ಜ್ಞಾನೋಕ್ತಿ 19:1-29

  • ತಿಳುವಳಿಕೆ ಕೋಪ ಆರಿಸುತ್ತೆ (11)

  • ಜಗಳಗಂಟಿ ಹೆಂಡತಿ ಸೋರೋ ಚಾವಣಿ (13)

  • ಬುದ್ಧಿ ಇರೋ ಹೆಂಡತಿ ಯೆಹೋವನ ವರ (14)

  • ಕೈಮೀರಿ ಹೋಗೋ ಮುಂಚೆ ಮಗನಿಗೆ ಶಿಸ್ತು ಕೊಡು (18)

  • ಸಲಹೆಗೆ ಕಿವಿಗೊಡುವವನು ವಿವೇಕಿ (20)

19  ಮೂರ್ಖನ ತರ ಸುಳ್ಳು ಹೇಳೋದಕ್ಕಿಂತ,+ಬಡವನ ತರ ನಿಯತ್ತಾಗಿ ನಡಿಯೋದು ಒಳ್ಳೇದು.+   ಬುದ್ಧಿ ಇಲ್ಲದಿರೋದು ಒಬ್ಬ ಮನುಷ್ಯನಿಗೆ ಒಳ್ಳೇದಲ್ಲ,+ಮುಂದಾಲೋಚನೆ ಮಾಡದೆ ನಡಿಯುವವನು* ಪಾಪ ಮಾಡ್ತಾನೆ.   ಮನುಷ್ಯ ತನ್ನ ದಡ್ಡತನದಿಂದಾನೇ ದಾರಿ ತಪ್ತಾನೆ,ಆಮೇಲೆ ಅವನ ಮನಸ್ಸು ಯೆಹೋವನ ಮೇಲೆ ರೇಗುತ್ತೆ.   ಶ್ರೀಮಂತನಿಗೆ ನೂರಾರು ಸ್ನೇಹಿತರು ಇರ್ತಾರೆ,ಆದ್ರೆ ಬಡವನಿಗೆ ಒಬ್ಬನೇ ಒಬ್ಬ ಸ್ನೇಹಿತ ಇದ್ರೂ ಅವನೂ ಕೈಬಿಟ್ಟುಬಿಡ್ತಾನೆ.+   ಸುಳ್ಳು ಸಾಕ್ಷಿ ಹೇಳುವವನಿಗೆ ಶಿಕ್ಷೆ ತಪ್ಪಿದ್ದಲ್ಲ,+ಬಾಯಿ ಬಿಟ್ರೆ ಸುಳ್ಳು ಹೇಳುವವನು ತಪ್ಪಿಸ್ಕೊಳ್ಳೋಕೆ ಆಗಲ್ಲ.+   ದೊಡ್ಡ ವ್ಯಕ್ತಿಗಳ* ಮೆಚ್ಚುಗೆ ಪಡಿಯೋಕೆ ತುಂಬ ಜನ ಇಷ್ಟಪಡ್ತಾರೆ,ಉಡುಗೊರೆಗಳನ್ನ ಕೊಡುವವನಿಗೆ ಎಲ್ರೂ ಸ್ನೇಹಿತರಾಗ್ತಾರೆ.   ಬಡವನ ಅಣ್ಣತಮ್ಮಂದಿರೇ ಅವನನ್ನ ದ್ವೇಷಿಸ್ತಾರೆ,+ಅವನ ಸ್ನೇಹಿತರೂ ಅವನನ್ನ ದೂರ ಇಡ್ತಾರೆ!+ ಅವನು ಬೇಡ್ತಾ ಅವ್ರ ಹಿಂದೆ ಹೋಗ್ತಾನೆ, ಆದ್ರೆ ಯಾರೂ ಕ್ಯಾರೆ ಅನ್ನಲ್ಲ.   ಬುದ್ಧಿ* ಗಳಿಸುವವನು ತನ್ನನ್ನೇ ಪ್ರೀತಿಸ್ಕೊಳ್ತಾನೆ,+ವಿವೇಚನೆಯನ್ನ ನಿಧಿ ತರ ಕಾಪಾಡ್ಕೊಳ್ಳೋನು ಯಶಸ್ವಿ ಆಗ್ತಾನೆ.*+   ಸುಳ್ಳುಸಾಕ್ಷಿ ಹೇಳುವವನಿಗೆ ಶಿಕ್ಷೆ ತಪ್ಪಿದ್ದಲ್ಲ,ಬಾಯಿ ಬಿಟ್ರೆ ಸುಳ್ಳು ಹೇಳುವವನು ಮಣ್ಣುಪಾಲಾಗಿ ಹೋಗ್ತಾನೆ.+ 10  ಐಷಾರಾಮಿ ಜೀವನ ಮೂರ್ಖನಿಗೆ ಸರಿಯಲ್ಲ ಅಂದ್ಮೇಲೆ,ದೊಡ್ಡ ಅಧಿಕಾರಿಗಳ ಮೇಲೆ ಸೇವಕ ಆಳೋದು ಇನ್ನೆಷ್ಟು ಸರಿ.+ 11  ವ್ಯಕ್ತಿಯಲ್ಲಿರೋ ತಿಳುವಳಿಕೆ* ಅವನ ಕೋಪ ಆರಿಸುತ್ತೆ,+ಮತ್ತೊಬ್ರ ತಪ್ಪನ್ನ ಗಮನಿಸದೆ ಇರೋದು ಅವನಿಗೆ ಗೌರವ ತರುತ್ತೆ.+ 12  ರಾಜನ ಕೋಪ ಸಿಂಹದ ಗರ್ಜನೆ ತರ,+ಅವನ ಕೃಪೆ ಹುಲ್ಲು ಮೇಲೆ ಇರೋ ಇಬ್ಬನಿ ತರ. 13  ದಡ್ಡ ತನ್ನ ತಂದೆಗೆ ಕಷ್ಟಗಳನ್ನ ತರ್ತಾನೆ,+ಜಗಳಗಂಟಿ* ಹೆಂಡತಿ ಯಾವಾಗ್ಲೂ ಸೋರೋ ಚಾವಣಿ ತರ.+ 14  ಒಬ್ಬನಿಗೆ ಮನೆ, ಆಸ್ತಿ ಅಪ್ಪನಿಂದ ಬರೋ ಸೊತ್ತು,ಆದ್ರೆ ಬುದ್ಧಿ ಇರೋ ಹೆಂಡತಿ ಯೆಹೋವನಿಂದ ಸಿಗೋ ವರ.+ 15  ಮೈಗಳ್ಳ ತುಂಬ ನಿದ್ದೆ ಮಾಡ್ತಾನೆ,ಸೋಮಾರಿ ಹಸಿವಿಂದ ನರಳ್ತಾನೆ.+ 16  ಆಜ್ಞೆ ಪಾಲಿಸುವವನು ಜೀವ ಕಾಪಾಡ್ಕೊಳ್ತಾನೆ,+ಮನಸ್ಸಿಗೆ ಬಂದ ಹಾಗೆ ನಡಿಯುವವನು ಪ್ರಾಣ ಕಳ್ಕೊಳ್ತಾನೆ.+ 17  ಬಡವರಿಗೆ ದಯೆ ತೋರಿಸುವವನು ಯೆಹೋವನಿಗೆ ಸಾಲ ಕೊಡ್ತಾನೆ,+ದೇವರೇ ಅವನಿಗೆ ಪ್ರತಿಫಲ ಕೊಡ್ತಾನೆ.*+ 18  ಕೈಮೀರಿ ಹೋಗೋ ಮುಂಚೆ ನಿನ್ನ ಮಗನಿಗೆ ಶಿಸ್ತು ಕೊಡು,+ನೀನೇ ಅವನ ಸಾವಿಗೆ ಕಾರಣ ಆಗಬೇಡ.*+ 19  ಕೋಪಿಷ್ಠ ದಂಡ ತೆರಬೇಕಾಗುತ್ತೆ,ಅವನನ್ನ ಕಾಪಾಡೋಕೆ ಪ್ರಯತ್ನಿಸಿದ್ರೆ ಮತ್ತೆಮತ್ತೆ ಅದನ್ನೇ ಮಾಡಬೇಕಾಗುತ್ತೆ.+ 20  ಸಲಹೆಗೆ ಕಿವಿಗೊಡು, ಶಿಸ್ತನ್ನ ಪಡ್ಕೊ,+ಮುಂದೊಂದು ದಿನ ನೀನೇ ವಿವೇಕಿ ಆಗ್ತೀಯ.+ 21  ಮನುಷ್ಯನ ಹೃದಯದಲ್ಲಿ ಹತ್ತಾರು ಯೋಜನೆಗಳು ಇರುತ್ತೆ,ಆದ್ರೆ ಕೊನೆಗೆ ಆಗೋದು ಯೆಹೋವನ ಇಷ್ಟಾನೇ.*+ 22  ಮನುಷ್ಯನ ಶಾಶ್ವತ ಪ್ರೀತಿನೇ ಅವನ ಅಂದ,+ಸುಳ್ಳುಗಾರನಾಗಿ ಇರೋದಕ್ಕಿಂತ ಬಡವನಾಗಿ ಇರೋದು ಒಳ್ಳೇದು. 23  ಯೆಹೋವನ ಭಯ ಜೀವಕ್ಕೆ ನಡಿಸುತ್ತೆ,+ಆ ಭಯ ಇರುವವರು ನೆಮ್ಮದಿಯಿಂದ ಇರ್ತಾರೆ, ಅವ್ರಿಗೆ ಯಾವ ತೊಂದ್ರೆನೂ ಆಗಲ್ಲ.+ 24  ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,ಆದ್ರೆ ಅದನ್ನ ಬಾಯಿ ತನಕ ತರೋಕ್ಕೂ ಮನಸ್ಸು ಮಾಡಲ್ಲ.+ 25  ಅಣಕಿಸಿ ಮಾತಾಡುವವನನ್ನ ಹೊಡಿ,+ ಇದನ್ನ ನೋಡಿ ಅನುಭವ ಇಲ್ಲದವನು ಜಾಣ ಆಗ್ತಾನೆ.+ ಅರ್ಥ ಮಾಡ್ಕೊಳ್ಳೋನನ್ನ ಗದರಿಸು, ಆಗ ಅವನ ಜ್ಞಾನ ಜಾಸ್ತಿ ಆಗುತ್ತೆ.+ 26  ಅಪ್ಪನ ಜೊತೆ ಕೆಟ್ಟದಾಗಿ ನಡ್ಕೊಳ್ಳುವವನು, ಅಮ್ಮನನ್ನ ಓಡಿಸಿಬಿಡ್ತಾನೆ,ಅವನು ಅವಮಾನ, ಕೆಟ್ಟ ಹೆಸ್ರು ತರ್ತಾನೆ.+ 27  ನನ್ನ ಮಗನೇ, ನೀನು ಶಿಸ್ತು ಪಡ್ಕೊಳ್ಳದಿದ್ರೆ,ಜ್ಞಾನದ ದಾರಿ ಬಿಟ್ಟು ದಾರಿತಪ್ಪಿ ಹೋಗ್ತೀಯ. 28  ಪ್ರಯೋಜನಕ್ಕೆ ಬರದ ಸಾಕ್ಷಿ ನ್ಯಾಯವನ್ನ ತಮಾಷೆ ಮಾಡ್ತಾನೆ,+ಕೆಟ್ಟವನ ಬಾಯಿ ಕೆಟ್ಟತನವನ್ನ ನುಂಗಿಹಾಕುತ್ತೆ.+ 29  ಗೇಲಿ ಮಾಡುವವರಿಗೆ ಶಿಕ್ಷೆ ಕಾದು ಕೂತಿರುತ್ತೆ,+ಮೂರ್ಖರ ಬೆನ್ನಿಗೆ ಏಟು ಯಾವಾಗ್ಲೂ ಸಿದ್ಧ ಇರುತ್ತೆ.+

ಪಾದಟಿಪ್ಪಣಿ

ಅಕ್ಷ. “ದುಡುಕಿ ಕಾಲಿಡುವವನು.”
ಅಥವಾ “ದೊಡ್ಡ ಮನಸ್ಸಿನ.”
ಅಕ್ಷ. “ಒಳ್ಳೇದಾಗುತ್ತೆ.”
ಅಕ್ಷ. “ಹೃದಯ.”
ಅಕ್ಷ. “ಒಳನೋಟ.”
ಅಥವಾ “ಕಿರಿಕಿರಿ ಮಾಡೋ.”
ಅಥವಾ “ಆ ಸಾಲವನ್ನ ವಾಪಸ್‌ ಕೊಡ್ತಾನೆ.”
ಅಥವಾ “ಸಾವನ್ನ ಬಯಸಬೇಡ.”
ಅಕ್ಷ. “ಸಲಹೆನೇ.”