ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?

ನಿಮ್ಮ ಕಷ್ಟಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?

ನಮ್ಮ ಕಷ್ಟಗಳನ್ನು ದೇವರು ನೋಡುವುದೂ ಇಲ್ಲ ಅವುಗಳ ಬಗ್ಗೆ ಚಿಂತಿಸುವುದೂ ಇಲ್ಲ ಅನ್ನುವುದು ಕೆಲವರ ಅಭಿಪ್ರಾಯ.

ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ನೋಡಿ

  • ದೇವರು ನೋಡುತ್ತಾನೆ ಮತ್ತು ಚಿಂತಿಸುತ್ತಾನೆ

    ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನು ಯೆಹೋವನು ನೋಡಿ ತನ್ನ ಹೃದಯದಲ್ಲಿ ನೊಂದು ಕೊಂಡನು.’—ಆದಿಕಾಂಡ 6:5, 6.

  • ದೇವರು ಎಲ್ಲ ಕಷ್ಟಗಳನ್ನು ಕೊನೆಗೊಳಿಸುವನು

    “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ. ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” —ಕೀರ್ತನೆ 37:10, 11.

  • ದೇವರು ನಿಮಗಾಗಿ ಇದನ್ನು ಬಯಸುತ್ತಾನೆ

    “ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿ ಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು” ಅನ್ನುತ್ತಾನೆ ಯೆಹೋವನು.—ಯೆರೆಮೀಯ 29:11, 12.

    “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.