ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 2 2020 | ಇಷ್ಟೊಂದು ಕಷ್ಟ ಯಾಕಿದೆ? ಉತ್ತರ ಇಲ್ಲಿದೆ

ಜೀವನದಲ್ಲಿ ನಮ್ಮೆಲ್ಲರಿಗೂ ಒಂದಲ್ಲಾ ಒಂದು ಕಷ್ಟ ಬಂದೇ ಬರುತ್ತೆ. ಅದಕ್ಕೆ ಕಾರಣ ಕಾಯಿಲೆ, ಅಪಘಾತ, ಪ್ರಕೃತಿ ವಿಕೋಪ ಅಥವಾ ಹಿಂಸಾಚಾರ ಆಗಿರಬಹುದು.

ಕಷ್ಟಗಳಿಗೆ ಕಾರಣ ಏನು ಅನ್ನೋ ಪ್ರಶ್ನೆಗೆ ಜನರು ಉತ್ತರ ಹುಡುಕುತ್ತಿದ್ದಾರೆ.

  • ಕೆಲವರು ನಮ್ಮ ಕಷ್ಟಗಳಿಗೆ ಹಣೆಬರಹನೇ ಕಾರಣ. ಅದನ್ನ ಅಳಿಸೋಕೆ ಯಾರಿಂದನೂ ಆಗಲ್ಲ ಅಂತಾರೆ.

  • ಇನ್ನು ಕೆಲವರು ‘ಇದೆಲ್ಲಾ ನಮ್ಮ ಕರ್ಮದ ಫಲ, ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈಗ ಕಷ್ಟ ಅನುಭವಿಸುತ್ತಿದ್ದೀವಿ’ ಅಂತಾರೆ.

ಕಷ್ಟಗಳು ಬಂದಾಗ ಜನರ ಮನಸ್ಸಲ್ಲಿ ಹಲವಾರು ಪ್ರಶ್ನೆಗಳು ಹರಿದಾಡುತ್ತೆ. ಆದ್ರೆ ಅದಕ್ಕೆ ಸರಿಯಾದ ಉತ್ತರ ಅಂತೂ ಸಿಗುತ್ತಿಲ್ಲ.

ಕೆಲವರ ನಂಬಿಕೆ ಏನು

ಬೇರೆ ಬೇರೆ ಧರ್ಮದವರು ಕಷ್ಟಗಳ ಬಗ್ಗೆ ಏನು ಹೇಳುತ್ತಾರೆ ಅಂತ ನೋಡಿ.

1 ಕಷ್ಟಗಳಿಗೆ ದೇವರು ಕಾರಣನಾ?

ಕೆಲವು ಬೋಧನೆಗಳು ದೇವರ ಬಗ್ಗೆ ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದೆ. ಆದ್ರೆ ಸತ್ಯ ಏನು?

2 ನಮ್ಮ ಕಷ್ಟಗಳಿಗೆ ನಾವೇ ಕಾರಣನಾ?

ಒಂದು ವೇಳೆ ನಮ್ಮ ಕಷ್ಟಗಳಿಗೆ ನಾವೇ ಕಾರಣ ಅನ್ನೋದಾದ್ರೆ ಅದನ್ನ ಕಮ್ಮಿ ಮಾಡೋಕೂ ನಮ್ಮ ಕೈಲಿ ಆಗಬಹುದು.

3 ಒಳ್ಳೇ ಜನರಿಗೆ ಯಾಕೆ ಕಷ್ಟ ಬರುತ್ತೆ?

ಇದಕ್ಕಿರುವ ಉತ್ತರನಾ ಅರ್ಥಮಾಡಿಕೊಳ್ಳಲು ಬೈಬಲ್‌ ಸಹಾಯ ಮಾಡುತ್ತೆ.

4 ಕಷ್ಟಪಡಬೇಕು ಅಂತನೇ ದೇವರು ನಮ್ಮನ್ನ ಸೃಷ್ಟಿಸಿದ್ನಾ?

ಇಷ್ಟು ಸುಂದರ ಭೂಮಿಯನ್ನು ಸೃಷ್ಟಿಮಾಡಿದ ದೇವರೇ ನಮ್ಮನ್ನು ಅದ್ರಲ್ಲಿ ಕಷ್ಟಪಡಿ ಅಂತ ಬಿಡುತ್ತಾನಾ? ಇಲ್ಲಾ ಅಂದ್ರೆ, ನಮ್ಮ ಕಷ್ಟಗಳಿಗೆ ನಿಜವಾದ ಕಾರಣ ಏನಿರಬಹುದು?

5 ಕಷ್ಟಗಳಿಗೆ ಕೊನೆ ಇದ್ಯಾ?

ದೇವರು ಕಷ್ಟಗಳನ್ನ ಹೇಗೆ ತೆಗೆದುಹಾಕುತ್ತಾನೆ ಅಂತ ಬೈಬಲ್‌ ಹೇಳುತ್ತೆ.

ಕಷ್ಟಗಳಿಂದ ಹೊರಬರಲು ಸಹಾಯ ಪಡೆಯಿರಿ

ನಮ್ಮ ಕಷ್ಟಗಳು ಯಾವತ್ತೂ ಬಗೆಹರಿಯಲ್ಲ ಅಂತ ಅನಿಸಿದ್ರೂ ಸಹಾಯ ಲಭ್ಯವಿದೆ.