ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

3 ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

3 ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಯಾಕಂದ್ರೆ ಒಳ್ಳೇ ಜನರಿಗೆ ಕಷ್ಟ ಬಂದಾಗ ಇದು ಅನ್ಯಾಯ ಅಂತ ನಮ್ಮೆಲ್ರಿಗೂ ಅನ್ಸುತ್ತೆ. ಒಳ್ಳೆಯವರಿಗೂ ಕಷ್ಟ ಬರುತ್ತೆ ಅಂದಮೇಲೆ ಒಳ್ಳೆಯವರಾಗಿದ್ದು ಏನು ಪ್ರಯೋಜನ ಅಂತ ಜನ ನೆನೆಸುತ್ತಾರೆ.

ನೀವೇ ಯೋಚಿಸಿ . . .

ಕೆಲವರು ಪುನರ್ಜನ್ಮನಾ ನಂಬುತ್ತಾರೆ. ಹೋದ ಜನ್ಮದಲ್ಲಿ ಒಳ್ಳೇದು ಮಾಡಿದ್ರೆ ಈ ಜನ್ಮದಲ್ಲಿ ಸುಖ ಜೀವನ ಸಿಗುತ್ತೆ, ಅದೇ ಕೆಟ್ಟದ್ದು ಮಾಡಿದ್ರೆ ಜೀವನ ಬರೀ ಕಷ್ಟಗಳಿಂದಲೇ ತುಂಬಿರುತ್ತೆ ಅಂತ ನೆನೆಸುತ್ತಾರೆ. ಅವರ ನಂಬಿಕೆ ಪ್ರಕಾರ ಒಬ್ಬ ವ್ಯಕ್ತಿ ಈ ಜನ್ಮದಲ್ಲಿ ಒಳ್ಳೆಯವನೇ ಆಗಿದ್ರೂ ಹೋದ ಜನ್ಮದಲ್ಲಿ ಏನಾದ್ರು ಕೆಟ್ಟ ಕೆಲಸ ಮಾಡಿದ್ರೆ ಅವನು ಕಷ್ಟಗಳನ್ನ ಅನುಭವಿಸಲೇಬೇಕು. ಆದ್ರೆ . . .

  • ಒಬ್ಬ ವ್ಯಕ್ತಿಗೆ ಹೋದ ಜನ್ಮದ ಬಗ್ಗೆ ಏನು ನೆನಪೇ ಇಲ್ಲ ಅಂದ ಮೇಲೆ ಅವನು ಈ ಜೀವನದಲ್ಲಿ ಕಷ್ಟಪಟ್ಟರೆ ಏನು ಪ್ರಯೋಜನ?

  • ಹೋದ ಜನ್ಮದ ತಪ್ಪಿಗೆ ಕಷ್ಟ ಅನುಭವಿಸಲೇಬೇಕು ಅನ್ನೋದು ನಿಜವಾಗಿದ್ರೆ ಕಷ್ಟಗಳನ್ನ ತಪ್ಪಿಸೋಕೆ ಯಾಕಿಷ್ಟು ಪ್ರಯತ್ನ ಮಾಡ್ತೀವಿ?

    ಹೆಚ್ಚಿನ ಮಾಹಿತಿ ಪಡೆಯಿರಿ

    jw.orgಯಲ್ಲಿ ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ಕಷ್ಟಗಳು ದೇವರು ಕೊಡೋ ಶಿಕ್ಷೆ ಅಲ್ಲ.

ಬದಲಿಗೆ ಕೆಲವೊಂದು ಕಷ್ಟಗಳು ನಾವು ತಪ್ಪಾದ ಸಮಯದಲ್ಲಿ ತಪ್ಪಾದ ಜಾಗದಲ್ಲಿ ಇರೋದ್ರಿಂದ ಬರುತ್ತೆ.

‘ಅನಿರೀಕ್ಷಿತ ಘಟನೆ ಯಾರಿಗೂ ತಪ್ಪಿದ್ದಲ್ಲ.’ಪ್ರಸಂಗಿ 9:11.

ಇನ್ನು ಕೆಲವು ಕಷ್ಟಗಳು ನಮ್ಮಲ್ಲಿ ಪಾಪ ಮಾಡೋ ಸ್ವಭಾವ ಇರೋದ್ರಿಂದ ಬರುತ್ತೆ.

ಸಾಮಾನ್ಯವಾಗಿ “ಪಾಪ” ಅನ್ನೋ ಪದನಾ ಒಬ್ಬ ವ್ಯಕ್ತಿ ಮಾಡೋ ಕೆಟ್ಟ ಕೆಲಸನಾ ಸೂಚಿಸಲು ಉಪಯೋಗಿಸುತ್ತಾರೆ. ಆದರೆ, ಬೈಬಲ್‌ ಈ ಪದನಾ ಮೊದಲ ಮಾನವರಿಂದ ಎಲ್ಲಾ ಮಾನವರಿಗೆ ಪಾರಂಪರ್ಯವಾಗಿ ಬಂದ ಸ್ವಭಾವನಾ ಸೂಚಿಸಲು ಸಹ ಉಪಯೋಗಿಸುತ್ತೆ.

“ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ.”ಕೀರ್ತನೆ 51:5.

ಪಾರಂಪರ್ಯವಾಗಿ ಬಂದ ಈ ಪಾಪದಿಂದ ಮಾನವರ ಜೀವನ ಅಸ್ತವ್ಯಸ್ತ ಆಗಿದೆ.

ಈ ಪಾಪದಿಂದ ದೇವರೊಂದಿಗೆ ಇರೋ ನಮ್ಮ ಸ್ನೇಹ ಸಂಬಂಧ ಹಾಳಾಗಿದೆ. ಅಷ್ಟೇ ಅಲ್ಲ ಪಾಪದ ಕಾರಣ ನಮ್ಮಲ್ಲಿ ಸ್ವಾರ್ಥ, ಹೊಟ್ಟೆಕಿಚ್ಚಿನಂಥ ಸ್ವಭಾವಗಳು ಬಂದಿದೆ. ಇದ್ರಿಂದ ನಾವಷ್ಟೇ ಅಲ್ಲ ಎಲ್ಲರೂ ಕಷ್ಟಗಳನ್ನ ಅನುಭವಿಸುತ್ತಿದ್ದಾರೆ.

“ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ.”ರೋಮನ್ನರಿಗೆ 7:21.

“ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ.”ರೋಮನ್ನರಿಗೆ 8:22.