ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಭಾಗ 9

ಪರದೈಸ್‌ ಯಾವಾಗ ಬರುವುದು?

ಪರದೈಸ್‌ ಯಾವಾಗ ಬರುವುದು?

ಭೂಮಿಯಲ್ಲಿ ತುಂಬಿರುವ ಕಷ್ಟಸಂಕಟಗಳು ದೇವರ ರಾಜ್ಯವು ಬೇಗನೆ ಬರಲಿದೆ ಎಂದು ಸೂಚಿಸುತ್ತವೆ. ಲೂಕ 21:10, 11; 2 ತಿಮೊಥೆಯ 3:1-5

ನಮ್ಮ ದಿನಗಳಲ್ಲಿ ನಡೆಯುತ್ತಿರುವ ಅನೇಕ ಸಂಗತಿಗಳ ಕುರಿತು ಬೈಬಲ್‌ನಲ್ಲಿ ಮೊದಲೇ ಬರೆದಿಡಲಾಗಿದೆ. ಜನರಲ್ಲಿ ಹಣದಾಸೆ, ಹೆತ್ತವರಿಗೆ ಅವಿಧೇಯತೆ, ಕ್ರೂರತನ, ಸುಖಭೋಗಗಳೆಡೆಗೆ ಮೋಹ ಹೆಚ್ಚೆಚ್ಚಾಗಿ ಇರುವವೆಂದು ಅದು ತಿಳಿಸಿತ್ತು.

ಭಾರಿ ಭೂಕಂಪಗಳು, ಯುದ್ಧಗಳು, ಆಹಾರದ ಕೊರತೆ ಇರುವವು ಮತ್ತು ಎಲ್ಲೆಲ್ಲೂ ರೋಗರುಜಿನ ತಲೆದೋರುವವು ಎಂದೂ ತಿಳಿಸಿತ್ತು. ಈ ಸಂಗತಿಗಳೆಲ್ಲ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ.

ಅಲ್ಲದೇ ಯೇಸು ಹೇಳಿದಂತೆ ದೇವರ ರಾಜ್ಯದ ಸುವಾರ್ತೆಯನ್ನು ಇಡೀ ಭೂಮಿಯಲ್ಲಿ ಸಾರಲಾಗುವುದು.—ಮತ್ತಾಯ 24:14.

 ದೇವರ ರಾಜ್ಯವು ಕೆಟ್ಟತನವನ್ನು ಇಲ್ಲದಂತೆ ಮಾಡುತ್ತದೆ. 2 ಪೇತ್ರ 3:13

ಯೆಹೋವನು ಎಲ್ಲ ಕೆಟ್ಟ ಜನರನ್ನು ಬೇಗನೆ ನಾಶಮಾಡುವನು.

ಸೈತಾನ ಮತ್ತು ದೆವ್ವಗಳು ದಂಡನೆಗೊಳಗಾಗುತ್ತವೆ.

ದೇವರ ಮಾತನ್ನು ಆಲಿಸುವವರು ನಾಶವಾಗದೇ ನೀತಿನಿಷ್ಠೆಯ ಹೊಸ ಲೋಕದಲ್ಲಿ ಭಯವಿಲ್ಲದೆ ಜೀವಿಸುವರು. ಆ ಲೋಕದಲ್ಲಿ ಜನರು ಪರಸ್ಪರ ಪ್ರೀತಿ ವಿಶ್ವಾಸದಿಂದಿರುತ್ತಾರೆ.