ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆರೋಗ್ಯವನ್ನು ಉತ್ತಮಗೊಳಿಸಲು ಕ್ರಮಕೈಗೊಳ್ಳಿ

ಆರೋಗ್ಯವನ್ನು ಉತ್ತಮಗೊಳಿಸಲು ಕ್ರಮಕೈಗೊಳ್ಳಿ

ಆರೋಗ್ಯವನ್ನು ಉತ್ತಮಗೊಳಿಸಲು ಕ್ರಮಕೈಗೊಳ್ಳಿ

ಮೊದಲನೇ ಲೇಖನದಲ್ಲಿ ತಿಳಿಸಲಾದ ರಾಮ್‌ನ ನೆನಪಿದೆಯೇ? ಲೋಕದಲ್ಲೆಲ್ಲೂ ಇರುವ ಅನೇಕರಂತೆ ರಾಮ್‌ಗೂ ಒಳ್ಳೇ ಆಹಾರ ಸೇವನೆ ಮತ್ತು ಇತರ ದೈನಂದಿನ ರೂಢಿಗಳು ಉತ್ತಮ ಆರೋಗ್ಯಕ್ಕೆ ಎಷ್ಟು ಪ್ರಾಮುಖ್ಯವೆಂದು ತಿಳಿದಿರಲಿಲ್ಲ. ಅವನನ್ನುವುದು: “‘ಸುಲಭವಾಗಿ ಸಿಗುವಂಥ ಪೌಷ್ಟಿಕ ಆಹಾರಗಳು’ ಎಂಬ ಎಚ್ಚರ! ಪತ್ರಿಕೆಯಲ್ಲಿನ (ಮೇ 8, 2002 ಇಂಗ್ಲಿಷ್‌ ಸಂಚಿಕೆ) ಲೇಖನದಿಂದ ಪೌಷ್ಟಿಕ ಆಹಾರದ ಬಗ್ಗೆ ನಮಗೆ ಏಕೆ ತಿಳಿದಿರಬೇಕೆಂದು ನನಗೆ ಗೊತ್ತಾಯಿತು.”

ರಾಮ್‌ ವಿವರಿಸುವುದು: “ಆ ಲೇಖನದಿಂದ ನಾವು ಕಲಿತಂಥ ಸಂಗತಿಗಳನ್ನು ಕುಟುಂಬವಾಗಿ ಅನ್ವಯಿಸಿದೆವು. ಸ್ವಲ್ಪ ಸಮಯದಲ್ಲೇ ನಮ್ಮ ರೋಗನಿರೋಧಕ ಶಕ್ತಿ ಬಲಗೊಂಡಿತು. ಮುಂಚೆ ನಮಗೆ ಆಗಾಗ್ಗೆ ಶೀತ-ನೆಗಡಿ ಬರುತ್ತಿತ್ತು. ಆದರೆ ನಾವು ಪೌಷ್ಟಿಕ ಆಹಾರದ ಸೇವನೆಗೆ ಗಮನಕೊಟ್ಟಂದಿನಿಂದ ಇದು ತುಂಬ ಕಡಿಮೆಯಾಗಿದೆ. ಕುಡಿಯುವ ಶುದ್ಧ ನೀರನ್ನು ಕಡಿಮೆ ಖರ್ಚಿನಲ್ಲಿ, ಸುಲಭವಾಗಿ ಪಡೆಯುವ ವಿಧಾನಗಳನ್ನೂ ‘6 ವಿಧಗಳಲ್ಲಿ ನಿಮ್ಮ ಆರೋಗ್ಯದ ಸಂರಕ್ಷಣೆ’ ಎಂಬ ಎಚ್ಚರ! ಲೇಖನದಿಂದ ತಿಳಿದುಕೊಂಡೆವು.”—ಅಕ್ಟೋಬರ್‌ 8, 2003.

“ಎಚ್ಚರ! ಪತ್ರಿಕೆಯ ಇನ್ನೊಂದು ಲೇಖನವೂ ನನ್ನ ಕುಟುಂಬದ ಆರೋಗ್ಯವನ್ನು ಉತ್ತಮಗೊಳಿಸಲು ನನಗೆ ಸಹಾಯಮಾಡಿದೆ. ‘ಸಾಬೂನು—ಮನೆಯಲ್ಲೇ ಲಭ್ಯವಿರುವ ಲಸಿಕೆ’ ಎಂಬ ಶೀರ್ಷಿಕೆಯ ನವೆಂಬರ್‌ 22, 2003ರ ಇಂಗ್ಲಿಷ್‌ ಸಂಚಿಕೆಯಲ್ಲಿನ ಲೇಖನವೇ ಅದು. ಆ ಲೇಖನದಲ್ಲಿರುವ ಸಲಹೆಗಳನ್ನು ಓದಿದ ಕೂಡಲೆ ಅಳವಡಿಸಿಕೊಂಡೆವು. ಈಗ ನಮಗೆ ಹಿಂದಿನಂತೆ ಕಣ್ಣು ಸೋಂಕುಗಳ ಸಮಸ್ಯೆ ಇಲ್ಲ.

“ನಾವು ವಾಸಿಸುತ್ತಿರುವ ಸ್ಥಳದಲ್ಲಿ ನೊಣಗಳ, ಸೊಳ್ಳೆಗಳ ಕಾಟವಿದ್ದರೂ ಜನರಿಗೆ ಅದರ ಬಗ್ಗೆ ಪರಿವೆ ಇಲ್ಲ. ಆದರೆ ಅಂಥ ಕೀಟಗಳಿಂದ ದೂರವಿರುವ ಮಹತ್ವವನ್ನು, ಬೈಬಲ್‌—ನಿಮ್ಮ ಜೀವಿತದಲ್ಲಿ ಅದರ ಪ್ರಭಾವ * (ಇಂಗ್ಲಿಷ್‌) ಎಂಬ ವಿಡಿಯೋ ನೋಡಿ ನಮ್ಮ ಕುಟುಂಬ ಕಲಿಯಿತು. ಈ ತಿಳುವಳಿಕೆ ಸಹ ನಾವು ಒಳ್ಳೇ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತಿದೆ.”

ಬಿಟ್ಟುಕೊಡಬೇಡಿ! ನೀವು ಯಾವುದೇ ಹೊಂದಾಣಿಕೆಗಳನ್ನು ಮಾಡಲಿಕ್ಕಿದ್ದರೂ ಅದರಲ್ಲಿ ಸಫಲರಾಗಲು ಅದನ್ನು ನಿಧಾನಗತಿಯಲ್ಲಿ ಆರಂಭಿಸಿರಿ. ನಿಮ್ಮಿಂದ ಮುಟ್ಟಲು ಸಾಧ್ಯವಾಗದಂಥ ಗುರಿಗಳನ್ನು ಇಡಬೇಡಿ. ಉದಾಹರಣೆಗೆ, ಕಡಿಮೆ ಪೋಷಕಾಂಶವಿರುವ ಆಹಾರಗಳ ಸೇವನೆಯನ್ನು ತಟ್ಟನೆ ನಿಲ್ಲಿಸಿಬಿಡುವ ಬದಲು ಅದನ್ನು ಸ್ವಲ್ಪ ಸ್ವಲ್ಪವಾಗಿ ಕಡಿಮೆಗೊಳಿಸಿ. ರಾತ್ರಿ ಎಂದಿಗಿಂತಲೂ ಸ್ವಲ್ಪ ಬೇಗ ಮಲಗಿಬಿಡಿ. ವ್ಯಾಯಾಮವನ್ನೂ ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಏನೂ ಮಾಡದಿರುವ ಬದಲು ಸ್ವಲ್ಪವಾದರೂ ಮಾಡುವುದು ಲೇಸು. ಒಂದು ಹೊಸ ಒಳ್ಳೇ ಅಭ್ಯಾಸವನ್ನು ರೂಢಿಸಿಕೊಳ್ಳಲು ಸಮಯ ಹಿಡಿಯುತ್ತದೆ—ಕೆಲವು ವಾರಗಳು ಇಲ್ಲವೇ ತಿಂಗಳುಗಳೇ ಹಿಡಿಯಬಹುದು. ಈ ಮಧ್ಯೆ, ನಿಮ್ಮ ಹೆಚ್ಚಿನ ಪ್ರಯತ್ನಗಳಿಂದ ತಕ್ಷಣ ಯಾವುದೇ ಪ್ರಯೋಜನಗಳು ಕಣ್ಣಿಗೆ ಬೀಳದಿದ್ದರೂ, ಹತಾಶರಾಗಬೇಡಿ. ಹಿನ್ನಡೆಗಳಿದ್ದರೂ ಪಟ್ಟುಹಿಡಿದು ಮುಂದುವರಿಯುವಲ್ಲಿ ನಿಮ್ಮ ಆರೋಗ್ಯ ಸುಧಾರಿಸೀತು.

ಈ ಅಪರಿಪೂರ್ಣ ಜಗತ್ತಿನಲ್ಲಿ ಪರಿಪೂರ್ಣ ಆರೋಗ್ಯ ಅಸಾಧ್ಯ. ನೀವು ಕಾಯಿಲೆಬೀಳುವುದು ನಿಮ್ಮ ಅಲಕ್ಷ್ಯದ ಕಾರಣವಲ್ಲ ಬದಲಾಗಿ ಮಾನವರಲ್ಲಿ ಅಂತರ್ಗತವಾಗಿ ಬಂದಿರುವ ದೌರ್ಬಲ್ಯದಿಂದಾಗಿ ಇರಬಹುದು. ಹೀಗಿರುವುದರಿಂದ ಆರೋಗ್ಯದ ಸಮಸ್ಯೆಗಳಾಗಲಿ ಬೇರಾವುದೇ ಸಂಗತಿಯಾಗಲಿ ನಿಮಗೆ ಅನಾವಶ್ಯಕ ಮಾನಸಿಕ ಒತ್ತಡ ಇಲ್ಲವೆ ಚಿಂತೆಗೆ ಕಾರಣವಾಗುವಂತೆ ಬಿಡಬೇಡಿ. “ಚಿಂತೆಮಾಡುವ ಮೂಲಕ ನಿಮ್ಮಲ್ಲಿ ಯಾರು ತನ್ನ ಆಯುಷ್ಯವನ್ನು ಸ್ವಲ್ಪವಾದರೂ ಹೆಚ್ಚಿಸಿಕೊಳ್ಳಬಲ್ಲನು?” ಎಂದು ಪ್ರಶ್ನಿಸಿದನು ಯೇಸು. (ಲೂಕ 12:25) ಚಿಂತೆಮಾಡುವ ಬದಲು, ಆಯುಷ್ಯವನ್ನು ಅನಗತ್ಯವಾಗಿ ಮೊಟಕುಗೊಳಿಸುವ ಮತ್ತು ಜೀವನದ ಗುಣಮಟ್ಟವನ್ನು ಕಡಿಮೆಗೊಳಿಸುವ ವಿಷಯಗಳನ್ನು ಮಾಡದಿರಲು ಪ್ರಯತ್ನಿಸಿ ಅಷ್ಟೇ. ಹಾಗೆ ಮಾಡಿದರೆ, ದೇವರು ತರಲಿರುವ ಹೊಸ ಲೋಕದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು” ಹೇಳದಿರುವ ಸಮಯದ ವರೆಗೂ ನೀವು ಸಾಧ್ಯವಾದಷ್ಟು ಒಳ್ಳೇ ಆರೋಗ್ಯ ಆನಂದಿಸಲು ಸಹಾಯವಾಗುವುದು.—ಯೆಶಾಯ 33:24. (g11-E 03)

[ಪಾದಟಿಪ್ಪಣಿ]

^ ಯೆಹೋವನ ಸಾಕ್ಷಿಗಳು ತಯಾರಿಸಿದ್ದು.