ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು | ಯಾಜಕಕಾಂಡ 12-13

ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ

ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ

13:4, 5, 45, 46, 52, 57

ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಯೆಹೋವನೊಟ್ಟಿಗೆ ನಮ್ಮ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳೋದ್ರ ಬಗ್ಗೆ ನಾವೇನು ಕಲಿಬಹುದು?

  • ಒಬ್ಬನಿಗೆ ಕುಷ್ಠರೋಗ ಇದ್ಯಾ ಇಲ್ವಾ ಅಂತ ಆದಷ್ಟು ಬೇಗ ಹೇಗೆ ಕಂಡುಹಿಡಿಯೋದು ಅನ್ನೋದನ್ನ ಯೆಹೋವನು ಯಾಜಕರಿಗೆ ಕಲಿಸಿದನು. ಅದೇ ತರ ಇಂದು ಹಿರಿಯರು ಯೆಹೋವನೊಟ್ಟಿಗೆ ಸಂಬಂಧ ಬಲಪಡಿಸಿಕೊಳ್ಳೋ ಅಗತ್ಯ ಯಾರಿಗಿದೆ ಅಂತ ಆದಷ್ಟು ಬೇಗ ಕಂಡುಹಿಡಿದು ಅವರಿಗೆ ಸಹಾಯ ಮಾಡ್ತಾರೆ.—ಯಾಕೋ 5:14, 15

  • ರೋಗ ಬೇರೆಯವರಿಗೆ ಹರಡದಂತೆ ತಡೆಯಲು ಕುಷ್ಠರೋಗಿಗಳು ಮುಟ್ಟಿರೋ ವಸ್ತುಗಳನ್ನ ಇಸ್ರಾಯೇಲ್ಯರು ಬೆಂಕಿಯಲ್ಲಿ ಹಾಕಿ ಸುಡಬೇಕಿತ್ತು. ಅದೇ ತರ ಪಾಪಕ್ಕೆ ನಡೆಸುವಂಥ ವಿಷಯಗಳು ಎಷ್ಟೇ ಅಮೂಲ್ಯವಾಗಿರಲಿ ಅದನ್ನ ಬಿಟ್ಟುಬಿಡಲು ಕ್ರೈಸ್ತರು ತಯಾರಿರಬೇಕು. (ಮತ್ತಾ 18:8, 9) ಅದರಲ್ಲಿ ಕೆಲವರ ಫ್ರೆಂಡ್‌ಶಿಪ್‌, ಕೆಲವು ಅಭ್ಯಾಸಗಳು ಅಥವಾ ಕೆಲವು ಮನೋರಂಜನೆಗಳನ್ನ ಬಿಟ್ಟುಬಿಡೋದು ಸಹ ಸೇರಿರಬಹುದು

ಯೆಹೋವನ ಸಹಾಯ ಪಡಕೊಳ್ಳೋ ಅಗತ್ಯ ತನಗಿದೆ ಅಂತ ಒಬ್ಬ ಕ್ರೈಸ್ತನು ಹೇಗೆ ತೋರಿಸಬಹುದು?