ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಡೆತ ತಡೆದುಕೊಳ್ಳುವ ಮರಕುಟಿಗದ ತಲೆ

ಹೊಡೆತ ತಡೆದುಕೊಳ್ಳುವ ಮರಕುಟಿಗದ ತಲೆ

ವಿಕಾಸವೇ? ವಿನ್ಯಾಸವೇ?

ಹೊಡೆತ ತಡೆದುಕೊಳ್ಳುವ ಮರಕುಟಿಗದ ತಲೆ

● 80-100ರಷ್ಟು ತೀವ್ರತೆಯ ಗುರುತ್ವಾಕರ್ಷಣ ವೇಗದಲ್ಲಿ ನಮ್ಮ ತಲೆ ಯಾವುದೇ ವಸ್ತುವಿಗೆ ಬಡಿದರೆ ಮೆದುಳಿಗೆ ಪೆಟ್ಟಾಗುವುದು ಗ್ಯಾರಂಟಿ. ಆದರೆ 1,200ರಷ್ಟು ತೀವ್ರತೆಯ ಗುರುತ್ವಾಕರ್ಷಣ ವೇಗದಲ್ಲಿ ಒಂದು ಮರವನ್ನು ಕುಟ್ಟುವಾಗ ಮರಕುಟಿಗಕ್ಕೆ ಏನೇನೂ ಆಗುವುದಿಲ್ಲ! ಮೆದುಳಿಗೆ ಪೆಟ್ಟಾಗುವುದಿರಲಿ ಸಣ್ಣ ತಲೆನೋವು ಸಹ ಬರಲ್ಲ!! ಈ ಹಕ್ಕಿಗೆ ಇಷ್ಟು ತೀವ್ರತೆಯನ್ನು ತಾಳಿಕೊಳ್ಳಲು ಹೇಗೆ ಸಾಧ್ಯವಾಗುತ್ತೆ?

ಪರಿಗಣಿಸಿ: ಮರಕುಟಿಗದ ತಲೆಯ ಈ ನಾಲ್ಕು ವಿಶಿಷ್ಟ ಅಂಗರಚನೆಗಳು ಹೊಡೆತ ತಡೆದುಕೊಳ್ಳಲು ನೆರವಾಗುತ್ತವೆಂದು ಸಂಶೋಧಕರು ಕಂಡುಹಿಡಿದಿದ್ದಾರೆ:

1. ಗಡಸಾದರೂ ಬೇಕಾದ ಹಾಗೆ ಬಾಗುವ ಕೊಕ್ಕು

2. ತಲೆಬುರುಡೆಯ ಸುತ್ತಲಿರುವ ಎಲುಬು ಹಾಗೂ ಇಲಾಸ್ಟಿಕ್‌ನಂಥ ಅಂಗಾಂಶವುಳ್ಳ ರಚನೆ

3. ತಲೆಬುರುಡೆಯೊಳಗೆ ಒಂದು ಭಾಗದಲ್ಲಿ ಸ್ಪಂಜಿನಂಥ ಮೂಳೆ

4. ಮಿದುಳು-ಮಿದುಳ ಬಳ್ಳಿಯ ದ್ರವಕ್ಕೆ ತಲೆಬುರುಡೆ ಮತ್ತು ಮಿದುಳಿನ ಮಧ್ಯೆಯಿರುವ ಸ್ವಲ್ಪ ಜಾಗ

ಈ ಎಲ್ಲ ವಿಶೇಷತೆಗಳಿಂದಾಗಿಯೇ ಮರಕುಟಿಗ ಸೆಕೆಂಡಿಗೆ ಸುಮಾರು 22 ಬಾರಿ ಮರ ಕುಟ್ಟಿದರೂ ಈ ಧಕ್ಕೆಯಿಂದ ಅದರ ಮಿದುಳಿಗೆ ಹಾನಿಯಾಗುವುದಿಲ್ಲ.

ಮರಕುಟಿಗದ ತಲೆಯ ರಚನೆ ನೋಡಿ ಸಂಶೋಧಕರು, ಗುರುತ್ವಾಕರ್ಷಣೆಯ 60,000 ತೀವ್ರತೆಯ ವೇಗವನ್ನು ತಡೆದುಕೊಳ್ಳಬಲ್ಲ ಒಂದು ಪೆಟ್ಟಿಗೆಯನ್ನು ವಿನ್ಯಾಸಿಸಿದ್ದಾರೆ. ಅವರು ಮಾಡುವ ಪ್ರಯೋಗ ಸಫಲವಾದರೆ ಎಷ್ಟೋ ಪ್ರಯೋಜನ ಸಿಗಲಿದೆ. ಉದಾಹರಣೆಗೆ, ಈಗ ಗುರುತ್ವಾಕರ್ಷಣೆಯ 1,000 ತೀವ್ರತೆಯ ವೇಗವನ್ನು ತಡೆದುಕೊಳ್ಳಬಲ್ಲ ವಿಮಾನದ ‘ಬ್ಲಾಕ್‌ ಬಾಕ್ಸ್‌’ ಮುಂದಕ್ಕೆ ಹೆಚ್ಚಿನ ತೀವ್ರತೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದು. “ಮೊದಲು ಅಸಾಧ್ಯ ಸಂಗತಿಯಾಗಿ ತೋರಿದ ವಿಷಯವನ್ನು ಸಾಧ್ಯವಾದದ್ದಾಗಿ ಮಾಡಲು ನಿಸರ್ಗ ಹೇಗೆ ಜಟಿಲವಾದ ಅಂಗರಚನೆಗಳನ್ನು ಬೆಳೆಸಿಕೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದೊಂದು ಅದ್ಭುತ ನಿದರ್ಶನ” ಎಂದು ಮರಕುಟಿಗದ ತಲೆಯ ಕುರಿತ ಕಂಡುಹಿಡಿತಗಳ ಬಗ್ಗೆ ಬ್ರಿಟನ್‌ನ ಕ್ರಾನ್‌ಫೀಲ್ಡ್‌ ವಿಶ್ವವಿದ್ಯಾಲಯದ ಇಂಜಿನಿಯರ್‌ ಕಿಮ್‌ ಬ್ಲಾಕ್‌ಬರ್ನ್‌ ಹೇಳುತ್ತಾರೆ.

ನೀವೇನು ನೆನಸುತ್ತೀರಿ? ಹೊಡೆತ ತಡೆದುಕೊಳ್ಳುವ ಮರಕುಟಿಗದ ತಲೆ ವಿಕಾಸವಾಗಿ ಬಂತೇ? ಸೃಷ್ಟಿಕರ್ತನು ವಿನ್ಯಾಸಿಸಿದನೇ? (g12-E 01)

[ಪುಟ 30ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

1

2

3

4

[ಪುಟ 30ರಲ್ಲಿರುವ ಚಿತ್ರ ಕೃಪೆ]

ಕೆಂಪುತಲೆಯ ಮರಕುಟಿಗ: © 2011 photolibrary.com