್ರೆ ಅಡಿಪಾಯ ಬಂಡೆ ಮೇಲಿತ್ತು. 26  ಆದ್ರೆ ನನ್ನ ಈ ಮಾತು ಕೇಳಿ ಅದ್ರ ತರ ನಡೆಯದವನು ಮರಳಿನ ಮೇಲೆ ಮನೆ ಕಟ್ಟಿದ ಮೂರ್ಖನ ತರ ಇರ್ತಾನೆ.+ 27  ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು.+ ಆ ಮನೆ ಕುಸಿದು ನೆಲಸಮ ಆಯ್ತು.” 28  ಯೇಸು ಈ ಮಾತುಗಳನ್ನ ಹೇಳಿದ ಮೇಲೆ ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು.+ 29  ಯಾಕಂದ್ರೆ ಆತನು ಅವ್ರ ಪಂಡಿತರ ಹಾಗೆ ಕಲಿಸ್ತಿರಲಿಲ್ಲ. ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದ.+

ಪಾದಟಿಪ್ಪಣಿ

ಅಥವಾ “ನೀವು ಅಳೆಯೋ ಅಳತೆಯಿಂದಾನೇ ನಿಮ್ಮನ್ನ ಅಳಿತಾರೆ.”
ಅಕ್ಷ. “ಹಣ್ಣು.”
ಅಕ್ಷ. “ಹಣ್ಣು.”