ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’

‘ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’

‘ನಾನು ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’

“ಲೋಕದಲ್ಲಿ ನೀನು ಕೊಟ್ಟ ಶಿಷ್ಯರಿಗೆ ನಿನ್ನ ಹೆಸ್ರನ್ನ ಚೆನ್ನಾಗಿ ಹೇಳಿಕೊಟ್ಟಿದ್ದೀನಿ. . . . ನಾನು ನಿನ್ನ ಹೆಸ್ರನ್ನ ಇವ್ರಿಗೆ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ, ಇನ್ನೂ ಹೇಳ್ಕೊಡ್ತೀನಿ.”—ಯೋಹಾನ 17:6, 26.

ಈ ಮಾತಿನ ಅರ್ಥ: ಯೇಸು ಸೇವೆಯಲ್ಲಿ ದೇವರ ಹೆಸರನ್ನ ಬಳಸುವ ಮೂಲಕ ನಮಗೆ ದೇವರ ಹೆಸರನ್ನ ಹೇಳಿಕೊಟ್ಟನು. ಅಷ್ಟೇ ಅಲ್ಲ ದೇವರ ವಾಕ್ಯವನ್ನ ಓದಿದಾಗೆಲ್ಲಾ ದೇವರ ಹೆಸರನ್ನ ಉಚ್ಛರಿಸಿದನು. (ಲೂಕ 4:16-21) ಅವನು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸೋಕೆ ಹೇಳಿಕೊಟ್ಟನು: “ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.”—ಲೂಕ 11:2.

ಒಂದನೇ ಶತಮಾನದ ಕ್ರೈಸ್ತರು ದೇವರ ಹೆಸರನ್ನ ಉಪಯೋಗಿಸಿದರು: ಅಪೊಸ್ತಲ ಪೇತ್ರ ಯೆರೂಸಲೇಮಿನಲ್ಲಿದ್ದ ದೊಡ್ಡವರಿಗೆ, ದೇವರು ಯೆಹೂದ್ಯರಲ್ಲದ ಜನರನ್ನ ‘ತನ್ನ ಹೆಸರಿಗಾಗಿ ಆರಿಸ್ಕೊಂಡಿದ್ದಾನೆ’ ಅಂತ ಹೇಳಿದ. (ಅಪೊಸ್ತಲರ ಕಾರ್ಯ 15:14) “ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ” ಅಂತ ಅಪೊಸ್ತಲರು ಮತ್ತು ಇನ್ನಿತರರು ಸಾರಿದ್ರು. (ಅಪೊಸ್ತಲರ ಕಾರ್ಯ 2:21; ರೋಮನ್ನರಿಗೆ 10:13) ಅವರು ದೇವರ ಹೆಸರನ್ನ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದಲ್ಲೂ ಬಳಸಿದರು. ಯೆಹೂದಿ ನಿಯಮಗಳಿರುವ ದ ಟೊಸೆಫ್ಟ ಅನ್ನೋ ಪುಸ್ತಕವನ್ನ ಕ್ರಿಸ್ತಶಕ ಸುಮಾರು 300ರಷ್ಟಕ್ಕೆ ಬರೆದು ಮುಗಿಸಲಾಯಿತು. ಅದರಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥವನ್ನ ವಿರೋಧಿಗಳು ಸುಟ್ಟುಹಾಕಿದ್ದರ ಬಗ್ಗೆ ಇದೆ. ಯೆಹೂದಿ ನಿಯಮಗಳಿರೋ ಒಂದು ಹಳೇ ಪುಸ್ತಕ ಹೇಳುವ ಪ್ರಕಾರ, ‘ಕ್ರೈಸ್ತರನ್ನ ವಿರೋಧಿಸುತ್ತಿದ್ದವರು ಕ್ರೈಸ್ತರು ಬರೆದ ಪುಸ್ತಕಗಳನ್ನ ಅಂದರೆ ಇವಾಂಜೆಲಿಸ್ಟ್‌ ಮತ್ತು ಮಿನಿಮ್‌ [ಯೆಹೂದ್ಯ ಕ್ರೈಸ್ತರ ಗ್ರಂಥ ಆಗಿರಬಹುದು] ಪುಸ್ತಕಗಳನ್ನ ಸುಟ್ಟು ಹಾಕಿಬಿಟ್ಟರು. ಅದರಲ್ಲಿ ದೇವರ ಹೆಸರು ಇದ್ದರೂ ಅದನ್ನ ನಾಶ ಮಾಡಿದರು. ಅದರಲ್ಲಿ ಕೆಲವು ಪುಸ್ತಕಗಳು ಯಾವುದಂದ್ರೆ ಮತ್ತಾಯ, ಮಾರ್ಕ, ಲೂಕ, ಯೋಹಾನ.’

ಈಗ ಯಾರು ದೇವರ ಹೆಸರನ್ನ ಬಳಸುತ್ತಿದ್ದಾರೆ? ಅಮೆರಿಕದ ನ್ಯಾಷನಲ್‌ ಕೌನ್ಸಿಲ್‌ ಆಫ್‌ ದ ಚರ್ಚಸ್‌ ಆಫ್‌ ಕ್ರೈಸ್ಟ್‌ ಅವರ ದ ರಿವೈಸ್ಡ್‌ ಸ್ಟಾಂಡರ್ಡ್‌ ವರ್ಷನ್‌ ಆಫ್‌ ದ ಬೈಬಲ್‌ನ ಮುನ್ನುಡಿ ಹೀಗೆ ಹೇಳುತ್ತೆ: ‘ಸತ್ಯ ದೇವರು ಒಬ್ಬನೇ. ಆದ್ದರಿಂದ ಅವನಿಗೂ ಬೇರೆ ದೇವರುಗಳಿಗೂ ಇರೋ ವ್ಯತ್ಯಾಸವನ್ನ ತಿಳಿಸಲಿಕ್ಕಾಗಿ ಚರ್ಚಿನಲ್ಲಿರೋರು ದೇವರಿಗೆ ಯಾವ ಹೆಸರನ್ನ ಬಳಸೋದೂ ತಪ್ಪು. ಹಾಗಾಗಿ ಯೇಸು ಹುಟ್ಟೋಕು ಎಷ್ಟೋ ವರ್ಷಗಳ ಮುಂಚಿನಿಂದಾನೇ ಯೆಹೂದಿಗಳು ದೇವರ ಹೆಸರನ್ನ ಬಳಸೋದನ್ನ ನಿಲ್ಲಿಸಿಬಿಟ್ಟಿದ್ದರು.’ ಅದಕ್ಕೆ ಅವರು ದೇವರ ಹೆಸರು ಇರುವ ಕಡೆಯೆಲ್ಲಾ “ಕರ್ತನು” ಅಂತ ಹಾಕಿದ್ದಾರೆ. ಇತ್ತೀಚಿಗೆ ವ್ಯಾಟಿಕನ್‌, ಬಿಷಪ್‌ಗಳಿಗೆ, ‘ಪ್ರಾರ್ಥನೆಗಳಲ್ಲಿ ಮತ್ತು ಹಾಡುಗಳಲ್ಲಿ ಯೆಹೋವ a ಅನ್ನೋ ದೇವರ ಹೆಸರನ್ನ ಉಪಯೋಗಿಸೋದಾಗಲಿ ಉಚ್ಚರಿಸೋದಾಗಲಿ ಮಾಡಬಾರದು ಅಂತ ಹೇಳಿತು.’

ಇವತ್ತು ಯಾರು ದೇವರ ಹೆಸರನ್ನ ಉಪಯೋಗಿಸುತ್ತಿದ್ದಾರೆ? ಕಿರ್ಗಿಸ್ತಾನದಲ್ಲಿರುವ ಸರ್ಗೆ ಅನ್ನೋ ಹುಡುಗ ಒಂದು ಫಿಲಂ ನೋಡಿದ. ಅದರಲ್ಲಿ ದೇವರ ಹೆಸರು ಯೆಹೋವ ಅಂತ ಕೇಳಿಸಿಕೊಂಡ. ಸುಮಾರು ಹತ್ತು ವರ್ಷಗಳ ತನಕ ಅವನು ದೇವರ ಈ ಹೆಸರನ್ನ ಬೇರೆಲ್ಲೂ ಕೇಳಿಸಿಕೊಂಡಿಲ್ಲ. ಆಮೇಲೆ ಅವನು ಅಮೇರಿಕಕ್ಕೆ ಹೋದ. ಅಲ್ಲಿ ಅವನಿಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. ಸರ್ಗೆಗೆ ಅವರು ಬೈಬಲಿನಿಂದ ದೇವರ ಹೆಸರನ್ನು ತೋರಿಸಿಕೊಟ್ಟರು. ಯೆಹೋವ ಅನ್ನೋ ಹೆಸರನ್ನ ಉಪಯೋಗಿಸುವ ಒಂದು ಗುಂಪಿನ ಜನರಿದ್ದಾರೆ ಅಂತ ಗೊತ್ತಾದಾಗ ಸರ್ಗೆಗೆ ತುಂಬ ಖುಷಿಯಾಯಿತು. ವೆಬ್ಟರ್ಸ್‌ ಥರ್ಡ್‌ ನ್ಯೂ ಇಂಟರ್‌ನ್ಯಾಷನಲ್‌ ಡಿಕ್ಷನರಿಯಲ್ಲಿ “ಜೆಹೋವ ಗೋಡ್‌” ಅನ್ನೋದಕ್ಕೆ ಈ ಅರ್ಥ ಇದೆ: “ಯೆಹೋವನ ಸಾಕ್ಷಿಗಳು ಆರಾಧಿಸುವ ಒಬ್ಬನೇ ಒಬ್ಬ ಸರ್ವೋನ್ನತ ದೇವರು.”

[ಪಾದಟಿಪ್ಪಣಿ]

a ಇಂಗ್ಲಿಷ್‌ನಲ್ಲಿ ದೇವರ ಹೆಸರನ್ನ “ಜೆಹೋವ” ಅಂತ ಹೇಳುತ್ತಾರೆ.