ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 5

ಮಹಾ ಜಲಪ್ರಳಯ—ಯಾರು ದೇವರ ಮಾತಿಗೆ ಕಿವಿಗೊಟ್ಟರು?

ಮಹಾ ಜಲಪ್ರಳಯ—ಯಾರು ದೇವರ ಮಾತಿಗೆ ಕಿವಿಗೊಟ್ಟರು?

ನೋಹನ ಕಾಲದಲ್ಲಿ ಹೆಚ್ಚಿನ ಜನರು ಕೆಟ್ಟ ಕೆಲಸಗಳನ್ನೇ ಮಾಡುತ್ತಿದ್ದರು. ಆದಿಕಾಂಡ 6:5

ಆದಾಮ ಹವ್ವರಿಗೆ ಮಕ್ಕಳು ಹುಟ್ಟಿದರು. ಇವರ ಸಂತಾನದಿಂದ ಭೂಮಿಯ ಮೇಲೆ ಜನರು ಹೆಚ್ಚುತ್ತಾ ಹೋದರು. ಅದೇ ಸಮಯದಲ್ಲಿ, ಸ್ವರ್ಗದಲ್ಲಿ ಕೆಲವು ದೇವದೂತರು ಸೈತಾನನ ಪಕ್ಷವಹಿಸಿ ದೇವರ ವಿರುದ್ಧ ದಂಗೆಯೆದ್ದರು.

ಅವರು ಭೂಮಿಗೆ ಬಂದು ಪುರುಷರ ರೂಪವನ್ನು ಅವತರಿಸಿ ಸ್ತ್ರೀಯರನ್ನು ಮದುವೆಯಾದರು. ಅವರಿಗೆ ಹುಟ್ಟಿದ ಗಂಡುಮಕ್ಕಳು ಸಾಮಾನ್ಯ ಮನುಷ್ಯರಂತಿರಲಿಲ್ಲ. ಅತಿಯಾದ ಬಲ ಸಾಮರ್ಥ್ಯವನ್ನು ಹೊಂದಿದ್ದ ಕ್ರೂರಿಗಳಾಗಿದ್ದರು.

ಹೀಗೆ, ಲೋಕವೆಲ್ಲ ಕೆಟ್ಟ ಜನರಿಂದ ತುಂಬಿತು. ಆ ಕಾಲದಲ್ಲಿ ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿತ್ತು ಮತ್ತು ಹೃದಯದಲ್ಲಿ ಅವರು ಯೋಚಿಸುವುದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು’ ಎಂದು ಬೈಬಲ್‌ ಹೇಳುತ್ತದೆ.

ನೋಹನು ದೇವರ ಮಾತಿಗೆ ಕಿವಿಗೊಟ್ಟು ನಾವೆ ಕಟ್ಟಿದನು. ಆದಿಕಾಂಡ 6:13, 14, 18, 19, 22

ನೋಹನು ಒಳ್ಳೇ ಮನುಷ್ಯನಾಗಿದ್ದನು. ಯೆಹೋವನು ಅವನನ್ನು ಮೆಚ್ಚಿದನು ಹಾಗೂ ಮಹಾ ಜಲಪ್ರಳಯದ ಮೂಲಕ ಕೆಟ್ಟ ಜನರನ್ನು ನಾಶಮಾಡುವೆನೆಂದು ಅವನಿಗೆ ತಿಳಿಸಿದನು.

ಅಲ್ಲದೆ, ದೊಡ್ಡ ಹಡಗೊಂದನ್ನು ಕಟ್ಟಿ ಅದರೊಳಗೆ ಅವನ ಮನೆಯವರನ್ನೂ ಎಲ್ಲಾ ಜಾತಿಯ ಪ್ರಾಣಿಪಕ್ಷಿಗಳನ್ನೂ ಕರೆತರುವಂತೆ ಹೇಳಿದನು. ಈ ದೊಡ್ಡ ಹಡಗನ್ನು ನಾವೆ ಎಂದೂ ಕರೆಯುತ್ತಾರೆ.

ಜಲಪ್ರಳಯ ಬರುವುದೆಂದು ನೋಹನು ಜನರಿಗೆ ಎಚ್ಚರಿಸುತ್ತಾ ಇದ್ದನು. ಆದರೆ ಜನರು ಅವನ ಎಚ್ಚರಿಕೆಗೆ ಕಿವಿಗೊಡಲಿಲ್ಲ. ಕೆಲವರು ಗೇಲಿಮಾಡಿದರು ಇನ್ನೂ ಕೆಲವರು ಅವನನ್ನು ದ್ವೇಷಿಸಿದರು.

ನಾವೆಯನ್ನು ಕಟ್ಟಿದ ಮೇಲೆ ನೋಹನು ಪ್ರಾಣಿಪಕ್ಷಿಗಳನ್ನು ಅದರೊಳಗೆ ಕರೆತಂದನು.