ಮಾಹಿತಿ ಇರುವಲ್ಲಿ ಹೋಗಲು

ಬೇರೆಯವರಿಗೆ ಸಹಾಯ ಮಾಡೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಬೇರೆಯವರಿಗೆ ಸಹಾಯ ಮಾಡೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ಬೈಬಲ್‌ ಕೊಡೋ ಉತ್ತರ

 ನಾವು ಇನ್ನೊಬ್ರಿಗೆ ಸಹಾಯ ಮಾಡಲು ಯಾವಾಗಲು ತಯಾರಿರಬೇಕಂತ ಬೈಬಲ್‌ ಉತ್ತೇಜಿಸುತ್ತೆ. ಆದ್ರೆ ಇದನ್ನ ನಾವು ಖುಷಿ-ಖುಷಿಯಿಂದ, ಸರಿಯಾದ ಮನೋಭಾವದಿಂದ ಮಾಡಬೇಕು. ಇದ್ರಿಂದ ಕೊಡುವವರಿಗೂ ತಗೊಳ್ಳುವವರಿಗೂ ಇಬ್ಬರಿಗೂ ಖುಷಿ ಸಿಗುತ್ತೆ. (ಜ್ಞಾನೋಕ್ತಿ 11:25; ಲೂಕ 6:38) ಯೇಸು, “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅಂತ ಹೇಳಿದ.—ಅಪೊಸ್ತಲರ ಕಾರ್ಯ 20:35.

 ನಾವು ಯಾವ ರೀತಿ ಸಹಾಯ ಮಾಡಿದ್ರೆ ದೇವರಿಗೆ ಖುಷಿಯಾಗುತ್ತೆ?

 ನಾವು ಬೇರೆಯವರಿಗೆ ಮನಸ್ಸಾರೆ ಸಹಾಯ ಮಾಡಿದ್ರೆ ದೇವರಿಗೆ ಖುಷಿಯಾಗುತ್ತೆ. ಬೈಬಲ್‌ ಹೀಗೆ ಹೇಳುತ್ತೆ: “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂಥ 9:7.

 ನಾವು ಅಗತ್ಯ ಇರುವವರಿಗೆ ಮನಸ್ಸಾರೆ ಸಹಾಯ ಮಾಡಿದ್ರೆ ದೇವರು ನಮ್ಮ ಆರಾಧನೆಯನ್ನ ಸ್ವೀಕರಿಸ್ತಾನೆ. (ಯಾಕೋಬ 1:27) ಇನ್ನೊಬ್ರಿಗೆ ಸಹಾಯ ಮಾಡುವ, ಉದಾರವಾಗಿ ಕೊಡುವ ವ್ಯಕ್ತಿಯನ್ನ ಕಂಡ್ರೆ ದೇವರಿಗೆ ಖುಷಿಯಾಗುತ್ತೆ. ಅಂಥ ವ್ಯಕ್ತಿ ತನಗೆ ಸಾಲ ಕೊಟ್ಟ ಹಾಗೆ ಅಂತ ದೇವರು ಎಣಿಸ್ತಾನೆ. (ಜ್ಞಾನೋಕ್ತಿ 19:17) ಸ್ವತಃ ದೇವರೇ ಅದನ್ನ ಅವನಿಗೆ ಹಿಂತಿರುಗಿಸ್ತಾನೆ ಅಂತ ಬೈಬಲ್‌ ಹೇಳುತ್ತೆ.—ಲೂಕ 14:12-14.

 ನಾವು ಯಾವ ರೀತಿ ಸಹಾಯ ಮಾಡಿದ್ರೆ ದೇವರಿಗೆ ಇಷ್ಟ ಆಗಲ್ಲ?

 ಸ್ವಾರ್ಥ ಉದ್ದೇಶ ಇಟ್ಟುಕೊಂಡು ಸಹಾಯ ಮಾಡಿದ್ರೆ ದೇವರಿಗೆ ಇಷ್ಟ ಆಗಲ್ಲ. ಉದಾಹರಣೆಗೆ:

 ದೇವರಿಗೆ ಇಷ್ಟವಿಲ್ಲದ ವಿಷಯಗಳಿಗೆ ಸಹಾಯ ಮಾಡೋದು. ಉದಾಹರಣೆಗೆ, ಜೂಜಾಟ ಆಡಲು, ಡ್ರಗ್ಸ್‌ ತಗೊಳ್ಳಲು, ಕುಡಿಕತನಕ್ಕೆ ಬೀಳಲು ಒಬ್ರಿಗೆ ಹಣ ಕೊಡೋದು ತಪ್ಪು. (1 ಕೊರಿಂಥ 6:9, 10; 2 ಕೊರಿಂಥ 7:1) ಅದೇರೀತಿ ದುಡಿಯೋಕೆ ಸಾಮರ್ಥ್ಯ ಇದ್ದು ಕೆಲಸ ಮಾಡದವನಿಗೆ ಹಣ ಕೊಡೋದು ತಪ್ಪು.—2 ಥೆಸಲೊನೀಕ 3:10.

 ನಮ್ಮ ಕುಟುಂಬಕ್ಕೆ ಕೊಡೋದನ್ನ ಬಿಟ್ಟು ಬೇರೆಯವರಿಗೆ ಸಹಾಯ ಮಾಡೋದು. ಕುಟುಂಬದ ಯಜಮಾನನು ತನ್ನ ಕುಟುಂಬದ ಅಗತ್ಯಗಳನ್ನ ಪೂರೈಸಬೇಕು ಅಂತ ಬೈಬಲ್‌ ಹೇಳುತ್ತೆ. (1 ತಿಮೊತಿ 5:8) ಬೇರೆಯವರಿಗೆ ತುಂಬ ಸಹಾಯ ಮಾಡ್ತಾ, ಸಿಕಪಟ್ಟೆ ದಾನ ಮಾಡ್ತಾ ತನ್ನ ಕುಟುಂಬವನ್ನ ಕಷ್ಟಕ್ಕೆ ಸಿಕ್ಸಿಹಾಕಿಸಿದ್ರೆ ಅದು ಸರಿಯಲ್ಲ. ಈ ರೀತಿ ತಮ್ಮ ಆಸ್ತಿಯನ್ನೆಲ್ಲ ದೇವರಿಗೆ ದಾನ ಮಾಡ್ತೀವಿ ಅಂತ ಹೇಳಿ ವಯಸ್ಸಾದ ಅಪ್ಪ-ಅಮ್ಮನ ನೋಡಿಕೊಳ್ಳದೆ ಇದ್ದವರನ್ನ ಯೇಸು ಖಂಡಿಸಿದನು.—ಮಾರ್ಕ 7:9-13.