ಯೆರೆಮೀಯ 14:1-22

  • ಬರ, ಕತ್ತಿ (1-12)

  • ಸುಳ್ಳು ಪ್ರವಾದಿಗಳನ್ನ ಖಂಡಿಸಿದ್ದು (13-18)

  • ಜನ್ರ ಪಾಪಗಳನ್ನ ಯೆರೆಮೀಯ ಒಪ್ಕೊಂಡ (19-22)

14  ಬರಗಾಲಗಳ ವಿಷ್ಯದಲ್ಲಿ ಯೆಹೋವ ಯೆರೆಮೀಯನಿಗೆ ಏನು ಹೇಳಿದನಂದ್ರೆ,+   ಯೆಹೂದ ಎದೆ ಬಡ್ಕೊಳ್ತಿದೆ,+ ಅದ್ರ ಬಾಗಿಲುಗಳ ಬಣ್ಣ ಹೋಗಿದೆ. ಅವು ಬೇಜಾರಾಗಿ ನೆಲದ ಮೇಲೆ ಕುಸಿದು ಬಿದ್ದಿವೆ,ಯೆರೂಸಲೇಮಿಂದ ಗೋಳಾಟ ಕೇಳಿಸ್ತಿದೆ.   ಯಜಮಾನರು ತಮ್ಮ ಸೇವಕರನ್ನ* ನೀರು ತರೋಕೆ ಕಳಿಸ್ತಾರೆ. ಅವರು ನೀರುಗುಂಡಿಗೆ* ಹೋದಾಗ ನೀರು ಸಿಗಲ್ಲ. ಖಾಲಿ ಕೊಡ ಹಿಡ್ಕೊಂಡು ವಾಪಸ್‌ ಬರ್ತಾರೆ. ನಾಚಿಕೆಯಿಂದ, ನಿರಾಶೆಯಿಂದಅವರು ತಲೆ ಮುಚ್ಕೊಳ್ತಾರೆ.   ಯಾಕಂದ್ರೆ ದೇಶದಲ್ಲಿ ಮಳೆ ಇಲ್ಲದೆ ಭೂಮಿ ಬಿರುಕುಬಿಟ್ಟಿದೆ,+ರೈತರು ಭಯದಿಂದ ತಲೆ ಮುಚ್ಕೊಂಡಿದ್ದಾರೆ.   ಬಯಲಲ್ಲಿ ಹುಲ್ಲು ಇಲ್ಲದ ಕಾರಣಹೆಣ್ಣು ಜಿಂಕೆ ಸಹ ಆಗಷ್ಟೇ ಹೆತ್ತ ತನ್ನ ಮರಿಯನ್ನ ಬಿಟ್ಟು ಹೋಗುತ್ತೆ.   ಕಾಡುಕತ್ತೆಗಳು ಬೋಳು ಬೆಟ್ಟಗಳ ಮೇಲೆ ನಿಂತಿವೆ. ಅವು ಗುಳ್ಳೆನರಿಗಳ ಹಾಗೆ ಏದುಸಿರು ಬಿಡ್ತಿವೆ,ಮೇವು ಇಲ್ಲದೆ ದೃಷ್ಟಿ ಮಬ್ಬಾಗಿದೆ.+   ಯೆಹೋವನೇ, ನಾವು ತಪ್ಪು ಮಾಡಿದವರು ಅನ್ನೋದಕ್ಕೆ ನಾವು ಮಾಡಿದ ಪಾಪಗಳೇ ಸಾಕ್ಷಿ,ಆದ್ರೂ ನಿನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊ,+ನಾವು ತುಂಬ ಸಲ ನಿನಗೆ ನಂಬಿಕೆ ದ್ರೋಹ ಮಾಡಿದ್ದೀವಿ,+ನಿನ್ನ ವಿರುದ್ಧ ಪಾಪ ಮಾಡಿದ್ದೀವಿ.   ಕಷ್ಟ ಬಂದಾಗ ಇಸ್ರಾಯೇಲ್ಯರಿಗೆ ನಿರೀಕ್ಷೆ ಕೊಡುವವನೇ ಕಾಪಾಡುವವನೇ,+ಈ ದೇಶದಲ್ಲಿ ಯಾಕೆ ಅಪರಿಚಿತನ ಹಾಗೆ ಇದ್ದೀಯ? ಯಾಕೆ ರಾತ್ರಿ ಮಾತ್ರ ತಂಗೋ ಪ್ರಯಾಣಿಕನ ತರ ಇದ್ದೀಯ?   ಏನು ಮಾಡ್ದೆ ಸುಮ್ಮನೆ ನಿಂತಿರೋ ವ್ಯಕ್ತಿ ತರ ಯಾಕೆ ಇದ್ದೀಯ? ತನ್ನ ಜನ್ರನ್ನ ಕಾಪಾಡೋಕೆ ಆಗದಿರೋ ಒಬ್ಬ ಶೂರನ ತರ ಯಾಕೆ ಇದ್ದೀಯ? ಯೆಹೋವನೇ, ನೀನು ನಮ್ಮ ಮಧ್ಯದಲ್ಲಿದ್ದಿ,+ನಮ್ಮನ್ನ ನಿನ್ನ ಹೆಸ್ರಿಂದ ಕರಿತಾರೆ.+ ನಮ್ಮ ಕೈಬಿಡಬೇಡ. 10  ಈ ಜನ್ರ ಬಗ್ಗೆ ಯೆಹೋವ ಹೇಳೋದು ಏನಂದ್ರೆ “ಅವರು ಅಲ್ಲಿ ಇಲ್ಲಿ ಅಲಿಯೋದಕ್ಕೆ ಇಷ್ಟಪಡ್ತಾರೆ,+ ಅವರು ತಮ್ಮ ಕಾಲುಗಳನ್ನ ತಡೆಯಲ್ಲ.+ ಹಾಗಾಗಿ ಯೆಹೋವನಾದ ನನಗೆ ಅವರು ಇಷ್ಟ ಇಲ್ಲ.+ ಅವರು ಮಾಡಿದ ತಪ್ಪುಗಳನ್ನ ನಾನು ನೆನಪಿಸ್ಕೊಳ್ತೀನಿ, ಅವರು ಮಾಡಿದ ಪಾಪಗಳಿಗೆ ಶಿಕ್ಷೆ ಕೊಡ್ತೀನಿ.”+ 11  ಆಮೇಲೆ ಯೆಹೋವ ನನಗೆ “ಈ ಜನ್ರಿಗೆ ಒಳ್ಳೇದಾಗಬೇಕಂತ ನೀನು ಪ್ರಾರ್ಥಿಸಬೇಡ.+ 12  ಅವರು ಉಪವಾಸ ಮಾಡಿ ಸಹಾಯಕ್ಕಾಗಿ ಕೂಗಿಕೊಂಡಾಗ ನಾನು ಕಿವಿಗೊಡಲ್ಲ.+ ಅವರು ಸರ್ವಾಂಗಹೋಮ ಬಲಿಗಳನ್ನ, ಧಾನ್ಯ ಅರ್ಪಣೆಗಳನ್ನ ಅರ್ಪಿಸಿದ್ರೂ ಅದ್ರಿಂದ ನನಗೆ ಸಂತೋಷ ಆಗಲ್ಲ.+ ನಾನು ಅವ್ರನ್ನ ಯುದ್ಧ, ಬರಗಾಲ, ಅಂಟುರೋಗದಿಂದ* ನಾಶ ಮಾಡ್ತೀನಿ”+ ಅಂದನು. 13  ಆಗ ನಾನು “ಅಯ್ಯೋ, ವಿಶ್ವದ ರಾಜ ಯೆಹೋವನೇ! ಇಲ್ಲಿ ಪ್ರವಾದಿಗಳು ಜನ್ರಿಗೆ ‘ನೀವು ಯುದ್ಧದಿಂದಾಗಲಿ, ಬರಗಾಲದಿಂದಾಗಲಿ ಸಾಯಲ್ಲ. ಈ ದೇಶದಲ್ಲಿ ನಿಜ ಶಾಂತಿ ಇರೋ ತರ ದೇವರು ಮಾಡ್ತಾನೆ’ ಅಂತ ಹೇಳ್ತಿದ್ದಾರೆ” ಅಂದೆ.+ 14  ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು: “ಆ ಪ್ರವಾದಿಗಳು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯವಾಣಿ ಹೇಳ್ತಿದ್ದಾರೆ.+ ನಾನು ಅವ್ರನ್ನ ಕಳಿಸಲಿಲ್ಲ, ಅವ್ರ ಹತ್ರ ಮಾತಾಡಲಿಲ್ಲ, ಬೇರೆಯವ್ರಿಗೆ ಹೋಗಿ ಹೇಳಿ ಅಂತನೂ ಹೇಳಲಿಲ್ಲ.+ ಅವರು ಸುಳ್ಳು ದರ್ಶನವನ್ನ, ಪ್ರಯೋಜನ ಇಲ್ಲದ ಕಣಿಯನ್ನ, ತಾವೇ ಹುಟ್ಟುಹಾಕಿದ ಭವಿಷ್ಯವಾಣಿಯನ್ನ ಹೇಳ್ತಿದ್ದಾರೆ. ಅದೆಲ್ಲ ಬರೀ ಮೋಸ.+ 15  ನಾನು ಕಳಿಸದಿದ್ರೂ ನನ್ನ ಹೆಸ್ರಲ್ಲಿ ಭವಿಷ್ಯ ಹೇಳ್ತಿರೋ, ‘ಈ ದೇಶದಲ್ಲಿ ಯುದ್ಧ ಆಗಲ್ಲ, ಬರಗಾಲ ಬರಲ್ಲ’ ಅಂತ ಹೇಳ್ತಿರೋ ಪ್ರವಾದಿಗಳ ಬಗ್ಗೆ ಯೆಹೋವ ಹೇಳೋದು ಏನಂದ್ರೆ ‘ಆ ಪ್ರವಾದಿಗಳು ಯುದ್ಧ, ಬರಗಾಲದಿಂದಾನೇ ಸಾಯ್ತಾರೆ.+ 16  ಅವ್ರ ಭವಿಷ್ಯವಾಣಿಗಳನ್ನ ಕೇಳಿ ನಂಬಿದ ಜನ್ರ ಶವಗಳನ್ನ ಬರಗಾಲ, ಯುದ್ಧದಿಂದಾಗಿ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಕ್ತಾರೆ. ಅವ್ರನ್ನ, ಅವ್ರ ಹೆಂಡತಿಯರನ್ನ, ಮಕ್ಕಳನ್ನ ಯಾರೂ ಸಮಾಧಿ ಮಾಡಲ್ಲ.+ ನಾನು ಅವ್ರ ಮೇಲೆ ತಕ್ಕ ಕಷ್ಟ ತರ್ತಿನಿ.’+ 17  ನೀನು ಅವ್ರಿಗೆ ಈ ಮಾತುಗಳನ್ನ ಹೇಳು‘ಹಗಲೂ ರಾತ್ರಿ ನನ್ನ ಕಣ್ಣಿಂದ ಕಣ್ಣೀರ ಧಾರೆ ಹರಿಯಲಿ, ಅದು ನಿಲ್ಲದಿರಲಿ,+ಕನ್ಯೆಯಾದ ನನ್ನ ಮಗಳನ್ನ ಅಂದ್ರೆ ನನ್ನ ಜನ್ರನ್ನ ಜೋರಾಗಿ ಹೊಡೆದು ಜಜ್ಜಿದ್ದಾರೆ,+ಇದ್ರಿಂದ ಅವಳಿಗೆ ಗಂಭೀರವಾಗಿ ಗಾಯ ಆಗಿದೆ. 18  ನಾನು ಪಟ್ಟಣದ ಹೊರಗೆ ಹೋಗಿ ನೋಡಿದ್ರೆಕತ್ತಿಯಿಂದ ಸತ್ತು ಬಿದ್ದಿರೋರು ಕಾಣಿಸ್ತಾರೆ!+ ಪಟ್ಟಣದ ಒಳಗೆ ಬಂದ್ರೆಬರಗಾಲದಿಂದ ಕಾಯಿಲೆ ಬಿದ್ದವರು ಕಾಣಿಸ್ತಾರೆ!+ ಪ್ರವಾದಿಗಳು ಪುರೋಹಿತರು ಅವ್ರಿಗೆ ಗೊತ್ತಿಲ್ಲದ ಬೇರೆ ದೇಶದಲ್ಲಿ ಅಲಿತಿದ್ದಾರೆ.’”+ 19  ದೇವರೇ, ನೀನು ಯೆಹೂದವನ್ನ ಪೂರ್ತಿ ಬಿಟ್ಟುಬಿಟ್ಟಿದ್ದೀಯಾ? ಚೀಯೋನ್‌ ಅಂದ್ರೆ ನಿನಗೆ ಇಷ್ಟ ಇಲ್ವಾ?+ ವಾಸಿನೇ ಆಗದಿರೋಷ್ಟು ಯಾಕೆ ಹೊಡೆದಿದ್ದೀಯಾ?+ ಇವತ್ತಲ್ಲ ನಾಳೆ ಶಾಂತಿ ಸಿಗುತ್ತೆ ಅಂತ ಅಂದ್ಕೊಂಡ್ವಿ, ಆದ್ರೆ ಏನೂ ಒಳ್ಳೆದಾಗಲಿಲ್ಲ,ವಾಸಿಯಾಗೋ ಸಮಯ ಬರುತ್ತೆ ಅಂತ ಕಾಯ್ತಾ ಇದ್ವಿ, ಆದ್ರೆ ಭಯನೇ ಮುತ್ಕೊಂಡಿದೆ!+ 20  ಯೆಹೋವನೇ, ನಾವು ಕೆಟ್ಟ ಕೆಲಸಗಳನ್ನ ಮಾಡಿದ್ದೀವಿ ಅಂತ,ನಮ್ಮ ಪೂರ್ವಜರು ತಪ್ಪುಗಳನ್ನ ಮಾಡಿದ್ದಾರೆ ಅಂತ ಒಪ್ಪಿಕೊಳ್ತೀವಿ,ನಾವು ನಿನ್ನ ವಿರುದ್ಧ ಪಾಪ ಮಾಡಿದ್ದೀವಿ.+ 21  ನಿನ್ನ ಹೆಸ್ರಿಗೋಸ್ಕರ ನಮಗೆ ದಯೆ ತೋರಿಸು, ನಮ್ಮನ್ನ ತಿರಸ್ಕರಿಸಬೇಡ,+ನಿನ್ನ ಮಹಿಮಾನ್ವಿತ ಸಿಂಹಾಸನವನ್ನ ಕೀಳಾಗಿ ನೋಡಬೇಡ. ನೀನು ನಮ್ಮ ಜೊತೆ ಮಾಡಿರೋ ಒಪ್ಪಂದವನ್ನ ನೆನಪಿಸ್ಕೊ, ಅದನ್ನ ಮುರಿಬೇಡ.+ 22  ಬೇರೆ ದೇಶದವ್ರ ಪ್ರಯೋಜನವಿಲ್ಲದ ಮೂರ್ತಿಗಳಿಗೆ ಮಳೆ ಬರಿಸೋಕೆ ಆಗುತ್ತಾ? ಅಥವಾ ಆಕಾಶ ತಾನಾಗೇ ಮಳೆ ಸುರಿಸುತ್ತಾ? ನಮ್ಮ ದೇವರಾದ ಯೆಹೋವನೇ, ಹಾಗೆ ಮಾಡೋಕೆ ನಿನ್ನಿಂದ ಮಾತ್ರ ಆಗುತ್ತೆ.+ ನಾವು ನಿನ್ನನ್ನೇ ನಂಬಿದ್ದೀವಿ,ಯಾಕಂದ್ರೆ ಇದನ್ನೆಲ್ಲ ಮಾಡುವವನು ನೀನೊಬ್ಬನೇ.

ಪಾದಟಿಪ್ಪಣಿ

ಅಥವಾ “ಕೆಳವರ್ಗದ ಜನರನ್ನ.”
ಅಥವಾ “ನೀರಿನ ಕಾಲುವೆಗೆ.”
ಅಥವಾ “ಕಾಯಿಲೆಯಿಂದ.”