ಗೀತೆ 32
ಯೆಹೋವನ ಪಕ್ಷಕ್ಕೆ ಬನ್ನಿ!
-
1. ಬೇಡನ ಜಾಲಕ್ಕೆ ಸಿಕ್ಕಿಕೊಂಡ,
ಪಕ್ಷಿಯ ಹಾಗೆ ಇದ್ದೇವು ನಾವು.
ಸತ್ಯದ ಜ್ಞಾನವ ತಿಳಿದಾಗ,
ಹಾರಾಡಿತು ಹೃದಯ.
(ಪಲ್ಲವಿ)
ಪೂರ್ಣ ಹೃದ ನೀಡು; ದೇವರ ನಂಬು.
ಕೈ ಹಿಡಿದು ಆತ ಕಾಪಾಡುವನು.
ರಾಜ್ಯದ ಸಂದೇಶ ಸಾರುತ್ತಾ ಇರು.
ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!
-
2. ಸೇವೆಯನ್ನು ಐಕ್ಯದಿ ಮಾಡೋಣ,
ವಾಕ್ಯ ಸಾರಿ ಜೀವ ಕಾಪಾಡೋಣ.
ದೀನರಿಗೆ ಸಹಾಯ ನೀಡೋಣ,
ದೇವ ಪಕ್ಷ ನಿಲ್ಲೋಣ.
(ಪಲ್ಲವಿ)
ಪೂರ್ಣ ಹೃದ ನೀಡು; ದೇವರ ನಂಬು.
ಕೈ ಹಿಡಿದು ಆತ ಕಾಪಾಡುವನು.
ರಾಜ್ಯದ ಸಂದೇಶ ಸಾರುತ್ತಾ ಇರು.
ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!
-
3. ವೈರಿಯ ಸಂಖ್ಯೆಯು ಹೆಚ್ಚಿದ್ದರೂ,
ಹಿಂಸೆಯ ಮಾಡಲು ಮುಂದಾದರೂ,
ಭದ್ರ ಕೋಟೆ ಹಾಗೆ ಕಾಪಾಡುವ,
ಸರ್ವಶಕ್ತ ಯೆಹೋವ!
(ಪಲ್ಲವಿ)
ಪೂರ್ಣ ಹೃದ ನೀಡು; ದೇವರ ನಂಬು.
ಕೈ ಹಿಡಿದು ಆತ ಕಾಪಾಡುವನು.
ರಾಜ್ಯದ ಸಂದೇಶ ಸಾರುತ್ತಾ ಇರು.
ಶಾಂತಿಯ ಸಾಮ್ರಾಜ್ಯ; ಶಾಶ್ವತ ಅದು!
(ಕೀರ್ತ. 94:14; ಜ್ಞಾನೋ. 3:5, 6; ಇಬ್ರಿ. 13:5 ಸಹ ನೋಡಿ)