ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’

ನಿರೀಕ್ಷೆಯೆಂಬ ಹೊಂಗಿರಣ ಇದೆ

ನಿರೀಕ್ಷೆಯೆಂಬ ಹೊಂಗಿರಣ ಇದೆ

“ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.

ಜೀವನ ‘ಕಳವಳದಿಂದ ತುಂಬಿದೆ’ ಎಂದು ಬೈಬಲ್‌ ಒಪ್ಪುತ್ತದೆ. (ಯೋಬ 14:1) ಇಂದು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಸಂಕಷ್ಟದಿಂದ ನೋವುಣ್ಣುತ್ತಿದ್ದಾರೆ. ಕೆಲವರಂತೂ ಜೀವನದಲ್ಲಿ ನಿರೀಕ್ಷೆ ಕಳೆದುಕೊಂಡಿರುತ್ತಾರೆ. ಎಷ್ಟೆಂದರೆ ತಮ್ಮ ಕತ್ತಲೆಯ ಬಾಳಲ್ಲಿ ಬೆಳಕಿನ ಕಿರಣ ಎಂದೂ ಉದಯಿಸದು ಅಂದುಕೊಳ್ಳುತ್ತಾರೆ. ಅವರಿಗೆ ಜೀವನವೇ ಜಿಗುಪ್ಸೆ. ನಿಮಗೂ ಹಾಗನಿಸುತ್ತದಾ? ಹೌದಾದರೆ, ಬೈಬಲ್‌ ನಿಜ ನಿರೀಕ್ಷೆಯನ್ನು ಕೊಡುತ್ತದೆಂಬ ಆಶ್ವಾಸನೆ ನಿಮಗಿರಲಿ. ನಿಮಗೆ ಮಾತ್ರವಲ್ಲ ಎಲ್ಲ ಜನರಿಗೆ ಬೈಬಲ್‌ ಯಾವ ಆಶ್ವಾಸನೆ ಕೊಡುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ:

  • ಯೆಹೋವ ದೇವರು ನಮಗಾಗಿ ತುಂಬ ಒಳ್ಳೇ ಜೀವನವನ್ನು ಉದ್ದೇಶಿಸಿದ್ದನು ಎಂದು ಬೈಬಲ್‌ ಕಲಿಸುತ್ತದೆ.—ಆದಿಕಾಂಡ 1:28.

  • ಈ ಭೂಮಿಯನ್ನು ಒಂದು ಸುಂದರ ತೋಟವಾಗಿ ಮಾಡುತ್ತೇನೆಂದು ಯೆಹೋವ ದೇವರು ಮಾತುಕೊಟ್ಟಿದ್ದಾನೆ.—ಯೆಶಾಯ 65:21-25.

  • ಈ ಮಾತು ನಿಜವಾಗುವುದು ನಿಶ್ಚಯ. ಪ್ರಕಟನೆ 21:3, 4 ಹೀಗನ್ನುತ್ತದೆ:

    “ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”

ಇದು ಭ್ರಮೆಯಲ್ಲ. ಯೆಹೋವ ದೇವರು ಈ ಮಾತನ್ನು ನಿಜವಾಗಿಸುತ್ತಾನೆ. ಆತನಿಗೆ ತನ್ನ ಮಾತನ್ನು ನೆರವೇರಿಸುವ ಶಕ್ತಿಯಿದೆ. ಆಸೆಯೂ ಇದೆ. ಬೈಬಲ್‌ ಕೊಡುವ ಈ ನಿರೀಕ್ಷೆ ಭರವಸಾರ್ಹ. ಮಾತ್ರವಲ್ಲ ‘ಏಕೆ ಬದುಕಿರಬೇಕು?’ ಎಂಬ ಪ್ರಶ್ನೆಗೆ ಇದು ಪ್ರಬಲ ಉತ್ತರವನ್ನು ಕೊಡುತ್ತದೆ. (g14-E 04)

ನೆನಪಿಡಿ: ಅಲ್ಲಕಲ್ಲೋಲವಾದ ಸಮುದ್ರದಲ್ಲಿರುವ ದೋಣಿಯಂತೆ ನಿಮ್ಮ ಭಾವನೆಗಳು ಕೂಡ ಅತ್ತಿ೦ದಿತ್ತ ಹೊಯ್ದಾಡಬಹುದು. ಆದರೆ ಬೈಬಲ್‌ ತಿಳಿಸುವ ನಿರೀಕ್ಷೆಯ ಸಂದೇಶವು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡುವ ಲಂಗರದಂತಿದೆ.

ಇವತ್ತು ನೀವೇನು ಮಾಡಬಹುದು? ಭವಿಷ್ಯತ್ತಿಗಾಗಿರುವ ನಿಜ ನಿರೀಕ್ಷೆಯ ಬಗ್ಗೆ ಬೈಬಲ್‌ ಏನು ಕಲಿಸುತ್ತದೆಂದು ತಿಳಿದುಕೊಳ್ಳಲು ಆರಂಭಿಸಿ. ನಿಮಗೆ ಸಹಾಯ ಮಾಡಲು ಯೆಹೋವನ ಸಾಕ್ಷಿಗಳು ತುಂಬ ಸಂತೋಷಪಡುತ್ತಾರೆ. ನೀವು ವಾಸವಿರುವ ನಗರದಲ್ಲಿ ಅವರನ್ನು ಭೇಟಿ ಮಾಡಬಹುದು ಅಥವಾ jw.org ವೆಬ್ಸೈಟ್‍ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು. *

^ ಪ್ಯಾರ. 11 ನಿಮಗೊಂದು ಸಲಹೆ: jw.org ಗೆ ಹೋಗಿ PUBLICATIONS > ONLINE LIBRARY ನೋಡಿ. ಅಲ್ಲಿ “depression” (ಖಿನ್ನತೆ) ಅಥವಾ “suicide” (ಆತ್ಮಹತ್ಯೆ) ಎಂಬ ಮುಖ್ಯ ಪದಗಳನ್ನು ಟೈಪ್‌ ಮಾಡುವಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತದೆ.