ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ

ಆಧುನಿಕ ಜೀವನಕ್ಕೆ ಪ್ರಾಚೀನ ಪುಸ್ತಕ

ತುಂಬಾ ಜನರು ಬೈಬಲನ್ನು ಒಂದು ಧಾರ್ಮಿಕ ಪುಸ್ತಕ ಅಂತ ಕರೆಯುತ್ತಾರೆ. ಆದರೆ, ಬೈಬಲ್‌ ಒಂದು ಧಾರ್ಮಿಕ ಪುಸ್ತಕ ಮಾತ್ರ ಅಲ್ಲ. ಅದರಲ್ಲಿ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳು ಸಹ ಇವೆ.

ಕೆಲವು ಜನರು ಬೈಬಲನ್ನು ಓದಿ, ಅದರಲ್ಲಿರುವ ಸಲಹೆಗಳನ್ನು ಅನ್ವಯಿಸಿ ಹೇಗೆಲ್ಲಾ ಪ್ರಯೋಜನ ಪಡೆದಿದ್ದಾರೆ ಅಂತ ಗಮನಿಸಿ.

“ಈಗ, ನನ್ನ ಆರೋಗ್ಯ ಚೆನ್ನಾಗಿದೆ. ಜೊತೆಗೆ ಮನಃಶಾಂತಿನೂ ಇದೆ. ಯಾವಾಗಲೂ ಖುಷಿ ಖುಷಿಯಾಗಿರ್ತೀನಿ. ಒಳ್ಳೇ ಜೀವನ ನಡೆಸ್ತಿದ್ದೀನಿ.”—ಫಿಯೋನೆ.

“ಬೈಬಲ್‌ ಓದೋದ್ರಿಂದ, ನನ್ನ ಜೀವನಕ್ಕೆ ಒಂದು ಉದ್ದೇಶ ಮತ್ತು ಅರ್ಥ ಸಿಕ್ಕಿದೆ.”—ಎಲೆನಾ.

“ನನ್ನ ಜೀವ್ನ ಮುಂಚೆಗಿಂತ ಚೆನ್ನಾಗಿದೆ. ಈಗ ನಾನು ಕೆಲಸಕ್ಕಿಂತ ನನ್ನ ಕುಟುಂಬಕ್ಕೆ ಜಾಸ್ತಿ ಸಮಯ ಕೊಡ್ತೀನಿ.”—ಆ್ಯಂಡ್ರೀವ್‌.

ಈ ರೀತಿಯ ಉದಾಹರಣೆಗಳು ಇಷ್ಟೇ ಅಲ್ಲ, ಹಲವಾರಿವೆ. ಅನೇಕರಿಗೆ, ತಮ್ಮ ಜೀವನಕ್ಕೆ ಬೇಕಾದ ಪ್ರಾಯೋಗಿಕ ಸಲಹೆಗಳು ಬೈಬಲ್‌ನಲ್ಲಿ ಸಿಕ್ಕಿದೆ.

ಈ ಕೆಳಗಿನ ವಿಷಯಗಳಲ್ಲಿ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿ . . .

  • ಆರೋಗ್ಯ

  • ಮನಃಶಾಂತಿ

  • ಕುಟುಂಬ ಮತ್ತು ಬಂಧುಮಿತ್ರರು

  • ಹಣಕಾಸಿನ ಸಮಸ್ಯೆ

  • ದೇವರೊಂದಿಗೆ ಸ್ನೇಹ

ಮುಂದಿನ ಲೇಖನಗಳು ಬೈಬಲ್‌ ದೇವರಿಂದ ಬಂದಿರುವ ಪುಸ್ತಕ ಮತ್ತು ಅದರಲ್ಲಿ ನಮ್ಮ ಜೀವನ ನಡೆಸಲು ಬೇಕಾದ ಪ್ರಾಯೋಗಿಕ ಸಲಹೆಗಳಿವೆ ಅಂತ ತೋರಿಸುತ್ತವೆ.