ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮಗಿರುವ ಸಕಾರಾತ್ಮಕ ಮನೋಭಾವವನ್ನು ಮೆಚ್ಚುತ್ತೇನೆ”

“ನಿಮಗಿರುವ ಸಕಾರಾತ್ಮಕ ಮನೋಭಾವವನ್ನು ಮೆಚ್ಚುತ್ತೇನೆ”

“ನಿಮಗಿರುವ ಸಕಾರಾತ್ಮಕ ಮನೋಭಾವವನ್ನು ಮೆಚ್ಚುತ್ತೇನೆ”

● ಕೆಮೀಲಾಳನ್ನು ರಕ್ತಹೀನತೆ, ನರಸಂಬಂಧಿತ ತೊಂದರೆಗಳು, ಕುಂಠಿತ ಬೆಳವಣಿಗೆಯಂಥ ಸಮಸ್ಯೆಗಳು ಮುತ್ತಿಕೊಂಡಿವೆ. ಹೀಗಿರುವುದರಿಂದ 8 ವರ್ಷ ಪ್ರಾಯದಲ್ಲೂ ಆಕೆಯ ಎತ್ತರ ಬರೀ 75 ಸೆಂಟಿಮೀಟರ್‌ ಆಗಿತ್ತು. ಕೆಮೀಲಾಳ ಹೆತ್ತವರು ಯೆಹೋವನ ಸಾಕ್ಷಿಗಳು. ಒಮ್ಮೆ ಅವರ ಊರಾದ ಆರ್ಜೆಂಟೀನದಲ್ಲಿ ಒಂದು ರಂಗಮಂದಿರದಲ್ಲಿ ನಡೆದ ವೈದ್ಯಕೀಯ ಸಮಾವೇಶಕ್ಕೆ ಅವಳನ್ನು ಕರಕೊಂಡು ಹೋದರು. ಅಲ್ಲಿ ಅವರು ಎರಡನೆಯ ಸಾಲಿನಲ್ಲಿ ಕುಳಿತರು. ಸುಮಾರು 500 ಮಂದಿ ಹಾಜರಿದ್ದರು.

ಅಲ್ಲಿ ಒಬ್ಬ ವೈದ್ಯರು ತಮ್ಮ ಉಪನ್ಯಾಸದ ಸಮಯದಲ್ಲಿ ಉತ್ತಮ ಆರೋಗ್ಯವಿರುವ ಮಗು ಹೇಗಿರಬೇಕೆಂಬದಕ್ಕೆ ನಿದರ್ಶನವಾಗಿ ಕೆಮೀಲಾಳೆಡೆಗೆ ಬೊಟ್ಟುಮಾಡಿದರು. ಆಕೆಯ ವಯಸ್ಸು ಮತ್ತು ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದಿರದೆ “ಮಗುವಿಗೆ ಎಷ್ಟು ವಯಸ್ಸು?” ಎಂದವರು ಕೇಳಿದರು.

“ಎಂಟು ವರ್ಷ” ಎಂದಳು ಕೆಮೀಲಾಳ ತಾಯಿ ಮರೀಸಾ.

“ಎಂಟು ತಿಂಗಳಾ?” ಎಂದರು ವೈದ್ಯರು.

“ಇಲ್ಲ. ಎಂಟು ವರ್ಷ” ಎಂದು ಮರೀಸಾ ಪುನಃ ಹೇಳಿದಳು.

ಕುತೂಹಲ ಕೆರಳಿ ವೈದ್ಯರು ತಾಯಿ ಮಗಳನ್ನು ವೇದಿಕೆಗೆ ಕರಿಸಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಬೇರೆ ಬೇರೆ ವೈದ್ಯರು ಮಾಡಿದ ಪರೀಕ್ಷೆಗಳು ಮತ್ತು ಪ್ರಯತ್ನಿಸಿದ್ದ ಎಲ್ಲ ಚಿಕಿತ್ಸೆಗಳ ಬಗ್ಗೆ ಮರೀಸಾ ವಿವರವಾಗಿ ಹೇಳಿದಳು. ಬಳಿಕ ಆ ವೈದ್ಯರಂದದ್ದು: “ತಮ್ಮ ಮಕ್ಕಳಿಗೆ ಬರೀ ಜ್ವರ ಬಂದರೆ ಸಾಕು ಧೈರ್ಯಗೆಟ್ಟು ಅಳುವ ತಾಯಂದಿರನ್ನು ನೋಡಿದ್ದೇನೆ. ಆದರೆ ಕೆಮೀಲಾಳಿಗಾಗಿ 7 ವರ್ಷ ಚಿಕಿತ್ಸೆ ಮಾಡಿ, ಸಾಧ್ಯವಿದದ್ದನ್ನೆಲ್ಲ ಮಾಡಿದ ಬಳಿಕವೂ ನಿಮಗಿರುವ ಸಕಾರಾತ್ಮಕ ಮನೋಭಾವವನ್ನು ಮೆಚ್ಚುತ್ತೇನೆ. ನಿಮ್ಮಿಂದ ಇದು ಹೇಗೆ ಸಾಧ್ಯವಾಯಿತು?”

ವೈದ್ಯರು ದಯೆಯಿಂದ ಕೇಳಿದ ಆ ಪ್ರಶ್ನೆಗೆ ಉತ್ತರಿಸುತ್ತಾ ಮರೀಸಾ, ಎಲ್ಲ ವಿಧದ ಕಾಯಿಲೆಗಳು, ಕಷ್ಟಗಳು ಮತ್ತು ಮರಣವೂ ಇಲ್ಲದಿರುವ ಒಂದು ಹೊಸ ಲೋಕದ ಕುರಿತ ಬೈಬಲಾಧರಿತ ನಿರೀಕ್ಷೆಯ ಕುರಿತು ಹೇಳಿದಳು. (ಯೆಶಾಯ 33:24; ಪ್ರಕಟನೆ 21:3, 4) ಆಮೇಲೆ, ಯೆಹೋವನ ಸಾಕ್ಷಿಗಳಿಗಿರುವ ಲೋಕವ್ಯಾಪಕ ಭ್ರಾತೃತ್ವದ ಕುರಿತಾಗಿಯೂ ವರ್ಣಿಸಿದಳು. ಸಾಕ್ಷಿಗಳು ಪರಸ್ಪರರಿಗೆ ತೋರಿಸುವ ಪ್ರೀತಿಯು ಬದುಕಿನ ಯಾವುದೇ ಕಷ್ಟತೊಂದರೆಗಳನ್ನು ನಿಭಾಯಿಸಲು ಅವರಿಗೆ ಹೇಗೆ ನೆರವಾಗುತ್ತದೆಂದು ವಿವರಿಸಿದಳು.—ಯೋಹಾನ 13:35.

ಕಾರ್ಯಕ್ರಮ ಮುಗಿದ ಬಳಿಕ ಮಹಿಳೆಯೊಬ್ಬಳು ಮರೀಸಾಳ ಬಳಿ ಬಂದು, ಅವಳು ಹೇಳಿದ ವಿಷಯಗಳ ಬಗ್ಗೆ ಇನ್ನಷ್ಟನ್ನು ತಿಳಿಸುವಂತೆ ಕೇಳಿಕೊಂಡಳು. ಕಲಿಯುವ ಹುಮ್ಮಸ್ಸಿದ್ದ ಆ ಮಹಿಳೆ ಯೆಹೋವನ ಸಾಕ್ಷಿಗಳು ತನ್ನ ಮನೆಗೆ ಬಂದು ತನ್ನೊಂದಿಗೆ ಬೈಬಲನ್ನು ಉಚಿತವಾಗಿ ಅಧ್ಯಯನಮಾಡುವ ಏರ್ಪಾಡಿಗೆ ಒಪ್ಪಿಕೊಂಡಳು. ಇಂಥ ಏರ್ಪಾಡಿನ ಬಗ್ಗೆ ಯೆಹೋವನ ಸಾಕ್ಷಿಗಳು ಪ್ರಪಂಚಾದ್ಯಂತ, ಬೈಬಲಿನ ಬಗ್ಗೆ ಮತ್ತು ಮಾನವಕುಲಕ್ಕಾಗಿ ದೇವರಿಗಿರುವ ಅದ್ಭುತ ಉದ್ದೇಶದ ಬಗ್ಗೆ ಕಲಿಯಲು ನಿಜವಾಗಿ ಮನಸ್ಸಿರುವವರಿಗೆ ತಿಳಿಸುತ್ತಾರೆ. (g10-E 11)

[ಪುಟ 32ರಲ್ಲಿರುವ ಚಿತ್ರ]

ಎಂಟು ವರ್ಷದ ಕೆಮೀಲಾ ಮತ್ತು ಅವಳ ತಾಯಿ ಮರೀಸಾ