ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Military equipment: Anton Petrus/Moment via Getty Images; money: Wara1982/iStock via Getty Images Plus

ಸದಾ ಎಚ್ಚರವಾಗಿರಿ! 

ಯುದ್ಧಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು—ಆದ್ರೆ ನಿಜವಾದ ನಷ್ಟ ಏನು?

ಯುದ್ಧಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು—ಆದ್ರೆ ನಿಜವಾದ ನಷ್ಟ ಏನು?

 ಯುದ್ಧದಿಂದ ಆಗೋ ನಷ್ಟ ಅಷ್ಟಿಷ್ಟಲ್ಲ.

  •   “ಕಳೆದ ವರ್ಷ ಲೋಕದ ಎಲ್ಲ ಸರ್ಕಾರಗಳು ಬೇರೆ ಬೇರೆ ಯುದ್ಧಗಳಿಗಾಗಿ 2.2 ಲಕ್ಷ ಕೋಟಿ ಡಾಲರ್‌ ಖರ್ಚು ಮಾಡಿದೆ. ಒಂದೇ ವರ್ಷದಲ್ಲಿ ಬರೀ ಯುದ್ಧಗಳಿಗೆ ಇಷ್ಟು ಖರ್ಚನ್ನ ಹಿಂದೆಂದೂ ಮಾಡಿರಲಿಲ್ಲ.”—ದಿ ವಾಷಿಂಗ್‌ಟನ್‌ ಪೋಸ್ಟ್‌, ಫೆಬ್ರವರಿ 13, 2024.

 ಯುದ್ಧದಿಂದ ಹಣ ಅಷ್ಟೇ ನಷ್ಟ ಆಗ್ತಿಲ್ಲ, ಬೇರೆ ಸಮಸ್ಯೆಗಳು ಆಗ್ತಿದೆ. ಉದಾಹರಣೆಗೆ ಯುಕ್ರೇನ್‌ ಯುದ್ಧ.

  •   ಸೈನಿಕರು. ಎರಡು ವರ್ಷಗಳ ಹಿಂದೆ ಶುರು ಆದ ಯುಕ್ರೇನ್‌ ಯುದ್ಧದಿಂದ ಸುಮಾರು 5 ಲಕ್ಷ ಸೈನಿಕರು ತಮ್ಮ ಪ್ರಾಣ ಕಳ್ಕೊಂಡಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಅಂತ ಕೆಲವು ತಜ್ಞರು ಅಂದಾಜು ಮಾಡಿದ್ದಾರೆ.

  •   ಸಾಮಾನ್ಯ ಜನರು. ವಿಶ್ವಸಂಸ್ಥೆಯ ಪ್ರಕಾರ 28,000ಕ್ಕೂ ಜಾಸ್ತಿ ಜನ ಈ ಯುದ್ಧದಿಂದ ತಮ್ಮ ಜೀವ ಕಳ್ಕೊಂಡಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಆದ್ರೆ ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು “ಈ ವಿನಾಶಕಾರಿ ಯುದ್ಧದಿಂದ ಸಾಮಾನ್ಯ ಜನರಿಗೆ ಎಷ್ಟು ತೊಂದ್ರೆ ಆಗಿದೆ ಅನ್ನೋದನ್ನ ಮಾತಿನಲ್ಲಿ ಹೇಳೋಕೆ ಆಗಲ್ಲ” ಅಂತ ಹೇಳಿದ್ದಾರೆ. a

 ಲೋಕದ ಎಲ್ಲಾ ಕಡೆ ನಡೀತಿರೋ ಯುದ್ಧ ಮತ್ತು ಸಂಘರ್ಷಗಳಿಂದ ಮನುಷ್ಯರಿಗೆ ಆಗ್ತಿರೋ ನಷ್ಟವನ್ನ ಎಣಿಸೋಕಾಗಲ್ಲ.

  •   1 ಕೋಟಿ 14 ಲಕ್ಷ. 2023 ಸೆಪ್ಟೆಂಬರ್‌ ತನಕ ಲೋಕದ ಎಲ್ಲಾ ಕಡೆ ಯುದ್ಧ ಮತ್ತು ಹಿಂಸೆಯಿಂದ ಸ್ಥಳಾಂತರ ಆದ ಜನರ ಸಂಖ್ಯೆ.

  •   7 ಕೋಟಿ 83 ಲಕ್ಷ. ಹಸಿವೆಯಿಂದ ಬಳಲ್ತಿರೋ ಜನರ ಸಂಖ್ಯೆ. “ಯುದ್ಧ ಮತ್ತು ಸಂಘರ್ಷಗಳೇ ಜನರು ಹಸಿವಿನಿಂದ ಬಳಲೋಕೆ ಮುಖ್ಯ ಕಾರಣ. ಲೋಕದಲ್ಲಿ ಹಸಿವೆಯಿಂದ ಬಳಲ್ತಿರೋ 70 ಪ್ರತಿಶತದಷ್ಟು ಜನರು ಯುದ್ಧ ಮತ್ತು ಹಿಂಸಾಚಾರ ನಡೆಯೋ ಜಾಗದಲ್ಲಿದ್ದಾರೆ.”—ವರ್ಲ್ಡ್‌ ಫುಡ್‌ ಪ್ರೋಗ್ರಾಮ್‌.

 ಹಾಗಾದ್ರೆ ಯುದ್ಧಾನೇ ಇಲ್ಲದ ಒಂದು ಸಮಯ ಬರುತ್ತಾ? ಮುಂದೆ ಎಲ್ಲರೂ ಶಾಂತಿ ನೆಮ್ಮದಿಯಿಂದ ಇರಬಹುದಾ? ಬಡವರೇ ಇಲ್ಲದೇ ಎಲ್ಲರಿಗೂ ಹೊಟ್ಟೆ ತುಂಬಾ ಊಟ ಸಿಗುವಂಥ ಸಮಯ ಬರುತ್ತಾ? ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಯುದ್ಧದ ಸಮಯ

 ಲೋಕದ ಎಲ್ಲಾ ಕಡೆ ಯುದ್ಧಗಳು ನಡೆಯುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿದೆ. ಪ್ರಕಟನೆ ಪುಸ್ತಕದಲ್ಲಿ ಇದನ್ನ ಒಬ್ಬ ಕುದುರೆ ಸವಾರನಿಗೆ ಹೋಲಿಸಲಾಗಿದೆ.

  •   “ಆಗ ಇನ್ನೊಂದು ಕುದುರೆ ಬಂತು. ಅದು ಕೆಂಪಗಿತ್ತು. ಅದ್ರ ಮೇಲೆ ಕೂತಿದ್ದ ವ್ಯಕ್ತಿಗೆ ಭೂಮಿಯಿಂದ ಶಾಂತಿ ತೆಗೆದುಹಾಕೋ ಅನುಮತಿ ಸಿಕ್ತು. ಜನ್ರು ಒಬ್ಬರನ್ನೊಬ್ರು ಸಾಯಿಸಬೇಕಂತ ಈ ಅನುಮತಿ ಸಿಕ್ತು. ಅಷ್ಟೇ ಅಲ್ಲ ಅವನಿಗೆ ಒಂದು ದೊಡ್ಡ ಕತ್ತಿ ಕೊಡಲಾಯ್ತು.”—ಪ್ರಕಟನೆ 6:4.

 ಯುದ್ಧವನ್ನ ಸೂಚಿಸೋ ಕುದುರೆ ಸವಾರನ ಹಿಂದೆ ಮತ್ತೆರಡು ಕುದುರೆ ಸವಾರರು ಬರ್ತಾರೆ ಅಂತ ಬೈಬಲ್‌ ಹೇಳುತ್ತೆ. ಈ ಕುದುರೆಗಳು ಕಾಯಿಲೆ ಅಥವಾ ಬೇರೆ ಕಾರಣಗಳಿಂದ ಆಗುತ್ತಿರುವ ಬರಗಾಲ ಮತ್ತು ಸಾವನ್ನ ಸೂಚಿಸುತ್ತೆ. (ಪ್ರಕಟನೆ 6:5-8) ಬೈಬಲಿನಲ್ಲಿ ಹೇಳಿರೋ ಈ ಭವಿಷ್ಯವಾಣಿಯ ಬಗ್ಗೆ ಮತ್ತು ಈ ಭವಿಷ್ಯವಾಣಿ ನಮ್ಮ ಕಾಲದಲ್ಲಿ ನಡಿತಿದೆ ಅಂತ ನಾವು ಯಾಕೆ ನಂಬಬಹುದು ಅನ್ನೋದ್ರ ಬಗ್ಗೆ ಹೆಚ್ಚನ್ನ ತಿಳಿಯಲು “ನಾಲ್ಕು ರಾಹುತರು ನಾಗಾಲೋಟದಲ್ಲಿ!” ಅನ್ನೋ ಲೇಖನ ನೋಡಿ.

ಶಾಂತಿ ತುಂಬಿರೋ ಸುಂದರ ಭವಿಷ್ಯ

 ತುಂಬಾ ಬೇಗ ಲೋಕದಲ್ಲಿರೋ ಸಂಪನ್ಮೂಲಗಳನ್ನ ಯುದ್ಧಕ್ಕೆ ಬಳಸದೇ ಇರೋಂಥ ಒಂದು ಸಮಯ ಬರುತ್ತೆ. ಆದ್ರೆ ಇದು ಮನುಷ್ಯರ ಪ್ರಯತ್ನದಿಂದ ಆಗಲ್ಲ. ಇದ್ರ ಬಗ್ಗೆ ಬೈಬಲ್‌ ಹೀಗೆ ಹೇಳುತ್ತೆ:

  •   ದೇವರು “ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.”—ಕೀರ್ತನೆ 46:9.

  •   ಯುದ್ಧದಿಂದ ಆದ ಎಲ್ಲಾ ಕೆಟ್ಟ ಪರಿಣಾಮಗಳನ್ನ ದೇವರು ಸರಿ ಮಾಡ್ತಾನೆ. “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕಟನೆ 21:4.

  •   ಎಲ್ಲರೂ ಶಾಂತಿ ನೆಮ್ಮದಿಯಿಂದ ಇರೋ ತರ ದೇವರು ನೋಡ್ಕೊತಾನೆ. “ನನ್ನ ಜನ್ರು ಪ್ರಶಾಂತವಾದ ಸ್ಥಳದಲ್ಲಿ ವಾಸಿಸ್ತಾರೆ, ಸುರಕ್ಷಿತವಾದ ತಾಣಗಳಲ್ಲಿ, ನೆಮ್ಮದಿಯಿರೋ ವಿಶ್ರಾಂತಿ ಸ್ಥಳಗಳಲ್ಲಿ ನೆಲೆಸ್ತಾರೆ.”—ಯೆಶಾಯ 32:18.

 ಬೈಬಲ್‌ ಭವಿಷ್ಯವಾಣಿಗಳಿಂದ ಇವತ್ತು ನಡೀತಿರೋ ಯುದ್ಧಗಳು ಮತ್ತು ಇತರ ಘಟನೆಗಳು ಶಾಂತಿ ನೆಮ್ಮದಿ ತುಂಬಿರೋ ಸುಂದರ ಭವಿಷ್ಯ ತುಂಬಾ ಹತ್ರದಲ್ಲಿದೆ ಅನ್ನೋದನ್ನ ತೋರಿಸುತ್ತೆ.

 ಇದನ್ನ ದೇವರು ಹೇಗೆ ತರ್ತಾನೆ? ದೇವರು ತನ್ನ ಸ್ವರ್ಗೀಯ ಸರ್ಕಾರ ಬಳಸಿ ಇದನ್ನ ತರ್ತಾನೆ. (ಮತ್ತಾಯ 6:10) ದೇವರ ಸರ್ಕಾರ ಅಂದ್ರೇನು, ಅದ್ರಿಂದ ನಮ್ಗೆ ಯಾವ ಪ್ರಯೋಜನ ಆಗುತ್ತೆ ಅಂತ ತಿಳ್ಕೊಳ್ಳೋಕೆ ದೇವರ ರಾಜ್ಯ ಅಂದರೇನು? ಅನ್ನೋ ವಿಡಿಯೋ ನೋಡಿ.

a Miroslav Jenca, United Nations assistant secretary-general for Europe, December 6, 2023.