ಇಟಲಿಯಲ್ಲಿ ಮನೆಯಿಂದ ಮನೆಗೆ ಸುವಾರ್ತೆ ಸಾರುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಜುಲೈ 2017

ಮಾದರಿ ನಿರೂಪಣೆಗಳು

T-31 ಕರಪತ್ರದ ಮತ್ತು ಕಷ್ಟಗಳ ಬಗ್ಗೆ ಸತ್ಯವನ್ನು ಕಲಿಸುವ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.

ಬೈಬಲಿನಲ್ಲಿರುವ ರತ್ನಗಳು

ನಿಮಗೆ ಮೃದುವಾದ ಹೃದಯ ಇದೆಯಾ?

ಮನೋರಂಜನೆ ಅಥವಾ ಬಟ್ಟೆ ಮತ್ತು ಕೇಶಾಲಂಕಾರದ ವಿಷಯದಲ್ಲಿ ನಾವು ಮಾಡುವ ನಿರ್ಣಯಕ್ಕೂ ನಮ್ಮ ಹೃದಯಕ್ಕೂ ಸಂಬಂಧವೇನು? ಮೃದುವಾದ ಹೃದಯ ಅಂದರೇನು?

ಬೈಬಲಿನಲ್ಲಿರುವ ರತ್ನಗಳು

ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಾ?

ಕೊಟ್ಟ ಮಾತನ್ನು ಮುರಿಯುವುದರ ಪರಿಣಾಮದ ಬಗ್ಗೆ ನಾವು ರಾಜ ಚಿದ್ಕೀಯನಿಂದ ಏನನ್ನು ಕಲಿಯುತ್ತೇವೆ?

ಬೈಬಲಿನಲ್ಲಿರುವ ರತ್ನಗಳು

ಯೆಹೋವನು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನೆಪಿಟ್ಟುಕೊಳ್ಳುತ್ತಾನಾ?

ಯೆಹೋವನು ಕ್ಷಮಿಸುತ್ತಾನೆ ಎನ್ನಲು ಯಾವ ಬೈಬಲ್‌ ಉದಾಹರಣೆಗಳು ಆಧಾರ ಕೊಡುತ್ತವೆ? ದಾವೀದ, ಮನಸ್ಸೆ ಮತ್ತು ಪೇತ್ರರೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯು ನಾವು ಆತನ ಕ್ಷಮಾಗುಣದ ಮೇಲೆ ನಂಬಿಕೆಯಿಡಲು ಹೇಗೆ ಸಹಾಯ ಮಾಡುತ್ತದೆ?

ನಮ್ಮ ಕ್ರೈಸ್ತ ಜೀವನ

ನೀವು ನಿಮ್ಮನ್ನೇ ಕ್ಷಮಿಸಿದ್ದೀರಾ?

ನಾವು ಈ ಹಿಂದೆ ಮಾಡಿದ ತಪ್ಪನ್ನು ಯೆಹೋವನು ಕ್ಷಮಿಸಿದರೂ ನಮಗೆ ನಮ್ಮನ್ನೇ ಕ್ಷಮಿಸಲು ಕಷ್ಟ ಆಗಬಹುದಾ? ಇಂಥ ಸಂದರ್ಭದಲ್ಲಿ ಯಾವುದು ಸಹಾಯಮಾಡುತ್ತದೆ?

ಬೈಬಲಿನಲ್ಲಿರುವ ರತ್ನಗಳು

ರಾಜ್ಯಾಧಿಕಾರವು ಬಾಧ್ಯಸ್ಥನಿಗೆ ಸೇರಿದೆ

ರಾಜ್ಯಕ್ಕೆ ಬಾಧ್ಯನು ಬರುವನು ಎಂಬ ಯೆಹೆಜ್ಕೇಲನ ಪ್ರವಾದನೆ ಯೇಸುವಿನಲ್ಲಿ ಹೇಗೆ ನೆರವೇರಿತು? ಇದು ಯೆಹೋವ ದೇವರ ಬಗ್ಗೆ ಏನನ್ನು ಕಲಿಸುತ್ತದೆ?

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ಸಭ್ಯವಾಗಿ ವರ್ತಿಸಿ

ನಾವು ಮನೆಬಾಗಿಲಲ್ಲಿ ನಿಂತಿರುವಾಗ ಮನೆಯವರು ನಮ್ಮನ್ನು ನೋಡುತ್ತಿದ್ದರೂ ಅಥವಾ ಕೇಳಿಸಿಕೊಳ್ಳುತ್ತಿದ್ದರೂ ನಾವದನ್ನು ಗಮನಿಸದಿರಬಹುದು. ನಾವು ಸೇವೆಯಲ್ಲಿ ಹೇಗೆ ಸಭ್ಯವಾಗಿ ವರ್ತಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ಯೆಹೋವನ ವಾಗ್ದಾನದಲ್ಲಿ ಭರವಸೆ ಹೆಚ್ಚಿಸುವ ತೂರಿನ ಪ್ರವಾದನೆ

ತೂರಿನ ನಾಶನದ ಬಗ್ಗೆ ಯೆಹೆಜ್ಕೇಲನು ಹೇಳಿದ ಪ್ರವಾದನೆ ಸಂಪೂರ್ಣವಾಗಿ ನೆರವೇರಿತು.