ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ವಿಪತ್ತಿನಿಂದ ನರಳಾಡುತ್ತಿರುವವರಿಗೆ ಸಹಾಯ

ವಿಪತ್ತಿನಿಂದ ನರಳಾಡುತ್ತಿರುವವರಿಗೆ ಸಹಾಯ

ಫೆಬ್ರವರಿ 1, 2021

 2020 ರಲ್ಲಿ ಅನೇಕ ನೈಸರ್ಗಿಕ ವಿಪತ್ತುಗಳು ಆಯ್ತು. ಇಡೀ ಲೋಕದಲ್ಲಿ ಕೋವಿಡ್‌-19 ಅನ್ನೋ ಸಾಂಕ್ರಾಮಿಕ ರೋಗ ಶುರುವಾಗಿದ್ದು ಈ ವರ್ಷದಲ್ಲೇ. ಈ ಕಷ್ಟಗಳನ್ನೆಲ್ಲ ಅನುಭವಿಸಿದವ್ರಿಗೆ ಯೆಹೋವನ ಸಾಕ್ಷಿಗಳು ಹೇಗೆ ಸಹಾಯಮಾಡಿದ್ರು?

 2020 ರ ಸೇವಾ ವರ್ಷದಲ್ಲಿ a ಆಡಳಿತ ಮಂಡಲಿಯ ಸಂಯೋಜಕರ ಕಮಿಟಿ ವಿಪತ್ತು ಪರಿಹಾರ ಕಾರ್ಯಕ್ಕಾಗಿ 205 ಕೋಟಿಗಿಂತ ಜಾಸ್ತಿ ರುಪಾಯಿ ಖರ್ಚು ಮಾಡಲಿಕ್ಕೆ ಒಪ್ಪಿಗೆ ಕೊಟ್ರು. ಈ ಹಣವನ್ನ 200ಕ್ಕಿಂತ ಜಾಸ್ತಿ ವಿಪತ್ತುಗಳಿಗೆ ಉದಾಹರಣೆಗೆ ಕೋವಿಡ್‌-19, ಚಂಡಮಾರುತ, ಆಫ್ರಿಕಾದಲ್ಲಾದ ಪ್ರವಾಹ, ವೆನಿಜುವೇಲದಲ್ಲಾದ ಕ್ಷಾಮ, ಜಿಂಬಾಬ್ವೆಯಲ್ಲಾದ ಬರಗಳಿಗೆ ಪರಿಹಾರವಾಗಿ ಉಪಯೋಗಿಸಲಾಯ್ತು. ಇದ್ರಿಂದ ಎಲ್ಲ ಕಳ್ಕೊಂಡವರಿಗೆ ಬೇಕಾದ ಆಹಾರ, ನೀರು, ಮನೆ, ಬಟ್ಟೆ, ಔಷಧಿಗಳಿಗೆ, ಕ್ಲೀನಿಂಗ್‌ ಮಾಡೋಕೆ ಬೇಕಾಗಿರೋ ವಸ್ತುಗಳನ್ನು ತಗೊಳ್ಳೋದಕ್ಕೆ, ರಿಪೇರಿ ಕೆಲಸಕ್ಕೆ, ಹಾಳಾಗಿರೋ ಕಟ್ಟಡಗಳನ್ನ ಮತ್ತೆ ಕಟ್ಟಲಿಕ್ಕೆ ಉಪಯೋಗಿಸಲಾಯ್ತು. ಇದನ್ನೆಲ್ಲ ಹೇಗೆ ಮಾಡಿದ್ರು ಅಂತ ನೋಡೋಣ.

 ಕೋವಿಡ್‌-19. ಈ ರೋಗ ಇಡೀ ಲೋಕದಲ್ಲಿರೋ ನಮ್ಮ ಸಹೋದರ ಸಹೋದರಿಯರನ್ನ ಶಾರೀರಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಬಾಧಿಸಿದೆ. ಇವರಿಗೆ ಸಹಾಯ ಮಾಡಲಿಕ್ಕೆ ಸುಮಾರು 800ಕ್ಕಿಂತ ಜಾಸ್ತಿ ವಿಪತ್ತು ಪರಿಹಾರ ಕಮಿಟಿಗಳನ್ನ ಇಡೀ ಲೋಕದಲ್ಲಿ ರಚಿಸಲಾಯ್ತು. ಈ ವಿಪತ್ತಿನ ಸಮಯದಲ್ಲಿ ನಮ್ಮ ಸಹೋದರರಿಗೆ ಏನೇನು ಬೇಕು ಅಂತ ವಿಪತ್ತು ಪರಿಹಾರ ಕಮಿಟಿಯಲ್ಲಿರೋ (DRC) ಸಹೋದರರು ನೋಡಿ ಚೆನ್ನಾಗಿ ಅರ್ಥ ಮಾಡ್ಕೊಂಡು ಅದನ್ನ ಸಂಯೋಜಕರ ಕಮಿಟಿಗೆ ತಿಳಿಸಿದ್ರಿಂದ ಅವರಿಗೆ ಒಳ್ಳೇ ರೀತಿಯಲ್ಲಿ ಸಹಾಯ ಮಾಡಲಿಕ್ಕೆ ಆಯ್ತು.

 ತುಂಬ ಜನರಿಗೆ ಬೇಕಾಗಿರೋ ಆಹಾರ, ನೀರು, ಕ್ಲೀನಾಗಿ ಇರಲಿಕ್ಕೆ ಮತ್ತು ಕ್ಲೀನ್‌ ಮಾಡಲಿಕ್ಕೆ ಬೇಕಾಗಿರೋ ವಸ್ತುಗಳನ್ನ ಮತ್ತು ಬೇಕಾಗಿರೋ ಔಷಧಿಗಳನ್ನ ಈ DRC ತಂಡ ತಂದ್ಕೊಡ್ತು. ಈ ತಂಡದಲ್ಲಿ ಇರೋರು ಮತ್ತು ಸಭೆಯ ಹಿರಿಯರು ಸೇರಿ ಸರ್ಕಾರದಿಂದ ಸಿಗೋ ಸೌಲಭ್ಯನ ಪಡ್ಕೊಳ್ಳೋದಕ್ಕೂ ಸಹೋದರರಿಗೆ ಸಹಾಯಮಾಡಿದರು.

 ನಮ್ಮ DRC ತಂಡದ ಕೆಲಸನ ಸಾಕ್ಷಿಗಳಲ್ಲದವರು ಕೂಡ ನೋಡಿ ಗಮನಿಸ್ತಾ ಇದ್ರು. ಉದಾಹರಣೆಗೆ ಜಾಂಬಿಯದ ನಕೊಂಡೆಯ ಡಿಸ್ಟ್ರಿಕ್ಟ್‌ ಕಮಿಷನರ್‌ ಆದ ಫೀಲ್ಡ್‌ ಸಿಮ್‌ವಿಂಗ ನಮ್ಮ ಸಹೋದರರಿಗೆ ಹೀಗೆ ಹೇಳಿದ್ರು: “ಸಹಾಯ ಬೇಕಾಗಿರೋ ಕುಟುಂಬಗಳಿಗೆ ಕರೆಕ್ಟ್‌ ಟೈಮಲ್ಲಿ ನೀವು ಬಂದು ಸಹಾಯಮಾಡಿದ್ರಿ. ನೀವು ಮಾಡಿದ ಸಹಾಯನ ನಾವು ಯಾವತ್ತೂ ಮರಿಯಲ್ಲ.”

 ಅಂಗೋಲದಲ್ಲಿ ಕ್ಷಾಮ. ಕೊರೋನದಿಂದಾಗಿ ಅಂಗೋಲಕ್ಕೆ ಬರ್ತಿದ್ದ ಆಹಾರ ಕಡಿಮೆ ಆಯ್ತು. ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಆಯ್ತು. ಈ ಪರಿಸ್ಥಿತಿಯಲ್ಲಿ ಊಟ ಕೊಂಡ್ಕೊಳ್ಳೋದು ನಮ್ಮ ಸಹೋದರ ಸಹೋದರಿಗೆ ತುಂಬ ಕಷ್ಟ ಆಯ್ತು.

ಬ್ರಸಿಲ್‌ನಿಂದ ಅಂಗೋಲಗೆ ಈ ಫುಡ್‌ ಕಿಟ್‌ಗಳನ್ನ ಕಳುಹಿಸಿದರು

 ಅಂಗೋಲದಲ್ಲಿರೋ ನಮ್ಮ ಸಹೋದರ ಸಹೋದರಿಯರಿಗೆ ಊಟದ ವ್ಯವಸ್ಥೆ ಮಾಡಲಿಕ್ಕೆ ಬ್ರಸಿಲ್‌ ಬ್ರಾಂಚನ್ನ ಕೇಳಿಕೊಂಡ್ರು. ಈ ಆಹಾರ ಪದಾರ್ಥಗಳನ್ನ ಎಲ್ಲಿ ತಗೊಂಡ್ರೆ ಬೆಲೆ ಕಡಿಮೆ ಇರುತ್ತೆ. ಎಲ್ಲಿ ತಗೊಂಡ್ರೆ ಸಿಕ್ಕಿರೋ ಹಣನ ಉಳಿತಾಯ ಮಾಡೋಕೆ ಆಗುತ್ತೆ ಅನ್ನೋದನ್ನ ನಮ್ಮ ಸಹೋದರರು ಚೆನ್ನಾಗಿ ತಿಳ್ಕೊಂಡ್ರು. ಈ ಆಹಾರ ಪದಾರ್ಥಗಳನ್ನೆಲ್ಲ ಹೋಲ್‌ಸೇಲ್‌ನಲ್ಲಿ ತಗೊಂಡ್ರು. ಸುಮಾರು 20 ಕೆಜಿ ತೂಕ ಇರೋ ಈ ಒಂದೊಂದು ಕಿಟ್‌ನಲ್ಲೂ ಅಕ್ಕಿ, ಕಾಳುಗಳು ಮತ್ತು ಎಣ್ಣೆ ಇತ್ತು. ಹೀಗೆ ಒಂದು ಕಿಟ್‌ನಲ್ಲಿರೋ ಐಟಂಸ್‌ಗಳನ್ನ ಖರೀದಿಸಿ ಮತ್ತು ಅದನ್ನ ಬೇರೆ ಕಡೆ ಸಾಗಿಸಲಿಕ್ಕೂ ಆಗಿರೋ ಖರ್ಚು ಬರೀ 1600 ರೂಪಾಯಿ ಅಷ್ಟೇ. ಇವತ್ತಿನ ತನಕ 33,544 ಕಿಟ್‌ಗಳನ್ನ ಈ ರೀತಿ ಸಾಗಿಸಿದ್ದೀವಿ. ಇದರ ಒಟ್ಟು ತೂಕ 6,54,000 ಕೆಜಿ ಇತ್ತು. ಇದರ ಜೊತೆಗೆ ನಮ್ಮ ಸಹೋದರ ಸಹೋದರಿಯರು ಕೊಟ್ಟಿರೋ ಆಹಾರ ಪದಾರ್ಥಗಳನ್ನ ಸೇರಿಸಿ ಸುಮಾರು 50,000ಕ್ಕಿಂತ ಜಾಸ್ತಿ ಜನರಿಗೆ ಊಟ ಕೊಡಲಿಕ್ಕಾಯ್ತು.

 ಈ ತರ ಸಹಾಯ ಪಡ್ಕೊಂಡಾಗ ನಮ್ಮ ಸಹೋದರ ಸಹೋದರಿಯರಿಗೆ ಹೇಗೆ ಅನಿಸುತ್ತೆ? ಅಂಗೋಲದಲ್ಲಿ ಯಾವುದೋ ಮೂಲೆಯಲ್ಲಿರೋ ಅಲೆಕ್ಸಾಂಡ್ರೆ ಅನ್ನೋ ಸಹೋದರ ಹೀಗೆ ಹೇಳ್ತಾನೆ: “ಯೆಹೋವ ದೇವರು ನನ್ನನ್ನ ಪ್ರೀತಿಸ್ತಾರೆ. ನಾನು ಒಂಟಿಯಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಯೆಹೋವನ ಸಂಘಟನೆ ನನ್ನನ್ನ ತುಂಬ ಕೇರ್‌ ಮಾಡುತ್ತೆ ಅಂತ ಇದ್ರಿಂದನೇ ಗೊತ್ತಾಗುತ್ತೆ.” ಒಂಟಿ ಹೆತ್ತವಳಾದ ಮರಿಜಾ಼ ಹೀಗೆ ಹೇಳ್ತಾಳೆ: “ಯೆಹೋವ ದೇವರು ನನ್ನ ಕೂಗನ್ನ ಕೇಳಿಸ್ಕೊಂಡಿದ್ದಾನೆ. ಆತನಿಗೂ ಆತನ ಸಂಘಟನೆಗೂ ತುಂಬ ಥ್ಯಾಂಕ್ಸ್‌ ಹೇಳ್ತಿನಿ.”

ವಿಪತ್ತು ಪರಿಹಾರದ ಪ್ರಯೋಜನ ಪಡೆದ ಅಂಗೋಲದ ಸಹೋದರರು ಈ ಸಹೋದರರಿಗೆ ತುಂಬ ಕೃತಜ್ಞರಾಗಿದ್ದಾರೆ

 ಜಿಂಬಾಬ್ವೆಯಲ್ಲಿ ಬರ. 2020 ರ ಸೇವಾ ವರ್ಷದಲ್ಲಿ ಜಿಂಬಾಬ್ವೆಯಲ್ಲಿ ತೀವ್ರವಾದ ಬರ ಇತ್ತು. ಲಕ್ಷಾಂತರ ಜನ ಹೊಟ್ಟೆಗಿಲ್ಲದೆ ನರಳಿದರು. ಜಿಂಬಾಬ್ವೆಯಲ್ಲಿದ್ದ ಸಾವಿರಾರು ಯೆಹೋವನ ಸಾಕ್ಷಿಗಳಿಗೂ ಸಾಕಷ್ಟು ಊಟ ಇರಲಿಲ್ಲ.

 ನಮ್ಮ ಸಹೋದರರಿಗೆ ಬೇಕಾದ ಊಟವನ್ನ ಕೊಡಲಿಕ್ಕೆ 5 DRC ತಂಡಗಳನ್ನ ರಚಿಸಲಾಯ್ತು. ಊಟ ಪ್ಯಾಕ್‌ ಮಾಡಲಿಕ್ಕೆ, ಬಂದಿರೋ ವಸ್ತುಗಳನ್ನ ಗಾಡಿಯಲ್ಲಿ ಎತ್ತಿ ಇಡಲಿಕ್ಕೆ ನೂರಾರು ಪ್ರಚಾರಕರು ಸಹಾಯ ಮಾಡಿದ್ರು. ಅವರು ಈ ಕೆಲಸಕ್ಕೆ ಸಹಾಯ ಆಗಲಿ ಅಂತ ತಮ್ಮ ಗಾಡಿಗಳನ್ನೂ ಕೊಟ್ರು. b 2020 ರ ಸೇವಾ ವರ್ಷದಲ್ಲಿ 22,700ಕ್ಕಿಂತ ಜಾಸ್ತಿ ಜನರಿಗೆ ಊಟದ ವಸತಿ ಮಾಡೋಕೆ 5 ಕೋಟಿಗಿಂತ ಜಾಸ್ತಿ ಹಣ ಖರ್ಚು ಆಯ್ತು.

(ಕೊರೋನ ಶುರು ಆಗೋದಕ್ಕಿಂತ ಮುಂಚೆನೇ) ಜಿಂಬಾಬ್ವೆಯಲ್ಲಿರೋ ನಮ್ಮ ಸಹೋದರರಿಗೆ ಊಟ ಸಿಕ್ತು

 DRC ತಂಡದಲ್ಲಿರೋ ನಮ್ಮ ಸಹೋದರರು ಕಳಿಸಿದ ಆಹಾರ ಬಂದು ಸೇರೋದಕ್ಕಿಂತ ಮುಂಚೆ ಕೆಲವು ಸಹೋದರರ ಹತ್ರ ಇದ್ದ ಊಟ ಖಾಲಿ ಆಗಿ ಹೋಗಿತ್ತು. ಊಟ ಬಂದು ತಲುಪಿದ ತಕ್ಷಣ ಕೆಲವು ಸಹೋದರರು ರಾಜ್ಯಗೀತೆಗಳನ್ನ ಹಾಡಿ ಯೆಹೋವನನ್ನ ಸ್ತುತಿಸಿದರು.

 ಒಂದು ಸ್ಥಳದಲ್ಲಿ ಸರ್ಕಾರೇತರ ಸಂಸ್ಥೆ (NGO) ಮೀಟಿಂಗನ್ನ ಏರ್ಪಾಡು ಮಾಡ್ತು. ಆ ಸ್ಥಳದಲ್ಲಿರೋ ಜನರಿಗೆ ಊಟ ಕೊಡೋದ್ರ ಬಗ್ಗೆ ಅಲ್ಲಿ ಚರ್ಚೆ ಮಾಡಿದ್ರು. ಆ ಮೀಟಿಂಗಲ್ಲಿ ವಿಧವೆಯರಾದ ಇಬ್ಬರು ಯೆಹೋವನ ಸಾಕ್ಷಿಗಳೂ ಇದ್ರು. ಹೋಗ್ತಾಹೋಗ್ತಾ ಆ ಮೀಟಿಂಗ್‌ನಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟಿರೋ ವಿಷಯಗಳನ್ನ ಮಾತಾಡಲಿಕ್ಕೆ ಶುರುಮಾಡಿದ್ರು. ಊಟ ತಗೊಳ್ಳೋದಾದ್ರೆ ಕೆಲವೊಂದು ಕಂಡಿಷನ್ಸ್‌ಗಳನ್ನೆಲ್ಲ ಪಾಲಿಸಬೇಕು ಅಂತ ಅವರು ಹೇಳಿದ್ರು. ಆದ್ರೆ ಅದನ್ನೆಲ್ಲ ಪಾಲಿಸೋಕೆ ಆಗೋದಿಲ್ಲ ಅಂತ ನಮ್ಮ ಸಹೋದರಿಯರು ಅಲ್ಲಿಂದ ಎದ್ದು ಬಂದುಬಿಟ್ರು. ಅವರು ಆ ಮೀಟಿಂಗಿಂದ ಎದ್ದು ಹೋದಾಗ ಅವರನ್ನ ಗೇಲಿ ಮಾಡ್ಕೊಂಡು, “ಇನ್ನೊಂದು ಸಲ ಊಟ ಅಂತ ಕೇಳ್ಕೊಂಡು ಇಲ್ಲಿಗೆ ಬನ್ನಿ, ನಿಮ್ಮನ್ನ ಆಗ ನೋಡ್ಕೊಳ್ತಿವಿ” ಅಂತ ಹೇಳಿದ್ರು. ಇದಾದ ಎರಡೇ ವಾರದಲ್ಲಿ ಈ ಸಹೋದರಿಯರಿಗೆ ಬೇಕಾದ ಆಹಾರವನ್ನ ನಮ್ಮ ಸಹೋದರರು ಕೊಟ್ರು. NGOದವರು ಬೇರೆಯವರಿಗೆ ಊಟ ತಲುಪಿಸುವಷ್ಟರಲ್ಲಿ ನಮ್ಮ ಸಹೋದರರು ನಮಗೆ ಸಹಾಯ ಮಾಡಿದ್ರು.

ಯೆಹೋವ ತನ್ನ ಜನರ ಕೈಯನ್ನ ಯಾವತ್ತೂ ಬಿಡಲ್ಲ ಅನ್ನುತ್ತಾಳೆ ಪ್ರಿಸ್ಕ

 ವಿಪತ್ತಿನ ಸಮಯದಲ್ಲಿ ಜಿಂಬಾಬ್ವೆಯಲ್ಲಿ ನಮ್ಮ ಸಹೋದರರು ಮಾಡಿದ ಸಹಾಯ ಬೇರೆಯವರಿಗೆ ಸಾಕ್ಷಿ ಕೊಟ್ಟ ಹಾಗೆ ಆಯ್ತು. ಉದಾಹರಣೆಗೆ ಒಂದು ಚಿಕ್ಕ ಹಳ್ಳಿಯಲ್ಲಿರೋ ಪ್ರಿಸ್ಕಳ ಅನುಭವ ನೋಡಿ. ಬರದಿಂದ ತುಂಬ ಕಷ್ಟ ಅನುಭವಿಸಬೇಕಾಗಿ ಬಂದ್ರೂ ಪ್ರಿಸ್ಕ ಪ್ರತಿ ಬುಧವಾರ ಮತ್ತು ಶುಕ್ರವಾರ ಸೇವೆಗೆ ಹೋಗ್ತಿದ್ದಳು. “ಎಲ್ಲರೂ ಉಳುಮೆ ಮಾಡುವಾಗ ಸೇವೆ ಸೇವೆ ಅಂತ ಅಲೀತಿದಿಯಲ್ಲಾ. ನಿನ್ನಿಂದ ನಿನ್ನ ಕುಟುಂಬದವರೆಲ್ಲ ಹಸಿವೆಯಿಂದ ಸಾಯಬೇಕಾಗುತ್ತೆ” ಅಂತ ಆ ಊರಲ್ಲಿ ಇರೋ ಜನರು ಬಯ್ಯುತ್ತಿದ್ರು. ಆಗ ಪ್ರಿಸ್ಕ, “ಯೆಹೋವ ತನ್ನ ಜನರ ಕೈಯನ್ನ ಯಾವತ್ತೂ ಬಿಡಲ್ಲ” ಅಂತ ಹೇಳುತ್ತಿದ್ದಳು. ಅವಳು ಹೀಗೆ ಹೇಳಿ ಸ್ವಲ್ಪ ದಿನದಲ್ಲೇ ನಮ್ಮ ಸಂಘಟನೆಯಿಂದ ಅವ್ರಿಗೆ ಬೇಕಾದ ಆಹಾರ ಪದಾರ್ಥಗಳು ಸಿಕ್ತು. ಇದನ್ನ ನೋಡಿದ ಅಕ್ಕಪಕ್ಕದ ಮನೆಯವರು ನಿಜವಾಗಲೂ ನಿಮ್ಮ ದೇವರು ನಿಮ್ಮ ಕೈ ಬಿಟ್ಟಿಲ್ಲ. ನಮಗೂ ನಿಮ್ಮ ದೇವರ ಬಗ್ಗೆ ಕಲಿಬೇಕು ಅಂತ ಆಸೆಯಿದೆ ಅಂತ ಹೇಳಿದ್ರು. ಅಷ್ಟೇ ಅಲ್ಲ ಪಿಸ್ಕ ಮನೆ ಹತ್ರ ಇರೋ ಏಳು ಜನರು ರೇಡಿಯೋ ಮೂಲಕ ಪ್ರಸಾರ ಆಗ್ತಿರೋ ನಮ್ಮ ಮೀಟಿಂಗನ್ನ ಈಗ ಕೇಳಿಸ್ಕೊಳ್ತಿದ್ದಾರೆ.

 ಈ ಲೋಕದ ಅಂತ್ಯ ಹತ್ರ ಆಗ್ತಿದ್ದ ಹಾಗೆ ನೈಸರ್ಗಿಕ ವಿಪತ್ತುಗಳು ಜಾಸ್ತಿ ಆಗ್ತಾ ಹೋಗುತ್ತೆ. (ಮತ್ತಾಯ 24:3, 7) ನಾವು ಅದನ್ನ ಅನುಭವಿಸಬೇಕಾಗುತ್ತೆ. donate.jw.org ಮೂಲಕ ಬೇರೆಬೇರೆ ರೀತಿಯಲ್ಲಿ ನೀವು ಕೊಡ್ತಿರೋ ಕಾಣಿಕೆಗಳನ್ನ ನಾವು ತುಂಬ ಮೆಚ್ಚುತ್ತೀವಿ. ನೀವು ಕೊಡೋ ಈ ಕಾಣಿಕೆಗಳಿಂದ ಸರಿಯಾದ ಸಮಯದಲ್ಲಿ ಅಗತ್ಯ ಇರೋರಿಗೆ ಸಹಾಯ ಮಾಡೋಕೆ ಆಗಿದೆ.

a 2020 ರ ಸೇವಾ ವರ್ಷದಲ್ಲಿ ಸೆಪ್ಟೆಂಬರ್‌ 2019 ರಿಂದ ಆಗಸ್ಟ್‌ 2020 ರ ತನಕ ಇರೋ ತಿಂಗಳುಗಳು ಸೇರಿವೆ.

b ಕೋವಿಡ್‌ ಎಲ್ಲ ಕಡೆ ಹಬ್ಬಿದ್ದರಿಂದ ನಮ್ಮ ಸಹೋದರರು ಊಟವನ್ನ ಬೇರೆ ಕಡೆ ಸಾಗಿಸಲಿಕ್ಕೆ ಪರ್ಮಿಷನ್‌ ತಗೊಬೇಕಿತ್ತು. ಈ ಊಟನ ತಲುಪಿಸಲಿಕ್ಕೆ ಹೋಗ್ತಿದ್ದ ಸಹೋದರರು ಕೂಡ ಅವರಿಗೆ ಈ ಕೊರೋನ ಬರದೆ ಇರೋ ತರ ತುಂಬ ಜಾಗ್ರತೆ ವಹಿಸಿದರು.