ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

5 ಕಷ್ಟಗಳಿಗೆ ಕೊನೆ ಇದ್ಯಾ?

5 ಕಷ್ಟಗಳಿಗೆ ಕೊನೆ ಇದ್ಯಾ?

ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋದು ಯಾಕೆ ಮುಖ್ಯ

ಕಷ್ಟಗಳಿಗೆ ಕೊನೆ ಇದೆ ಅಂತ ಗೊತ್ತಾದ್ರೆ ಬರೋ ಕಷ್ಟಗಳನ್ನ ತಾಳಿಕೊಂಡು ಸಂತೋಷವಾಗಿ ಜೀವನ ನಡೆಸೋಕೆ ಸಹಾಯ ಆಗುತ್ತೆ. ದೇವರ ಮೇಲೆ ನಂಬಿಕೆನೂ ಹೆಚ್ಚಾಗುತ್ತೆ.

ನೀವೇ ಯೋಚಿಸಿ . . .

ತುಂಬ ಜನರಿಗೆ ಕಷ್ಟಗಳನ್ನು ತೆಗೀಬೇಕು ಅನ್ನೋ ಆಸೆ ಇದ್ರೂ ಅದನ್ನ ತೆಗಿಯೋ ಶಕ್ತಿ ಇಲ್ಲ. ಇದನ್ನು ಗಮನಿಸಿ:

ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದ್ರೂ . . .

 • ತುಂಬ ಜನ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುತ್ತಿದ್ದಾರೆ.

 • ಲಕ್ಷಾಂತರ ಜನ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ.

 • ಇವತ್ತು ಎಷ್ಟೋ ಹೊಸ ಹೊಸ ಔಷಧಿಗಳನ್ನು ಕಂಡುಹಿಡಿದ್ರೂ ಎಲ್ಲಾ ಕಾಯಿಲೆಗಳನ್ನ ವಾಸಿ ಮಾಡೋಕೆ ಆಗುತ್ತಿಲ್ಲ, ಅಷ್ಟೇ ಅಲ್ಲ ಹೊಸ ಕಾಯಿಲೆಗಳ ಜೊತೆ ಹಳೇ ಕಾಯಿಲೆಗಳೂ ಮತ್ತೆ ಹುಟ್ಟಿ ಬರುತ್ತಿವೆ ಅಂತ ಫ್ರಾಂಟಿಯರ್ಸ್‌ ಇನ್‌ ಇಮ್ಯೂನಾಲಜೀ ಅನ್ನೋ ಪತ್ರಿಕೆಯಲ್ಲಿ ಡಾ. ಡೇವಿಡ್‌ ಬ್ಲೂಮ್‌ ಬರೆದಿದ್ದಾರೆ.

ಕೆಲವೊಂದು ದೇಶಗಳಲ್ಲಿ ಎಷ್ಟೇ ಹಣ ಇದ್ರೂ . . .

 • ಪ್ರತಿ ವರ್ಷ ಲಕ್ಷಾಂತರ ಮಕ್ಕಳು ಸಾಯುತ್ತಾ ಇದ್ದಾರೆ. ಅವರಲ್ಲಿ ಬಡವರೇ ಜಾಸ್ತಿ.

 • ಕೋಟ್ಯಾಂತರ ಜನ ಕೊಳಕಾದ ಕೊಂಪೆಯಲ್ಲಿ ಜೀವಿಸುತ್ತಿದ್ದಾರೆ.

 • ಕೋಟ್ಯಾಂತರ ಜನರಿಗೆ ಕುಡಿಯೋಕೆ ಶುದ್ಧ ನೀರೂ ಸಿಗುತ್ತಿಲ್ಲ.

ಕಾನೂನು ಎಷ್ಟೇ ನಿಯಮಗಳನ್ನ ಮಾಡಿದ್ರೂ . . .

 • ಅನೇಕ ದೇಶಗಳಲ್ಲಿ ಮಾನವರ ಮಾರಾಟ (ಸಾಗಾಣಿಕೆ) ನಡೀತಾನೇ ಇದೆ. ಆದ್ರೂ ಅಪರಾಧಿಗಳಿಗೆ ತಕ್ಕ ಶಿಕ್ಷೆ ಸಿಗುತ್ತಿಲ್ಲ ಯಾಕಂದ್ರೆ ಕೆಲವು ಅಧಿಕಾರಿಗಳಿಗೆ “ಈ ವಿಷಯದ ಬಗ್ಗೆ ಗೊತ್ತೇ ಇರಲ್ಲ, ಇನ್ನು ಕೆಲವರಿಗೆ ಗೊತ್ತಿದ್ರೂ ಏನೂ ಮಾಡೋಕಾಗುತ್ತಿಲ್ಲ” ಅಂತ ವಿಶ್ವ ಸಂಸ್ಥೆಯ ಒಂದು ವರದಿ ಹೇಳುತ್ತೆ.

  ಹೆಚ್ಚಿನ ಮಾಹಿತಿ ಪಡೆಯಿರಿ

  jw.orgಯಲ್ಲಿ ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.

ಬೈಬಲ್‌ ಏನು ಹೇಳುತ್ತೆ

ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆ.

ನಾವು ಅನುಭವಿಸುತ್ತಿರೋ ಕಷ್ಟ ನೋವುಗಳ ಬಗ್ಗೆ ದೇವರಿಗೆ ಇಂಚಿಂಚೂ ಗೊತ್ತು.

“[ದೇವರು] ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ ಅವನ ಪ್ರಾರ್ಥನೆಗೆ ಕಿವಿಗೊಟ್ಟನು.”ಕೀರ್ತನೆ 22:24.

“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”1 ಪೇತ್ರ 5:7.

ನಮ್ಮ ಕಷ್ಟಗಳಿಗೆ ಕೊನೆ ಇದೆ.

ನಾವು ಯಾವುದೇ ಕಷ್ಟಗಳಿಲ್ಲದೆ ಸಂತೋಷವಾಗಿ ಜೀವಿಸಬೇಕು ಅನ್ನೋ ದೇವರ ಉದ್ದೇಶ ಖಂಡಿತ ನೆರವೇರುತ್ತೆ ಅಂತ ಬೈಬಲ್‌ ಮಾತುಕೊಡುತ್ತೆ.

“ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”ಪ್ರಕಟನೆ 21:3, 4.

ದೇವರು ಕಷ್ಟಗಳ ಮೂಲವನ್ನು ಬೇರು ಸಮೇತ ಕಿತ್ತು ಎಸೆಯುತ್ತಾನೆ.

ಇದನ್ನ ದೇವರು ತನ್ನ ಸರ್ಕಾರದ ಮೂಲಕ ಮಾಡುತ್ತಾನೆ.

“ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು . . . ಶಾಶ್ವತವಾಗಿ ನಿಲ್ಲುವದು.”ದಾನಿಯೇಲ 2:44.