ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಬಹಳಷ್ಟು ಅರ್ಥಗರ್ಭಿತವಾಗಿವೆ”

“ಬಹಳಷ್ಟು ಅರ್ಥಗರ್ಭಿತವಾಗಿವೆ”

“ಬಹಳಷ್ಟು ಅರ್ಥಗರ್ಭಿತವಾಗಿವೆ”

ಜರ್ಮನಿಯ ಕಸೆಲ್‌ ಎಂಬಲ್ಲಿ ನಡೆದ ಒಂದು ಅಂತಾರಾಷ್ಟ್ರೀಯ ಕಲಾವಸ್ತುಪ್ರದರ್ಶನದಲ್ಲಿ, ಯೆಹೋವನ ಸಾಕ್ಷಿಗಳ ಸಾಹಿತ್ಯಗಳಲ್ಲಿರುವ ಚಿತ್ರಗಳ ಕುರಿತು ಈ ಹೇಳಿಕೆಯನ್ನು ಮಾಡಲಾಯಿತು. ಹದಿನಾರು ವರುಷ ಪ್ರಾಯದ ಕ್ಯಾಟ್ಯಾ ತನ್ನ ಜೊತೆ ವಿದ್ಯಾರ್ಥಿಗಳೊಂದಿಗೆ ಈ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ, ಕೆಲವು ಧಾರ್ಮಿಕ ಕಲಾವಸ್ತುಗಳನ್ನು ನೋಡುತ್ತಿದ್ದಾಗ ಏನು ಸಂಭವಿಸಿತೆಂಬುದನ್ನು ತಿಳಿಸುತ್ತಾಳೆ:

“‘ನೀವು ಎಂದಾದರೂ ಯೆಹೋವನ ಸಾಕ್ಷಿಗಳ ಪತ್ರಿಕೆಗಳನ್ನು ನೋಡಿದ್ದೀರಾ?’ ಎಂದು ನಮ್ಮ ಗೈಡ್‌ ವಿದ್ಯಾರ್ಥಿಗಳನ್ನು ಪ್ರಶ್ನಿಸಿದನು. ಎಲ್ಲರೂ ಇಲ್ಲ ಎಂದು ಉತ್ತರಿಸಿದಾಗ, ಅವನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿರುವ ಚಿತ್ರಗಳ ಕುರಿತು ತುಂಬಾ ಹೊಗಳಲು ಆರಂಭಿಸಿದನು. ಚಿತ್ರಗಳು ತೀರಾ ಅಸಾಧಾರಣವಾದ ರೀತಿಯಲ್ಲಿ ಬಣ್ಣಿಸಲ್ಪಟ್ಟಿರುತ್ತವೆ ಮತ್ತು ಫೊಟೋಗ್ರಾಫ್‌ಗಳು ಬಹಳ ಸೂಕ್ತವಾಗಿ ಆರಿಸಲ್ಪಟ್ಟಿರುತ್ತವೆ, ಹಾಗೂ ಅವು ‘ಬಹಳಷ್ಟು ಅರ್ಥಗರ್ಭಿತವಾಗಿವೆ’ ಎಂದು ಅವನು ಹೇಳಿದನು.”

ಬೈಬಲ್‌ ಘಟನೆಗಳ ಕುರಿತಾದ ಆಧುನಿಕ ಚಿತ್ರಣವು, ಆ ಘಟನೆಗಳು ನಮ್ಮ ದಿನಗಳಲ್ಲಿ ಹೇಗೆ ಅನ್ವಯಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಸುಲಭವನ್ನಾಗಿ ಮಾಡುತ್ತದೆ ಎಂದು ಹೇಳುತ್ತಾ, “ಈ ಆಸಕ್ತಿದಾಯಕ ಚಿತ್ರಗಳನ್ನು ಜಾಗರೂಕತೆಯಿಂದ ನೋಡುವಂತೆ ಅವನು ನಮ್ಮನ್ನು ಉತ್ತೇಜಿಸಿದನು.” ಮುಂದೆ ಆ ಪತ್ರಿಕೆಗಳು ನೀಡಲ್ಪಡುವಲ್ಲಿ ಅವುಗಳನ್ನು ಸ್ವೀಕರಿಸುವಂತೆ ಅವನು ವಿದ್ಯಾರ್ಥಿಗಳಿಗೆ ತಿಳಿಸಿದನು. ಅಷ್ಟುಮಾತ್ರವಲ್ಲದೆ, ವಿದ್ಯಾರ್ಥಿಗಳು ಅವುಗಳಲ್ಲಿರುವ ಚಿತ್ರಗಳನ್ನು ಮಾತ್ರ ನೋಡದೆ, ಅವುಗಳಲ್ಲಿರುವ ಅತಿ ಬೋಧಪ್ರದವೂ ಆಸಕ್ತಿಕರವೂ ಆಗಿರುವ ಲೇಖನಗಳನ್ನು ಓದುವಂತೆ ಸಹ ಅವನು ತಿಳಿಸಿದನು. (g04 4/22)