ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ಕಷ್ಟಗಳಿಗೆ ದೇವರು ಕಾರಣನಾ?

1 ಕಷ್ಟಗಳಿಗೆ ದೇವರು ಕಾರಣನಾ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಯಾಕಂದ್ರೆ ನಮ್ಮ ಕಷ್ಟಗಳಿಗೆ ದೇವರೇ ಕಾರಣ ಅಂತ ಅನ್ಕೊಂಡು ತುಂಬ ಜನ ದೇವರ ಮೇಲೆ ನಂಬಿಕೆ ಕಳಕೊಂಡಿದ್ದಾರೆ.

ನೀವೇ ಯೋಚಿಸಿ . . .

ಅನೇಕ ಧರ್ಮ ಗುರುಗಳ ಮಾತುಗಳು ದೇವರೇ ನಮ್ಮ ಕಷ್ಟಗಳಿಗೆ ಕಾರಣ ಅಂತ ಜನ ಯೋಚಿಸೋ ತರ ಮಾಡಿವೆ. ಉದಾಹರಣೆಗೆ ಕೆಲವು ಧರ್ಮ ಗುರುಗಳು ಹೀಗೆ ಹೇಳುತ್ತಾರೆ:

  • ದೇವರು ಮಾನವರನ್ನು ಶಿಕ್ಷಿಸಲು ಪ್ರಕೃತಿ ವಿಕೋಪಗಳನ್ನ ತರುತ್ತಾನೆ.

  • ದೇವರು ಕಷ್ಟದಿಂದ ಮುಕ್ತಿ ಕೊಡಲು ಒಳ್ಳೇ ಜನರನ್ನು ಬೇಗ ತನ್ನ ಹತ್ರ ಕರಕೊಳ್ಳುತ್ತಾನೆ.

  • ದೇವರು ಆಶೀರ್ವದಿಸೋ ದೇಶಗಳು ಯುದ್ಧದಲ್ಲಿ ಗೆಲ್ಲುತ್ತವೆ (ಆದರೆ ಈ ಯುದ್ಧಗಳು ಎಷ್ಟೋ ಕಷ್ಟಗಳಿಗೆ ಕಾರಣವಾಗಿವೆ).

ಆದರೆ ಧರ್ಮ ಗುರುಗಳು ದೇವರ ಬಗ್ಗೆ ಹೇಳೋ ಈ ವಿಷಯಗಳು ಸತ್ಯನಾ? ಇದನ್ನು ನಾವು ನಂಬಬಹುದಾ?

ಹೆಚ್ಚಿನ ಮಾಹಿತಿ ಪಡೆಯಿರಿ

jw.orgಯಲ್ಲಿ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ದೇವರು ನಮ್ಮ ಕಷ್ಟಗಳಿಗೆ ಕಾರಣ ಅಲ್ಲ.

ಒಂದು ವೇಳೆ ದೇವರು ನಮ್ಮ ಕಷ್ಟಗಳಿಗೆ ಕಾರಣ ಆಗಿದ್ರೆ ಬೈಬಲಿನಲ್ಲಿ ದೇವರ ಬಗ್ಗೆ ಹೇಳಿರೋ ವಿಷಯಗಳು ಸುಳ್ಳಾಗಿರುತ್ತಿತ್ತು. ಉದಾಹರಣೆಗೆ ದೇವರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ:

“[ದೇವರು] ನಡಿಸುವದೆಲ್ಲಾ ನ್ಯಾಯ; ಆತನು . . . ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”ಧರ್ಮೋಪದೇಶಕಾಂಡ 32:4.

‘ದೇವರು ಕೆಟ್ಟದ್ದು ಮಾಡ್ತಾನೆ ಅನ್ನೋ ಯೋಚನೆ ಸರ್ವಶಕ್ತ ಅನ್ಯಾಯ ನಡೆಸ್ತಾನೆ ಅನ್ನೋ ಭಾವನೆ ದೂರವಾಗಿರಲಿ!’ಯೋಬ 34:10.

‘ಸರ್ವಶಕ್ತನು ಅನ್ಯಾಯ ಮಾಡಲ್ಲ.’ಯೋಬ 34:12.

ದೇವರು ತನ್ನ ಬಗ್ಗೆ ಸುಳ್ಳು ಕಲಿಸೋ ಧರ್ಮಗಳನ್ನ ಇಷ್ಟಪಡಲ್ಲ.

ದೇವರೇ ನಮ್ಮ ಕಷ್ಟಗಳಿಗೆ ಕಾರಣ ಅಂತ ಕಲಿಸೋ ಧರ್ಮಗಳನ್ನ, ಯುದ್ಧ ಹಿಂಸಾಚಾರನಾ ಬೆಂಬಲಿಸೋ ಧರ್ಮಗಳನ್ನ ದೇವರು ಇಷ್ಟಪಡಲ್ಲ.

‘ಪ್ರವಾದಿಗಳು ನನ್ನ ಹೆಸರಿನಿಂದ ಸುಳ್ಳು ಬೋಧನೆ ಮಾಡುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ; ಅವರಿಗೆ ಅಪ್ಪಣೆಕೊಡಲಿಲ್ಲ, ಏನೂ ಹೇಳಲಿಲ್ಲ; ಅವರು ಸುಳ್ಳಾದ ದಿವ್ಯದರ್ಶನವನ್ನೂ . . . ಸ್ವಕಲ್ಪಿತ ವಿಚಾರಗಳನ್ನೂ ಬೋಧಿಸುತ್ತಿದ್ದಾರೆ.’ಯೆರೆಮೀಯ 14:14.

ಭಕ್ತಿಯ ವೇಷ ಹಾಕಿದ್ದ ಜನರನ್ನ ಯೇಸುನೂ ಇಷ್ಟಪಡಲಿಲ್ಲ.

“ನನ್ನನ್ನು ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮೀ, ಸ್ವಾಮೀ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಿಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ—ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮೀರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”ಮತ್ತಾಯ 7:21-23, ಸತ್ಯವೇದವು.