ಯೋಹಾನನಿಗೆ ಕೊಟ್ಟ ಪ್ರಕಟನೆ 2:1-29

  • ಎಫೆಸ ಸಭೆಗೆ (1-7), ಸ್ಮುರ್ನ ಸಭೆಗೆ (8-11), ಪೆರ್ಗಮ ಸಭೆಗೆ (12-17), ಥುವತೈರ ಸಭೆಗೆ (18-29) ಕೊಟ್ಟ ಸಂದೇಶ

2  “ಎಫೆಸ+ ಸಭೆಯ ದೇವದೂತನಿಗೆ+ ಹೀಗೆ ಬರಿ: ಬಲಗೈಯಲ್ಲಿ ಏಳು ನಕ್ಷತ್ರಗಳನ್ನ ಹಿಡ್ಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯ ನಿಂತಿರೋ ವ್ಯಕ್ತಿ ಈ ಮಾತುಗಳನ್ನ ಹೇಳ್ತಿದ್ದಾನೆ.+  ‘ನಿನ್ನ ಕೆಲಸಗಳ ಬಗ್ಗೆ, ನೀನು ಎಷ್ಟು ಕಷ್ಟಪಡ್ತೀಯ, ಎಷ್ಟು ತಾಳ್ಕೊಳ್ತೀಯ ಅನ್ನೋದ್ರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀನು ಕೆಟ್ಟವ್ರನ್ನ ಸಹಿಸ್ಕೊಳ್ಳಲ್ಲ ಅಂತಾನೂ ನನಗೆ ಗೊತ್ತು. ಅಪೊಸ್ತಲರು ಅಲ್ಲದವರು ನಾವು ಅಪೊಸ್ತಲರು ಅಂದಾಗ+ ನೀನು ಅವ್ರನ್ನ ಪರೀಕ್ಷಿಸ್ತೀಯ, ಅವರು ಸುಳ್ಳು ಹೇಳ್ತಿದ್ದಾರೆ ಅಂತ ಕಂಡುಹಿಡಿತೀಯ.  ಅಷ್ಟೇ ಅಲ್ಲ ನೀನು ನನ್ನ ಹೆಸ್ರಿಗೋಸ್ಕರ ಎಷ್ಟೋ ಸಹಿಸ್ಕೊಂಡಿದ್ದೀಯ.+ ಸಹಿಸ್ಕೊಂಡು ಸಹಿಸ್ಕೊಂಡು ನಿನಗೆ ಸುಸ್ತಾಗಲಿಲ್ಲ.+  ಆದ್ರೆ ನಿನ್ನಲ್ಲಿ ಒಂದು ಕೊರತೆ ಇದೆ. ಅದೇನಂದ್ರೆ ನಿನಗೆ ನನ್ನ ಮೇಲೆ ಮೊದ್ಲು ಇದ್ದ ಪ್ರೀತಿ ಈಗಿಲ್ಲ. ಹಾಗಾಗಿ ನಿನ್ನ ಪರಿಸ್ಥಿತಿ ಈಗ ಹೇಗಾಗಿದೆ ಅಂತ ನೀನು ಅರ್ಥಮಾಡ್ಕೊ.  ನಿನ್ನ ತಪ್ಪು ತಿದ್ಕೊ,+ ಮುಂಚಿನ ತರ ಆಗು. ನಿನ್ನ ತಪ್ಪನ್ನ ತಿದ್ದಿಕೊಳ್ಳದೆ ಇದ್ರೆ+ ನಾನು ನಿನ್ನ ಹತ್ರ ಬರ್ತಿನಿ, ನಿನ್ನ ದೀಪಸ್ತಂಭವನ್ನ ಅಲ್ಲಿಂದ ತೆಗೆದುಹಾಕ್ತೀನಿ.+  ಆದ್ರೂ ಒಂದು ವಿಷ್ಯದಲ್ಲಿ ನೀನು ಸರಿಯಾಗಿದ್ದೀಯ. ನಿಕೊಲಾಯನ+ ಗುಂಪು ಮಾಡೋದನ್ನ ನಾನು ದ್ವೇಷಿಸೋ ತರ ನೀನೂ ದ್ವೇಷಿಸ್ತೀಯ.  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಕೇಳಿ ಅರ್ಥಮಾಡ್ಕೊಳ್ಳಿ:+ ಯಾರು ಗೆಲ್ತಾರೋ+ ಅವ್ರಿಗೆ ನಾನು ದೇವರ ಪರದೈಸಲ್ಲಿರೋ ಜೀವದ ಮರದಿಂದ ಹಣ್ಣನ್ನ ತಿನ್ನೋ ಅವಕಾಶ ಕೊಡ್ತೀನಿ.’+  ಸ್ಮುರ್ನ ಸಭೆಯ ದೂತನಿಗೆ ಹೀಗೆ ಬರಿ: ‘ಮೊದಲನೆಯವನೂ ಕೊನೆಯವನೂ ಆಗಿರುವವನು,’+ ಸತ್ತು ಮತ್ತೆ ಎದ್ದು ಬಂದಿರುವವನು+ ಈ ಮಾತುಗಳನ್ನ ಹೇಳ್ತಿದ್ದಾನೆ:  ‘ನಿನಗೆ ಬಂದ ಹಿಂಸೆ, ಬಡತನದ ಬಗ್ಗೆ ನಂಗೊತ್ತು. ಆದ್ರೂ ನೀನು ಶ್ರೀಮಂತನೇ.+ ಅಷ್ಟೇ ಅಲ್ಲ, ಯೆಹೂದ್ಯರಲ್ಲದವರು ಯೆಹೂದ್ಯರಂತ ಹೇಳ್ಕೊಂಡು ನಿನ್ನನ್ನ ಬೈತಿರೋದು ನನಗೆ ಗೊತ್ತು. ನಿಜ ಹೇಳಬೇಕಂದ್ರೆ, ಅವರು ಸೈತಾನನ ಗುಂಪಿಗೆ ಸೇರಿದವರು.+ 10  ನಿಮಗೆ ಮುಂದೆ ಬರೋ ಹಿಂಸೆಯನ್ನ ನೆನಸ್ಕೊಂಡು ಭಯಪಡಬೇಡಿ.+ ನೋಡಿ, ನಿಮ್ಮನ್ನ ಚೆನ್ನಾಗಿ ಪರೀಕ್ಷೆ ಮಾಡೋಕೆ ಸೈತಾನ ನಿಮ್ಮಲ್ಲಿ ಕೆಲವ್ರನ್ನ ಜೈಲಿಗೆ ಹಾಕ್ತಾ ಇರ್ತಾನೆ. ನೀವು ಹತ್ತು ದಿನ ಹಿಂಸೆ ಅನುಭವಿಸ್ತೀರ. ಸಾಯೋ ತನಕ ನಿಮ್ಮ ನಂಬಿಕೆ ಕಾಪಾಡ್ಕೊಳಿ. ಆಗ ನಾನು ನಿಮಗೆ ಜೀವದ ಕಿರೀಟ ಕೊಡ್ತೀನಿ.+ 11  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಕೇಳಿ ಅರ್ಥಮಾಡ್ಕೊಳ್ಳಿ.+ ಯಾರು ಗೆಲ್ತಾರೋ+ ಅವ್ರಿಗೆ ಎರಡನೇ ಮರಣ ಅನ್ನೋದೇ ಇರಲ್ಲ.’+ 12  ಪೆರ್ಗಮ ಸಭೆಯ ದೂತನಿಗೆ ಹೀಗೆ ಬರಿ: ಎರಡೂ ಕಡೆ ಚೂಪಾಗಿರೋ ಉದ್ದ ಕತ್ತಿ ಇರುವವನು+ ಈ ಮಾತುಗಳನ್ನ ಹೇಳ್ತಿದ್ದಾನೆ: 13  ‘ಸೈತಾನನ ಸಿಂಹಾಸನ ಎಲ್ಲಿದ್ಯೋ ಅಲ್ಲಿ ನೀನು ವಾಸ ಮಾಡ್ತಿದ್ದೀಯ ಅಂತ ನನಗೆ ಗೊತ್ತು. ಆದ್ರೂ ನೀನು ನನಗೆ ನಂಬಿಗಸ್ತನಾಗಿದ್ದೀಯ.+ ಸೈತಾನ ವಾಸ ಮಾಡ್ತಿರೋ ನಿಮ್ಮ ಪಟ್ಟಣದಲ್ಲಿ ಅಂತಿಪ ಅನ್ನೋ ನನ್ನ ನಂಬಿಗಸ್ತ ಸಾಕ್ಷಿ+ ಇದ್ದ. ಅವನನ್ನ ಕೊಂದಾಗ್ಲೂ+ ನೀನು ನನ್ನ ಮೇಲಿದ್ದ ನಂಬಿಕೆಯನ್ನ ಬಿಟ್ಟುಬಿಡಲಿಲ್ಲ.+ 14  ಆದ್ರೆ ನಿನ್ನಲ್ಲಿ ಕೆಲವು ತಪ್ಪುಗಳಿವೆ. ಸಭೆಯಲ್ಲಿರೋ ಸ್ವಲ್ಪ ಜನ ಬಿಳಾಮ ಕಲಿಸಿದ ವಿಷ್ಯಗಳನ್ನ ಮಾಡ್ತಾ ಇದ್ರೂ ನೀನು ಹೇಗೆ ಸುಮ್ಮನಿದ್ದೀಯ? ಇಸ್ರಾಯೇಲ್ಯರು ಪಾಪ ಮಾಡೋ ತರ ಅಂದ್ರೆ ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ತಿನ್ನೋ ತರ ಹೇಗೆ ಮಾಡಬೇಕು ಮತ್ತು ಲೈಂಗಿಕ ಅನೈತಿಕತೆಯ* ಬಲೆಗೆ+ ಹೇಗೆ ಬೀಳಿಸಬೇಕು ಅಂತ ಬಾಲಾಕನಿಗೆ+ ಬಿಳಾಮ+ ಕಲಿಸಿದ. 15  ಅಷ್ಟೇ ಅಲ್ಲ, ನಿಕೊಲಾಯ ಗುಂಪಿಗೆ+ ಸೇರಿದವರು ಕಲಿಸ್ತಾ ಇರೋ ವಿಷ್ಯಗಳನ್ನ ಮಾಡುವವರೂ ನಿನ್ನಲ್ಲಿದ್ದಾರೆ. 16  ಹಾಗಾಗಿ ತಿದ್ಕೋ. ಇಲ್ಲಾಂದ್ರೆ ನಾನು ಬೇಗ ನಿನ್ನತ್ರ ಬರ್ತಿನಿ. ನನ್ನ ಬಾಯಿಂದ ಬರೋ ಉದ್ದ ಕತ್ತಿಯಿಂದ+ ಅವ್ರ ಮೇಲೆ ಯುದ್ಧ ಮಾಡ್ತೀನಿ. 17  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಕೇಳಿ ಅರ್ಥ ಮಾಡ್ಕೊಳ್ಳಿ:+ ಯಾರು ಗೆಲ್ತಾರೋ+ ಅವ್ರಿಗೆ ನಾನು ಬಚ್ಚಿಟ್ಟಿರೋ ಮನ್ನದಿಂದ ಸ್ವಲ್ಪ ಮನ್ನ ಕೊಡ್ತೀನಿ,+ ಚಿಕ್ಕ ಬಿಳಿ ಕಲ್ಲನ್ನ ಕೊಡ್ತೀನಿ. ಅದ್ರ ಮೇಲೆ ಒಂದು ಹೊಸ ಹೆಸ್ರು ಬರೆದಿರುತ್ತೆ. ಆ ಹೆಸ್ರು ಏನಂತ ಆ ಕಲ್ಲು ಸಿಕ್ಕಿದವ್ರಿಗೆ ಮಾತ್ರ ಗೊತ್ತಿರುತ್ತೆ.’ 18  ಥುವತೈರ+ ಸಭೆಯ ದೇವದೂತನಿಗೆ ಹೀಗೆ ಬರಿ: ದೇವರ ಮಗ ಈ ಮಾತುಗಳನ್ನ ಹೇಳ್ತಿದ್ದಾನೆ. ಬೆಂಕಿ ತರ ಉರಿಯೋ ಕಣ್ಣುಗಳು,+ ಹೊಳೆಯೋ ತಾಮ್ರದ ಪಾದಗಳು ಇರುವವನು+ ಹೀಗೆ ಹೇಳ್ತಿದ್ದಾನೆ. 19  ‘ನನಗೆ ನಿನ್ನ ಕೆಲಸ, ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆ ಬಗ್ಗೆ ಚೆನ್ನಾಗಿ ಗೊತ್ತು. ನೀನು ಮೊದ್ಲು ಮಾಡಿದ್ದಕ್ಕಿಂತ ಇತ್ತೀಚಿಗೆ ಮಾಡಿದ ಕೆಲಸಗಳು ಇನ್ನೂ ಚೆನ್ನಾಗಿವೆ. 20  ಆದ್ರೆ ನಿನ್ನಲ್ಲಿ ಒಂದು ಕೊರತೆ ಇದೆ. ಸಭೆಯಲ್ಲಿ ಈಜೆಬೇಲ್‌+ ಅನ್ನೋ ಸ್ತ್ರೀ ಇರೋಕೆ ನೀನು ಬಿಟ್ಟುಕೊಟ್ಟಿದ್ದೀಯ. ಅವಳು ಭವಿಷ್ಯ ಹೇಳ್ತೀನಿ ಅಂತ ನನ್ನ ದಾಸರಿಗೆ ಲೈಂಗಿಕ ಅನೈತಿಕತೆ*+ ಮಾಡೋಕೆ, ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ ತಿನ್ನೋಕೆ ಕಲಿಸ್ತಿದ್ದಾಳೆ. ಹೀಗೆ ಅವಳು ನನ್ನ ದಾಸರನ್ನ ದಾರಿತಪ್ಪಿಸ್ತಿದ್ದಾಳೆ. 21  ನಾನು ಅವಳಿಗೆ ತಿದ್ಕೊಳ್ಳೋಕ್ಕೆ ಸಮಯ ಕೊಟ್ಟೆ. ಆದ್ರೆ ಲೈಂಗಿಕ ಅನೈತಿಕತೆಯನ್ನ* ಬಿಡೋಕೆ ಅವಳಿಗೆ ಇಷ್ಟ ಇಲ್ಲ. 22  ನೋಡ್ತಾ ಇರು, ಅವಳಿಗೆ ರೋಗ ಬಂದು ಹಾಸಿಗೆ ಹಿಡ್ಯೋ ತರ ಮಾಡ್ತೀನಿ. ಅವಳ ಜೊತೆ ವ್ಯಭಿಚಾರ ಮಾಡಿದವರು ಪಶ್ಚಾತ್ತಾಪಪಡದೆ ಇದ್ರೆ ಅವರೂ ತುಂಬಾ ಕಷ್ಟಪಡಬೇಕಾಗುತ್ತೆ. 23  ನಾನು ಅವಳ ಮಕ್ಕಳಿಗೆ ಪ್ರಾಣ ತೆಗೆಯೋ ಕಾಯಿಲೆ ಬರೋ ತರ ಮಾಡ್ತೀನಿ. ನಾನು ಮನಸ್ಸಲ್ಲಿರೋ ಆಲೋಚನೆಗಳನ್ನ,* ಹೃದಯದಲ್ಲಿರೋದನ್ನ ನೋಡ್ತೀನಿ ಅಂತ ಆಗ ಎಲ್ಲ ಸಭೆಗಳಿಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಿಮ್ಮಲ್ಲಿ ಪ್ರತಿಯೊಬ್ರಿಗೂ ನಿಮ್ಮನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಕೊಡ್ತೀನಿ.+ 24  ಆದ್ರೆ ಥುವತೈರದಲ್ಲಿರೋ ಬೇರೆಯವರು ಈಜೆಬೇಲ್‌ ಕಲಿಸೋದನ್ನ ಮಾಡ್ತಾ ಇಲ್ಲ. “ಸೈತಾನನಿಂದ ಬರೋ ಸುಳ್ಳು ಬೋಧನೆಗಳನ್ನ”+ ಅವರು ಕೇಳಕ್ಕೂ ಹೋಗ್ಲಿಲ್ಲ, ನಾನು ಅವ್ರಿಗೆ ಹೇಳೋದು ಏನಂದ್ರೆ, ನಿಮ್ಮ ಮೇಲೆ ಬೇರೆ ಯಾವ ಭಾರನೂ ನಾನು ಹಾಕಲ್ಲ. 25  ನೀವೀಗ ಮಾಡ್ತಿರೋ ಒಳ್ಳೇ ಕೆಲಸಗಳನ್ನ ನಾನು ಬರೋ ತನಕ ಮಾಡ್ತಾ ಇರಿ.+ 26  ನಾನು ಹೇಳೋದನ್ನ ಕೊನೇ ತನಕ ಮಾಡಿ ಗೆಲ್ಲುವವನಿಗೆ ನಾನು ಲೋಕದ ಜನ್ರ ಮೇಲೆ ಅಧಿಕಾರ ಕೊಡ್ತೀನಿ.+ 27  ಅಂಥ ಅಧಿಕಾರವನ್ನ ನಾನು ನನ್ನ ತಂದೆಯಿಂದ ಪಡ್ಕೊಂಡೆ. ಗೆಲ್ಲೋ ವ್ಯಕ್ತಿ ಕಬ್ಬಿಣದ ಕೋಲಿಂದ+ ಜನ್ರನ್ನ ಶಿಕ್ಷಿಸ್ತಾನೆ. ಅವರು ಮಣ್ಣಿನ ಪಾತ್ರೆ ತರ ಚೂರು ಚೂರಾಗ್ತಾರೆ. 28  ಗೆಲ್ಲುವವನಿಗೆ ನಾನು ಬೆಳಗಿನ ನಕ್ಷತ್ರವನ್ನ+ ಕೊಡ್ತೀನಿ. 29  ಪವಿತ್ರಶಕ್ತಿ ಸಭೆಗಳಿಗೆ ಹೇಳೋದನ್ನ ಕೇಳಿ ಅರ್ಥ ಮಾಡ್ಕೊಳ್ಳಿ.’

ಪಾದಟಿಪ್ಪಣಿ

ಅಥವಾ, “ಅಂತರಾಳದ ಭಾವನೆಗಳನ್ನ.”