ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲ

ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲ

ಅಧ್ಯಾಯ 42

ಒಂದು ನೂತನಾಕಾಶಮಂಡಲ ಮತ್ತು ಒಂದು ನೂತನ ಭೂಮಂಡಲ

1. ಸಾವಿರ ವರುಷದ ಆಳಿಕೆಯ ಆರಂಭಕ್ಕೆ ಯೋಹಾನನನ್ನು ದೇವದೂತನು ಹಿಂದೆ ಕೊಂಡೊಯ್ಯುತ್ತಿರುವಾಗ, ಅವನು ಏನನ್ನು ವರ್ಣಿಸುತ್ತಾನೆ?

ಸಾವಿರ ವರುಷ ಆಳಿಕೆಯ ಆರಂಭಕ್ಕೆ ಯೋಹಾನನನ್ನು ದೇವದೂತನು ಹಿಂದೆ ಕೊಂಡೊಯ್ಯುತ್ತಿರುವಾಗ, ಈ ಮಹಿಮಾಭರಿತ ದರ್ಶನದ ಬಿಚ್ಚಲ್ಪಡುವಿಕೆಯು ಮುಂದರಿಯುತ್ತದೆ. ಅವನು ಏನನ್ನು ವರ್ಣಿಸುತ್ತಾನೆ? “ಮತ್ತು ಒಂದು ನೂತನಾಕಾಶಮಂಡಲವನ್ನು ಮತ್ತು ಒಂದು ನೂತನ ಭೂಮಂಡಲವನ್ನು ನಾನು ಕಂಡೆನು; ಏಕೆಂದರೆ ಮೊದಲಿದ್ದ ಆಕಾಶಮಂಡಲವು ಮತ್ತು ಮೊದಲಿದ್ದ ಭೂಮಂಡಲವು ಇಲ್ಲದೆ ಹೋಗಿದ್ದವು, ಮತ್ತು ಇನ್ನು ಮುಂದೆ ಸಮುದ್ರವು ಇಲ್ಲ.” (ಪ್ರಕಟನೆ 21:1, NW)  ಒಂದು ಚಿತ್ತಾಕರ್ಷಕ ಅವಿಚ್ಛಿನ್ನ ದೃಶ್ಯವು ನೋಟಕ್ಕೆ ಬರುತ್ತದೆ!

2. (ಎ) ಸಾ. ಶ. ಪೂ. 537 ರಲ್ಲಿ ಪುನಃ ಸ್ಥಾಪನೆಗೊಂಡ ಯೆಹೂದ್ಯರಲ್ಲಿ ನೂತನಾಕಾಶಮಂಡಲ ಮತ್ತು ನೂತನ ಭೂಮಂಡಲದ ಕುರಿತಾದ ಪ್ರವಾದನೆಯು ಹೇಗೆ ನೆರವೇರಲ್ಪಟ್ಟಿತು? (ಬಿ) ಯೆಶಾಯನ ಪ್ರವಾದನೆಗೆ ಹೆಚ್ಚಿನ ಒಂದು ಅನ್ವಯವಿರುವುದೆಂದು ನಮಗೆ ತಿಳಿದಿರುವುದು ಹೇಗೆ, ಮತ್ತು ಈ ವಾಗ್ದಾನವು ಹೇಗೆ ನೆರವೇರುತ್ತದೆ?

2 ಯೋಹಾನನ ದಿವಸಗಳ ನೂರಾರು ವರ್ಷಗಳ ಮೊದಲು, ಯೆಹೋವನು ಯೆಶಾಯನಿಗೆ ಹೇಳಿದ್ದು: “ಇಗೋ, ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು.” (ಯೆಶಾಯ 65:17; 66:22) ಬಾಬೆಲಿನಲ್ಲಿ 70 ವರ್ಷಗಳ ದೇಶಭ್ರಷ್ಟತೆಯ ಅನಂತರ, ಸಾ. ಶ. ಪೂ. 537 ರಲ್ಲಿ ನಂಬಿಗಸ್ತ ಯೆಹೂದ್ಯರು ಯೆರೂಸಲೇಮಿಗೆ ಹಿಂದೆರಳಿದಾಗ, ಈ ಪ್ರವಾದನೆಯು ಪ್ರಥಮವಾಗಿ ನೆರವೇರಿತು. ಆ ಪುನಃ ಸ್ಥಾಪನೆಯಲ್ಲಿ, ಅವರು ಒಂದು ಹೊಸ ಸರಕಾರೀ ವ್ಯವಸ್ಥೆಯ—“ನೂತನಾಕಾಶಮಂಡಲದ”—ಕೆಳಗೆ ಒಂದು ಶುದ್ಧೀಕರಿಸಲ್ಪಟ್ಟ ಸಮಾಜ—“ನೂತನ ಭೂಮಂಡಲ”—ವಾಗಿ ರೂಪಿತರಾದರು. ಅಪೊಸ್ತಲ ಪೇತ್ರನು ಈ ಪ್ರವಾದನೆಯ ಹೆಚ್ಚಿನ ಅನ್ವಯಕ್ಕೆ ನಿರ್ದೇಶಿಸುತ್ತಾ, ಅಂದ್ದದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಕರ್ತನ ದಿನದಲ್ಲಿ ಈ ವಾಗ್ದಾನವು ನೆರವೇರುತ್ತದೆಂದು ಯೋಹಾನನು ಈಗ ತೋರಿಸುತ್ತಾನೆ. ಸೈತಾನನಿಂದ ಮತ್ತು ಅವನ ದೆವ್ವಗಳಿಂದ ಪ್ರಭಾವಿಸಲ್ಪಟ್ಟ ಅದರ ಸರಕಾರೀ ರಚನೆಯೊಂದಿಗಿನ ಸೈತಾನನ ಸಂಘಟಿತ ವಿಷಯಗಳ ವ್ಯವಸ್ಥೆಯ—“ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ”—ಗತಿಸಿ ಹೋಗುವುವು. ದುಷ್ಟ, ದಂಗೆಕೋರ ಮಾನವ ಕುಲದ ಅವಿಶ್ರಾಂತ “ಸಮುದ್ರ”ವು ಅಸ್ತಿತ್ವದಲ್ಲಿ ಇಲ್ಲದೆ ಹೋಗುವುದು. ಅದರ ಸ್ಥಳದಲ್ಲಿ “ನೂತನಾಕಾಶಮಂಡಲ . . . ನೂತನ ಭೂಮಂಡಲ . . . ”—ಒಂದು ಹೊಸ ಸರಕಾರ, ದೇವರ ರಾಜ್ಯದ ಕೆಳಗೆ ಒಂದು ಹೊಸ ಐಹಿಕ ಸಮಾಜವು ಇರುವುದು.—ಹೋಲಿಸಿ ಪ್ರಕಟನೆ 20:11.

3. (ಎ) ಯೋಹಾನನು ಏನನ್ನು ವರ್ಣಿಸುತ್ತಾನೆ, ಮತ್ತು ಹೊಸ ಯೆರೂಸಲೇಮ್‌ ಅಂದರೇನು? (ಬಿ) ಹೊಸ ಯೆರೂಸಲೇಮ್‌ ‘ಪರಲೋಕದಿಂದ ಇಳಿದುಬರುವುದು’ ಹೇಗೆ?

3 ಯೋಹಾನನು ಮುಂದರಿಸುತ್ತಾನೆ: “ತನ್ನ ಗಂಡನಿಗೋಸ್ಕರ ಅಲಂಕೃತಳಾದ ವಧುವಿನಂತೆ ಸಿದ್ಧಗೊಳಿಸಲ್ಪಟ್ಟ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮ್‌ ಪರಲೋಕದಿಂದ ಇಳಿದುಬರುವುದನ್ನೂ ನಾನು ಕಂಡೆನು.” (ಪ್ರಕಟನೆ 21:2, NW)  ಹೊಸ ಯೆರೂಸಲೇಮ್‌, ಮರಣದ ತನಕ ನಂಬಿಗಸ್ತರಾಗಿದ್ದ ಮತ್ತು ಮಹಿಮೆಗೇರಿಸಲ್ಪಟ್ಟ ಯೇಸುವಿನೊಂದಿಗೆ ಅರಸರೂ, ಯಾಜಕರೂ ಆಗಲು ಪುನರುತ್ಥಾನಗೊಳಿಸಲ್ಪಟ್ಟ ಅಭಿಷಿಕ್ತ ಕ್ರೈಸ್ತರಿಂದ ಮಾಡಲ್ಪಟ್ಟ ಕ್ರಿಸ್ತನ ಮದಲಗಿತ್ತಿಯಾಗಿರುತ್ತದೆ. (ಪ್ರಕಟನೆ 3:12; 20:6) ಪುರಾತನ ಇಸ್ರಾಯೇಲಿನಲ್ಲಿ ಐಹಿಕ ಯೆರೂಸಲೇಮ್‌ ಸರಕಾರೀ ಪೀಠವಾಗಿದ್ದಂತೆಯೇ, ಭವ್ಯ ಹೊಸ ಯೆರೂಸಲೇಮ್‌ ಮತ್ತು ಅವಳ ವರನು ವಿಷಯಗಳ ಹೊಸ ವ್ಯವಸ್ಥೆಯ ಸರಕಾರವಾಗಿ ಉಂಟುಮಾಡಲ್ಪಡುತ್ತಾರೆ. ಇದು ನೂತನಾಕಾಶಮಂಡಲವಾಗಿದೆ. ‘ವಧುವು ಪರಲೋಕದಿಂದ ಇಳಿದು ಬರುವುದು’ ಅಕ್ಷರಾರ್ಥಕವಾಗಿ ಅಲ್ಲ, ಬದಲಾಗಿ ಗಮನವನ್ನು ಭೂಮಿಯೆಡೆಗೆ ನಿರ್ದೇಶಿಸುವ ಅರ್ಥದಲ್ಲಿದೆ. ಮಾನವಕುಲವೆಲ್ಲದರ ಮೇಲೆ ನೀತಿಯ ಒಂದು ಸರಕಾರವನ್ನು ನಿರ್ವಹಿಸುವುದರಲ್ಲಿ ಕುರಿಮರಿಯ ವಧುವು ಅವನ ನಿಷ್ಠೆಯ ಸಹಕಾರಿಣಿಯಾಗಿದ್ದಾಳೆ. ನೂತನ ಭೂಮಿಗೆ ನಿಶ್ಚಯವಾಗಿಯೂ ಒಂದು ಆಶೀರ್ವಾದವೇ!

4. ಹೊಸತಾಗಿ ರೂಪಿತವಾದ ಇಸ್ರಾಯೇಲ್‌ ಜನಾಂಗಕ್ಕೆ ಮಾಡಿದಂತಹ ಯಾವ ವಾಗ್ದಾನವನ್ನು ದೇವರು ಈಗ ಮಾಡುತ್ತಾನೆ?

4 ಯೋಹಾನನು ಇನ್ನು ಮುಂದಕ್ಕೆ ನಮಗೆ ತಿಳಿಸುವುದು: “ಅದರೊಂದಿಗೆ ಸಿಂಹಾಸನದಿಂದ ಬಂದ ಒಂದು ಮಹಾ ಶಬ್ದವು ಹೇಳುವುದನ್ನು ಕೇಳಿದೆನು: ‘ಇಗೋ! ದೇವರ ಗುಡಾರವು ಮಾನವ ಕುಲದೊಂದಿಗೆ ಇದೆ, ಮತ್ತು ಆತನು ಅವರೊಂದಿಗೆ ವಾಸಮಾಡುವನು, ಮತ್ತು ಅವರು ಆತನ ಜನರಾಗಿರುವರು. ಮತ್ತು ದೇವರು ತಾನೇ ಅವರ ಸಂಗಡ ಇರುವನು.’” (ಪ್ರಕಟನೆ 21:3, NW)  ಯೆಹೋವನು ಅಂದಿನ ಹೊಸ ಜನಾಂಗವಾದ ಇಸ್ರಾಯೇಲಿನೊಂದಿಗೆ ನಿಯಮದೊಡಂಬಡಿಕೆಯನ್ನು ಮಾಡಿದಾಗ, ಅವನು ವಾಗ್ದಾನಿಸಿದ್ದು: “ನಾನು ನಿಮ್ಮ ನಡುವೆ ನಿವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವದಿಲ್ಲ; ನಿಮ್ಮ ನಡುವೆ ತಿರುಗಾಡುತ್ತಾ ನಿಮಗೆ ದೇವರಾಗಿರುವೆನು; ನೀವು ನನಗೆ ಪ್ರಜೆಯಾಗಿರುವಿರಿ.” (ಯಾಜಕಕಾಂಡ 26:11, 12) ಈಗ ಯೆಹೋವನು ತದ್ರೀತಿಯ ವಾಗ್ದಾನವನ್ನು ನಂಬಿಗಸ್ತ ಮಾನವರಿಗೆ ಮಾಡುತ್ತಾನೆ. ಸಾವಿರ ವರ್ಷದ ನ್ಯಾಯವಿಚಾರಣೆಯ ದಿವಸದ ಸಮಯದಲ್ಲಿ, ಅವರು ಆತನಿಗೆ ಅತಿ ವಿಶಿಷ್ಟ ಜನರಾಗುವರು.

5. (ಎ) ಸಹಸ್ರ ವರ್ಷ ಆಳಿಕೆಯಲ್ಲಿ ದೇವರು ಮಾನವ ಕುಲದೊಂದಿಗೆ ವಾಸಿಸುವುದು ಹೇಗೆ? (ಬಿ) ಸಾವಿರ ವರ್ಷದ ಆಳಿಕೆಯ ಅನಂತರ ದೇವರು ಮಾನವ ಕುಲದೊಂದಿಗೆ ಹೇಗೆ ವಾಸಿಸುವನು?

5 ಸಹಸ್ರ ವರ್ಷಗಳ ಕಾಲದಲ್ಲಿ, ಯೆಹೋವನು ಅವರ ನಡುವೆ, ಅವನ ರಾಜವೈಭವದ ಪುತ್ರನಾದ ಯೇಸು ಕ್ರಿಸ್ತನಿಂದ ಪ್ರತಿನಿಧಿಸಲ್ಪಟ್ಟು, ತಾತ್ಕಾಲಿಕ ಏರ್ಪಾಡೊಂದರಲ್ಲಿ “ವಾಸಮಾಡುವನು.” ಆದಾಗ್ಯೂ, ಸಾವಿರ ವರ್ಷದ ಆಳಿಕೆಯ ಅಂತ್ಯದಲ್ಲಿ ಯೇಸುವು ರಾಜ್ಯವನ್ನು ಅವನ ತಂದೆಗೆ ಒಪ್ಪಿಸಿಕೊಡುವಾಗ, ಯಾವನೇ ರಾಜವೈಭವದ ಪ್ರತಿನಿಧಿ ಯಾ ಮಧ್ಯಸ್ಥಗಾರನ ಆವಶ್ಯಕತೆಯಿಲ್ಲ. ಯೆಹೋವನು “ಆತನ ಜನರಾಗಿರು” ವವರ ನಡುವೆ ಶಾಶ್ವತವಾಗಿ ಮತ್ತು ನೇರ ರೀತಿಯಲ್ಲಿ ಆತ್ಮಿಕವಾಗಿ ವಾಸಿಸುವನು. (ಹೋಲಿಸಿ ಯೋಹಾನ 4:23, 24.) ಪುನಃ ಸ್ಥಾಪಿಸಲ್ಪಟ್ಟ ಮಾನವವರ್ಗಕ್ಕೆ ಎಂತಹ ಉನ್ನತ ಸುಯೋಗವು!

6, 7. (ಎ) ಯೋಹಾನನು ಯಾವ ಭವ್ಯ ವಾಗ್ದಾನಗಳನ್ನು ಹೊರಗೆಡಹುತ್ತಾನೆ, ಮತ್ತು ಆಶೀರ್ವಾದಗಳನ್ನು ಯಾರು ಅನುಭವಿಸುವರು? (ಬಿ) ಆತ್ಮಿಕವೂ, ಶಾರೀರಿಕವೂ ಎರಡೂ ಆಗಿರುವ ಪ್ರಮೋದವನವೊಂದನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ?

6 ಯೋಹಾನನು ಹೇಳುವುದನ್ನು ಮುಂದರಿಸುತ್ತಾನೆ: “ಮತ್ತು ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು, ಮತ್ತು ಇನ್ನು ಮರಣವಿರುವುದಿಲ್ಲ, ಶೋಕವಾಗಲಿ ಗೋಳಾಟವಾಗಲಿ ವೇದನೆಯಾಗಲಿ ಇನ್ನಿರವು. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” (ಪ್ರಕಟನೆ 21:4, NW)  ಇನ್ನೊಮ್ಮೆ ಹಿಂದಿನ ಪ್ರೇರಿತ ವಾಗ್ದಾನಗಳು ನಮಗೆ ಜ್ಞಾಪಿಸಲ್ಪಡುತ್ತವೆ. ಮರಣ ಮತ್ತು ರೋದನವು ಇನ್ನಿರದ ಮತ್ತು ವಿಲಾಪವು ಸ್ಥಾನಪಲ್ಲಟಗೊಂಡು ಉಲ್ಲಾಸವಿರುವ ಸಮಯವೊಂದನ್ನು ಯೆಶಾಯನು ಸಹ ಮುನ್ನೋಡಿದನು. (ಯೆಶಾಯ 25:8; 35:10; 51:11; 65:19) ಸಾವಿರ ವರ್ಷದ ತೀರ್ಪಿನ ದಿನದಲ್ಲಿ ಈ ವಾಗ್ದಾನಗಳು ಆಶ್ಚರ್ಯಕರ ರೀತಿಯಲ್ಲಿ ನೆರವೇರಿಕೆಯನ್ನು ಪಡೆಯುವುವು ಎಂದು ಯೋಹಾನನು ಈಗ ಸ್ಥಿರೀಕರಿಸುತ್ತಾನೆ. ಮೊದಲು ಮಹಾ ಸಮೂಹ ಈ ಆಶೀರ್ವಾದಗಳಲ್ಲಿ ಆನಂದಿಸುವುದು. “ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯು” ಅವರ ಪಾಲನೆ ಮಾಡುವುದನ್ನು ಮುಂದರಿಸುತ್ತಾ, “ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ. ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.” (ಪ್ರಕಟನೆ 7:9, 17) ಆದರೆ ಕಟ್ಟಕಡೆಗೆ ಪುನರುತ್ಥಾನಗೊಳಿಸಲ್ಪಟ್ಟವರೆಲ್ಲರೂ ಮತ್ತು ಯೆಹೋವನ ಒದಗಿಸುವಿಕೆಗಳಲ್ಲಿ ವಿಶ್ವಾಸವನ್ನು ಪ್ರದರ್ಶಿಸುವವರೆಲ್ಲರೂ ಅವನೊಂದಿಗೆ ಅಲ್ಲಿ ಇದ್ದು, ಆತ್ಮಿಕ ಮತ್ತು ಶಾರೀರಿಕ ಎರಡೂ ವಿಧದ ಪ್ರಮೋದವನದಲ್ಲಿ ಆನಂದಿಸುವರು.

7 ಯೆಶಾಯನು ಹೇಳುವುದು, “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು,” ಹೌದು, “ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” (ಯೆಶಾಯ 35:5, 6) ಆ ಸಮಯದಲ್ಲಿ ಕೂಡ, “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:21, 22) ಹೀಗೆ ಅವರು ಭೂಮಿಯಿಂದ ಕೀಳಲ್ಪಡರು.

8. ಈ ಮಹತ್ವದ ವಾಗ್ದಾನಗಳ ನಂಬಲರ್ಹತೆಯ ಕುರಿತು ಯೆಹೋವನು ತಾನೇ ಏನನ್ನುತ್ತಾನೆ?

8 ಈ ವಾಗ್ದಾನಗಳ ಮೇಲೆ ನಾವು ಮನನ ಮಾಡುತ್ತಿರುವಂತೆ ಎಂತಹ ಶೋಭಾಯಮಾನವಾದ ಮುನ್‌-ಮಿನುಗುಗಳು ನಮ್ಮ ಮನಸ್ಸುಗಳನ್ನು ತುಂಬುತ್ತವೆ! ಸ್ವರ್ಗದ ಪ್ರೀತಿಯ ಸರಕಾರದ ಕೆಳಗೆ ನಂಬಿಗಸ್ತ ಮಾನವಜಾತಿಗೆ ಬೆರಗುಗೊಳಿಸುವ ಒದಗಿಸುವಿಕೆಗಳು ಕಾದಿಡಲಾಗಿವೆ. ಅಂತಹ ವಾಗ್ದಾನಗಳು ಸತ್ಯವಾಗಲು ಅತ್ಯಂತ ಸೊಗಸುತನದ್ದಾಗಿವೆಯೇ? ಅವುಗಳು ಪ್ಯಾಟ್ಮಸ್‌ ದ್ವೀಪದಲ್ಲಿ ಗಡೀಪಾರು ಮಾಡಲ್ಪಟ್ಟ ವಯಸ್ಸಾದವನೊಬ್ಬನ ಕೇವಲ ಸ್ವಪ್ನಗಳಾಗಿವೆಯೇ? ಯೆಹೋವನು ತಾನೇ ಉತ್ತರಿಸುವುದು: “ಮತ್ತು ಸಿಂಹಾಸನದ ಮೇಲೆ ಕೂತಿದ್ದವನು ಹೇಳಿದ್ದು: ‘ಇಗೋ! ನಾನು ಎಲ್ಲ ಸಂಗತಿಗಳನ್ನು ಹೊಸದು ಮಾಡುತ್ತೇನೆ.’ ಹಾಗೂ ಅವನು ಹೇಳುವುದು: ‘ಬರೆ, ಯಾಕಂದರೆ ಈ ಮಾತುಗಳು ನಂಬಿಕೆಗರ್ಹವೂ ಸತ್ಯವೂ ಆಗಿವೆ.’ ಮತ್ತು ಅವನು ನನಗಂದ್ದದು: ‘ಅವೆಲ್ಲಾ ನೆರವೇರಿವೆ! ನಾನು ಆ್ಯಲ್ಫ ಮತ್ತು ಓಮೆಗ, ಪ್ರಾರಂಭ ಮತ್ತು ಸಮಾಪ್ತಿ ಆಗಿದ್ದೇನೆ.’”—ಪ್ರಕಟನೆ 21:5, 6ಎ, NW.

9. ಈ ಭಾವೀ ಆಶೀರ್ವಾದಗಳನ್ನು ಖಂಡಿತ ನೆರವೇರಿಕೆಯ ನಿಶ್ಚಯತೆಯಿಂದ ಯಾಕೆ ವೀಕ್ಷಿಸಬಹುದು?

9 ನಂಬಿಗಸ್ತ ಮಾನವರಿಗಾಗಿ ಈ ಭಾವೀ ಆಶೀರ್ವಾದಗಳ ಖಾತರಿಯನ್ನು, ಯಾ ಹಕ್ಕುಪತ್ರಗಳನ್ನು ಯೆಹೋವನೇ ಸ್ವತಃ ಸಹಿಮಾಡುವಂತೆ ಇದು ಇದೆ. ಅಂತಹ ಒಬ್ಬ ಖಾತರಿದಾರನನ್ನು ಪ್ರಶ್ನಿಸಲು ಯಾರು ತಾನೇ ಧೈರ್ಯ ತಾಳಾರು? ಯಾಕೆ, ಯೆಹೋವನ ವಾಗ್ದಾನಗಳು ಎಷ್ಟೊಂದು ಖಂಡಿತವಾಗಿವೆಯೆಂದರೆ, ಅವುಗಳು ಈಗಾಗಲೇ ನೆರವೇರಿವೆಯೋ ಎಂಬಂತೆ ಅವನು ಮಾತಾಡುತ್ತಾನೆ: “ಅವೆಲ್ಲಾ ನೆರವೇರಿವೆ!” ಯೆಹೋವನು “ಆ್ಯಲ್ಫ ಮತ್ತು ಓಮೆಗ, ವರ್ತಮಾನ ಭೂತ ಭವಿಷ್ಯತ್ಕಾಲಗಳಲ್ಲಿರುವವನು ಮತ್ತು ಸರ್ವಶಕ್ತನು” ಆಗಿದ್ದಾನಲ್ಲವೇ? (ಪ್ರಕಟನೆ 1:8, NW) ಖಂಡಿತವಾಗಿಯೂ ಅವನಾಗಿದ್ದಾನೆ! ಅವನು ತಾನೇ ಘೋಷಿಸುವುದು: “ನಾನೇ ಆದಿ, ಅಂತವೂ ನಾನೇ; ನಾನು ಹೊರತು ಯಾವ ದೇವರೂ ಇಲ್ಲ.” (ಯೆಶಾಯ 44:6) ಹಾಗಿರುವುದರಿಂದ, ಅವನು ಪ್ರವಾದನೆಗಳನ್ನು ಪ್ರೇರಿಸಲು ಮತ್ತು ಪ್ರತಿಯೊಂದು ವಿವರದಲ್ಲಿ ಅವುಗಳನ್ನು ನೆರವೇರಿಸಲು ಶಕ್ತನಾಗಿದ್ದಾನೆ. ಇದು ನಂಬಿಕೆಯನ್ನು ಎಷ್ಟೊಂದು ಬಲಗೊಳಿಸುವಂತಹದ್ದಾಗಿದೆ! ಆದುದರಿಂದ ಅವನು ವಾಗ್ದಾನಿಸುವುದು: “ಇಗೋ! ನಾನು ಎಲ್ಲಾ ಸಂಗತಿಗಳನ್ನು ಹೊಸದುಮಾಡುತ್ತೇನೆ”! ಈ ಅದ್ಭುತಗಳು ನಿಜವಾಗಿ ಸಂಭವಿಸುವವೂ ಇಲ್ಲವೋ ಎಂದು ಪ್ರಶ್ನಿಸುವ ಬದಲಿಗೆ, ನಿಶ್ಚಿತವಾಗಿ ನಾವು ಇದರ ಕುರಿತು ಚಿಂತಿತರಾಗಿರತಕ್ಕದ್ದು: ‘ಅಂತಹ ಆಶೀರ್ವಾದಗಳನ್ನು ಹೊಂದಲು ವ್ಯಕ್ತಿಶಃ ನಾನು ಏನು ಮಾಡತಕ್ಕದ್ದು?’

ದಾಹವುಳ್ಳವರಿಗೆ “ಜಲ”

10. ಯೆಹೋವನು ಯಾವ “ಜಲ” ವನ್ನು ನೀಡುತ್ತಾನೆ, ಮತ್ತು ಅದು ಏನನ್ನು ಸೂಚಿಸುತ್ತದೆ?

10 ಯೆಹೋವನು ತಾನೇ ಘೋಷಿಸುವುದು: “ದಾಹವುಳ್ಳ ಯಾವನಿಗಾದರೂ ಜೀವಜಲದ ಬುಗ್ಗೆಯಿಂದ ನಾನು ಕ್ರಯವಿಲ್ಲದೆ ಕುಡಿಯುವುದಕ್ಕೆ ಕೊಡುವೆನು.” (ಪ್ರಕಟನೆ 21:6ಬಿ, NW)  ಆ ದಾಹವನ್ನು ತಣಿಸಲು, ವ್ಯಕ್ತಿಯೊಬ್ಬನು ತನ್ನ ಆತ್ಮಿಕ ಆವಶ್ಯಕತೆಗಳ ಅರುಹುಳ್ಳವನಾಗಿರಬೇಕು ಮತ್ತು ಯೆಹೋವನು ಒದಗಿಸುವ “ಜಲ” ವನ್ನು ಸ್ವೀಕರಿಸಲು ಇಚ್ಛೆಯುಳ್ಳವನಾಗಿರತಕ್ಕದ್ದು. (ಯೆಶಾಯ 55:1; ಮತ್ತಾಯ 5:3) ಯಾವ “ಜಲ”? ಸಮಾರ್ಯದಲ್ಲಿನ ಬಾವಿಯ ಬಳಿಯಲ್ಲಿ ಸ್ತ್ರೀಗೆ ಸಾಕ್ಷಿಯನ್ನು ಕೊಡುವಾಗ ಆ ಪ್ರಶ್ನೆಯನ್ನು ಯೇಸುವು ತಾನೇ ಉತ್ತರಿಸಿದನು. ಅವನು ಅವಳಿಗಂದ್ದದು: “ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ; ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ಒರತೆಯಾಗಿದ್ದು ನಿತ್ಯಜೀವವನ್ನು ಉಂಟುಮಾಡುವದು.” ಜೀವದ ಪರಿಪೂರ್ಣತೆಗೆ ಮಾನವ ಕುಲವನ್ನು ಪುನಃ ಸ್ಥಾಪಿಸುವುದರಲ್ಲಿ ಅವನ ಒದಗಿಸುವಿಕೆಯೋಪಾದಿ, ಆ “ಜೀವಜಲದ ಒರತೆ”ಯು ದೇವರಿಂದ ಯೇಸುವಿನ ಮೂಲಕ ಹರಿಯುತ್ತದೆ. ಸಮಾರ್ಯದ ಸ್ತ್ರೀಯಂತೆ, ಆ ಒರತೆಯಿಂದ ಆಳವಾಗಿ ಕುಡಿಯಲು ನಾವು ಎಷ್ಟು ಉತ್ಸುಕರಾಗಿರತಕ್ಕದ್ದು! ಮತ್ತು ಆ ಸ್ತ್ರೀಯಂತೆ, ಸುವಾರ್ತೆಯನ್ನು ಇತರರಿಗೆ ತಿಳಿಸುವುದಕ್ಕಾಗಿ ಲೌಕಿಕ ಆಸಕ್ತಿಗಳನ್ನು ತಳ್ಳಿಬಿಡಲು ನಾವು ಎಷ್ಟು ಸಿದ್ಧರಾಗಿರತಕ್ಕದ್ದು!—ಯೋಹಾನ 4:14, 15, 28, 29.

ಜಯಹೊಂದುವವರು

11. ಯೆಹೋವನು ಯಾವ ವಾಗ್ದಾನವನ್ನು ಮಾಡುತ್ತಾನೆ, ಮತ್ತು ಈ ಮಾತುಗಳು ಮೊದಲಾಗಿ ಯಾರಿಗೆ ಅನ್ವಯಿಸುತ್ತವೆ?

11 ಯೆಹೋವನು ಹೇಳುವುದನ್ನು ಮುಂದರಿಸಿದಂತೆ, ಆ ಚೇತೋಹಾರಿ “ಜಲ” ವನ್ನು ಕುಡಿಯುವವರು ಸಹ ಜಯಹೊಂದತಕ್ಕದ್ದು: “ಜಯಹೊಂದುವ ಯಾವನಾದರೂ ಈ ಸಂಗತಿಗಳ ಉತ್ತರಾಧಿಕಾರಿಯಾಗುವನು, ಮತ್ತು ನಾನು ಅವನ ದೇವರಾಗುವೆನು ಮತ್ತು ಅವನು ನನ್ನ ಮಗನಾಗುವನು.” (ಪ್ರಕಟನೆ 21:7, NW)  ಏಳು ಸಭೆಗಳಿಗೆ ಕೊಟ್ಟ ಸಂದೇಶಗಳಲ್ಲಿರುವ ವಾಗ್ದಾನಗಳಂತೆ ಈ ವಾಗ್ದಾನವು ಕೂಡ ಇದೆ; ಆದಕಾರಣ, ಈ ಮಾತುಗಳು ಮೊದಲಾಗಿ ಅಭಿಷಿಕ್ತ ಶಿಷ್ಯರಿಗೆ ಅನ್ವಯಿಸತಕ್ಕದ್ದು. (ಪ್ರಕಟನೆ 2:7, 11, 17, 26-28; 3:5, 12, 21) ಕ್ರಿಸ್ತನ ಆತ್ಮಿಕ ಸಹೋದರರು ಗತಿಸಿದ ಯುಗಗಳಲ್ಲೆಲ್ಲ ಆತುರತೆಯಿಂದ ಹೊಸ ಯೆರೂಸಲೇಮಿನ ಭಾಗವಾಗುವ ಸುಯೋಗಕ್ಕಾಗಿ ನಿರೀಕ್ಷಿಸಿದ್ದಾರೆ. ಯೇಸುವು ಜಯಹೊಂದಿದಂತೆಯೇ ಅವರು ಜಯಹೊಂದುವಲ್ಲಿ, ಅವರ ನಿರೀಕ್ಷೆಗಳು ಈಡೇರುವುವು.—ಯೋಹಾನ 16:33.

12. ಪ್ರಕಟನೆ 21:7 ರಲ್ಲಿನ ಯೆಹೋವನ ವಾಗ್ದಾನವು ಮಹಾ ಸಮೂಹದ ಕಡೆಗೆ ಹೇಗೆ ನೆರವೇರುವುದು?

12 ಎಲ್ಲಾ ಜನಾಂಗಗಳಿಂದ ಬಂದ ಮಹಾ ಸಮೂಹವು ಕೂಡ ಈ ವಾಗ್ದಾನವನ್ನು ಮುನ್ನೋಡುತ್ತದೆ. ಮಹಾ ಸಂಕಟದಿಂದ ಅವರು ಹೊರಬರುವ ತನಕ, ನಿಷ್ಠೆಯಿಂದ ದೇವರನ್ನು ಸೇವಿಸುತ್ತಾ ಅವರು ಕೂಡ ಜಯಹೊಂದತಕ್ಕದ್ದು. ಆಗ ಅವರ ಐಹಿಕ ಉತ್ತರಾಧಿಕಾರದೊಳಗೆ ‘ಲೋಕಾದಿಯಿಂದ ಅವರಿಗೋಸ್ಕರ ಸಿದ್ಧಮಾಡಿದ ರಾಜ್ಯ’ ದೊಳಗೆ ಅವರು ಪ್ರವೇಶಿಸುವರು. (ಮತ್ತಾಯ 25:34) ಇವರೂ, ಸಾವಿರ ವರ್ಷಗಳ ಅಂತ್ಯದ ಪರೀಕ್ಷೆಯಲ್ಲಿ ಪಾರಾಗುವ ಕರ್ತನ ಐಹಿಕ ಕುರಿಗಳಲ್ಲಿ ಇತರರೂ “ಪವಿತ್ರ ಜನರು” ಎಂದು ಕರೆಯಲ್ಪಟ್ಟಿದ್ದಾರೆ. (ಪ್ರಕಟನೆ 20:9) ಅವರು ತಮ್ಮ ನಿರ್ಮಾಣಿಕನಾದ ಯೆಹೋವ ದೇವರೊಂದಿಗೆ, ಅವನ ಸಾರ್ವತ್ರಿಕ ಸಂಸ್ಥೆಯ ಸದಸ್ಯರೋಪಾದಿ ಒಂದು ಪವಿತ್ರ ಮತ್ತು ಪುತ್ರೀಯ ಸಂಬಂಧದಲ್ಲಿ ಆನಂದಿಸುವರು.—ಯೆಶಾಯ 66:22; ಯೋಹಾನ 20:31; ರೋಮಾಪುರ 8:21.

13, 14. ದೇವರ ಭವ್ಯ ವಾಗ್ದಾನಗಳನ್ನು ಹೊಂದಲು, ಯಾವ ಹವ್ಯಾಸಗಳನ್ನು ನಾವು ದೃಢ ಸಂಕಲ್ಪದಿಂದ ಹೋಗಲಾಡಿಸಬೇಕು, ಮತ್ತು ಯಾಕೆ?

13 ಈ ಭವ್ಯ ಪ್ರತೀಕ್ಷೆಯ ನೋಟದೊಂದಿಗೆ, ಇಂದು ಯೆಹೋವನ ಸಾಕ್ಷಿಗಳು ಸೈತಾನನ ಲೋಕದ ಕಲುಷಿತಗೊಳಿಸುವ ವಿಷಯಗಳಿಂದ ಶುದ್ಧರಾಗಿ ಉಳಿಯುವುದು ಎಷ್ಟೊಂದು ಪ್ರಾಮುಖ್ಯವಾಗಿದೆ! ಇಲ್ಲಿ ಯೆಹೋವನು ತಾನೇ ವಿವರಿಸಿದ ಜನರ ಸಹವಾಸದಲ್ಲಿ ಸೈತಾನನು ನಮ್ಮನ್ನೆಂದೂ ಸೆಳೆಯದಂತೆ, ನಾವು ಬಲವುಳ್ಳವರೂ, ದೃಢತೆಯುಳ್ಳವರೂ, ಮತ್ತು ನಿಶ್ಚಿತರೂ ಆಗಿರುವ ಆವಶ್ಯಕತೆ ಇದೆ: “ಆದರೆ ಹೇಡಿಗಳು ಮತ್ತು ನಂಬಿಕೆಯಿಲ್ಲದವರು ಮತ್ತು ತಮ್ಮ ಕೊಳಕುತನದಲ್ಲಿ ಅಸಹ್ಯವಾದವರು ಮತ್ತು ಕೊಲೆಗಾರರು ಮತ್ತು ಜಾರರು ಮತ್ತು ಪ್ರೇತಾರಾಧನೆಯನ್ನು ಆಚರಿಸುವವರು ಮತ್ತು ವಿಗ್ರಹಾರಾಧಕರು ಮತ್ತು ಎಲ್ಲಾ ಸುಳ್ಳುಗಾರರು, ಇವರಿಗೆ ಸಿಕ್ಕುವ ಪಾಲು ಬೆಂಕಿಗಂಧಕದಿಂದ ಉರಿಯುವ ಕೆರೆಯಾಗಿದೆ. ಎರಡನೆಯ ಮರಣವೆಂದೆ ಇದರ ಅರ್ಥ.” (ಪ್ರಕಟನೆ 21:8, NW)  ಹೌದು, ಹಳೇ ವಿಷಯಗಳ ಈ ವ್ಯವಸ್ಥೆಯನ್ನು ಕಲುಷಿತಗೊಳಿಸಿರುವ ಹವ್ಯಾಸಗಳನ್ನು ಭಾವೀ ಬಾಧ್ಯಸ್ಥನು ತೊರೆಯಬೇಕು. ಎಲ್ಲಾ ರೀತಿಯ ಒತ್ತಡಗಳ ಮತ್ತು ಶೋಧನೆಗಳ ಎದುರಲ್ಲಿ ನಂಬಿಗಸ್ತನಾಗಿ ನಿಲ್ಲುವುದರ ಮೂಲಕ ಅವನು ಜಯಹೊಂದತಕ್ಕದ್ದು.—ರೋಮಾಪುರ 8:35-39.

14 ಕ್ರಿಸ್ತನ ವಧುವೆಂದು ಕ್ರೈಸ್ತಪ್ರಪಂಚವು ವಾದಿಸುವುದಾದರೂ, ಇಲ್ಲಿ ಯೋಹಾನನು ವರ್ಣಿಸುವ ಅಸಹ್ಯವಾದ ಹವ್ಯಾಸಗಳಿಂದ ಅವಳು ಗುರುತಿಸಲ್ಪಡುತ್ತಾಳೆ. ಮಹಾ ಬಾಬೆಲಿನ ಇತರರೊಂದಿಗೆ ಅವಳು ನಿತ್ಯ ನಾಶನಕ್ಕೆ ಹೋಗುವಳು. (ಪ್ರಕಟನೆ 18:8, 21) ತದ್ರೀತಿಯಲ್ಲಿ, ಅಭಿಷಿಕ್ತರಲ್ಲಾಗಲಿ ಯಾ ಮಹಾ ಸಮೂಹದವರಲ್ಲಾಗಲಿ ಯಾರಾದರೂ ಇಂತಹ ದುಷ್ಟತನವನ್ನು ನಡಿಸಲು ಆರಂಭಿಸಿದರೆ, ಯಾ ಅದನ್ನು ಉತ್ತೇಜಿಸಲು ಆರಂಭಿಸಿದರೆ, ನಿತ್ಯ ನಾಶನವನ್ನು ಎದುರಿಸುವರು. ಈ ಕೃತ್ಯಗಳಲ್ಲಿ ಅವರು ನಿರತರಾಗಿರುವುದಾದರೆ, ಅವರು ಆ ವಾಗ್ದಾನಗಳನ್ನು ಸ್ವಾಸ್ಥ್ಯವಾಗಿ ಪಡೆಯಲಾರರು. ಮತ್ತು ನೂತನ ಭೂಮಿಯಲ್ಲಿ ಅಂತಹ ಹವ್ಯಾಸಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸುವ ಯಾವನನ್ನೂ ತ್ವರಿತವಾಗಿ ನಾಶಮಾಡಲಾಗುವುದು, ಪುನರುತ್ಥಾನದ ನಿರೀಕ್ಷೆಯಿಲ್ಲದ ಎರಡನೆಯ ಮರಣದೊಳಗೆ ಅವನು ಹೋಗುವನು.—ಯೆಶಾಯ 65:20.

15. ಜಯಹೊಂದುವವರೋಪಾದಿ ಯಾರು ಎದ್ದುಕಾಣುತ್ತಾರೆ, ಮತ್ತು ಯಾವ ದರ್ಶನದೊಂದಿಗೆ ಪ್ರಕಟನೆಯು ಒಂದು ಭವ್ಯ ಪರಾಕಾಷ್ಠೆಗೆ ತರಲ್ಪಡುತ್ತದೆ?

15 ಕುರಿಮರಿಯಾದ ಯೇಸು ಕ್ರಿಸ್ತನು, ಮತ್ತು 1,44,000 ಮಂದಿಯ ಅವನ ವಧು—ಹೊಸ ಯೆರೂಸಲೇಮ್‌—ಜಯಹೊಂದಿದವರಲ್ಲಿ ಎದ್ದುಕಾಣುತ್ತಾರೆ. ಹಾಗಿರುವಲ್ಲಿ, ಹೊಸ ಯೆರೂಸಲೇಮಿನ ಒಂದು ಅಂತಿಮ, ಪ್ರಕೃತ್ಯತೀತವಾದ ನೋಟದಿಂದ ಪ್ರಕಟನೆಯು ಭವ್ಯ ಪರಾಕಾಷ್ಠೆಗೆ ತರಲ್ಪಡುವುದು ಎಷ್ಟೊಂದು ತಕ್ಕದಾಗಿದೆ! ಯೋಹಾನನು ಈಗ ಕೊನೆಯ ಒಂದು ದರ್ಶನವನ್ನು ವರ್ಣಿಸುತ್ತಾನೆ.

[ಅಧ್ಯಯನ ಪ್ರಶ್ನೆಗಳು]

[ಪುಟ 413 ರಲ್ಲಿರುವ ಚಿತ್ರಗಳು]

ನೂತನ ಭೂಸಮಾಜದಲ್ಲಿ, ಎಲ್ಲರಿಗೆ ಆಹ್ಲಾದಕರ ಕೆಲಸ ಮತ್ತು ಸಾಹಚರ್ಯವು ಇರುವುದು