ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬರೀ ಒಳ್ಳೇ ವ್ಯಕ್ತಿಯಾಗಿದ್ದರೆ ಸುಭದ್ರ ಭವಿಷ್ಯ ಸಿಗುತ್ತಾ?

ಬರೀ ಒಳ್ಳೇ ವ್ಯಕ್ತಿಯಾಗಿದ್ದರೆ ಸುಭದ್ರ ಭವಿಷ್ಯ ಸಿಗುತ್ತಾ?

ಶತಮಾನಗಳಿಂದ ಅನೇಕ ಜನರು ಒಳ್ಳೇ ವ್ಯಕ್ತಿಗಳಾಗಿದ್ರೆ ಸುಭದ್ರ ಭವಿಷ್ಯ ಸಿಗುತ್ತೆ ಅಂತ ಅಂದುಕೊಂಡಿದ್ದರು. ಉದಾಹರಣೆಗೆ, ಪೂರ್ವ ದೇಶಗಳಲ್ಲಿದ್ದ ಜನರು ತತ್ವಜ್ಞಾನಿ ಕನ್ಫ್ಯೂಷಿಯಸ್‌ ಹೇಳಿದ ಮಾತುಗಳನ್ನು ಗೌರವಿಸ್ತಿದ್ದರು. (ಕ್ರಿ.ಪೂ. 551-479) ಆತ ಹೇಳಿದ್ದು: “ನಿಮಗೆ ನೀವು ಏನು ಮಾಡಬಾರದು ಅಂತ ಬಯಸ್ತಿರೋ ಅದನ್ನು ಬೇರೆಯವರಿಗೂ ಮಾಡಬೇಡಿ.”

ತುಂಬ ಜನರು ಮಾಡೋ ವಿಷಯ

ತುಂಬ ಜನ ನೆನಸುವುದು ಏನಂದ್ರೆ ಒಳ್ಳೇ ನಡತೆ ಸುಭದ್ರ ಭವಿಷ್ಯವನ್ನು ಕೊಡುತ್ತೆ. ಹಾಗಾಗಿ ಜನರು ಗೌರವಸ್ಥರಾಗಿ ಇರಲು, ಒಳ್ಳೇ ರೂಢಿಗಳನ್ನು ಬೆಳೆಸಿಕೊಳ್ಳಲು, ಸಮಾಜದಲ್ಲಿ ಒಳ್ಳೇ ಹೆಸರು ಮಾಡಲು ಮತ್ತು ಒಳ್ಳೇ ಮನಸಾಕ್ಷಿ ಪಡೆಯಲು ಪ್ರಯತ್ನಿಸ್ತಾರೆ. ವಿಯೆಟ್ನಾಮಲ್ಲಿರೋ ಲಿನ್‌ ಹೇಳಿದ್ದು: “ನಾನು ಯಾವಾಗಲೂ ಪ್ರಾಮಾಣಿಕನಾಗಿದ್ರೆ ನನ್ನ ಜೀವನ ಚೆನ್ನಾಗಿರುತ್ತೆ ಅಂತ ನಂಬ್ತಿದ್ದೆ.”

ಕೆಲವರು ತಮ್ಮ ನಂಬಿಕೆಯ ಕಾರಣದಿಂದಾಗಿ ಒಳ್ಳೇ ವಿಷಯಗಳನ್ನು ಮಾಡ್ತಾರೆ. ತೈವಾನಲ್ಲಿರೋ ಶು-ಯುನ್‌ ಹೇಳಿದ್ದು: “ಸತ್ತ ಮೇಲೆ ಖುಷಿಯಾಗಿ ಇರ್ತಿವಾ, ಕಷ್ಟ ಅನುಭವಿಸ್ತೀವಾ ಅನ್ನೋದು ಈಗ ಹೇಗೆ ಬದುಕುತ್ತೇವೆ ಅನ್ನೋದರ ಮೇಲೆ ಹೊಂದ್ಕೊಂಡಿದೆ ಅಂತ ನನಗೆ ಕಲಿಸಿದ್ರು.”

ಇದರ ಫಲಿತಾಂಶ ಏನು?

ನಾವು ಬೇರೆಯವರಿಗೆ ಒಳ್ಳೇದು ಮಾಡಿದ್ರೆ ಪ್ರಯೋಜನ ಆಗುತ್ತೆ. ಹಾಗಿದ್ರೂ ತುಂಬ ಜನ ಪ್ರಾಮಾಣಿಕವಾಗಿ ಬೇರೆಯವರಿಗೆ ಒಳ್ಳೇದನ್ನೇ ಮಾಡಿದ್ರೂ ಅವರಿಂದ ಯಾವ ಪ್ರಯೋಜನನೂ ಸಿಕ್ಕಿಲ್ಲ. ಹಾಂಗ್‌ ಕಾಂಗ್‌ನಲ್ಲಿರೋ ಸ್ಯೂ ಪಿಂಗ್‌ ಹೇಳಿದ್ದು: “ಬೇರೆಯವರಿಗೆ ಒಳ್ಳೇದನ್ನ ಮಾಡಿದಾಗ ಅವರು ನನಗೆ ವಾಪಸ್‌ ಒಳ್ಳೇದನ್ನೇ ಮಾಡಲ್ಲ ಅಂತ ನನ್ನ ಅನುಭವದಿಂದ ಕಲಿತೆ. ಕುಟುಂಬ ನೋಡಿಕೊಳ್ಳೋಕೆ ತುಂಬ ಕಷ್ಟಪಟ್ಟೆ. ಆದರೂ ನನ್ನ ಮದುವೆ ಜೀವನ ಮುರಿದು ಹೋಯ್ತು. ನನ್ನನ್ನು, ಮಗನನ್ನು ಗಂಡ ಬಿಟ್ಟುಹೋದ್ರು.”

ಅನೇಕರು ತಮ್ಮ ಧರ್ಮದವರು ತಪ್ಪಾಗಿ ನಡ್ಕೊಂಡಿದ್ದನ್ನು ನೋಡಿರುತ್ತಾರೆ. ಜಪಾನಲ್ಲಿರೋ ಎಟ್ಸುಕೋ ಹೇಳಿದ್ದು: “ನಾನು ಒಂದು ಧಾರ್ಮಿಕ ಸಂಸ್ಥೆಯ ಯುವಕರ ಸಂಘಕ್ಕೆ ನಿರ್ದೇಶಕಿ ಆಗಿದ್ದೆ. ಅಲ್ಲಿ ನಡೆಯುತ್ತಿದ್ದ ಅನೈತಿಕತೆ, ಸ್ಥಾನಮಾನಕ್ಕೆ ಮಾಡ್ತಿದ್ದ ಹೊಡೆದಾಟ ಮತ್ತು ಚರ್ಚಿನ ಕಾಣಿಕೆ ದುರುಪಯೋಗಿಸೋದನ್ನು ನೋಡಿ ಆಘಾತ ಆಯ್ತು.”

“ಕುಟುಂಬ ನೋಡಿಕೊಳ್ಳೋಕೆ ತುಂಬ ಕಷ್ಟಪಟ್ಟೆ. ಆದರೂ ನನ್ನ ಮದುವೆ ಜೀವನ ಮುರಿದು ಹೋಯ್ತು. ನನ್ನನ್ನು, ಮಗನನ್ನು ಗಂಡ ಬಿಟ್ಟುಹೋದ್ರು.”—ಸ್ಯೂ ಪಿಂಗ್‌, ಹಾಂಗ್‌ ಕಾಂಗ್‌

ಕೆಲವರು ಧರ್ಮಕ್ಕೆ ಸಂಬಂಧಿಸಿದ ಒಳ್ಳೇ ವಿಷಯಗಳನ್ನು ಮಾಡಿದ್ರೂ ಏನೂ ಪ್ರಯೋಜನ ಆಗಲಿಲ್ಲ. ವಿಯೆಟ್ನಾಮಲ್ಲಿರೋ ವ್ಯಾನ್‌ ಏನು ಹೇಳುತ್ತಾರೆ ನೋಡಿ: “ನನ್ನ ಜೀವನ ಚೆನ್ನಾಗಿ ಇರಬೇಕು ಅಂತ, ತೀರಿಹೋದ ಪೂರ್ವಜರಿಗೋಸ್ಕರ ಹಣ್ಣು, ಹೂವು, ಆಹಾರವನ್ನೆಲ್ಲ ತಂದಿಟ್ಟು ಪ್ರತಿದಿನ ಪೂಜೆ ಮಾಡ್ತಿದ್ದೆ. ತುಂಬ ವರ್ಷಗಳಿಂದ ಈ ಪದ್ಧತಿ ಮಾಡ್ಕೊಂಡು ಬಂದ್ರೂ ನನ್ನ ಗಂಡನಿಗೆ ಗಂಭೀರ ಕಾಯಿಲೆ ಬಂತು. ಹೊರದೇಶಕ್ಕೆ ಕಲಿಯೋಕೆ ಹೋಗಿದ್ದ ನನ್ನ ಮಗಳು ಚಿಕ್ಕ ಪ್ರಾಯದಲ್ಲೇ ತೀರಿಕೊಂಡಳು.”

ಸುಭದ್ರ ಭವಿಷ್ಯ ಪಡಿಯೋಕೆ ಒಳ್ಳೇ ವ್ಯಕ್ತಿ ಆಗಿದ್ದರೆ ಸಾಕಾಗಲ್ಲ ಅಂದ್ರೆ ಇನ್ನೇನು ಬೇಕು? ವಿಶ್ವಾಸಾರ್ಹವಾದ ಮಾರ್ಗದರ್ಶನ ಬೇಕು. ಅಂಥ ಮಾರ್ಗದರ್ಶನ ಎಲ್ಲಿ ಸಿಗುತ್ತೆ?