ನಮ್ಮ ಕ್ರೈಸ್ತ ಜೀವನ

ಯೆಹೋವನ ಏರ್ಪಾಡುಗಳನ್ನ ಬೆಂಬಲಿಸೋ ಮೂಲಕ ಪ್ರೀತಿ ತೋರಿಸಿ

ಯೆಹೋವನ ಏರ್ಪಾಡುಗಳನ್ನ ಬೆಂಬಲಿಸೋ ಮೂಲಕ ಪ್ರೀತಿ ತೋರಿಸಿ

ಒಬ್ಬ ವ್ಯಕ್ತಿ ತಾನು ಮಾಡೋ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ ಪಡದಿದ್ರೆ ಅವನನ್ನ ಬಹಿಷ್ಕರಿಸಲಾಗುತ್ತೆ. ಈ ಏರ್ಪಾಡಿನಿಂದ ಸಭೆಗೆ ಪ್ರಯೋಜನ ಆಗುತ್ತೆ ಮತ್ತು ಆ ವ್ಯಕ್ತಿಗೆ ತಾನು ಮಾಡಿರೋದು ಎಷ್ಟು ದೊಡ್ಡ ತಪ್ಪು ಅನ್ನೋದು ಮನವರಿಕೆ ಆಗುತ್ತೆ. (1ಕೊರಿಂ 5:6, 11) ಬಹಿಷ್ಕಾರ ಆದಾಗ ಆ ವ್ಯಕ್ತಿಯ ಕುಟುಂಬದವರಿಗೆ ಮತ್ತು ನ್ಯಾಯನಿರ್ಣಾಯಕ ಸಮಿತಿಯ ಸದಸ್ಯರಿಗೆ ತುಂಬ ದುಃಖ ಆಗುತ್ತೆ ನಿಜ. ಆದ್ರೆ ಈ ಏರ್ಪಾಡನ್ನ ಬೆಂಬಲಿಸಿದ್ರೆ ಯೆಹೋವನ ಮೇಲೆ ಮತ್ತು ಆ ವ್ಯಕ್ತಿ ಮೇಲೆ ನಮಗೆ ಎಷ್ಟು ಪ್ರೀತಿ ಇದೆ ಅನ್ನೋದನ್ನ ತೋರಿಸ್ತೀವಿ.

ಅಷ್ಟೇ ಅಲ್ಲ ಈ ಏರ್ಪಾಡಿಗೆ ಬೆಂಬಲ ಕೊಡೋ ಮೂಲಕ ಯೆಹೋವನ ಉನ್ನತ ಮಟ್ಟಗಳನ್ನ ಎಷ್ಟು ಮಾನ್ಯ ಮಾಡ್ತೀವಿ ಮತ್ತು ಯೆಹೋವನ ಹೆಸರು ಹಾಳಾಗಬಾರದು ಅನ್ನೋ ಬಯಕೆ ನಮ್ಮಲ್ಲಿ ಎಷ್ಟು ಇದೆ ಅಂತ ಸಹ ತೋರಿಸ್ತೀವಿ. (1ಪೇತ್ರ 1:14-16) ಶಿಸ್ತು ಸಿಕ್ಕಾಗ ಆ ವ್ಯಕ್ತಿಯ ಕುಟುಂಬಕ್ಕೆ ಸಹಿಸಲಾರದಷ್ಟು ದುಃಖ ಆಗುತ್ತೆ. ಆದ್ರೆ ಈ ಏರ್ಪಾಡು “ಸಮಾಧಾನಕರವಾದ ಫಲವನ್ನು ಅಂದರೆ ನೀತಿಯನ್ನು ಫಲಿಸುತ್ತದೆ.” (ಇಬ್ರಿ 12:5, 6, 11) ಬಹಿಷ್ಕರಿಸಲಾದ ಅಥವಾ ತಾವಾಗೇ ಸಭೆಯನ್ನ ಬಿಟ್ಟು ಹೋದವರ ಹತ್ರ ಒಡನಾಟ ಇಟ್ಕೊಂಡ್ರೆ ನಾವು ಯೆಹೋವನ ಏರ್ಪಾಡಿಗೆ ಅಗೌರವ ತೋರಿಸಿದಂತೆ ಆಗುತ್ತೆ. ಆದ್ರೆ ಯೆಹೋವನು ತನ್ನ ಜನರಿಗೆ ಶಿಸ್ತು ನೀಡುವಾಗ ‘ಮಿತಿಮೀರಿ ಶಿಕ್ಷಿಸಲ್ಲ’ ಅನ್ನೋದನ್ನ ನೆನಪಿಡಿ. (ಯೆರೆ 30:11) ಹಾಗಾಗಿ ಯೆಹೋವನ ಮೇಲೆ ಭರವಸೆ ಇಟ್ಟು ಈ ಏರ್ಪಾಡಿಗೆ ಬೆಂಬಲ ಕೊಡಿ ಮತ್ತು ಯೆಹೋವನೊಂದಿಗೆ ನಿಮ್ಮ ಸಂಬಂಧನ ಬಲಗೊಳಿಸುತ್ತಾ ಇರಿ. ಒಂದಲ್ಲಾ ಒಂದು ದಿನ ಆ ವ್ಯಕ್ತಿ ಮತ್ತೆ ಮರಳಿ ಯೆಹೋವನ ಬಳಿಗೆ ಬರ್ತಾನೆ ಅನ್ನೋ ನಂಬಿಕೆ ಕಳಕೋಬೇಡಿ.—ಯೆಶಾ 1:16-18; 55:7.

ಪೂರ್ಣ ಹೃದಯದಿಂದ ನಿಷ್ಠೆ ತೋರಿಸಿ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಮಕ್ಕಳು ಯೆಹೋವನನ್ನು ಬಿಟ್ಟುಹೋದಾಗ ಕ್ರೈಸ್ತ ಹೆತ್ತವರಿಗೆ ಹೇಗನಿಸುತ್ತೆ?

  • ಬಹಿಷ್ಕರಿಸಲ್ಪಟ್ಟ ವ್ಯಕ್ತಿಯ ಕುಟುಂಬದವರಿಗೆ ಸಭೆಯಲ್ಲಿರೋ ಬೇರೆಯವರು ಹೇಗೆ ಸಹಾಯ ಮಾಡಬಹುದು?

  • ಬೈಬಲಿನ ಯಾವ ಉದಾಹರಣೆ ಕುಟುಂಬದವರಿಗಿಂತ ಹೆಚ್ಚಾಗಿ ಯೆಹೋವನಿಗೆ ನಿಷ್ಠರಾಗಿರೋದು ಮುಖ್ಯ ಅಂತ ತೋರಿಸುತ್ತೆ?

  • ಕುಟುಂಬಕ್ಕಿಂತ ಹೆಚ್ಚಾಗಿ ಯೆಹೋವನಿಗೆ ನಿಷ್ಠೆ ತೋರಿಸೋದು ಹೇಗೆ?