ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 45

ನನ್ನ ಹೃದಯದ ಧ್ಯಾನ

ನನ್ನ ಹೃದಯದ ಧ್ಯಾನ

(ಕೀರ್ತನೆ 19:14)

  1. 1. ನನ್ನ ಹೃದ-ಮನದಲ್ಲಿ,

    ನಿನ್ನ ವಾಕ್ಯ ನೆಲೆಸಿದೆ.

    ನನ್ನ ಪ್ರತಿ ಆಲೋಚನೆ,

    ಸಲ್ಲಿಸಲಿ ಘನ ನಿಂಗೆ.

    ಚಿಂತೆ ನನ್ನನ್ನು ಕಾಡಲು,

    ದೇವಾ ಕಾಪಾಡು ನನ್ನನ್ನು.

    ನೀತಿ ಮಾರ್ಗದಿ ಸಾಗಲು,

    ಧ್ಯಾನಿಸುವೆ ನಿನ್ನ ಮಾತು.

  2. 2. ನನ್ನ ಗ್ರಹಿಕೆ ಮೀರುವ,

    ನಿನ್ನ ಯೋಚನೆ ಅಗಾಧ!

    ದೇವಾ ನಿನ್ನ ವಾಕ್ಯವನ್ನ,

    ಧ್ಯಾನಿಸುವೆ ಪ್ರತಿಕ್ಷಣ.

    ನನ್ನ ನಡೆ-ನುಡಿಯಲ್ಲೂ,

    ನಿನ್ನ ಆಜ್ಞೆ ಪಾಲಿಸುವೆ,

    ಶಾಂತಿ, ಪ್ರೀತಿ ಮಾರ್ಗದಲ್ಲೇ

    ಬಾಳುವೆನು ಸದಾ ಹೀಗೆ.