ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ಲಕ್ಷಾಂತರ ಜನರಿಗೆ ಪ್ರಯೋಜನ ಆಗೋ RTOಗಳು

ಲಕ್ಷಾಂತರ ಜನರಿಗೆ ಪ್ರಯೋಜನ ಆಗೋ RTOಗಳು

ಮಾರ್ಚ್‌ 1, 2021

 ಭಾಷಾಂತರ ಕೆಲಸ ಮಾಡ್ತಿರೋ ಟೀಂಗಳಲ್ಲಿ 60% ಸಹೋದರ ಸಹೋದರಿಯರು ಕೆಲಸ ಮಾಡ್ತಿರೋದು ನಮ್ಮ ಬ್ರಾಂಚ್‌ ಆಫೀಸ್‌ಗಳಲ್ಲಿ ಅಲ್ಲ. ಇವರು ಕೆಲಸ ಮಾಡೋದು ಪ್ರಾದೇಶಿಕ ಭಾಷಾಂತರ ಕಚೇರಿಯಲ್ಲಿ, ಅಂದ್ರೆ RTOಗಳಲ್ಲಿ. ಇದ್ರಿಂದ ಏನಾದ್ರೂ ಪ್ರಯೋಜನ ಇದ್ಯಾ? ಈ ತರ RTOಗಳಲ್ಲಿ ಕೆಲಸ ಮಾಡಲಿಕ್ಕೆ ನಮ್ಮ ಭಾಷಾಂತರಗಾರರಿಗೆ ಏನೆಲ್ಲ ಬೇಕಾಗುತ್ತೆ? RTOಗಳು ಸ್ಥಳೀಯ ಭಾಷೆ ಮಾತಾಡೋ ಸ್ಥಳಗಳಲ್ಲಿ ಇರೋದ್ರಿಂದ ಒಳ್ಳೇ ಭಾಷಾಂತರ ಮಾಡಲಿಕ್ಕೆ ಹೇಗೆ ಸಹಾಯಮಾಡುತ್ತೆ? ಸ್ಥಳೀಯ ಭಾಷೆ ಮಾತಾಡೋ ಜನರಿರೋ ಕಡೆ ಭಾಷಾಂತರಗಾರರು ಇರಲಿಕ್ಕೆ ಈ RTO ಸೆಟಪ್‌ಗಳು ಸಹಾಯಮಾಡುತ್ತೆ.

 ಲೋ ಜರ್ಮನ್‌ ಭಾಷಾಂತರಕಾರನಾದ ಕ್ಯಾರಿನ್‌ ಹೀಗೆ ಹೇಳ್ತಾನೆ: “ಕ್ವಾಟೆಮಾಕ್‌, ಚವಾವ, ಮೆಕ್ಸಿಕೋದಲ್ಲಿರೋ RTOಗೆ ಬಂದಾಗಿಂದ ಬೇರೆ ಭಾಷಾಂತರಕಾರರ ಜೊತೆ ಮಾತಾಡುವಾಗ, ಸೇವೆಗೆ ಹೋದಾಗ, ಅಂಗಡಿಗಳಿಗೆ ಹೋದಾಗ ಲೋ ಜರ್ಮನ್‌ ಭಾಷೆಯನ್ನೇ ಮಾತಾಡ್ತಿವಿ. ನಾವು ಈ ಭಾಷೆಯಲ್ಲೇ ಮುಳುಗಿ ಹೋಗಿರುತ್ತಿವಿ. ತುಂಬ ಸಮಯದಿಂದ ಕೇಳಿಸ್ಕೊಳ್ಳದೆ ಇರೋ ನಾಣುಡಿಗಳನ್ನ ಕೇಳಿಸ್ಕೊಳ್ಳೋಕೆ ಆಯ್ತು. ಜನರು ದಿನನಿತ್ಯದ ಜೀವನದಲ್ಲಿ ಏನು ಮಾತಾಡ್ತಾರೆ ಅಂತ ಗಮನಿಸ್ತಾ ಇರ್ತಿವಿ.

 ಜೇಮ್ಸ್‌ ಬ್ರಾಂಚಲ್ಲಿರೋ ಬೆತೆಲ್‌ ಕುಟುಂಬದವರ ಜೊತೆ ಇರೋದನ್ನ, ಅವರ ಜೊತೆ ಸಮಯ ಕಳೆಯೋದನ್ನ ಮಿಸ್‌ ಮಾಡ್ಕೊಳ್ತಾನೆ ನಿಜ. ಇವನು ಘಾನದಲ್ಲಿರೋ ಫ್ರಾಫ್ರಾ ಭಾಷಾಂತರ ತಂಡದಲ್ಲಿ ಕೆಲಸ ಮಾಡ್ತಾನೆ. ಆದರೆ ಅವನು ಹೀಗೆ ಹೇಳ್ತಾನೆ: “RTOದಲ್ಲಿ ಕೆಲಸ ಮಾಡೋದು ಅಂದ್ರೆ ನನಗೆ ತುಂಬ ಇಷ್ಟ. ಆ ಭಾಷೆಯಲ್ಲಿ ಸಿಹಿಸುದ್ದಿ ಸಾರಿದಾಗ ಮತ್ತು ಅದಕ್ಕೆ ಜನರು ಹೇಗೆ ಪ್ರತಿಕ್ರಿಯಿಸ್ತಾರೆ ಅಂತ ನೋಡಿದಾಗ ನನಗೆ ಮಾತಲ್ಲಿ ಹೇಳೋಕೆ ಆಗದೆ ಇರೋವಷ್ಟು ಸಂತೋಷ ಆಗುತ್ತೆ.

 RTOಗಳನ್ನ ಎಲ್ಲಿ ಸ್ಥಾಪಿಸಬೇಕು ಅಂತ ಸಹೋದರರು ಹೇಗೆ ತೀರ್ಮಾನ ಮಾಡ್ತಾರೆ? ಅಮೆರಿಕದ ನ್ಯೂಯಾರ್ಕ್‌ನ ವಾರ್ವಿಕ್‌ನಲ್ಲಿರೋ ವರ್ಲ್ಡ್‌ವೈಡ್‌ ಡಿಸೈನ್‌/ಕನ್ಸ್‌ಟ್ರಕ್ಷನ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡೋ ಒಬ್ಬ ಸಹೋದರ ಹೀಗೆ ಹೇಳ್ತಾನೆ: “ಕೆಲವು ಸ್ಥಳಗಳಲ್ಲಿರೋ ಒಂದು ಸಮಸ್ಯೆ ಏನಂದ್ರೆ, ಬೇಕಾದಷ್ಟು ನೀರು ಇರೋದಿಲ್ಲ ಅಥವಾ ಕರೆಂಟ್‌ ಹೋಗೋದು ಬರೋದು ಮಾಡ್ತಾ ಇರುತ್ತೆ ಅಥವಾ ಭಾಷಾಂತರ ಕೆಲಸಕ್ಕೆ ತುಂಬ ಮುಖ್ಯವಾಗಿ ಬೇಕಾಗಿರೋ ಇಂಟರ್‌ನೆಟ್‌ ಕೂಡ ಇರೋದಿಲ್ಲ. ಹಾಗಾಗಿ ಒಂದು RTO ಸ್ಥಾಪಿಸೋದಕ್ಕಿಂತ ಮುಂಚೆ ಸ್ಥಳೀಯ ಭಾಷೆ ಮಾತಾಡೋ ಜಾಸ್ತಿ ಸ್ಥಳಗಳನ್ನ ಹುಡುಕಿರುತ್ತೀವಿ.”

 ಆದ್ರೆ ಈಗಾಗಲೇ ಇರೋ ಸಮ್ಮೇಳನ ಹಾಲ್‌, ರಾಜ್ಯ ಸಭಾಗೃಹ, ಮಿಷನರಿ ಗೃಹಗಳನ್ನ ಭಾಷಾಂತರ ಕಚೇರಿಯಾಗಿ ಮಾಡಿದ್ರೆ ಖರ್ಚು ಇಲ್ಲದೆ RTOಗಳನ್ನ ಸ್ಥಾಪಿಸಬಹುದು. ಭಾಷಾಂತರಕಾರರು ಅಲ್ಲಿಗೆ ಬಂದು ಕೆಲಸ ಮಾಡಿ ತಮ್ಮತಮ್ಮ ಮನೆಗಳಿಗೆ ವಾಪಸ್‌ ಹೋಗಬಹುದು. ಆದ್ರೆ ಇಲ್ಲೆಲ್ಲೂ RTO ಸ್ಥಾಪಿಸಲಿಕ್ಕೆ ಆಗಲ್ಲ ಅಂದ್ರೆ ಆಪಾರ್ಟ್‌ಮೆಂಟ್‌ಗಳನ್ನ ತಗೊಂಡು ಅಲ್ಲೇ ಉಳ್ಕೊಂಡು ಅದನ್ನೇ ಆಫೀಸ್‌ ತರ ಮಾಡ್ಕೊಳ್ಳೋಕ್ಕೆ ಸಹೋದರರಿಗೆ ಅನುಮತಿ ಸಿಗುತ್ತೆ. ಒಂದುವೇಳೆ ಭಾಷಾಂತರ ತಂಡ ಈಗ ಬೇರೆ ಕಡೆ ಸ್ಥಳಾಂತರ ಮಾಡಬೇಕಾದ್ರೂ ಈ ಅಪಾರ್ಟ್‌ಮೆಂಟ್‌ಗಳನ್ನ ಸುಲಭವಾಗಿ ಮಾರಬಹುದು. ಬಂದ ಹಣವನ್ನ ಅಗತ್ಯ ಇರೋ ಬೇರೆ ಕಡೆನೂ ಬಳಸಬಹುದು.ಪ

ಕೆಲಸ ಮುಂದುವರಿಸಲು ಸಿದ್ಧರು

 2020 ರ ಸೇವಾ ವರ್ಷದಲ್ಲಿ RTOಗಳಲ್ಲಿ ನಡೀತಿರೋ ಕೆಲಸಗಳು ಯಾವುದೇ ಅಡ್ಡಿ ಇಲ್ಲದೆ ಮುಂದುವರಿಯಲಿಕ್ಕೆ ಹತ್ರತ್ರ 95 ಕೋಟಿ ಖರ್ಚು ಮಾಡಿದ್ದೀವಿ. RTOದಲ್ಲಿರೋ ನಮ್ಮ ಸಹೋದರರಿಗೆ ಕಂಪ್ಯೂಟರ್‌ಗಳು, ಕೆಲಸ ಮಾಡಲಿಕ್ಕೆ ಬೇಕಾಗಿರೋ ಸಾಫ್ಟ್‌ವೇರ್‌ಗಳು, ಆಡಿಯೋ ಮತ್ತು ರೆಕಾರ್ಡಿಂಗ್‌ ಮಾಡಲಿಕ್ಕೆ ಬೇಕಾಗಿರೋ ಸಾಧನಗಳು ಮತ್ತು ಇಂಟರ್‌ನೆಟ್‌ ಬೇಕಾಗುತ್ತೆ. ಒಬ್ಬ ಭಾಷಾಂತರಕಾರನಿಗೆ ಇವೆಲ್ಲವನ್ನು ಕೊಟ್ಟು ಆಫೀಸ್‌ ಸೆಟ್‌ಅಪ್‌ ಮಾಡಿ ಕೊಡಬೇಕಂದ್ರೆ ಸುಮಾರು 55,000 ರೂಪಾಯಿ ಆದ್ರೂ ಖರ್ಚು ಆಗುತ್ತೆ. ಕಂಪ್ಯೂಟರ್‌ಗಳಲ್ಲಿ ಕೆಲವೊಂದು ಸಾಫ್ಟ್‌ವೇರ್‌ಗಳನ್ನ ಮೊದಲೇ ಅಳವಡಿಸಬೇಕಾಗುತ್ತೆ. ಉದಾಹರಣೆಗೆ ವಾಚ್‌ಟವರ್‌ ಟ್ರಾನ್ಸ್‌ಲೇಷನ್‌ ಸಿಸ್ಟಮ್‌. ಈ ಪ್ರೋಗ್ರಾಮ್‌ ಇರೋದ್ರಿಂದ ಭಾಷಾಂತರಕಾರರು ತಮ್ಮ ಕೆಲಸವನ್ನ ಒಳ್ಳೇ ರೀತಿಯಲ್ಲಿ ಮಾಡಿ ಮುಗಿಸಲಿಕ್ಕೆ ಸಹಾಯ ಆಗುತ್ತೆ. ಅವರಿಗೆ ಬೇಕಾದ ರೆಫೆರೆನ್ಸ್‌ಗಳು ಕೂಡ ಇಲ್ಲಿ ಸುಲಭವಾಗಿ ಸಿಗುತ್ತೆ.

 ಆಫೀಸಲ್ಲೇ ರೆಕಾರ್ಡಿಂಗ್‌ ಮಾಡಲಿಕ್ಕೆ ಭಾಷಾಂತರಕಾರರಿಗೆ ಆಡಿಯೋ-ರೆಕಾರ್ಡಿಂಗ್‌ ಕಿಟ್‌ಗಳನ್ನ ಕೊಡಲಾಗುತ್ತೆ. ಕೋವಿಡ್‌ ಶುರುವಾದಾಗ ಈ ಕಿಟ್‌ಗಳು ಎಷ್ಟು ಮುಖ್ಯ ಅನ್ನೋದು ಗೊತ್ತಾಯ್ತು. ತುಂಬ ಭಾಷಾಂತರಕಾರರು ಈ ಕಿಟ್‌ಗಳನ್ನ ತಮ್ಮತಮ್ಮ ಮನೆಗಳಿಗೆ ತಗೊಂಡು ಹೋಗಿದ್ರಿಂದ ಅವರ ಕೆಲಸಕ್ಕೆ ಏನೂ ಅಡ್ಡಿ ಆಗಲಿಲ್ಲ. ಹಾಗಾಗಿ ವಿಡಿಯೋ ಮತ್ತು ಮುದ್ರಿತ ಪ್ರಕಾಶನಗಳ ರೆಕಾರ್ಡಿಂಗ್‌ ಮಾಡೋಕೆ ಸುಲಭ ಆಯ್ತು.

 ಭಾಷಾಂತರವನ್ನು ಒಳ್ಳೇ ರೀತಿಯಲ್ಲಿ ಮಾಡಕ್ಕೆ ಮತ್ತು RTOಗಳನ್ನು ಸುಸ್ಥಿತಿಯಲ್ಲಿ ಇಡಕ್ಕೆ ಸ್ಥಳೀಯ ವಾಲಂಟಿಯರ್‌ಗಳು ಸಹಾಯ ಮಾಡ್ತಾರೆ. ದಕ್ಷಿಣ ಆಫ್ರಿಕದ ಕೇಪ್‌ ಟೌನ್‌ನಲ್ಲಿರೋ ಆಫ್ರಿಕಾನ್ಸ್‌ RTOನಲ್ಲಿ ಕೆಲಸ ಮಾಡ್ತಿರೋ ಕ್ರಿಸ್ತಿನ್‌ ಹೀಗೆ ಹೇಳ್ತಾನೆ: “ತುಂಬ ಪ್ರಚಾರಕರಿಗೆ ಮತ್ತು ಪಯನೀಯರರಿಗೆ ಇಲ್ಲಿಗೆ ಬಂದು ಕೆಲಸ ಮಾಡೋ ಅವಕಾಶ ಸಿಗುತ್ತೆ.”

 ಹೀಗೆ RTOಗೆ ಬಂದು ಸೇವೆ ಮಾಡೋದು ಒಂದು ದೊಡ್ಡ ಸುಯೋಗ ಅಂತ ವಾಲಂಟಿಯರ್‌ಗಳು ನೆನಸ್ತಾರೆ. RTOನಲ್ಲಿ ಕೆಲಸ ಮಾಡೋ ಒಬ್ಬ ಸಹೋದರಿ ಹೀಗೆ ಹೇಳ್ತಾಳೆ: “ಅಲ್ಲಿ ಹೋಗಿ ಸೇವೆ ಮಾಡೋವಾಗ ನನಗೆ ತುಂಬ ಖುಷಿ ಆಗುತ್ತೆ, ಮನಸ್ಸಿಗೆ ತೃಪ್ತಿ ಆಗುತ್ತೆ.” ಸ್ಥಳೀಯ ಸಹೋದರ ಸಹೋದರಿಯರು ವಾಯ್ಸ್‌ ಆಕ್ಟರ್ಸ್‌ ಆಗಿ ಸಹಾಯ ಮಾಡ್ತಾರೆ. ಮೆಕ್ಸಿಕೋದ ವೆರಾಕ್ರೂಸ್‌ನಲ್ಲಿರೋ ಟೋಟೋನಾಕೋ ಭಾಷಾಂತರಕಾರಳಾದ ಜುಆನ ಹೀಗೆ ಹೇಳ್ತಾಳೆ: “ಈಗ ನಾವು ನಮ್ಮ ಭಾಷೆ ಮಾತಾಡೋ ಸ್ಥಳದಲ್ಲಿ ಇರೋದ್ರಿಂದ ನಮ್ಮ ಆಡಿಯೋ ಮತ್ತು ವಿಡಿಯೋ ಪ್ರಕಾಶನಗಳನ್ನ ರೆಕಾರ್ಡ್‌ ಮಾಡಲಿಕ್ಕೆ ತುಂಬ ಸಹೋದರ ಸಹೋದರಿಯರಿಗೆ ಸುಲಭ ಆಗಿದೆ.

 ಆದರೆ ಈ RTOಗಳಿಂದ ಭಾಷಾಂತರದ ಗುಣಮಟ್ಟ ಒಳ್ಳೇದಾಗಿದ್ಯಾ? ಲಕ್ಷಾಂತರ ಮಂದಿ ಓದುಗರು ಈ ಪ್ರಶ್ನೆಗೆ ‘ಹೌದು, ಒಳ್ಳೇದಾಗಿದೆ’ ಅಂತ ಹೇಳ್ತಾರೆ. ರಿಪಬ್ಲಿಕ್‌ ಆಫ್‌ ಕಾಂಗೊದಲ್ಲಿರೋ, ಕಾಂಗೊ ತಂಡದ ಜೊತೆ ಕೆಲಸ ಮಾಡೋ ಸೆಡ್ರಿಕ್‌ ಹೀಗೆ ಹೇಳ್ತಾನೆ: “ಕೆಲವು ಸಹೋದರ ಸಹೋದರಿಯರು ನಮ್ಮ ಭಾಷಾಂತರವನ್ನ ‘ಇದು ವಾಚ್‌ಟವರ್‌ ಪ್ರಕಾಶನಗಳ ಕಾಂಗೋ’ ಅಂತ ಹೇಳ್ತಿದ್ರು. ಯಾಕೆಂದರೆ ಜನರು ಸಾಮಾನ್ಯವಾಗಿ ಮಾತಾಡೋ ಕಾಂಗೊ ಭಾಷೆಯಲ್ಲಿ ನಾವು ಭಾಷಾಂತರ ಮಾಡ್ತಿರಲಿಲ್ಲ.” ಆದ್ರೆ ಈಗ ನಮ್ಮ ಪ್ರಕಾಶನಗಳು ಜನರು ಸಾಮಾನ್ಯವಾಗಿ ಮಾತಾಡೋ ಕಾಂಗೊ ಭಾಷೆಯಲ್ಲೇ, ಅಂದ್ರೆ ಆಡುಭಾಷೆಯಲ್ಲಿದೆ ಅಂತ ಹೇಳ್ತಾರೆ.

 ಕೋಸ ತಂಡದಲ್ಲಿ ಕೆಲಸ ಮಾಡೋ ಆನ್‌ಡಿಲ್‌, ದಕ್ಷಿಣ ಆಫ್ರಿಕಾದಲ್ಲೂ ಜನರು ಹೀಗೆ ಹೇಳಿರೋದನ್ನ ಕೇಳಿಸ್ಕೊಂಡಿದ್ದಾನೆ. “ಭಾಷಾಂತರದಲ್ಲಿ ಬದಲಾವಣೆ ಆಗಿರೋದನ್ನ ತುಂಬ ಜನರು ನಮ್ಮ ಹತ್ರ ಹೇಳಿದ್ದಾರೆ. ಕಾವಲಿನಬುರುಜುವನ್ನ ಇಂಗ್ಲಿಷ್‌ನಲ್ಲಿ ಓದ್ತಿದ್ದ ಮಕ್ಕಳು ಕೂಡ ಈಗ ಅದನ್ನ ಕೋಸ ಭಾಷೆಯಲ್ಲಿ ಓದ್ತಾರೆ. ಹೊಸ ಲೋಕ ಭಾಷಾಂತರದ ಪರಿಷ್ಕೃತ ಆವೃತ್ತಿಯಲ್ಲಿ ಉಪಯೋಗಿಸಿರೋ ಭಾಷೆ ಜನರು ದಿನನಿತ್ಯ ಮಾತಾಡೋ ಭಾಷೆ ತರನೇ ಇದೆ. ಇದು ನಮಗೆ ತುಂಬ ಇಷ್ಟ ಆಯ್ತು” ಅಂತ ಹೇಳ್ತಾನೆ.

 ಒಂದು RTOನ ಸೆಟ್‌ಅಪ್‌ ಮಾಡಲಿಕ್ಕೆ, ಅದನ್ನು ಮೇನ್‌ಟೇನ್‌ ಮಾಡಲಿಕ್ಕೆ, ಇಡೀ ಲೋಕಲ್ಲಿರೋ ವಾಲಂಟಿಯರ್‌ಗಳು ಕೊಡೋ ಕಾಣಿಕೆ ಮತ್ತು donate.jw.org ಮೂಲಕ ಕೊಡೋ ಕಾಣಿಕೆ ಸಹಾಯಮಾಡುತ್ತೆ.