ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಕಣ್ಣಿಗೆ ಕಾಣದ ದೇವರ ಗುಣಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿವೆಯಾ?

ಕಣ್ಣಿಗೆ ಕಾಣದ ದೇವರ ಗುಣಗಳು ನಿಮ್ಮ ಕಣ್ಣಿಗೆ ಕಾಣಿಸುತ್ತಿವೆಯಾ?

ಬಣ್ಣಬಣ್ಣದ ಹೂಗಳನ್ನು, ನಕ್ಷತ್ರ ತುಂಬಿದ ಆಕಾಶವನ್ನು ಅಥವಾ ಘನಘರ್ಜನೆ ಮಾಡುವ ಜಲಪಾತವನ್ನು ನೋಡುವಾಗ ಸೃಷ್ಟಿಕರ್ತನ ಕೈಕೆಲಸ ನಿಮಗೆ ಕಾಣಿಸುತ್ತದಾ? ನಮ್ಮ ಸುತ್ತಲಿರುವ ಸೃಷ್ಟಿಯಲ್ಲಿ ಯೆಹೋವನ ಗುಣಗಳು ಸ್ಪಷ್ಟವಾಗಿ ಕಾಣುತ್ತವೆ. (ರೋಮ 1:20) ನಾವು ನೋಡುವಂಥ ವಿಷಯಗಳ ಬಗ್ಗೆ ಯೋಚನೆ ಮಾಡಿದರೆ ದೇವರ ಶಕ್ತಿ, ಪ್ರೀತಿ, ವಿವೇಕ, ನ್ಯಾಯ ಮತ್ತು ಉದಾರತೆಯನ್ನು ಖಂಡಿತ ನೋಡುತ್ತೇವೆ.—ಕೀರ್ತ 104:24.

ಯೆಹೋವನು ಸೃಷ್ಟಿ ಮಾಡಿರುವ ಯಾವ ವಿಷಯಗಳನ್ನು ನೀವು ದಿನಾ ನೋಡುತ್ತೀರಿ? ನೀವು ನಗರದಲ್ಲಿ ಇರುವವರಾದರೂ ಪಕ್ಷಿಗಳನ್ನು ಅಥವಾ ಮರಗಳನ್ನು ನೋಡಿರುತ್ತೀರಿ. ಯೆಹೋವನ ಸೃಷ್ಟಿಗೆ ಗಮನ ಕೊಟ್ಟರೆ ನಮ್ಮಲ್ಲಿರುವ ಒತ್ತಡ ಕಡಿಮೆ ಆಗುತ್ತದೆ, ನಾವು ನಮ್ಮ ಸಮಸ್ಯೆಗಳ ಬಗ್ಗೆನೇ ಯೋಚನೆ ಮಾಡುತ್ತಾ ಇರಲ್ಲ. ಯೆಹೋವನಿಗೆ ಸದಾಕಾಲಕ್ಕೂ ನಮ್ಮನ್ನು ನೋಡಿಕೊಳ್ಳುವ ಸಾಮರ್ಥ್ಯ ಇದೆ ಅನ್ನುವ ನಂಬಿಕೆ ಇನ್ನೂ ಹೆಚ್ಚಾಗುತ್ತದೆ. (ಮತ್ತಾ 6:25-32) ನಿಮಗೆ ಮಕ್ಕಳಿದ್ದರೆ ಅವರು ಯೆಹೋವನ ಅದ್ಭುತ ಗುಣಗಳನ್ನು ತಿಳಿದುಕೊಳ್ಳಲು ಸಹಾಯ ಮಾಡಿ. ನಾವು ಸೃಷ್ಟಿಯನ್ನು ನೋಡಿ ಆನಂದಿಸುವಾಗ ನಮ್ಮ ಸೃಷ್ಟಿಕರ್ತನಿಗೆ ಹೆಚ್ಚು ಆಪ್ತರಾಗುತ್ತೇವೆ.—ಕೀರ್ತ 8:3, 4.

ಸೃಷ್ಟಿಯ ಅದ್ಭುತಗಳು ದೇವರ ಮಹಿಮೆಯನ್ನು ಪ್ರಕಟಿಸುತ್ತವೆಬೆಳಕು ಮತ್ತು ಬಣ್ಣ ವಿಡಿಯೋ ನೋಡಿ ಮತ್ತು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ನಾವು ಬಣ್ಣಗಳನ್ನು ನೋಡಲು ವರ್ಣದ್ರವ್ಯಗಳು (ಪಿಗ್ಮೆಂಟ್ಸ್‌) ಹೇಗೆ ಸಹಾಯ ಮಾಡುತ್ತವೆ?

  • ಬೇರೆ ಬೇರೆ ಕೋನದಿಂದ ನೋಡುವಾಗ ಬೇರೆ ಬೇರೆ ಬಣ್ಣ ಕಾಣುವುದಕ್ಕೆ ಏನು ಕಾರಣ?

  • ನಮಗೆ ಆಕಾಶದಲ್ಲಿ ಯಾಕೆ ಬೇರೆಬೇರೆ ಬಣ್ಣಗಳು ಕಾಣಿಸುತ್ತವೆ?

  • ನಿಮ್ಮ ಮನೆ ಸುತ್ತಮುತ್ತ ಇರುವ ಸೃಷ್ಟಿಯಲ್ಲಿ ಯಾವ ಆಕರ್ಷಕ ಬಣ್ಣಗಳನ್ನು ನೀವು ನೋಡಿದ್ದೀರಿ?

  • ಪ್ರಕೃತಿಯನ್ನು ಗಮನ ಕೊಟ್ಟು ನೋಡಲು ಯಾಕೆ ಸಮಯ ಮಾಡಿಕೊಳ್ಳಬೇಕು?

ಯೆಹೋವನ ಗುಣಗಳ ಬಗ್ಗೆ ಬೆಳಕು ಮತ್ತು ಬಣ್ಣ ಏನು ತಿಳಿಸುತ್ತವೆ?