ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಮೆಕ್ಸಿಕೊ ಕೊಲ್ಲಿ

ಏಪ್ರಿಲ್‌ 2010ರಲ್ಲಿ ತೈಲ ಜಗಲಿಯಲ್ಲಾದ ಅಪಘಾತದಿಂದಾಗಿ ಮೂರು ತಿಂಗಳ ಕಾಲ ಅಪಾರ ತೈಲ ಹಾಗೂ ಅನಿಲ ಸಾಗರ ಸೇರಿತ್ತು. ಇದಾಗಿ ಎರಡೂವರೆ ತಿಂಗಳಲ್ಲೇ ಆ ಮಲಿನಕಾರಿಗಳು ಸಮುದ್ರದಿಂದ ಮಾಯವಾಗಿವೆ ಎನ್ನುತ್ತಿದೆ ಸಂಶೋಧಕರ ತಂಡ. ಇದಕ್ಕೆ ಕಾರಣ ಮೀಥೇನ್‌ ಅನಿಲವನ್ನು ವಿಭಜಿಸುವ ಶಕ್ತಿವುಳ್ಳ ಬ್ಯಾಕ್ಟೀರಿಯ, ಅವು ಅನಿಲವನ್ನು ವಿಭಜಿಸಿ ನಾಶಪಡಿಸಿದೆ ಎನ್ನಲಾಗಿದೆ. ಆದರೆ ಕೆಲವು ಪರಿಣತರಿಗೆ ಸಂಶಯವಿದೆ. ಬಹುಪಾಲು ತೈಲ ಸಾಗರತಳದಲ್ಲಿ ಹುದುಗಿಹೋಗಿದೆ ಎನ್ನುವುದು ಅವರ ಅಭಿಪ್ರಾಯ.

ಪೆರು

ಪೆರುವಿನಲ್ಲಿ ತುಂಬ ಹಳೇ ಜೋಳಗಳು ಸಿಕ್ಕಿವೆ (ಒಂದನ್ನು ಮೇಲಿನ ಚಿತ್ರದಲ್ಲಿ ತೋರಿಸಲಾಗಿದೆ). 3,000 ವರ್ಷಗಳ ಹಿಂದೆಯೇ ಉತ್ತರ ಪೆರುವಿನಲ್ಲಿ ಜನರು ಜೋಳದಿಂದ ಪಾಪ್‌ಕಾನ್‌ ಮತ್ತು ಹಿಟ್ಟನ್ನು ತಯಾರಿಸುತ್ತಿದ್ದರೆಂದು ತಿಳಿದು ಬರುತ್ತೆ.

ರಷ್ಯಾ

18-35ರ ಪ್ರಾಯದ ರಷ್ಯನ್ನರಲ್ಲಿ ಶೇ. 59ರಷ್ಟು ಮಂದಿ ಒಂದು ಸಮೀಕ್ಷೆಯಲ್ಲಿ ಹೀಗಂದಿದ್ದಾರೆ: “ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಕೆಲವೊಮ್ಮೆ ನೈತಿಕ ತತ್ವ ಆದರ್ಶಗಳನ್ನೆಲ್ಲ ಗಾಳಿಗೆ ತೂರಬೇಕು.” —ರೋಸಿಸ್ಕಾಯ ಗಾಸಾಟಾ ವಾರ್ತಾಪತ್ರಿಕೆ.

ಇಟಲಿ

ಧಾರ್ಮಿಕ ಸಂದೇಶಗಳನ್ನು ಜನರ ಮನೆಗಳಿಗೇ ಹೋಗಿ ಭೇಟಿಮಾಡಿ ತಿಳಿಸಬೇಕು ಎನ್ನುವುದು ಆಡ್ರೀಯ-ರೋವೀಗೋ ಎಂಬ ಪ್ರಾಂತ್ಯದ ಲುಚೋ ಸೋರಾವೀಟೋ ಡಾ ಫ್ರಾಂಸೆಸ್ಕೀ ಎಂಬ ಹೆಸರಿನ ಕ್ಯಾಥೋಲಿಕ್‌ ಬಿಷಪ್‌ ಅವರ ನಂಬಿಕೆ. “ಚರ್ಚ್‌ ಗಂಟೆಗಳನ್ನು ಬಾರಿಸಿದರೆ ಸಾಲದು ಮನೆಮನೆಯ ಕರೆಗಂಟೆಗಳನ್ನು ಒತ್ತುವುದು ಕೂಡ ಪಾದ್ರಿಗಳ ಕರ್ತವ್ಯ” ಎನ್ನುತ್ತಾರೆ ಅವರು.

ದಕ್ಷಿಣ ಆಫ್ರಿಕ

ವೈದ್ಯಕೀಯ ಬಳಕೆಗಾಗಿ ಘೇಂಡಾಮೃಗದ ಕೊಂಬು ಒಂದು ಕಿಲೋಗ್ರಾಂಗೆ 65,000 U.S. ಡಾಲರ್‌ನಂತೆ ಕಾನೂನುಬಾಹಿರವಾಗಿ ಮಾರಾಟವಾಗುತ್ತಿದೆ. 2011ರಲ್ಲಿ ದಕ್ಷಿಣ ಆಫ್ರಿಕ ಒಂದರಲ್ಲೇ 448 ಘೇಂಡಾಮೃಗಗಳನ್ನು ಕಳ್ಳರು ಬೇಟೆಯಾಡಿದ್ದಾರೆ. ಕೊಂಬುಗಳಿಗಾಗಿ ದರೋಡೆಕೋರರು ಯುರೋಪಿನ ವಸ್ತುಸಂಗ್ರಹಾಲಯ, ಹರಾಜು ಕಟ್ಟೆಗಳನ್ನೂ ಬಿಟ್ಟಿಲ್ಲ. ಯುರೋಪಿನ ಮೃಗಾಲಯದಲ್ಲಿರುವ ಘೇಂಡಾಮೃಗಗಳು ಕೂಡ ಅಪಾಯದ ಅಂಚಿನಲ್ಲಿವೆ. (g13-E 01)

[ಪುಟ 3ರಲ್ಲಿರುವ ಚಿತ್ರ]

[ಕೃಪೆ]

Photo by John Kepsimelis, U.S Coast Guard

[ಪುಟ 3ರಲ್ಲಿರುವ ಚಿತ್ರ]

[ಕೃಪೆ]

Courtesy STRI

[ಪುಟ 3ರಲ್ಲಿರುವ ಚಿತ್ರ]

[ಕೃಪೆ]

© llukee/Alamy

[ಪುಟ 3ರಲ್ಲಿರುವ ಭೂಪಟ]