ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದಲ್ಲಿದೆ ಕಷ್ಟ-ನೋವು

1 | ಆರೋಗ್ಯವನ್ನು ಕಾಪಾಡಿಕೊಳ್ಳಿ

1 | ಆರೋಗ್ಯವನ್ನು ಕಾಪಾಡಿಕೊಳ್ಳಿ

ಇದು ಯಾಕೆ ಮುಖ್ಯ

ಒಂದು ವಿಪತ್ತು ಅಥವಾ ವಿಕೋಪ ನಡೆದಾಗ ಅದು ಜನರ ಆರೋಗ್ಯದ ಮೇಲೆ ಬೇರೆಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತೆ.

  • ಸಮಸ್ಯೆ-ತೊಂದರೆಗಳು ಬಂದಾಗ ಜನರಲ್ಲಿ ಮಾನಸಿಕ ಒತ್ತಡ ಜಾಸ್ತಿ ಆಗುತ್ತೆ. ತುಂಬ ಸಮಯ ಒತ್ತಡದಲ್ಲೇ ಇದ್ದಾಗ ಕಾಯಿಲೆಗಳು ಬರೋ ಸಾಧ್ಯತೆನೂ ಹೆಚ್ಚಾಗುತ್ತೆ.

  • ವಿಪತ್ತುಗಳಾದಾಗ ಆರೋಗ್ಯ ವ್ಯವಸ್ಥೆ ತಲೆಕೆಳಗಾಗಿ ವೈದ್ಯರು ಸಿಗೋದು ಹಾಗೂ ಚಿಕಿತ್ಸೆ ಪಡೆಯೋದು ಕಷ್ಟ ಆಗುತ್ತೆ.

  • ವಿಪತ್ತು-ವಿಕೋಪಗಳಿಂದಾಗಿ ಜನರಿಗೆ ಹಣಕಾಸಿನ ಸಮಸ್ಯೆ ಆಗುತ್ತೆ. ಇದರಿಂದಾಗಿ ಪೌಷ್ಟಿಕ ಆಹಾರವನ್ನು, ಔಷಧಿಗಳನ್ನು ಪಡೆಯೋದು ತುಂಬ ಕಷ್ಟ ಆಗಿಬಿಡುತ್ತೆ.

ಈ ಮುಂದಿನ ವಿಷಯವನ್ನ ನೆನಪಿಡಿ

  • ನಮಗೆ ಗಂಭೀರ ಕಾಯಿಲೆ ಅಥವಾ ಮಾನಸಿಕ ಒತ್ತಡ ಇದ್ದಾಗ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಕ್ಕೆ ಆಗಲ್ಲ. ಇದರಿಂದ ನಮ್ಮ ಆರೋಗ್ಯ ಇನ್ನೂ ಹದಗೆಡಬಹುದು.

  • ಆರೋಗ್ಯ ಸಮಸ್ಯೆ ಇದ್ದಾಗ ಸರಿಯಾದ ಚಿಕಿತ್ಸೆ ಪಡೆಯಲಿಲ್ಲ ಅಂದರೆ ಆರೋಗ್ಯ ಹಾಳಾಗೋದಲ್ಲದೆ ಜೀವಕ್ಕೂ ಅಪಾಯ ಆಗಬಹುದು.

  • ಲೋಕದಲ್ಲಿ ಎಷ್ಟೇ ಕಷ್ಟ-ನೋವು ಇದ್ದರೂ ಒಳ್ಳೇ ಆರೋಗ್ಯ ಇದ್ರೆ ಸರಿಯಾಗಿ ಯೋಚನೆ ಮಾಡಿ ಒಳ್ಳೇ ನಿರ್ಧಾರ ಮಾಡಕ್ಕೆ ಸಹಾಯ ಆಗುತ್ತೆ.

  • ನೀವು ಶ್ರೀಮಂತರಾಗಿರಲಿ ಬಡವರಾಗಿರಲಿ ಆರೋಗ್ಯ ಕಾಪಾಡಿಕೊಳ್ಳೋಕೆ ಸರಿಯಾದ ಹೆಜ್ಜೆಗಳನ್ನು ತೆಗೆದುಕೊಳ್ಳಿ.

ಈಗ ನೀವೇನು ಮಾಡಬಹುದು

ಜಾಣನಾಗಿರೋ ಒಬ್ಬ ವ್ಯಕ್ತಿ ಸಮಸ್ಯೆಗಳನ್ನ ಗುರುತಿಸಿ ಅದರಿಂದ ತಪ್ಪಿಸಿಕೊಳ್ಳೋಕೆ ಮುಂಚೆನೇ ಹೆಜ್ಜೆಗಳನ್ನು ತೆಗೆದುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾನೆ. ಇದು ನಮ್ಮ ಆರೋಗ್ಯದ ವಿಷಯದಲ್ಲಿ ನೂರಕ್ಕೆ ನೂರು ಸತ್ಯ. ನಮ್ಮನ್ನು, ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ರೆ, ತುಂಬ ಕಾಯಿಲೆಗಳನ್ನು ತಡೆಗಟ್ಟಬಹುದು. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ. ಈ ಮಾತನ್ನು ನಾವು ಯಾವಾಗ್ಲೂ ನೆನಪಿಟ್ಟುಕೊಳ್ಳೋಣ.

ಅಮಿತ್‌ * ಹೀಗಂತಾರೆ: “ನಾವು ನಮ್ಮನ್ನು, ನಮ್ಮ ಮನೆಯನ್ನು ಶುದ್ಧವಾಗಿ ಇಟ್ಟಿದ್ದರಿಂದ ಆಸ್ಪತ್ರೆಗೆ ಹಾಕೋ ದುಡ್ಡನ್ನು ಉಳಿತಾಯ ಮಾಡಕ್ಕೆ ಆಯ್ತು.”

^ ಹೆಸರುಗಳನ್ನು ಬದಲಾಯಿಸಲಾಗಿದೆ.