ಜ್ಞಾನೋಕ್ತಿ 22:1-29
22 ಹೆಚ್ಚು ಆಸ್ತಿಪಾಸ್ತಿಗಿಂತ ಒಳ್ಳೇ ಹೆಸ್ರು ಸಂಪಾದಿಸೋದು ಒಳ್ಳೇದು,+ಬೆಳ್ಳಿಬಂಗಾರಕ್ಕಿಂತ ಗೌರವ* ಗಳಿಸೋದು ಮೇಲು.
2 ಶ್ರೀಮಂತನಾಗಿರಲಿ ಬಡವನಾಗಿರಲಿ,ಇಬ್ರನ್ನೂ ಸೃಷ್ಟಿ ಮಾಡಿದ್ದು ಯೆಹೋವನೇ.+
3 ಜಾಣ ಅಪಾಯ ನೋಡಿ ಅಡಗಿಕೊಳ್ತಾನೆ,ಅನುಭವ ಇಲ್ಲದವನು ಮುಂದೆ ಹೋಗಿ ನಷ್ಟ* ಅನುಭವಿಸ್ತಾನೆ.
4 ದೀನತೆ, ಯೆಹೋವನ ಭಯ ಇದ್ರೆ,ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.+
5 ಕೆಟ್ಟವನ ದಾರಿಯಲ್ಲಿ ಮುಳ್ಳುಗಳು, ಉರ್ಲುಗಳು ಇರುತ್ತೆ,ಆದ್ರೆ ತನ್ನ ಜೀವ ಅಮೂಲ್ಯ ಅನ್ನೋ ಯೋಚ್ನೆ ಇರುವವನು ಕೆಟ್ಟ ದಾರಿಯಿಂದ ದೂರ ಇರ್ತಾನೆ.+
6 ಸರಿ ದಾರಿಯಲ್ಲಿ ನಡಿಯೋಕೆ ಹುಡುಗನಿಗೆ* ತರಬೇತಿ ಕೊಡು,+ವಯಸ್ಸಾದ ಮೇಲೂ ಅವನು ಆ ದಾರಿ ಬಿಟ್ಟು ಹೋಗಲ್ಲ.+
7 ಬಡವನ ಮೇಲೆ ಶ್ರೀಮಂತ ಆಳ್ತಾನೆ,ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ.+
8 ಕೆಟ್ಟದನ್ನ ಬಿತ್ತುವವನು ನಾಶವನ್ನ ಕೊಯ್ತಾನೆ,+ಅವನ ಕ್ರೂರವಾದ ಅಧಿಕಾರ ಅಂತ್ಯ ಕಾಣುತ್ತೆ.*+
9 ಉದಾರವಾಗಿ ಕೊಡುವವನಿಗೆ* ಆಶೀರ್ವಾದ ಸಿಗುತ್ತೆ,ಯಾಕಂದ್ರೆ ಅವನು ಬಡವರ ಜೊತೆ ತನ್ನ ಊಟ ಹಂಚ್ಕೊಳ್ತಾನೆ.+
10 ಗೇಲಿ ಮಾಡುವವ್ರನ್ನ ಓಡಿಸಿಬಿಡು,ಆಗ ಕಿತ್ತಾಟ, ವಾದವಿವಾದ, ಅವಮಾನ ನಿಂತುಹೋಗುತ್ತೆ.
11 ಶುದ್ಧ ಹೃದಯವನ್ನ ಪ್ರೀತಿಸುವವನಿಗೆ, ಹಿತವಾಗಿ ಮಾತಾಡುವವನಿಗೆ,ರಾಜ ಸ್ನೇಹಿತನಾಗ್ತಾನೆ.+
12 ಯೆಹೋವನ ಕಣ್ಣುಗಳು ಜ್ಞಾನ ಇರೋ ವ್ಯಕ್ತಿಯನ್ನ ಕಾದು ಕಾಪಾಡುತ್ತೆ,ಆದ್ರೆ ಆತನು ಮೋಸಗಾರರ ಮಾತುಗಳನ್ನ ತಲೆಕೆಳಗೆ ಮಾಡ್ತಾನೆ.+
13 ಸೋಮಾರಿ “ಹೊರಗೆ ಸಿಂಹ ಇದೆ!
ಪಟ್ಟಣದ ಮುಖ್ಯಸ್ಥಳದಲ್ಲಿ* ಅದು ನನ್ನನ್ನ ಕೊಂದುಹಾಕುತ್ತೆ!”+ ಅಂತಾನೆ.
14 ನಡತೆಗೆಟ್ಟ* ಹೆಂಗಸಿನ ಬಾಯಿ ದೊಡ್ಡ ಗುಂಡಿ,+ಯೆಹೋವನಿಂದ ಶಿಕ್ಷೆ ಸಿಗೋ ವ್ಯಕ್ತಿ ಅದ್ರ ಒಳಗೆ ಬೀಳ್ತಾನೆ.
15 ಹುಡುಗನ ಹೃದಯದಲ್ಲಿ ಮೂರ್ಖತನ ಇರೋದು ಸಹಜ,+ಶಿಸ್ತು ಅನ್ನೋ ಕೋಲು ಅದನ್ನ ತೆಗೆದುಹಾಕುತ್ತೆ.+
16 ಬಡವನಿಗೆ ಮೋಸ ಮಾಡಿ ಆಸ್ತಿ ಕೂಡಿಸ್ಕೊಳ್ಳುವವನು+ಶ್ರೀಮಂತನಿಗೆ ಉಡುಗೊರೆ ಕೊಡುವವನುಇಬ್ರೂ ಬಡತನ ಅನುಭವಿಸ್ತಾರೆ.
17 ವಿವೇಕಿಯ ಮಾತುಗಳನ್ನ ಕಿವಿಗೆ ಹಾಕೊ,+ಆಗ ನಾನು ಕಲಿಸೋ ವಿಷ್ಯಗಳನ್ನ ಅರ್ಥ ಮಾಡ್ಕೊಳ್ತೀಯ.+
18 ಅವು ಸದಾ ನಿನ್ನ ಬಾಯಲ್ಲಿರುತ್ತೆ,+ಅವುಗಳನ್ನ ನಿನ್ನ ಹೃದಯದಲ್ಲಿ ಇಟ್ಕೊ, ಆಗ ನೀನು ಸಂತೋಷವಾಗಿ ಇರ್ತಿಯ.+
19 ಯೆಹೋವನ ಮೇಲೆ ನೀನು ತುಂಬ ನಂಬಿಕೆ ಇಡೋಕೆ,ಇವತ್ತು ನಾನು ನಿನಗೆ ಅದನ್ನೆಲ್ಲ ವಿವರಿಸ್ತಾ ಇದ್ದೀನಿ.
20 ತುಂಬ ಸಲಹೆಗಳನ್ನ, ಮಾರ್ಗದರ್ಶನಗಳನ್ನ,ಈ ಮುಂಚೆನೇ ನಿನಗೋಸ್ಕರ ಬರೆದಿಟ್ಟಿದ್ದೆ.
21 ಸತ್ಯವಾದ, ನೀನು ನಂಬಬಹುದಾದ ಮಾತುಗಳನ್ನ ಕಲಿಸೋಕೆ,ನಿನ್ನನ್ನ ಕಳಿಸಿದವ್ರ ಹತ್ರ ಹೋಗಿ ಸರಿಯಾದ ವರದಿ ಕೊಡೋಕೆ ಆಗೋ ಹಾಗೆ ಕಲಿಸಿದ್ದೀನಿ.
22 ಬಡವ್ರಿಗೆ ದಿಕ್ಕಿಲ್ಲ ಅಂದ್ಕೊಂಡು ಅವ್ರನ್ನ ಕೊಳ್ಳೆಹೊಡಿಬೇಡ,+ದೀನನನ್ನ ಪಟ್ಟಣದ ಬಾಗಿಲಲ್ಲಿ ತುಳಿದುಹಾಕಬೇಡ.+
23 ಯಾಕಂದ್ರೆ ಯೆಹೋವನೇ ಅವ್ರ ಪರವಾಗಿ ವಾದಿಸ್ತಾನೆ,+ಅವ್ರಿಗೆ ಮೋಸ ಮಾಡುವವರ ಜೀವ ತೆಗಿತಾನೆ.
24 ಕೋಪಿಷ್ಠನ ಸಹವಾಸ ಮಾಡಬೇಡ,ಮಾತುಮಾತಿಗೂ ಸಿಟ್ಟುಮಾಡ್ಕೊಳ್ಳೋ ವ್ಯಕ್ತಿ ಜೊತೆ ಸ್ನೇಹ ಬೆಳೆಸಬೇಡ.
25 ಯಾಕಂದ್ರೆ ನೀನು ಕೂಡ ಅವನ ತರ ನಡ್ಕೊಳ್ಳೋಕೆ ಶುರುಮಾಡ್ತೀಯ,ನೀನಾಗೇ ಹೋಗಿ ಉರ್ಲಿಗೆ ಬೀಳ್ತೀಯ.+
26 ಕೈಕುಲುಕಿ ಒಪ್ಪಂದ ಮಾಡ್ಕೊಳ್ಳುವವ್ರ ಮಧ್ಯದಲ್ಲಾಗಲಿಬೇರೆಯವ್ರಿಗೆ ಜಾಮೀನು ಕೊಡುವವ್ರ ಜೊತೆ ಆಗಲಿ ಇರಬೇಡ.+
27 ವಾಪಸ್ ಕೊಡೋಕೆ ನಿನ್ನ ಹತ್ರ ಹಣ ಇಲ್ಲಾಂದ್ರೆ,ನೀನು ಮಲಗೋ ಹಾಸಿಗೆಯನ್ನೇ ಕಿತ್ಕೊಂಡು ಹೋಗ್ತಾರೆ.
28 ನಿನ್ನ ಪೂರ್ವಜರು ಹಾಕಿದ
ಗಡಿಯನ್ನ ಸರಿಸಬೇಡ.+
29 ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ?
ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ,ರಾಜರ ಮುಂದೆ ನಿಲ್ತಾನೆ.+
ಪಾದಟಿಪ್ಪಣಿ
^ ಅಕ್ಷ. “ಮೆಚ್ಚುಗೆ.”
^ ಅಥವಾ “ಅದ್ರ ಪರಿಣಾಮ.”
^ ಅಥವಾ “ಮಗುಗೆ, ಯುವಕನಿಗೆ.”
^ ಅಕ್ಷ. “ಕೋಪದ ದಂಡವನ್ನ ಮುರಿಯಲಾಗುತ್ತೆ.”
^ ಅಕ್ಷ. “ದಯಾದೃಷ್ಟಿ ಇರೋನು.”
^ ಅಕ್ಷ. “ಅಪರಿಚಿತ.” ಜ್ಞಾನೋಕ್ತಿ 2:16 ನೋಡಿ.