ಯೋಹಾನನಿಗೆ ಕೊಟ್ಟ ಪ್ರಕಟನೆ 6:1-17

  • ಆ ಕುರಿಮರಿ ಆರು ಮುದ್ರೆಗಳನ್ನ ತೆಗೀತು (1-17)

    • ಬಿಳಿ ಕುದುರೆ ಸವಾರ ಗೆಲ್ತಾ ಹೋದ (1, 2)

    • ಕೆಂಪು ಕುದುರೆ ಓಡಿಸುವವನಿಗೆ ಶಾಂತಿ ತೆಗೆದುಹಾಕೋಕೆ ಅಧಿಕಾರ (3, 4)

    • ಕಪ್ಪು ಕುದುರೆ ಸವಾರ ಬರಗಾಲ ತಂದ (5, 6)

    • ಸಾವು ಅನ್ನೋ ಹೆಸ್ರಿದ್ದ ಬಿಳಿಚ್ಕೊಂಡಿದ್ದ ಕುದುರೆ (7, 8)

    • ಯಜ್ಞವೇದಿಯ ಕೆಳಗೆ ಬಲಿಯಾದವರು (9-11)

    • ಒಂದು ದೊಡ್ಡ ಭೂಕಂಪ (12-17)

6  ಕುರಿಮರಿ+ ಆ ಏಳು ಮುದ್ರೆಯಲ್ಲಿ ಒಂದು ಮುದ್ರೆ ತೆಗೆಯೋದನ್ನ ನಾನು ನೋಡ್ದೆ.+ ಆಗ ನಾಲ್ಕು ಜೀವಿಗಳಲ್ಲಿ ಒಂದು ಜೀವಿ+ ಗುಡುಗಿನ ಹಾಗೆ ಜೋರಾಗಿ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 2  ನಾನು ನೋಡಿದಾಗ ಒಂದು ಬಿಳಿ ಕುದುರೆ+ ಕಾಣಿಸ್ತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ಬಿಲ್ಲಿತ್ತು. ದೇವರು ಅವನಿಗೆ ಒಂದು ಕಿರೀಟ ಕೊಟ್ಟನು.+ ಅವನು ಶತ್ರುಗಳನ್ನ ಸೋಲಿಸ್ತಾ ಗೆಲ್ತಾ ಹೋದನು.+ 3  ಕುರಿಮರಿ ಎರಡನೇ ಮುದ್ರೆ ತೆಗೆದಾಗ ಎರಡನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 4  ಆಗ ಇನ್ನೊಂದು ಕುದುರೆ ಬಂತು. ಅದು ಕೆಂಪಗಿತ್ತು. ಅದ್ರ ಮೇಲೆ ಕೂತಿದ್ದ ವ್ಯಕ್ತಿಗೆ ಭೂಮಿಯಿಂದ ಶಾಂತಿ ತೆಗೆದುಹಾಕೋ ಅನುಮತಿ ಸಿಕ್ತು. ಜನ್ರು ಒಬ್ಬರನ್ನೊಬ್ರು ಸಾಯಿಸಬೇಕಂತ ಈ ಅನುಮತಿ ಸಿಕ್ತು. ಅಷ್ಟೇ ಅಲ್ಲ ಅವನಿಗೆ ಒಂದು ದೊಡ್ಡ ಕತ್ತಿ ಕೊಡಲಾಯ್ತು.+ 5  ಕುರಿಮರಿ ಮೂರನೇ ಮುದ್ರೆ+ ತೆಗೆದಾಗ ಮೂರನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. ನಾನು ನೋಡ್ತಿದ್ದಾಗ ಒಂದು ಕಪ್ಪು ಕುದುರೆ ಬಂತು. ಅದ್ರ ಮೇಲೆ ಕೂತಿದ್ದವನ ಕೈಯಲ್ಲಿ ಒಂದು ತಕ್ಕಡಿ ಇತ್ತು. 6  ಆ ನಾಲ್ಕು ಜೀವಿಗಳ ಮಧ್ಯದಿಂದ ಒಂದು ಧ್ವನಿ ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡೆ: “ಒಂದು ದಿನಾರಿಗೆ*+ ಒಂದು ಕಿಲೋ* ಗೋದಿ. ಒಂದು ದಿನಾರಿಗೆ ಮೂರು ಕಿಲೋ ಬಾರ್ಲಿ. ಆಲೀವ್‌ ಎಣ್ಣೆ, ದ್ರಾಕ್ಷಾಮದ್ಯ ಖಾಲಿಮಾಡಬೇಡ.”+ 7  ಕುರಿಮರಿ ನಾಲ್ಕನೇ ಮುದ್ರೆ ತೆಗೆದಾಗ ನಾಲ್ಕನೇ ಜೀವಿ+ “ಬಾ!” ಅನ್ನೋದನ್ನ ಕೇಳಿಸ್ಕೊಂಡೆ. 8  ನಾನು ನೋಡ್ತಿದ್ದಾಗ ಬಿಳಿಚಿಕೊಂಡಿರೋ ಒಂದು ಕುದುರೆ ಕಾಣಿಸ್ತು. ಅದ್ರ ಮೇಲೆ ಕೂತಿದ್ದವನಿಗೆ ಸಾವು ಅನ್ನೋ ಹೆಸ್ರಿತ್ತು. ಸಮಾಧಿ* ಅನ್ನೋನು ಅವನ ಹಿಂದೆಹಿಂದೆ ಹೋಗ್ತಾ ಇದ್ದ. ಕತ್ತಿಯಿಂದ, ಆಹಾರ ಕೊರತೆಯಿಂದ,+ ಪ್ರಾಣ ತೆಗಿಯೋ ಕಾಯಿಲೆಯಿಂದ, ಕಾಡುಪ್ರಾಣಿಗಳಿಂದ ಜನ್ರನ್ನ ಸಾಯಿಸೋಕೆ ಭೂಮಿಯ ನಾಲ್ಕನೇ ಒಂದು ಭಾಗದ ಮೇಲೆ ಅವ್ರಿಗೆ ಅಧಿಕಾರ ಸಿಕ್ತು.+ 9  ಕುರಿಮರಿ ಐದನೇ ಮುದ್ರೆ ತೆಗೆದಾಗ ನನಗೆ ಯಜ್ಞವೇದಿಯ+ ಕೆಳಗೆ ಸ್ವಲ್ಪ ಜನ್ರ ರಕ್ತ*+ ಕಾಣಿಸ್ತು. ದೇವರ ಮಾತನ್ನ ಪಾಲಿಸಿದ್ರಿಂದ ಮತ್ತು ಸಿಹಿಸುದ್ದಿ ಸಾರಿದ್ರಿಂದ ಅವ್ರನ್ನ ಕೊಂದಿದ್ರು.+ 10  ಅವರು ಜೋರಾಗಿ ಹೀಗೆ ಕಿರಿಚ್ತಾ ಇದ್ರು: “ವಿಶ್ವದ ರಾಜನೇ, ಪವಿತ್ರನೇ, ಸತ್ಯವಂತನೇ+ ಎಷ್ಟು ದಿನ ಅಂತ ನೀನು ಹೀಗೇ ನೋಡ್ತಾ ನ್ಯಾಯತೀರಿಸದೆ ಸುಮ್ಮನೆ ಇರ್ತಿಯಾ? ನಮ್ಮ ರಕ್ತ ಸುರಿಸಿದವ್ರ ವಿರುದ್ಧ ಯಾವಾಗ ಸೇಡು ತೀರಿಸ್ಕೊಳ್ತೀಯಾ?”+ 11  ಬಲಿ ಆದವ್ರಲ್ಲಿ ಒಬ್ಬೊಬ್ರಿಗೂ ಹಾಕೊಳ್ಳೋಕೆ ಒಡೆಯ ಒಂದೊಂದು ಬಿಳಿ ಬಟ್ಟೆ ಕೊಟ್ಟನು.+ ಆಮೇಲೆ ಅವ್ರಿಗೆ ಸ್ವಲ್ಪ ಸಮಯ ಕಾಯೋಕೆ ಹೇಳಿದನು. ಯಾಕಂದ್ರೆ ಅವ್ರ ತರಾನೇ, ಭವಿಷ್ಯದಲ್ಲಿ ಸಾಯ್ತಿದ್ದ ಜೊತೆ ಸೇವಕರ, ಸಹೋದರರ ಸಂಖ್ಯೆ ಪೂರ್ತಿ ಆಗಬೇಕಿತ್ತು.+ 12  ಕುರಿಮರಿ ಆರನೇ ಮುದ್ರೆ ತೆಗೆಯೋದನ್ನ ನಾನು ನೋಡ್ದೆ. ಆಗ ಒಂದು ದೊಡ್ಡ ಭೂಕಂಪ ಆಯ್ತು. ಸೂರ್ಯ ಕೂದಲಿಂದ* ಮಾಡಿದ ಕಪ್ಪು ಗೋಣಿಚೀಲದ ತರ ಆದ. ಚಂದ್ರ ರಕ್ತದ ತರ ಕೆಂಪಗಾದ.+ 13  ಜೋರಾಗಿ ಗಾಳಿ ಬೀಸಿದಾಗ ಅಂಜೂರದ ಕಾಯಿಗಳು ಉದುರೋ ಹಾಗೆ ಆಕಾಶದ ನಕ್ಷತ್ರಗಳು ಭೂಮಿಗೆ ಉದುರಿದ್ವು. 14  ಆಕಾಶ ಸುರುಳಿ ತರ ಸುತ್ಕೊಂಡು ಮಾಯ ಆಯ್ತು.+ ಎಲ್ಲ ಬೆಟ್ಟ, ದ್ವೀಪಗಳು ತಮ್ಮತಮ್ಮ ಜಾಗ ಬಿಟ್ಟು ಹೋಗಿಬಿಟ್ವು.+ 15  ಆಮೇಲೆ ಭೂಮಿ ಮೇಲಿದ್ದ ರಾಜರು, ದೊಡ್ಡದೊಡ್ಡ ಅಧಿಕಾರಿಗಳು, ಸೇನಾಪತಿಗಳು, ಶ್ರೀಮಂತರು, ಬಲಿಷ್ಠರು, ದಾಸರು, ಸ್ವತಂತ್ರರಾಗಿದ್ದ ಎಲ್ಲ ಜನ್ರು ಗುಹೆಗಳಲ್ಲಿ, ಬೆಟ್ಟಗಳಲ್ಲಿ, ಬಂಡೆಗಳಲ್ಲಿ ಬಚ್ಚಿಟ್ಕೊಂಡ್ರು.+ 16  ಅವರು ಬೆಟ್ಟಗಳಿಗೆ ಮತ್ತು ಬಂಡೆಗಳಿಗೆ “ನಾವು ಕಾಣಿಸದ ಹಾಗೆ+ ನಮ್ಮನ್ನ ಬಚ್ಚಿಡಿ. ಸಿಂಹಾಸನದ+ ಮೇಲೆ ಕೂತಿರೋ ದೇವರಿಂದ, ಕುರಿಮರಿಯ+ ಕೋಪದಿಂದ ನಮ್ಮನ್ನ ಕಾಪಾಡಿ. 17  ಯಾಕಂದ್ರೆ ಅವರು ಕೋಪ ತೋರಿಸೋ ಮಹಾ ದಿನ ಬಂದಿದೆ.+ ಅದ್ರಿಂದ ಯಾರು ತಪ್ಪಿಸ್ಕೊಳ್ತಾರೆ?”+ ಅಂತ ಹೇಳ್ತಿದ್ರು.

ಪಾದಟಿಪ್ಪಣಿ

ಅಥವಾ “ಒಂದು ದಿನದ ಕೂಲಿಗೆ.” ಪರಿಶಿಷ್ಟ ಬಿ14 ನೋಡಿ.
ಅಥವಾ “ಒಂದು ಲೀಟರ್‌.”
ಅಥವಾ “ಪ್ರಾಣ.” ಪದವಿವರಣೆ ನೋಡಿ.
ಬಹುಶಃ ಆಡಿನ ಕೂದಲು.