ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಭಾಗ 8

ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?

ಯೇಸುವಿನ ಮರಣ ನಮಗೇಕೆ ಮಹತ್ವವಾಗಿದೆ?

ಯೇಸು ಮರಣವನ್ನಪ್ಪಿದ್ದು ನಾವು ಜೀವಿಸಲೆಂದೇ. ಯೋಹಾನ 3:16

ಯೇಸು ಮರಣ ಹೊಂದಿ ಮೂರನೆಯ ದಿನದಂದು ಕೆಲವು ಸ್ತ್ರೀಯರು ಯೇಸುವಿನ ಸಮಾಧಿಯ ಬಳಿ ಹೋದರು. ಆದರೆ ಅದು ಖಾಲಿಯಾಗಿತ್ತು. ಯೇಸುವನ್ನು ಯೆಹೋವನು ಪುನರುತ್ಥಾನಗೊಳಿಸಿದ್ದನು.

ಪುನರುತ್ಥಾನದ ನಂತರ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು.

ಯೆಹೋವನು ಯೇಸುವನ್ನು ಬಲಿಷ್ಠ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಿ ಅವನಿಗೆ ಅಮರತ್ವ ಕೊಟ್ಟನು. ಯೇಸು ಸ್ವರ್ಗಕ್ಕೆ ಏರಿಹೋಗುವುದನ್ನು ಅವನ ಶಿಷ್ಯರು ನೋಡಿದರು.

 ಯೆಹೋವನು ಯೇಸುವನ್ನು ಪುನರುತ್ಥಾನಗೊಳಿಸಿ ದೇವರ ರಾಜ್ಯದ ಅರಸನಾಗಿ ನೇಮಿಸಿದನು. ದಾನಿಯೇಲ 7:13, 14

ಯೇಸು ತನ್ನ ಜೀವವನ್ನು ಅರ್ಪಿಸಿದ್ದು ಮಾನವಕುಲವನ್ನು ಪಾಪ ಮರಣದ ಬಂಧನದಿಂದ ಬಿಡಿಸುವುದಕ್ಕಾಗಿ. (ಮತ್ತಾಯ 20:28) ಈ ಬಲಿದಾನದ ಏರ್ಪಾಡಿನ ಮೂಲಕ ದೇವರು ನಮಗೆ ಸದಾಕಾಲ ಜೀವಿಸುವ ಅವಕಾಶ ನೀಡುತ್ತಾನೆ.

ಸ್ವರ್ಗದಲ್ಲಿ ಯೆಹೋವನು ಯೇಸುವನ್ನು ರಾಜನಾಗಿ ನೇಮಿಸಿದನು. ಯೇಸು 1,44,000 ಸಹರಾಜರೊಂದಿಗೆ ಈ ಭೂಮಿಯನ್ನು ಆಳುತ್ತಾನೆ. ಭೂಮಿಯಿಂದ ಸ್ವರ್ಗಕ್ಕೆ ಪುನರುತ್ಥಾನಗೊಂಡ ನೀತಿವಂತ ಜನರೇ ಈ 1,44,000 ಸಹರಾಜರು. ಯೇಸು ಹಾಗೂ ಈ ಸಹರಾಜರು ಸೇರಿ ಸ್ವರ್ಗದಲ್ಲಿ ಒಂದು ನೀತಿಯುತ ಸರಕಾರವನ್ನು ರಚಿಸುತ್ತಾರೆ. ಇದೇ ದೇವರ ರಾಜ್ಯ.—ಪ್ರಕಟನೆ 14:1-3.

ದೇವರ ರಾಜ್ಯವು ಭೂಮಿಯನ್ನು ಪರದೈಸನ್ನಾಗಿ ಮಾಡುವುದು. ಯುದ್ಧ, ಅಪರಾಧ, ಬಡತನ, ಆಹಾರದ ಕೊರತೆ ಮುಂತಾದವು ಅಲ್ಲಿರುವುದಿಲ್ಲ. ಜನರು ಸುಖಸಂತೋಷದಿಂದ ಬಾಳುವರು.—ಕೀರ್ತನೆ 145:16.