ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

1 ನಾವು ಯಾಕೆ ಪ್ರಾರ್ಥನೆ ಮಾಡಬೇಕು?

1 ನಾವು ಯಾಕೆ ಪ್ರಾರ್ಥನೆ ಮಾಡಬೇಕು?

ಪ್ರಾರ್ಥನೆ. ಜನರಲ್ಲಿ ಕುತೂಹಲ ಮತ್ತು ಆಸಕ್ತಿ ತರೋ ವಿಷ್ಯನೇ ಪ್ರಾರ್ಥನೆ. ಈ ಸರಣಿಯಲ್ಲಿ, ಪ್ರಾರ್ಥನೆ ಬಗ್ಗೆ ಇರೋ ಏಳು ಪ್ರಶ್ನೆಗಳು ಮತ್ತು ಇದರ ಬಗ್ಗೆ ಬೈಬಲ್‌ ಕೊಡೋ ಉತ್ತರಗಳನ್ನ ತಿಳಿದುಕೊಳ್ಳಿ. ಪ್ರಾರ್ಥನೆ ಹೇಗೆ ಮಾಡೋದು, ನೀವು ಈಗಾಗಲೇ ಪ್ರಾರ್ಥನೆ ಮಾಡುತ್ತಿದ್ದರೆ, ಇನ್ನೂ ಚೆನ್ನಾಗಿ ಮಾಡೋಕೆ ಈ ಲೇಖನ ನಮಗೆ ಸಹಾಯ ಮಾಡುತ್ತೆ.

ಭೂಮಿಯಾದ್ಯಂತ ಪ್ರತಿಯೊಂದು ಸಂಸ್ಕೃತಿಯಲ್ಲಿ ಮತ್ತು ಧರ್ಮದಲ್ಲಿ ಜನರು ಪ್ರಾರ್ಥನೆ ಮಾಡುತ್ತಾರೆ. ಒಬ್ಬರೇ ಇರುವಾಗ, ಗುಂಪಾಗಿ ಇರುವಾಗ ಪ್ರಾರ್ಥನೆ ಮಾಡುತ್ತಾರೆ. ಚರ್ಚುಗಳಲ್ಲಿ, ದೇವಾಲಯದಲ್ಲಿ, ಸಭಾಮಂದಿರಗಳಲ್ಲಿ, ಮಸೀದಿಗಳಲ್ಲಿ, ಗುಡಿಗಳಲ್ಲಿಯೂ ಮಾಡುತ್ತಾರೆ. ಅವರು ಪ್ರಾರ್ಥನೆ ಮಾಡುವಾಗ ಮಣಿಗಳುಳ್ಳ ಜಪಸರವನ್ನ, ಪ್ರಾರ್ಥನಾ ಚಕ್ರಗಳನ್ನ, ಮೂರ್ತಿಗಳನ್ನ, ಪ್ರಾರ್ಥನೆ ಪುಸ್ತಕಗಳನ್ನ ಅಥವಾ ಬೋರ್ಡ್‌ಗಳಲ್ಲಿ ಬರೆದ ಪ್ರಾರ್ಥನೆಗಳನ್ನ ಶೆಲ್ಫ್‌ ಮೇಲೆ ನೇತುಹಾಕ್ತಾರೆ.

ಕೇವಲ ಮನುಷ್ಯರು ಮಾತ್ರ ಪ್ರಾರ್ಥನೆ ಮಾಡೋಕೆ ಆಗುತ್ತೆ. ಆದರೆ ಪ್ರಾಣಿಗಳ ತರ ನಾವೂ ಊಟ ಮಾಡ್ತೀವಿ, ಉಸಿರಾಡ್ತೀವಿ, ನೀರು ಕುಡ್ತೀವಿ. ಅವುಗಳ ತರ ನಾವು ಹುಟ್ತೀವಿ, ಸಾಯ್ತೀವಿ. (ಪ್ರಸಂಗಿ 3:19) ಆದರೆ ಪ್ರಾರ್ಥನೆ ಮಾಡೋ ವಿಷಯಕ್ಕೆ ಬಂದರೆ ಕೇವಲ ಮನುಷ್ಯರು ಮಾತ್ರ ಮಾಡೋಕೆ ಆಗುತ್ತೆ. ಯಾಕೆ?

ಪ್ರಾರ್ಥನೆ ಮಾಡೋ ಜನರು ಅದೃಶ್ಯ ವ್ಯಕ್ತಿ ಜೊತೆ ಮಾತಾಡ್ತಾರೆ, ಆ ವ್ಯಕ್ತಿ ತುಂಬ ಶ್ರೇಷ್ಠ ಮತ್ತು ಪವಿತ್ರ ಆಗಿದ್ದಾನೆ. ಪ್ರಾರ್ಥನೆ ಮಾಡೋದು ತುಂಬ ಅಗತ್ಯ ಅಂತ ನಮ್ಮನ್ನ ಸೃಷ್ಟಿ ಮಾಡಿರೋ ರೀತಿಯಿಂದ ಗೊತ್ತಾಗುತ್ತೆ ಅಂತ ಬೈಬಲ್‌ ಹೇಳುತ್ತೆ. (ಪ್ರಸಂಗಿ 3:11) ಯೇಸು ಹೀಗೆ ಹೇಳಿದನು: “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು ಖುಷಿಯಾಗಿ ಇರ್ತಾರೆ.”—ಮತ್ತಾಯ 5:3.

ನಮಗೆ “ದೇವರಿಂದ ಮಾರ್ಗದರ್ಶನ ಪಡೆಯೋಕೆ ಆಸೆ ಇದೆ.” ಜನರು ಆರಾಧನಾ ಸ್ಥಳಗಳನ್ನ ಮಾಡಿ ದೇವರಿಗೆ ಪ್ರಾರ್ಥನೆ ಮಾಡ್ತಾರೆ. ಇನ್ನೂ ಕೆಲವರಿಗೆ, ಬೇರೆಯವರಿಂದ ಮಾರ್ಗದರ್ಶನ ಪಡೆಯೋ ಅಗತ್ಯ ಇಲ್ಲ, ಅವರೇ ಸ್ವಂತ ನಿರ್ಣಯ ತಗೊಳ್ಳಬಹುದು ಅಂತ ಅನಿಸುತ್ತೆ. ಅದೇ ಸಮಯದಲ್ಲಿ, ಇನ್ನು ಕೆಲವರಿಗೆ, ಬೇರೆಯವರು ತಮಗೆ ಸರಿಯಾದ ದಾರಿಯನ್ನ ತೋರಿಸಿದ್ರೆ ಚೆನ್ನಾಗಿರುತ್ತೆ ಅಂತ ಅಂದುಕೊಳ್ಳುತ್ತಾರೆ. ಆದರೆ ನಿಜವಾಗಲೂ ಬೇರೆಯವರು ನಮಗೆ ಸರಿಯಾದ ದಾರಿಯನ್ನ ತೋರಿಸೋಕೆ ಆಗುತ್ತಾ? ಒಂದಲ್ಲ ಒಂದು ದಿನ ಅವರು ಕೂಡ ಸತ್ತುಹೋಗ್ತಾರೆ. ಮುಂದೆ ಏನಾಗುತ್ತೆ, ಏನಾಗಲ್ಲ ಅಂತ ಒಬ್ಬ ವ್ಯಕ್ತಿ ಹೇಳೋಕೆ ಆಗುತ್ತಾ? ಖಂಡಿತ ಇಲ್ಲ. ಕೇವಲ ದೇವರು ಮಾತ್ರ ನಮಗೆ ಸರಿಯಾದ ದಾರಿಯನ್ನ ತೋರಿಸೋಕೆ ಆಗುತ್ತೆ. ಯಾಕಂದ್ರೆ ಆತನು ನಮಗಿಂತ ಹೆಚ್ಚು ಬುದ್ಧಿ, ಶಕ್ತಿ ಮತ್ತು ಶಾಶ್ವತವಾಗಿ ಇರೋ ದೇವರಾಗಿದ್ದಾನೆ. ಆದರೆ ನಮಗೆ ಯಾವಾಗ ಮಾರ್ಗದರ್ಶನ ಬೇಕಾಗಬಹುದು?

ಯೋಚನೆ ಮಾಡಿ: ಒಂದು ವಿಷ್ಯದ ಬಗ್ಗೆ ನಿರ್ಣಯ ಮಾಡಬೇಕಾದಾಗ ಅದನ್ನ ಹೇಗೆ ಮಾಡೋದು ಅನ್ನೋ ಸನ್ನಿವೇಶ ನಿಮಗೆ ಯಾವತ್ತಾದ್ರೂ ಬಂದಿದ್ಯಾ? ನಿಮ್ಮ ಮನಸ್ಸಲ್ಲಿ ಒಂದು ಪ್ರಶ್ನೆ ಇದೆ, ಆದರೆ ಅದಕ್ಕೆ ಯಾರೂ ಉತ್ತರ ಕೊಡ್ತಿಲ್ಲ. ನೀವು ತುಂಬ ಪ್ರೀತಿಸೋ ವ್ಯಕ್ತಿ ತೀರಿಹೋಗಿದ್ದಾರೆ ಆಗ ನಿಮಗೆ ಸಮಾಧಾನ ಮಾಡೋಕೆ ಯಾರಾದ್ರೂ ಬೇಕಿತ್ತಾ? ನೀವು ತಪ್ಪು ಮಾಡಿದ್ದೀರಾ, ನಿಮಗೆ ಕ್ಷಮೆ ಸಿಗಬೇಕು ಅಂತ ಬಯಸ್ತೀರಾ?

ನಮಗೆ ಈ ತರ ಸನ್ನಿವೇಶಗಳು ಬಂದಾಗ ನಾವು ಪ್ರಾರ್ಥನೆ ಮಾಡಬಹುದು ಅಂತ ಬೈಬಲ್‌ ಹೇಳುತ್ತೆ. ಪ್ರಾರ್ಥನೆ ಬಗ್ಗೆ ಬೈಬಲ್‌ನಲ್ಲಿ ತುಂಬ ವಿಷ್ಯಗಳಿವೆ. ಅದರಲ್ಲಿ, ದೇವರ ನಂಬಿಗಸ್ತ ಸೇವಕರು ಮಾಡಿದ ಪ್ರಾರ್ಥನೆಗಳಿವೆ. ಅವರು ಸಾಂತ್ವನ, ಮಾರ್ಗದರ್ಶನ, ಕ್ಷಮೆ, ಪ್ರಶ್ನೆಗಳಿಗೆ ಉತ್ತರ ತಿಳಿಯೋಕೆ ಪ್ರಾರ್ಥನೆ ಮಾಡಿದ್ದಾರೆ.—ಕೀರ್ತನೆ 23:3; 71:21; ದಾನಿಯೇಲ 9:4, 5, 19; ಹಬಕ್ಕೂಕ 1:3.

ಇವರೆಲ್ಲರು ಬೇರೆ-ಬೇರೆ ಕಾರಣಗಳಿಗೆ ಪ್ರಾರ್ಥನೆ ಮಾಡಿದ್ದಾರೆ. ಆದರೆ ಯಾರಿಗೆ ಪ್ರಾರ್ಥನೆ ಮಾಡಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈಗಿನ ಜನರು ಯಾರಿಗೆ ಪ್ರಾರ್ಥನೆ ಮಾಡಬೇಕು ಅನ್ನೋ ವಿಷ್ಯದ ಬಗ್ಗೆ ಗಮನ ಕೊಡಲ್ಲ. ಆದರೆ ಈ ವಿಷ್ಯನ ನಾವು ತಿಳಿದುಕೊಳ್ಳೋದು ತುಂಬ ಮುಖ್ಯ. ಯಾಕಂದ್ರೆ ಆಗ ಮಾತ್ರ ನಮ್ಮ ಪ್ರಾರ್ಥನೆಗೆ ಉತ್ತರ ಸಿಗುತ್ತೆ.