ಜ್ಞಾನೋಕ್ತಿ 14:1-35

  • ನಮ್ಮ ಹೃದಯದಲ್ಲಿರೋ ನೋವು ನಮ್ಮ ಹೃದಯಕ್ಕೇ ಗೊತ್ತು (10)

  • ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ (12)

  • ಅನುಭವ ಇಲ್ಲದವನು ವ್ಯಕ್ತಿ ಹೇಳಿದ್ದನ್ನೆಲ್ಲ ನಂಬ್ತಾನೆ (15)

  • ಶ್ರೀಮಂತನಿಗೆ ತುಂಬಾ ಸ್ನೇಹಿತರು ಇರ್ತಾರೆ (20)

  • ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ (30)

14  ಬುದ್ಧಿ ಇರೋ ಸ್ತ್ರೀ ತನ್ನ ಮನೆ ಕಟ್ತಾಳೆ,+ಬುದ್ಧಿ ಇಲ್ಲದವಳು ಕೈಯಾರೆ ಮನೆ ಮುರಿತಾಳೆ.   ಸರಿಯಾದ ದಾರಿಯಲ್ಲಿ ನಡಿಯುವವನಿಗೆ ಯೆಹೋವನ ಭಯ ಇರುತ್ತೆ,ಅಡ್ಡದಾರಿ ಹಿಡಿಯುವವನು ಆತನನ್ನ ತಿರಸ್ಕರಿಸ್ತಾನೆ.   ಮೂರ್ಖನ ಅಹಂಕಾರದ ಮಾತುಗಳು ಕೋಲಿಂದ ಹೊಡೆದ ಹಾಗಿರುತ್ತೆ,ವಿವೇಕಿಯ ಮಾತುಗಳು ಕಾಪಾಡುತ್ತೆ.   ದನಕರುಗಳು ಇಲ್ಲದಿದ್ರೆ ಗೋದಲಿ ಗಲೀಜಾಗಿ ಇರಲ್ಲ,ಆದ್ರೆ ಹೋರಿಯ ಶಕ್ತಿಯಿಂದ ಬೆಳೆ ಚೆನ್ನಾಗಿ ಬೆಳೆಯುತ್ತೆ.   ನಂಬಿಗಸ್ತಸಾಕ್ಷಿ ಸುಳ್ಳು ಹೇಳಲ್ಲ,ಆದ್ರೆ ಸುಳ್ಳುಸಾಕ್ಷಿಯ ಬಾಯಲ್ಲಿ ಬರೋದು ಬರೀ ಸುಳ್ಳೇ.+   ಗೇಲಿ ಮಾಡುವವನಿಗೆ ವಿವೇಕ ಹುಡುಕಿದ್ರೂ ಸಿಗಲ್ಲ,ಅರ್ಥಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿಗೆ ಜ್ಞಾನ ಸುಲಭವಾಗಿ ಸಿಗುತ್ತೆ.+   ಮೂರ್ಖನಿಂದ ದೂರ ಇರು,ಅವನ ಮಾತಲ್ಲಿ ಜ್ಞಾನ ಇರಲ್ಲ.+   ಜಾಣ ತನ್ನ ವಿವೇಕದಿಂದ ಯಾವ ದಾರೀಲಿ ಹೋಗಬೇಕಂತ ತಿಳ್ಕೋತಾನೆ,ಬುದ್ಧಿ ಇಲ್ಲದವನು ಮೂರ್ಖತನದಿಂದ ಮೋಸ ಹೋಗ್ತಾನೆ.*+   ಮೂರ್ಖ ತನ್ನ ತಪ್ಪುಗಳನ್ನ ತಮಾಷೆಯಾಗಿ ತಗೊಳ್ತಾನೆ,+ಆದ್ರೆ ನೀತಿವಂತ ರಾಜಿ ಮಾಡ್ಕೊಳ್ಳೋಕೆ ತಯಾರಾಗಿ ಇರ್ತಾನೆ.* 10  ನಮ್ಮ ಹೃದಯದಲ್ಲಿರೋ ನೋವು ನಮ್ಮ ಹೃದಯಕ್ಕೇ ಗೊತ್ತು,ಬೇರೆ ಯಾರೂ ಅದ್ರ ಸಂತೋಷ ಹಂಚ್ಕೊಳ್ಳಕ್ಕಾಗಲ್ಲ. 11  ಕೆಟ್ಟವನ ಮನೆ ನಾಶವಾಗಿ ಹೋಗುತ್ತೆ,+ನೀತಿವಂತನ ಡೇರೆ ಏಳಿಗೆ ಆಗ್ತಾ ಹೋಗುತ್ತೆ. 12  ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,+ಆದ್ರೆ ಅದು ಸಾವಲ್ಲಿ ಕೊನೆ ಆಗುತ್ತೆ.+ 13  ನಗುವವನ ಹೃದಯದಲ್ಲೂ ನೋವು ಅಡಗಿರಬಹುದು,ಸಂತೋಷ ಕೊನೆಗೆ ಸಂಕಟವಾಗಿ ಬದಲಾಗಬಹುದು. 14  ಯಾರ ಹೃದಯ ದೇವರಿಂದ ದೂರ ಇರುತ್ತೋ ಅವನ ಕೆಲಸಗಳಿಗೆ ತಕ್ಕ ಶಿಕ್ಷೆ ಸಿಗುತ್ತೆ,+ಒಳ್ಳೇ ವ್ಯಕ್ತಿಗೆ ಅವನ ಕೆಲಸಗಳಿಗೆ ಒಳ್ಳೇ ಫಲ ಸಿಗುತ್ತೆ.+ 15  ಅನುಭವ ಇಲ್ಲದವನು* ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ,ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.+ 16  ವಿವೇಕಿ ಹುಷಾರಾಗಿದ್ದು ಕೆಟ್ಟದ್ರಿಂದ ದೂರಾನೇ ಇರ್ತಾನೆ,ಮೂರ್ಖ ದುಡುಕ್ತಾನೆ,* ಅತಿಯಾದ ಆತ್ಮವಿಶ್ವಾಸ ತೋರಿಸ್ತಾನೆ. 17  ಮುಂಗೋಪಿ ಮೂರ್ಖನಾಗಿ ನಡ್ಕೊಳ್ತಾನೆ,+ಆದ್ರೆ ವಿಷ್ಯಗಳನ್ನ ಜಾಗರೂಕತೆಯಿಂದ ತೂಗಿನೋಡುವವನು ದ್ವೇಷಕ್ಕೆ ಗುರಿ ಆಗ್ತಾನೆ. 18  ಅನುಭವ ಇಲ್ಲದವನು ಮೂರ್ಖತನವನ್ನ ಆಸ್ತಿಯಾಗಿ ಪಡಿತಾನೆ,ಆದ್ರೆ ಜಾಣ ಜ್ಞಾನದ ಕಿರೀಟ ಪಡಿತಾನೆ.+ 19  ಕೆಟ್ಟ ಜನ್ರು ಒಳ್ಳೇತನದ ಮುಂದೆ ಬಾಗಬೇಕಾಗುತ್ತೆ,ಕೆಟ್ಟವರು ನೀತಿವಂತರ ಬಾಗಿಲ ಹತ್ರ ಅಡ್ಡಬೀಳಬೇಕಾಗುತ್ತೆ. 20  ಬಡವನನ್ನ ಅಕ್ಕಪಕ್ಕದವರು ಕೂಡ ದ್ವೇಷಿಸ್ತಾರೆ,+ಆದ್ರೆ ಶ್ರಿಮಂತನಿಗೆ ತುಂಬಾ ಸ್ನೇಹಿತರು ಇರ್ತಾರೆ.+ 21  ಬೇರೆಯವರನ್ನ ಕೀಳಾಗಿ ನೋಡುವವನು ಪಾಪಿ,ಬಡವನಿಗೆ ಕನಿಕರ ತೋರಿಸುವವನು ಸಂತೋಷವಾಗಿ ಇರ್ತಾನೆ.+ 22  ಕೇಡು ಬಗೆಯುವವರು ದಾರಿ ತಪ್ಪದೇ ಇರ್ತಾರಾ? ಒಳ್ಳೇದನ್ನ ಮಾಡೋಕೆ ಇಷ್ಟಪಡುವವರನ್ನ ಜನ ಪ್ರೀತಿಸ್ತಾರೆ, ನಂಬ್ತಾರೆ.+ 23  ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ,ಆದ್ರೆ ಹರಟೆ ಹೊಡೀತಾ ಕಾಲ ಕಳೆದ್ರೆ ಬಡತನಕ್ಕೆ ಬಲಿ ಆಗಬೇಕಾಗುತ್ತೆ.+ 24  ವಿವೇಕಿಗಳ ಆಸ್ತಿನೇ ಅವ್ರ ಕಿರೀಟ,ದಡ್ಡರ ಕೆಲಸಗಳಲ್ಲಿ ದಡ್ಡತನನೇ ಇರುತ್ತೆ.+ 25  ಸತ್ಯಸಾಕ್ಷಿ ಜೀವ ಕಾಪಾಡ್ತಾನೆ,ಕಪಟಿ ಬಾಯಿ ಬಿಟ್ರೆ ಬರೀ ಸುಳ್ಳೇ ಹೇಳ್ತಾನೆ. 26  ಯೆಹೋವನ ಮೇಲೆ ಭಯ ಇರುವವನಿಗೆ ಆತನ ಮೇಲೆ ಭರವಸೆನೂ ಇರುತ್ತೆ,+ಆ ಭಯನೇ ಅವನ ಮಕ್ಕಳಿಗೆ ಒಂದು ಆಶ್ರಯವಾಗಿ ಇರುತ್ತೆ.+ 27  ಯೆಹೋವನ ಭಯ ಜೀವದ ಚಿಲುಮೆ. ಅದು ಮರಣದ ಉರ್ಲುಗಳಿಂದ ತಪ್ಪಿಸಿ ಕಾಪಾಡುತ್ತೆ. 28  ಪ್ರಜೆಗಳು ಜಾಸ್ತಿ ಇದ್ರೆ ರಾಜನಿಗೆ ಗೌರವ ಜಾಸ್ತಿ,+ಪ್ರಜೆಗಳಿಲ್ಲದ ರಾಜ ಬಿದ್ದುಹೋಗ್ತಾನೆ. 29  ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ,+ಮುಂಗೋಪಿ ತನ್ನ ಮೂರ್ಖತನವನ್ನ ತೋರಿಸಿ ಬಿಡ್ತಾನೆ.+ 30  ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ,*ಹೊಟ್ಟೆಕಿಚ್ಚಿಂದ ಮೂಳೆಗಳ ಸವೆತ.*+ 31  ದೀನರಿಗೆ ಮೋಸ ಮಾಡಿದ್ರೆ ದೇವರಿಗೆ* ಅವಮಾನ ಮಾಡಿದ ಹಾಗೆ,+ಬಡವರಿಗೆ ಕನಿಕರ ತೋರಿಸಿದ್ರೆ ದೇವರಿಗೆ ಗೌರವ ಕೊಟ್ಟ ಹಾಗೆ.+ 32  ಕೆಟ್ಟ ಕೆಲಸಾನೇ ಕೆಟ್ಟವನನ್ನ ಮುಳುಗಿಸಿಬಿಡುತ್ತೆ,ನೀತಿವಂತ ತಪ್ಪು ಮಾಡದೆ ನಡ್ಕೊಂಡ್ರೆ ಅದು ಅವನನ್ನ ಕಾಪಾಡುತ್ತೆ.+ 33  ಅರ್ಥ ಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿ ತನ್ನ ವಿವೇಕವನ್ನ ತೋರಿಸ್ಕೊಳ್ಳಲ್ಲ,+ಮೂರ್ಖ ತನಗೆ ಗೊತ್ತಿರೋ ವಿಷ್ಯಗಳ ಬಗ್ಗೆ ಊರಿಗೇ ಡಂಗೂರ ಸಾರುತ್ತಾನೆ. 34  ನೀತಿ ಒಂದು ದೇಶಕ್ಕೆ ಒಳ್ಳೇ ಹೆಸ್ರು ತರುತ್ತೆ,+ಜನ್ರಿಗೆ ಪಾಪ ಕೆಟ್ಟ ಹೆಸ್ರು ತರುತ್ತೆ. 35  ತಿಳುವಳಿಕೆಯಿಂದ* ನಡ್ಕೊಳ್ಳೋ ಸೇವಕನನ್ನ ನೋಡಿ ರಾಜ ಸಂತೋಷ ಪಡ್ತಾನೆ,+ಮಾನಮಾರ್ಯಾದೆ ಇಲ್ಲದೆ ನಡ್ಕೊಳ್ಳುವವನ ಮೇಲೆ ರೇಗ್ತಾನೆ.+

ಪಾದಟಿಪ್ಪಣಿ

ಬಹುಶಃ, “ಇನ್ನೊಬ್ರಿಗೆ ಮೋಸ ಮಾಡ್ತಾನೆ.”
ಅಥವಾ “ಜನ್ರಿಂದ ಒಳ್ಳೇ ಹೆಸ್ರು ಪಡ್ಕೊಳ್ತಾನೆ.”
ಅಕ್ಷ. “ಮುಗ್ಧ.”
ಅಥವಾ “ವಿಪರೀತ ಕೋಪ ಮಾಡ್ಕೊಳ್ತಾನೆ.”
ಅಕ್ಷ. “ಜೀವ.”
ಅಕ್ಷ. “ಕೊಳೆಯುತ್ತೆ.”
ಅಥವಾ “ತನ್ನ ಸೃಷ್ಟಿಕರ್ತನಿಗೆ.”
ಅಕ್ಷ. “ಒಳನೋಟ.”