ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?

ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?

ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?

ಆಲೋಚನಾಶೀಲನೊಬ್ಬನು, ತನ್ನನ್ನು ಗಂಭೀರವಾದ ವೈದ್ಯಕೀಯ ಚಿಕಿತ್ಸಾವಿಧಾನಕ್ಕೆ ಒಪ್ಪಿಸಿಕೊಡುವ ಮೊದಲು, ಅದರ ಲಾಭ ಮತ್ತು ಅಪಾಯಗಳ ಶಕ್ಯತೆಯನ್ನು ತಿಳಿಯುವನು. ಹಾಗಾದರೆ ರಕ್ತ ಪೂರಣಗಳ ವಿಷಯದಲ್ಲೀನು? ಅವು ಈಗ ವೈದ್ಯಶಾಸ್ತ್ರದಲ್ಲಿ ಮುಖ್ಯೋಪಕರಣಗಳಾಗಿವೆ. ತಮ್ಮ ರೋಗಿಗಳಲ್ಲಿ ನಿಜವಾಗಿಯೂ ಕಾಳಜಿಯಿರುವ ಅನೇಕ ವೈದ್ಯರಿಗೆ ರಕ್ತ ಕೊಡಲು ಯಾವ ಶಂಕೆಯೂ ಇರಲಿಕ್ಕಿಲ್ಲ. ಅದು ಜೀವದ ವರದಾನವೆಂದು ಕರೆಯಲ್ಪಟ್ಟಿದೆ.

ಕೋಟ್ಯಂತರ ಜನರು ರಕ್ತದಾನ ಮಾಡಿದ್ದಾರೆ ಅಥವಾ ಪಡೆದಿದ್ದಾರೆ. 1986-87 ರಲ್ಲಿ ಕೆನಡಾದ ಎರಡೂವರೆ ಕೋಟಿ ಜನಸಂಖ್ಯೆಯಲ್ಲಿ 13 ಲಕ್ಷ ಮಂದಿ ರಕ್ತದಾನಿಗಳಾಗಿದ್ದರು. “ಇದು ವರೆಗೆ ದೊರೆತಿರುವ ಅತ್ಯಂತ ಇತ್ತೀಚಿನ ವರ್ಷದ ಸಂಖ್ಯೆಯು, ಕೇವಲ ಯುನೊಯಿಟೆಡ್‌ ಸ್ಟೇಟ್ಸ್‌ನಲ್ಲಿ 1 ಕೋಟಿ 20 ಲಕ್ಷದಿಂದ ಹಿಡಿದು 1 ಕೋಟಿ 40 ಲಕ್ಷ ಯುನಿಟ್‌ ರಕ್ತವನ್ನು ಪೂರಣಗಳಿಗೆ ಉಪಯೋಗಿಸಲಾಯಿತೆಂದು ಹೇಳುತ್ತದೆ.”—ದ ನ್ಯೂ ಯೋರ್ಕ್‌ ಟೈಮ್ಸ್‌, ಫೆಬ್ರವರಿ 18, 1990.

ಡಾ. ಲೂಯಿಸ್‌ ಜೆ. ಕೀಟಿಂಗ್‌ ಗಮನಿಸುವುದು: “ರಕ್ತವು ಯಾವಾಗಲೂ ‘ಮಾಯಾ ವಿದ್ಯಾ’ ಗುಣವುಳ್ಳದ್ದು ಎಂದು ಹೇಳಲಾಗಿದೆ. ಅದರ ಪ್ರಥಮ 46 ವರ್ಷಗಳಲ್ಲಿ, ವೈದ್ಯರೂ ಸಾರ್ವಜನಿಕರೂ, ರಕ್ತವು ಅದರ ನಿಜಸ್ಥಿತಿಗಿಂತ ಹೆಚ್ಚು ಸುರಕ್ಷಿತವೆಂದು ಗ್ರಹಿಸಿದ್ದರು.” (ಕ್ಲೀವ್ಲೆಂಡ್‌ ಕಿನ್ಲಿಕ್‌ ಜರ್ನಲ್‌ ಆಫ್‌ ಮೆಡಿಸಿನ್‌, ಮೇ 1989) ಹಾಗಾದರೆ ಆಗ ಇದ್ದ ಪರಿಸ್ಥಿತಿ ಯಾವುದು ಮತ್ತು ಈಗ ಯಾವುದು?

30 ವರ್ಷಗಳ ಹಿಂದೆ ಸಹ, ರೋಗಶಾಸ್ತ್ರಜ್ಞರಿಗೂ ರಕ್ತನಿಧಿಯ ಸಿಬ್ಬಂಧಿಗಳಿಗೂ ಹೀಗೆ ಸಲಹೆ ನೀಡಲಾಗಿತ್ತು: “ರಕ್ತವು ಸಿಡಿಮದ್ದು! ಅದು ಎಷ್ಟೋ ಒಳ್ಳೆಯದನ್ನು ಅಥವಾ ಎಷ್ಟೋ ಹಾನಿಯನ್ನು ಮಾಡಬಲ್ಲದು. ರಕ್ತಪೂರಣದಿಂದ ಸಾಯುವವರ ಸಂಖ್ಯೆ ಈತರ್‌ ಇಂದ್ರಿಯ ಸುಪ್ತಿ (ether anesthesia) ಅಥವಾ ಅಂತ್ರಪುಚ್ಛ ರೋಗ (appendectomy) ಯಿಂದ ಸಾಯುವವರ ಸಂಖ್ಯೆಗೆ ಸಮಾನ. 1,000 ದಿಂದ 3,000 ಅಥವಾ ಒಂದು ವೇಳೆ 5,000 ಪೂರಣಗಳಲ್ಲಿ ಸಾಧಾರಣ ಒಬ್ಬನು ಸಾಯುತ್ತಾನೆಂದು ಹೇಳಲಾಗುತ್ತದೆ. ಲಂಡನ್ನಿನ ಪ್ರದೇಶದಲ್ಲಿ, ಮಾಡಿದ 13,000 ಸೀಸೆ ರಕ್ತ ಪೂರಣಗಳಿಗೆ ಒಂದು ಸಾವು ವರದಿಯಾಗಿದೆ.”—ನ್ಯೂ ಯೋರ್ಕ್‌ ಸ್ಟೇಟ್‌ ಜರ್ನಲ್‌ ಆಫ್‌ ಮೆಡಿಸಿನ್‌, ಜನವರಿ 15, 1960.

ಹಾಗಾದರೆ ಅಂದಿನಿಂದ ಅಪಾಯಗಳು ನಿವಾರಣೆಯಾಗಿ ಈಗ ರಕ್ತ ಪೂರಣಗಳು ಸುರಕ್ಷಿತವೋ? ಪ್ರತಿವರ್ಷ, ಲಕ್ಷಾಂತರ ಜನರಿಗೆ ರಕ್ತದಿಂದ ಪ್ರತಿಕೂಲವಾದ ಪ್ರತಿಕ್ರಿಯೆಯಾಗುತ್ತದೆ ಮತ್ತು ಅನೇಕರು ಸಾಯುತ್ತಾರೆ ಎಂಬುದು ಸ್ಪಷ್ಟ. ಆದರೆ ಈ ಮೊದಲು ಕೊಟ್ಟಿರುವ ಹೇಳಿಕೆಗಳ ವೀಕ್ಷಣದಲ್ಲಿ, ರಕ್ತರವಾನಿತ ರೋಗಗಳು ನಿಮ್ಮ ಮನಸ್ಸಿಗೆ ಬರಬಹುದು. ಈ ವಿಷಯವನ್ನು ಪರೀಕ್ಷಿಸುವ ಮೊದಲು ಅಷ್ಟು ಪ್ರಸಿದ್ಧವಲ್ಲದ ಕೆಲವು ಅಪಾಯಗಳನ್ನು ಪರಿಗಣಿಸಿರಿ.

ರಕ್ತ ಮತ್ತು ನಿಮ್ಮ ರೋಗರಕ್ಷೆ

20 ನೆಯ ಶತಮಾನದ ಆದಿಯಲ್ಲಿ ವಿಜ್ಞಾನಿಗಳು ರಕ್ತದ ಆಶ್ಚರ್ಯಕರವಾದ ಜಟಿಲತೆಯ ಕುರಿತು ಮಾನವನಿಗಿದ್ದ ತಿಳುವಳಿಕೆಯನ್ನು ಹೆಚ್ಚಿಸಿದರು. ರಕ್ತಗಳಲ್ಲಿ ವಿವಿಧ ನಮೂನೆಯವುಗಳಿವೆ ಎಂದು ಅವರು ಕಂಡು ಹಿಡಿದರು. ರಕ್ತ ಪೂರಣದಲ್ಲಿ ದಾನಿಯ ರಕ್ತ ಹಾಗೂ ರೋಗಿಯ ರಕ್ತವನ್ನು ಸರಿಸಮಾನ ಮಾಡುವುದು ಸಂದಿಗ್ಧ ವಿಷಯ. ಎ ನಮೂನೆಯ ರಕ್ತವಿರುವವನು ಬಿ ನಮೂನೆಯ ರಕ್ತವನ್ನು ಪಡೆಯುವಲ್ಲಿ ಅವನಿಗೆ ತೀವ್ರ ಕೆಂಪು ಕಣ ನಾಶಕ ಪ್ರತಿಕ್ರಿಯೆಯಾಗಬಹುದು. ಅದು ಅವನ ಕೆಂಪು ಕಣಗಳಲ್ಲಿ ಅನೇಕವನ್ನು ನಾಶಪಡಿಸಿ ಬೇಗನೆ ಅವನನ್ನು ಕೊಲ್ಲಬಹುದು. ಈಗ ಈ ರಕ್ತ ಪ್ರತ್ಯೇಕತೆ ಮತ್ತು ಅಡ್ಡ ಸರಿಸಮಾನತೆಗಳು ಮಾಮೂಲಿಯಾದರೂ ತಪ್ಪುಗಳು ನಡೆಯುವುದುಂಟು. ಪ್ರತಿ ವರ್ಷ ಜನರು ಇಂಥ ಹೀಮೊಲಿಟಿಕ್‌ ಪ್ರತಿಕ್ರಿಯೆಗಳಿಂದ ಸಾಯುತ್ತಾರೆ.

ಆದರೆ ನಿಜತ್ವಗಳು, ಈ ಅಸಮಂಜಸತೆಯ ಪ್ರಶ್ನೆಯು, ಆಸ್ಪತ್ರೆಗಳು ಸಾಮ್ಯ ಮಾಡ ಪ್ರಯತ್ನಿಸುವ ಕೇವಲ ಕೆಲವೇ ರಕ್ತ ನಮೂನೆಗಳಿಗಿಂತ ಎಷ್ಟೋ ದೂರ ಹೋಗುತ್ತದೆಂದು ತೋರಿಸುತ್ತವೆ. ಇದೇಕೆ? ಡಾ. ಡಗ್ಲಸ್‌ ಎಚ್‌. ಪೋಸಿ, ಜೂನಿಯರ್‌, ಇವರು “ಬ್ಲಡ್‌ ಟ್ರಾನ್ಸ್‌ಫ್ಯೂಷನ್‌: ಯೂಸೆಸ್‌, ಎಬ್ಯೂಸೆಸ್‌ ಆ್ಯಂಡ್‌ ಹ್ಯಾಸರ್ಡ್ಸ್‌” ಎಂಬ ತಮ್ಮ ಲೇಖನದಲ್ಲಿ ಬರೆಯುವುದು: “ಸುಮಾರು 30 ವರ್ಷಗಳಿಗೆ ಹಿಂದೆ ರಕ್ತ ಪೂರಣವು ಸಂಬಂಧಸೂಚಕವಾಗಿ ಅಪಾಯಕಾರಿಯಾದ ವಿಧಾನವೆಂದು ಸ್ಯಾಂಪ್ಸನ್‌ ವರ್ಣಿಸಿದರು. . . . [ಅಂದಿನಿಂದ] ಕಡಿಮೆ ಪಕ್ಷ, ಇನ್ನೂ 400 ಕೆಂಪು ಕಣ ಪ್ರತಿವಿಷಜನಕಗಳನ್ನು ಕಂಡು ಹಿಡಿದು ಅವುಗಳ ಗುಣವಿವರಣೆ ಮಾಡಲಾಗಿದೆ. ಈ ಸಂಖ್ಯೆ ಹೆಚ್ಚುತ್ತಾ ಹೋಗುವುದರಲ್ಲಿ ಸಂದೇಹವಿಲ್ಲ ಏಕಂದರೆ ಕೆಂಪು ರಕ್ತ ಕಣದ ಪೊರೆಯು ಅಪರಿಮಿತವಾಗಿ ಜಟಿಲವಾಗಿದೆ.”—ಜರ್ನಲ್‌ ಆಫ್‌ ದ ನ್ಯಾನಲ್‌ ಮೆಡಿಕಲ್‌ ಎಸೋಸಿಯೇನ್‌, ಜುಲೈ 1989.

ಈಗ ವಿಜ್ಞಾನಿಗಳು, ಪೂರಣಮಾಡಿದ ರಕ್ತವು ದೇಹದ ರಕ್ಷೆ ಅಥವಾ ರೋಗ ರಕ್ಷಾ ಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತಿದೆಯೆಂದು ಅಧ್ಯಯನ ಮಾಡುತ್ತಿದ್ದಾರೆ. ಇದು ಶಸ್ತ್ರಚಿಕಿತ್ಸೆಯನ್ನು ಬಯಸುವ ನಿಮಗೆ ಅಥವಾ ನಿಮ್ಮ ಸಂಬಂಧಿಗೆ ಯಾವ ಅರ್ಥದಲ್ಲಿರಬಹುದು?

ಒಂದು ಹೃದಯ, ಪಿತ್ತಜನಕಾಂಗ ಅಥವಾ ಇನ್ನೊಂದು ಅಂಗವನ್ನು ವೈದ್ಯರು ಸ್ಥಲಾಂತರಿಸುವಾಗ ರೋಗರಕ್ಷಾವ್ಯವಸ್ಥೆ, ಅದು ಪರ ಅಂಗಾಂಶವೆಂದು ತಿಳಿದು ಅದನ್ನು ವಿಸರ್ಜಿಸಬಹುದು. ಆದರೂ, ರಕ್ತ ಪೂರಣವೂ ಅಂಗಾಂಶ ಸ್ಥಲಾಂತರವೇ. “ಸರಿಯಾಗಿ” ಅಡ್ಡ ಸಾಮ್ಯ ಮಾಡಲ್ಪಟ್ಟಿರುವ ರಕ್ತವು ಸಹ ರೋಗರಕ್ಷಾಸ್ಥಿತಿಯನ್ನು ನಿರೋಧಿಸಬಲ್ಲದು. ರೋಗಶಾಸ್ತ್ರಜ್ಞರ ಒಂದು ಅಧಿವೇಶನದಲ್ಲಿ, “ರಕ್ತ ಪೂರಣಗಳನ್ನು ರೋಗರಕ್ಷಾ ಪ್ರತಿವರ್ತನೆಗೆ ಸಂಬಂಧಿಸಿದ” ನೂರಾರು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಸೂಚಿಸಿ ಹೇಳಲಾಯಿತು.”—“ಕೇಸ್‌ ಬಿಲ್ಡ್‌ ಎಗೇನ್‌ಸ್ಟ್‌ ಟ್ರಾನ್ಸ್‌ಫ್ಯೂಷನ್ಸ್‌,” ಮೆಡಿಕಲ್‌ ವರ್ಲ್ಡ್‌ ನ್ಯೂಸ್‌, ದಶಂಬರ 11, 1989.

ನಿಮ್ಮ ರೋಗರಕ್ಷಾ ವ್ಯವಸ್ಥೆಯ ಒಂದು ಮುಖ್ಯ ಕೆಲಸವು ಹಾನಿಕಾರಕವಾದ (ಕ್ಯಾನ್ಸರ್‌) ಜೀವಕಣಗಳನ್ನು ಹುಡುಕಿ ನಾಶಮಾಡುವುದೇ. ಹಾಗಾದರೆ ನಿರೋಧಿತ ರೋಗರಕ್ಷಾ ಸ್ಥಿತಿ ಕ್ಯಾನ್ಸರ್‌ ಮತ್ತು ಮರಣಕ್ಕೆ ನಡಿಸೀತೇ? ಎರಡು ವರದಿಗಳನ್ನು ಗಮನಿಸಿರಿ.

ಕಾನ್ಸರ್‌ ಪತ್ರಿಕೆ (ಫೆಬ್ರವರಿ 15, 1987) ನೆದರ್ಲೆಂಡ್ಸಿನಲ್ಲಿ ನಡೆದ ಒಂದು ಅಧ್ಯಯನದ ಪರಿಣಾಮವನ್ನು ಕೊಟ್ಟಿತು: “ದೊಡ್ಡ ಕರುಳಿನ ಕ್ಯಾನ್ಸರ್‌ ಇರುವ ರೋಗಿಗಳಲ್ಲಿ, ದೀರ್ಘಕಾಲ ಬದುಕಿ ಉಳಿಯುವ ವಿಷಯದಲ್ಲಿ ಒಂದು ಗಮನಾರ್ಹವಾದ ಪ್ರತಿಕೂಲ ಪರಿಣಾಮ ಕಂಡುಬಂತು. ಈ ಗುಂಪಿನಲ್ಲಿ ರಕ್ತ ಪೂರಣ ಮಾಡಲ್ಪಟ್ಟವರಲ್ಲಿ 48 ಪ್ರತಿಶತ ಮತ್ತು ಪೂರಣವಾಗಿರದ ರೋಗಿಗಳಲ್ಲಿ 74 ಪ್ರತಿಶತ ಮಂದಿಗೆ ಒಂದುಗೂಡಿದ 5 ವರ್ಷಗಳ ಆದ್ಯಂತ ಬದುಕಿ ಉಳಿಯುವಿಕೆಯಿತ್ತು.” ಸದರ್ನ್‌ ಕ್ಯಾಲಿಫೋರ್ನಿಯ ವಿಶ್ವ ವಿದ್ಯಾಲಯದ ವೈದ್ಯರು ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ಹೊಂದಿದ್ದ ನೂರು ರೋಗಿಗಳನ್ನು ಪರೀಕ್ಷಿಸಿದರು: “ಎಲ್ಲಾ ಧ್ವನಿಸಂಪುಟದ ಕ್ಯಾನ್ಸರ್‌ ರೋಗಗಳಲ್ಲಿ ರಕ್ತ ಪಡೆಯದವರು ಪುನಃ ರೋಗಿಗಳಾಗುವ ದರ 14% ಇರುವಾಗ ಅದನ್ನು ಪಡೆದವರು ಆಗುವ ದರ 65%. ಬಾಯಿ ಪೊಳ್ಳಿನ ಅಂದರೆ ಗಂಟಲಕುಹರ ಮತ್ತು ಮೂಗು ಮತ್ತು ಸೈನಸಿನ ಕ್ಯಾನ್ಸರ್‌ನಲ್ಲಿ, ಪೂರಣವಾಗದವರು ಅದನ್ನು ಪುನಃ ಪಡೆಯುವ ಸಂಖ್ಯಾಪ್ರಮಾಣ 31% ಮತ್ತು ಪೂರಣವಾದವರು ರೋಗವನ್ನು ಪುನಃ ಪಡೆಯುವ ಸಂಖ್ಯಾಪ್ರಮಾಣ 71%.”—ಆ್ಯನಲ್ಸ್‌ ಆಫ್‌ ಒಟಾಲಜಿ ರೈನಾಲಜಿ ಆ್ಯಂಡ್‌ ಲ್ಯಾರಿನಾಲಜಿ, ಮಾರ್ಚ್‌ 1989.

ಈ ಅಧ್ಯಯನಗಳು ರಕ್ತಪೂರಣಗಳ ಕುರಿತು ಏನು ಸೂಚಿಸುತ್ತವೆ? “ಬ್ಲಡ್‌ ಟ್ರಾನ್ಸ್‌ಫ್ಯೂಷನ್ಸ್‌ ಆ್ಯಂಡ್‌ ಸರ್ಜರಿ ಫಾರ್‌ ಕ್ಯಾನ್ಸರ್‌” ಎಂಬ ತನ್ನ ಲೇಖನದಲ್ಲಿ ಡಾ. ಜಾನ್‌ ಎಸ್‌. ಸ್ಪ್ರಾಟ್‌ ತೀರ್ಮಾನಿಸಿದ್ದು: “ಕ್ಯಾನ್ಸರ್‌ ಸರ್ಜನನು ರಕ್ತರಹಿತ ಸರ್ಜನನಾಗುವ ಆವಶ್ಯಕತೆ ಬಂದೀತು.—ದಿ ಅಮೆರಿಕನ್‌ ಜರ್ನಲ್‌ ಆಫ್‌ ಸರ್ಜರಿ, ಸಪ್ಟಂಬರ 1986.

ನಿಮ್ಮ ರೋಗರಕ್ಷಾ ವ್ಯವಸ್ಥೆಯ ಇನ್ನೊಂದು ಮುಖ್ಯ ಕೆಲಸ ರೋಗದ ಸೋಂಕನ್ನು ಎದುರಿಸುವುದೇ. ರಕ್ತಪೂರಣ ತಕ್ಕೊಂಡ ರೋಗಿಗಳು ರೋಗದ ಸೋಂಕಿಗೆ ಬಲಿಬೀಳುವ ಪ್ರವೃತ್ತಿ ಹೆಚ್ಚೆಂದು ಅಧ್ಯಯನಗಳು ತೋರಿಸುವುದು ಗ್ರಹಿಸಸಾಧ್ಯವಿರುವ ವಿಷಯ. ಡಾ. ಪಿ. ಐ. ಟಾರ್ಟರ್‌, ಕಾಲೊರೆಕಲ್ಟ್‌ ಶಸ್ತ್ರಚಿಕಿತ್ಸೆಯ ಒಂದು ಅಧ್ಯಯನ ನಡಿಸಿದರು. ರಕ್ತ ಪೂರಣವಾಗಿದ್ದ ರೋಗಿಗಳಲ್ಲಿ 25 ಪ್ರತಿಶತ ಮಂದಿಗೆ ರೋಗ ತಗಲಿತು. ಅವರು ವರದಿ ಮಾಡಿದ್ದು: “ರಕ್ತ ಪೂರಣಗಳನ್ನು ಶಸ್ತ್ರಚಿಕಿತ್ಸೆಯ ಮೊದಲು, ಮಧ್ಯದಲ್ಲಿ ಮತ್ತು ಆ ಬಳಿಕ ಕೊಡಲ್ಪಟ್ಟಾಗ ರೋಗ ಜಟಿಲತೆಗಳೊಂದಿಗೆ ಜೊತೆಗೂಡಿದ್ದವು. . . . ಕೊಡಲ್ಪಟ್ಟ ರಕ್ತದ ಯೂನಿಟ್‌ಗಳ ಸಂಖ್ಯೆ ಹೆಚ್ಚಾದಂತೆ ಶಸ್ತ್ರಚಿಕಿತ್ಸೆಯ ತರುವಾಯದ ರೋಗಸೋಂಕು ಸಹ ಹೆಚ್ಚಾಯಿತು.” (ದ ಬ್ರಿಟಿಷ್‌ ಜರ್ನಲ್‌ ಆಫ್‌ ಸರ್ಜರಿ, ಆಗಸ್ಟ್‌ 1988) ಅಮೆರಿಕ ರಕ್ತನಿಧಿ ಸಂಘದ 1989ರ ಒಂದು ಅಧಿವೇಶನಕ್ಕೆ ಹಾಜರಾದವರು ಇದನ್ನು ಕಂಡು ಹಿಡಿದರು: ಟೊಂಕ ಭರ್ತಿ (hip-replacement) ಶಸ್ತ್ರಚಿಕಿತ್ಸೆಯ ಸಮಯದಲ್ಲಿ ದಾನಿಗಳ ರಕ್ತವನ್ನು ಪಡೆದವರಲ್ಲಿ 23 ಪ್ರತಿಶತ ಜನರಿಗೆ ರೋಗ ಸೋಂಕಿದಾಗ ಯಾವ ರಕ್ತವೂ ಕೊಡಲ್ಪಡದವರಿಗೋ ಯಾವ ರೋಗವೂ ಸೋಂಕಲಿಲ್ಲ.

ರಕ್ತ ಪೂರಣಗಳ ಈ ಪರಿಣಾಮದ ಕುರಿತು ಡಾ. ಜಾನ್‌ ಎ. ಕಾಲಿನ್ಸ್‌ ಬರೆದುದು: “ಪ್ರಯೋಜನಕರವಾದುದನ್ನು ಸಾಧಿಸುತ್ತದೆಂಬುದಕ್ಕೆ ಅತಿ ಕೊಂಚ ಸಾಬೀತಿರುವ ಒಂದು ‘ಚಿಕಿತ್ಸೆ’, ಇಂಥ ರೋಗಿಗಳ ಮುಂದಿರುವ ಮುಖ್ಯ ಸಮಸ್ಯೆಗಳನ್ನೇ ಆ ಬಳಿಕ ಹೆಚ್ಚಿಸುತ್ತದೆಂದು ಕಂಡುಕೊಳ್ಳುವುದು ಹಾಸ್ಯವ್ಯಂಗ್ಯದ ವಿಷಯವಾಗಬಹುದು.”—ವರ್ಲ್ಡ್‌ ಜರ್ನಲ್‌ ಆಫ್‌ ಸರ್ಜರಿ, ಫೆಬ್ರವರಿ 1987.

ರೋಗ ವಿಮುಕ್ತವೋ ಅಪಾಯಭರಿತವೂ?

ರಕ್ತ ರವಾನಿತ ರೋಗ, ಶುದ್ಧಾಂತಕರಣದ ವೈದ್ಯರನ್ನೂ ಅನೇಕ ರೋಗಿಗಳನ್ನೂ ಚಿಂತೆಗೊಳಪಡಿಸುತ್ತದೆ. ಯಾವ ರೋಗ? ನೀವು ಅದನ್ನು ಒಂದೇ ರೋಗಕ್ಕೆ ಪರಿಮಿತವಾಗಿಸಲಾರಿರಿ. ಅನೇಕ ರೋಗಗಳಿವೆಯೆಂಬುದು ನಿಶ್ಚಯ.

ಹೆಚ್ಚು ಪ್ರಖ್ಯಾತವಾದ ರೋಗಗಳನ್ನು ಚರ್ಚಿಸಿದ ಬಳಿಕ, ಟೆಕ್ನೀಕ್ಸ್‌ ಆಫ್‌ ಬ್ಲಡ್‌ ಟ್ರಾನ್ಸ್‌ಫೂ ನ್‌ (1982) ಪುಸ್ತಕವು, ಫರಂಗಿ ರೋಗ (syphilis), ಸೈಟೊಮೆಗಲೊವೈರಸ್‌ ಎಂಬ ಜೀವಕಣ ವಿಸ್ತರಣರೋಗ ಮತ್ತು ಮಲೇರಿಯ, ಮುಂತಾದ “ಇತರ ಪೂರಣ ಸಂಬಂಧಿತ ಸಾಂಕ್ರಾಮಿಕ ರೋಗ” ಗಳ ವಿಷಯ ಮಾತಾಡುತ್ತದೆ. ಬಳಿಕ ಅದು ಹೇಳುವುದು: “ಹರ್ಪೀಸ್‌ ವೈರಸ್‌ ರೋಗ, ಮೋನೋನ್ಯೂಕ್ಲಿಯೋಸಿಸ್‌ ರೋಗ [ಎಪ್‌ಸ್ಟೈನ್‌-ಬಾರ್‌ ರೋಗಾಣು], ಟಾಕ್ಸೊಪ್ಲಾಸ್ಮೋಸಿಸ್‌, ಟ್ರೈಪ್ಯಾನೊಸೋಮಿಯಾಸಿಸ್‌ [ಆಫ್ರಿಕದ ನಿದ್ರಾವಾತ ರೋಗ ಮತ್ತು ಷಾಗಸ್‌ ರೋಗ], ಲೀಶ್ಮೆನೈಏಸಿಸ್‌, ಬ್ರೂಸೆಲೋಸಿಸ್‌ [ತರಂಗಜ್ವರ], ಟೈಫಸ್‌ ಜ್ವರ, ಫಿಲೇರಿಯ ರೋಗ, ದಡಾರ ರೋಗ, ಸಾಲ್ಮನೆಲೋಸಿಸ್‌ ಮತ್ತು ಕಾಲೊರ್ಯಾಡೋ ಟಿಕ್‌ (ಉಣ್ಣಿ) ಜ್ವರಗಳು ಸೇರಿರುವ, ರಕ್ತ ಪೂರಣದ ಮೂಲಕ ರವಾನಿಸಲ್ಪಡುವ ಅನೇಕ ಇತರ ರೋಗಗಳು ಸಹ ವರದಿಯಾಗಿವೆ.”

ವಾಸ್ತವವಾಗಿ, ಇಂಥ ರೋಗಗಳ ಪಟ್ಟಿ ಬೆಳೆಯುತ್ತಿದೆ. ನೀವು ಒಂದು ವೇಳೆ “ಪೂರಣದಿಂದ ಲೈಮ್‌ (lyme) ರೋಗವೇ? ಅದು ಅಸಂಭವನೀಯ, ಆದರೆ ಪರಿಣತರು ಜಾಗರೂಕರಾಗಿದ್ದಾರೆ” ಎಂಬ ತಲೆಪಂಕ್ತಿಗಳನ್ನು ಓದಿರಬಹುದು. ಲೈಮ್‌ ರೋಗಿಯಿಂದ ಬರುವ ರಕ್ತ ಎಷ್ಟು ಸುರಕ್ಷಿತ? ಆರೋಗ್ಯಾಧಿಕಾರಿಗಳ ಒಂದು ತಂಡದೊಂದಿಗೆ ಅವರು ಅಂಥ ರಕ್ತವನ್ನು ಅಂಗೀಕರಿಸುವರೋ ಎಂದು ಕೇಳಲಾಯಿತು. “ಅವರೆಲ್ಲರೂ ಅಂಗೀಕರಿಸುವುದಿಲ್ಲ ಎಂದು ಉತ್ತರ ಕೊಟ್ಟರಾದರೂ ಅಂಥ ದಾನಿಗಳಿಂದ ರಕ್ತವನ್ನು ನಿರಾಕರಿಸಬೇಕೆಂದು ಯಾರೂ ಶಿಫಾರಸು ಮಾಡಲಿಲ್ಲ.” ಹಾಗಾದರೆ, ಪರಿಣತರೇ ಅಂಗೀಕರಿಸದ ರಕ್ತನಿಧಿಯಲ್ಲಿ ಸಂಗ್ರಹಿಸಿರುವ ರಕ್ತದ ಕುರಿತು ಸಾರ್ವಜನಿಕರಿಗೆ ಹೇಗನಿಸಬೇಕು?—ದ ನ್ಯೂ ಯೋರ್ಕ್‌ ಟೈಮ್ಸ್‌, ಜುಲೈ 18, 1989.

ಚಿಂತೆಗಿರುವ ಎರಡನೆಯ ಕಾರಣವು, ಒಂದು ನಿರ್ದಿಷ್ಟ ರೋಗವು ಹೇರಳವಾಗಿರುವ ದೇಶದಲ್ಲಿ ಸಂಗ್ರಹಿಸಿರುವ ರಕ್ತವನ್ನು ಸಾರ್ವಜನಿಕರೂ ವೈದ್ಯರೂ ಆ ಅಪಾಯಕ್ಕೆ ಎಚ್ಚರವಾಗಿರದ ಸ್ಥಳಗಳಲ್ಲಿ ಉಪಯೋಗಿಸ ಸಾಧ್ಯವಿರುವುದೇ. ಇಂದು ಪ್ರಯಾಣ, ಅದರಲ್ಲೂ, ನಿರಾಶ್ರಿತರ ಮತ್ತು ವಲಸೆ ಹೋಗುವವರ ಪ್ರಯಾಣ ವೃದ್ಧಿಯಾಗಿರುವುದರಿಂದ, ಯಾವುದಾದರೂ ಒಂದು ವಿಚಿತ್ರ ರೋಗವು ರಕ್ತದ ಉತ್ಪನ್ನಗಳಲ್ಲಿರಬಹುದಾದ ಅಪಾಯವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಸಾಂಕ್ರಾಮಿಕ ರೋಗಗಳ ವಿಶೇಷಜ್ಞನೊಬ್ಬನು ಎಚ್ಚರಿಸಿದ್ದು: “ಈ ಮೊದಲು ಹರಡಬಹುದಾದ ರೋಗವಲ್ಲವೆಂದು ಎಣಿಸಲಾಗಿದ್ದ ಅನೇಕ ರೋಗಗಳನ್ನು ರವಾನಿಸುವುದನ್ನು ತಡೆಯಲು ರಕ್ತ ಸರಬರಾಯಿಯನ್ನು ಪರೀಕ್ಷಿಸಬೇಕಾದೀತು. ಈ ರೋಗಗಳಲ್ಲಿ ಲುಕೇಮಿಯ, ಲಿಂಫೋಮ ಮತ್ತು ಡಿಮೆನ್ಸಿಯ ಚಿತ್ತ ವೈಕಲ್ಯ [ಅಥವಾ ಆಲ್‌ಸೈಮರ್ಸ್‌ ರೋಗ] ಸೇರಿವೆ.”—ಟ್ರಾನ್ಸ್‌ಫ್ಯೂನ್‌ ಮೆಡಿಸಿನ್‌ ರಿವ್ಯೂಸ್‌, ಜನವರಿ 1989.

ಈ ಅಪಾಯಗಳು ನಡುಕ ಬರಿಸುವವುಗಳಾದರೂ. ಇತರ ಅಪಾಯಗಳು ಹೆಚ್ಚು ವ್ಯಾಪಕವಾದ ಭಯವನ್ನು ಹುಟ್ಟಿಸಿವೆ.

ಏಯ್ಡ್ಸ್‌ ಸರ್ವವ್ಯಾಪಿ ವ್ಯಾಧಿ

“ಏಯ್ಡ್ಸ್‌, ಡಾಕ್ಟರರು ಮತ್ತು ರೋಗಿಗಳು ರಕ್ತದ ವಿಷಯ ಯೋಚಿಸುವ ರೀತಿಯನ್ನೇ ಎಂದೆಂದಿಗೂ ಬದಲಾಯಿಸಿದೆ. ಮತ್ತು ಆ ವಿಚಾರ ಕೆಟ್ಟದ್ದಲ್ಲ, ಎಂದರು ರಕ್ತ ಪೂರಣದ ವಿಷಯ ಸಮ್ಮೇಳನಕ್ಕೆ, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಪ್‌ ಹೆಲ್ತ್‌ನಲ್ಲಿ ಕೂಡಿ ಬಂದ ವೈದ್ಯರು.”—ವಾಷಿಂಗ್ಟನ್‌ ಪೋಸ್ಟ್‌, ಜುಲೈ 5, 1988.

ಏಯ್ಡ್ಸ್‌ (AIDS, ಅರ್ಜಿತ ರೋಗರಕ್ಷಾ ನ್ಯೂನತೆಯ ಸಹ ಲಕ್ಷಣ) ಸರ್ವವ್ಯಾಪಿ ವ್ಯಾಧಿಯು ರಕ್ತದಿಂದ ಸೋಂಕು ರೋಗವನ್ನು ಪಡೆಯುವ ಅಪಾಯದ ಕುರಿತು ಜನರನ್ನು ವಿಪರೀತವಾಗಿ ಎಚ್ಚರಗೊಳಿಸಿದೆ. ಈಗ ಅನೇಕರಿಗೆ ಇದು ಸೋಂಕಿದೆ. ಅದು ನಿಯಂತ್ರಣವಿಲ್ಲದೆ ಹರಡುತ್ತದೆ. ಮತ್ತು ಅದು ಸಾಯಿಸುವ ಸಂಖ್ಯಾಪ್ರಮಾಣ ಕಾರ್ಯತಃ 100 ಪ್ರತಿಶತ.

ಈ ಏಯ್ಡ್ಸ್‌ ಸಹಲಕ್ಷಣ, ಹ್ಯೂಮನ್‌ ಇಮ್ಯೂನೋಡಿಫಿಶನ್ಸಿ ವೈರಸ್‌ (HIV) ಎಂಬ ರೋಗಾಣುವಿನಿಂದ ಉಂಟಾಗುತ್ತದೆ ಮತ್ತು ಇದು ರಕ್ತದ ಮೂಲಕ ಹರಡಬಲ್ಲದು. ಆಧುನಿಕ ಏಯ್ಡ್ಸ್‌ ವ್ಯಾಧಿ 1981 ರಲ್ಲಿ ಬೆಳಕಿಗೆ ಬಂತು. ಮರುವರ್ಷವೇ, ಆರೋಗ್ಯ ಪರಿಣತರು, ಈ ವೈರಸ್‌ ರೋಗಾಣುವನ್ನು, ಪ್ರಾಯಶಃ ರಕ್ತ ಉತ್ಪನ್ನದ ಮೂಲಕ ಇನ್ನೊಬ್ಬನಿಗೆ ದಾಟಿಸಸಾಧ್ಯವಿದೆಯೆಂದು ತಿಳಿದರು. ಆದರೆ ರಕ್ತ ಕೈಗಾರಿಕೆ, ಈ ಏಚ್‌ಐವಿ ಪ್ರತಿವಿಷ ವಸ್ತುಗಳಿರುವ ರಕ್ತವನ್ನು ಸೂಚಿಸುವ ಪರೀಕ್ಷೆಗಳು ಅದಕ್ಕೆ ದೊರೆತಿದ್ದರೂ, ಪ್ರತಿಕ್ರಿಯೆಗೆ ನಿಧಾನಿಸಿತೆಂದು ಈಗ ಒಪ್ಪಲಾಗುತ್ತದೆ. ಕೊನೆಗೆ, 1985 ರಲ್ಲಿ * ದಾನಿಗಳ ರಕ್ತ ಪರೀಕ್ಷೆಯ ಕಾರ್ಯ ಆರಂಭವಾಯಿತು. ಆದರೆ ಆಗಲೂ, ಆಗಲೇ ಮಾರಾಟಕ್ಕೆ ಸಿದ್ಧವಾಗಿದ್ದ ರಕ್ತ ಉತ್ಪನ್ನಗಳಿಗೆ ಅದನ್ನು ಒಳಪಡಿಸಲಿಲ್ಲ.

ಆ ಬಳಿಕ “ರಕ್ತ ಸರಬರಾಜು ಈಗ ಸುರಕ್ಷಿತ” ಎಂದು ಸಾರ್ವಜನಿಕರಿಗೆ ಆಶ್ವಾಸನೆಯನ್ನು ನೀಡಲಾಯಿತು. ಆದರೆ, ತರುವಾಯ, ಏಯ್ಡ್ಸ್‌ಗೆ ಒಂದು ಅಪಾಯಕರವಾದ “ವಿಂಡೊ ಪೀರಿಯೆಡ್‌” ಎಂಬ ಸಮಯಾವಧಿ ಇದೆ ಎಂದು ತಿಳಿಸಲಾಯಿತು. ಒಬ್ಬ ವ್ಯಕ್ತಿಗೆ ರೋಗ ತಾಗಿದ ಮೇಲೆ, ಅವನು ಕಂಡು ಹಿಡಿಯಸಾಧ್ಯವಿರುವ ಪ್ರತಿವಿಷ ವಸ್ತುಗಳನ್ನು ಉತ್ಪಾದಿಸುವ ತನಕ ಮಾಸಗಳು ಹಿಡಿಯಬಹುದು. ವೈರಸ್‌ ರೋಗಾಣು ತನ್ನಲ್ಲಿದೆಯೆಂದು ತಿಳಿಯದಿರುವ ಅವನು ತನ್ನ ರಕ್ತ ದಾನವನ್ನು ಮಾಡ ಬಹುದು ಮತ್ತು ಅದರ ಪರೀಕ್ಷೆ ಅದರಲ್ಲಿ ರೋಗಾಣುವಿಲ್ಲವೆಂದು ತೋರಿಸ ಬಹುದು. ಇದು ಸಂಭವಿಸಿದೆ. ಇಂಥ ರಕ್ತ ಪೂರಣವಾದ ಬಳಿಕ ಜನರು ಏಯ್ಡ್ಸ್‌ ವಿಕಸನವನ್ನು ತೋರಿಸಿದ್ದುಂಟು.

ಈ ಚಿತ್ರ ಇನ್ನೂ ಉಗ್ರ ಮುಖದಾಯ್ದಿತು. ದ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ (ಜೂನ್‌ 1, 1989) “ಮೌನ ಏಚ್‌ಐವಿ ರೋಗ ಸೋಂಕುಗಳ” ವಿಷಯ ವರದಿ ಮಾಡಿತು. ಆಗಿನ ಪರೋಕ್ಷ ಪರೀಕ್ಷೆಗಳ ಮೂಲಕ ಕಂಡು ಹಿಡಿಯಲ್ಪಡದೆನೇ ಒಬ್ಬನು ಏಯ್ಡ್ಸ್‌ ವೈರಸನ್ನು ಅನೇಕ ವರ್ಷಕಾಲ ಇಟ್ಟು ಕೊಂಡಿರಬಹುದು ಎಂದು ಆಗ ಸ್ಥಾಪಿಸಲ್ಪಟ್ಟಿತು. ಕೆಲವರು ಇದನ್ನು ವಿರಳ ಸಂಭವಗಳೆಂದು ಹೇಳಿ ಅಪ್ರಾಮುಖ್ಯ ಮಾಡಿದರೂ “ರಕ್ತ ಮತ್ತು ಅದರ ಅಂಗಗಳ ಮೂಲಕ ಏಯ್ಡ್ಸ್‌ ರವಾನಿಸುವ ಅಪಾಯವನ್ನು ಪೂರ್ತಿಯಾಗಿ ನಿವಾರಿಸ ಸಾಧ್ಯವಿಲ್ಲ.” (ಪೇಟ್‌ ಕ್ಯಾರ್‌, ನವಂಬರ 30, 1989) ಮನಸ್ಸು ಕಲಕಿಸುವ ತೀರ್ಮಾನ: ನಕಾರಾತ್ಮಕ ಪರೀಕ್ಷೆಯನ್ನು ಅದು ಆರೋಗ್ಯ ಪತ್ರವೆಂಬುದಾಗಿ ಓದಸಾಧ್ಯವಿಲ್ಲ. ರಕ್ತದಿಂದ ಇನ್ನೆಷ್ಟು ಜನ ಏಯ್ಡ್ಸ್‌ ಪಡೆಯಲಿದ್ದಾರೆ?

ಮುಂದಿನ ಪಾದರಕ್ಷೆಯೋ? ಪಾದರಕ್ಷೆಗಳೋ?

ದೊಡ್ಡ ಕಟ್ಟಡಗಳ ಅನೇಕ ನಿವಾಸಿಗಳು ತಮ್ಮ ಮೇಲಿರುವ ಮನೆಯ ನೆಲಕ್ಕೆ ಒಂದು ಪಾದರಕ್ಷ ಹೊಡೆಯುವ ಸದ್ದನ್ನು ಕೇಳಿದ ಮೇಲೆ ಎರಡನೆಯದನ್ನು ಕಾಯುತ್ತಾ ಉದ್ವೇಗಭರಿತರಾಗಬಹುದು. ಆದರೆ ಈ ರಕ್ತದ ಉಭಯಸಂಕಟದಲ್ಲಿ ಇನ್ನೆಷ್ಟು ಮಾರಕ ಪಾದರಕ್ಷಗಳು ಬಡಿಯಲಿವೆಯೋ ಎಂದು ಯಾವನಿಗೂ ಗೊತ್ತಿಲ್ಲ.

ಈ ಏಯ್ಡ್ಸ್‌ ರೋಗಾಣುವನ್ನು ಏಚ್‌ಐವಿ ಎಂದು ಸೂಚಿಸಲಾಗಿದೆಯಾದರೂ ಕೆಲವು ಪರಿಣತರು ಈ ಅದನ್ನು ಏಚ್‌ಐವಿ-1 ಎಂದು ಕರೆಯುತ್ತಾರೆ. ಇದೇಕೆ? ಏಕಂದರೆ, ಅವರು ಏಯ್ಡ್ಸ್‌ ನಮೂನೆಯ ಇನ್ನೊಂದು (ಏಚ್‌ಐವಿ-2) ವೈರಸನ್ನು ಕಂಡು ಹಿಡಿದರು. ಈ ವೈರಸ್‌ ಸಹ ಏಯ್ಡ್ಸ್‌ ರೋಗಸೂಚನೆಗಳನ್ನು ಬರಮಾಡಬಲ್ಲದು ಮತ್ತು ಕೆಲವು ಪ್ರದೇಶಗಳಲ್ಲಿ ಇದು ವ್ಯಾಪಕವಾಗಿದೆ. ಇದಲ್ಲದೆ, “ಈಗ ಇಲ್ಲಿ ಉಪಯೋಗದಲ್ಲಿರುವ ಏಯ್ಡ್ಸ್‌ ಪರೀಕ್ಷೆಗಳಲ್ಲಿ ಇದನ್ನು ಹೊಂದಿಕೆಯಾಗಿ ಕಂಡು ಹಿಡಿಯಲಾಗುತ್ತಿಲ್ಲ” ಎನ್ನುತ್ತದೆ ದ ನ್ಯೂ ಯೋರ್ಕ್‌ ಟೈಮ್ಸ್‌. (ಜೂನ್‌ 27, 1989) “ಈ ಹೊಸ ಕಂಡುಹಿಡಿತವು . . . ರಕ್ತನಿಧಿಗಳಿಗೆ, ಅವುಗಳಿಗೆ ದೊರೆಯುವ ದಾನ ಅಪಾಯರಹಿತವೆಂದು ನಿಶ್ವಯಿಸುವುದನ್ನು ಹೆಚ್ಚು ಕಷ್ಟಕರವಾಗಿ ಮಾಡುತ್ತದೆ.”

ಅಥವಾ, ಏಯ್ಡ್ಸ್‌ ವೈರಸಿನ ದೂರಸಂಬಂಧಿಗಳ ವಿಷಯವೇನು? ರಾಷ್ಟ್ರಾಧ್ಯಕ್ಷ ನಿಯೋಗ (ಯು. ಎಸ್‌. ಎ.) ವೊಂದು, ಇಂಥ ಒಂದು ವೈರಸ್‌ ರೋಗಾಣು “ವಯಸ್ಕರ ಟಿ-ಸೆಲ್‌ ಲುಕೇಮಿಯ⁄ಲಿಂಫೋಮ ಮತ್ತು ಒಂದು ಕಠಿಣ ನರವ್ಯೂಹ ರೋಗಕ್ಕೆ ಕಾರಣವೆಂದು ನಂಬಲಾಗುತ್ತದೆ” ಎಂದು ಹೇಳಿತು. ಈ ರೋಗಾಣು ಆಗಲೆ ರಕ್ತದಾನಿಗಳ ಜನಸಂಖ್ಯೆಯಲ್ಲಿದೆ ಮತ್ತು ರಕ್ತವು ಇದನ್ನು ಹರಡಿಸಬಲ್ಲದು. ಹಾಗಾದರೆ, ಜನರಿಗೆ ಹೀಗೆ ಪ್ರಶ್ನಿಸುವ ಹಕ್ಕಿದೆ: ‘ಇಂಥ ಇತರ ವೈರಸ್‌ಗಳ ಸಂಬಂಧದಲ್ಲಿ ರಕ್ತನಿಧಿಗಳ ಪರೀಕ್ಷೆ ಎಷ್ಟು ಕಾರ್ಯ ಸಾಧಕ?’

ವಾಸ್ತವವಾಗಿ, ರಕ್ತ ಸಂಗ್ರಹದಲ್ಲಿ ಎಷ್ಟು ರಕ್ತ ರವಾನಿತ ವೈರಸ್‌ಗಳು ಅಡಗಿವೆಯೆಂಬುದನ್ನು ಸಮಯವೇ ಹೇಳೀತು. ಡಾ. ಹ್ಯಾರಲ್ಡ್‌ ಟಿ. ಮೆರಿಮೆನ್‌ ಬರೆಯುವುದು: “ಜ್ಞಾತಕ್ಕಿಂತ ಅಜ್ಞಾತವೇ ಹೆಚ್ಚು ಚಿಂತೆಗೆ ಕಾರಣವಾಗ ಬಹುದು. ಅನೇಕ ವರ್ಷಗಳ ಪರಿಪಾಕಾವಾಸ್ಥೆಯಿರುವ, ಹೀಗೆ ರವಾನಿಸಲ್ಪಟ್ಟ ವೈರಸ್‌ಗಳನ್ನು ರಕ್ತ ಪೂರಣದೊಂದಿಗೆ ಜೊತೆಗೂಡಿಸುವುದು ಕಷ್ಟವಪಷ್ಟೇಯಲ್ಲ, ಅವುಗಳನ್ನು ಪತ್ತೆ ಹಚ್ಚುವುದು ಇನ್ನೂ ಕಷ್ಟ. ಈ ಏಚ್‌ಟಿಎಲ್‌ವಿ (HTLV) ಗುಂಪಿನ ರೋಗಾಣುಗಳು, ಕಂಡುಹಿಡಿಯಲ್ಪಟ್ಟವುಗಳಲ್ಲಿ ಕೇವಲ ಮೊದಲನೆಯದೆಂಬುದು ನಿಶ್ಚಯ.” (ಟ್ರಾನ್ಸ್‌ಫ್ಯೂನ್‌ ಮೆಡಿಸಿನ್‌ ರಿವ್ಯೂಸ್‌, ಜುಲೈ 1989) “ಈ ಏಯ್ಡ್ಸ್‌ ಸಾಂಕ್ರಾಮಿಕ ರೋಗ ಸಂಕಟಕರವಲ್ಲವೋ ಎನ್ನುವಂತೆ, . . . 1980 ಗಳಲ್ಲಿ, ಹೊಸದಾಗಿ ಪ್ರಸ್ತಾಪಿಸಿದ ಅಥವಾ ವರ್ಣಿಸಲಾಗಿರುವ, ರಕ್ತ ಪೂರಣದ ಅನೇಕ ಅಪಾಯಗಳು ಗಮನಕ್ಕೆ ಬಂದಿವೆ. ಇತರ ಗಂಭೀರವಾದ ವೈರಸ್‌ ರೋಗಗಳು ಅಸ್ತಿತ್ವದಲ್ಲಿವೆ ಮತ್ತು ಇವು ಹೊಮೋಲೊಗಸ್‌ ರಕ್ತ ಪೂರಣಗಳ ಮೂಲಕ ರವಾನಿಸಲ್ಪಡುತ್ತವೆಂದು ಮುಂತಿಳಿಸಲು ಹೆಚ್ಚು ಭಾವನಾಶಕ್ತಿ ಅಗತ್ಯವಿರುವುದಿಲ್ಲ.—ಲಿಮಿಟಿಂಗ್‌ ಹೊಮೋಲೊಗಸ್‌ ಎಕ್ಸ್‌ಪೋರ್‌: ಆಲರ್ನ್ಟೆಟಿವ್‌ ಸಾಟ್ಟ್ರಿಜೀಸ್‌, 1989.

ಎಷ್ಟೊಂದು “ಪಾದರಕ್ಷೆಗಳು” ಈಗಾಗಲೇ ಬಿದ್ದಿವೆಯೆಂದರೆ ರೋಗ ನಿಯಂತ್ರಣ ಕೇಂದ್ರಗಳು “ಸಾರ್ವಲೌಕಿಕ ಮುಂಜಾಗ್ರತೆ” ತೆಗೆದು ಕೊಳ್ಳಬೇಕೆಂದು ಶಿಫಾರಸು ಮಾಡುತ್ತವೆ. ಆಂದರೆ, ‘ಏಚ್‌ಐವಿ ಮತ್ತು ಇತರ ರಕ್ತ ರವಾನಿತ ರೋಗಾಣುಗಳನ್ನು ಎಲ್ಲ ರೋಗಿಗಳು ಹರಡಿಸುತ್ತಾರೆಂದು ಆರೋಗ್ಯ ಕಾರ್ಮಿಕರು ಭಾವಿಸಬೇಕು’ ಎಂದರ್ಥ. ಹೀಗೆ, ರಕ್ತದ ವಿಷಯದಲ್ಲಿ ತಮ್ಮ ವೀಕ್ಷಣಕ್ಕೆ ಆರೋಗ್ಯ ಕಾರ್ಮಿಕರೂ ಸಾರ್ವಜನಿಕರೂ ಸಕಾರಣವಿದ್ದೇ ಪುನಃ ಬೆಲೆ ಕಟ್ಟುತ್ತಿದ್ದಾರೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 27 ಎಲ್ಲಾ ರಕ್ತವು ಈಗಲೂ ಪರೀಕ್ಷಿಸಲ್ಪಡುತ್ತದೆಂದು ನಾವು ಎಣಿಸಲಿಕ್ಕೆ ಸಾಧ್ಯವಿಲ್ಲ. ಉದಾಹರಣೆಗೆ, 1989ರ ಆರಂಭದಿಂದ ಬ್ರೇಝಿಲಿನ 80 ಪ್ರತಿಶತ ರಕ್ತನಿಧಿಗಳು ಸರಕಾರದ ಹತೋಟಿಯಲ್ಲಿರುವುದಿಲ್ಲ, ಇಲ್ಲವೆ ಅವರು ಅದನ್ನು ಏಯ್ಡ್ಸ್‌ಗಾಗಿ ಪರೀಕ್ಷಿಸುವುದೂ ಇಲ್ಲ.

[ಪುಟ 9 ರಲ್ಲಿರುವ ಚೌಕ]

ಸುಮಾರು 100 ಪೂರಣಗಳಲ್ಲಿ 1ರ ಜೊತೆಗೆ ಜ್ವರ, ಚಳಿ ಅಥವಾ ಅರ್ಟಿಕೇರಿಯ [ಗುಳ್ಳೆಗಳು] ಬರುತ್ತವೆ. . . . 6000 ಕೆಂಪು ಕಣ ಪೂರಣಗಳಲ್ಲಿ ಸುಮಾರು 1 ರಲ್ಲಿ ಹೀಮೊಲಿಟಿಕ್‌ ಪೂರಣ ಪ್ರತಿಕ್ರಿಯೆ ಸಂಭವಿಸುತ್ತದೆ. ಇದೊಂದು ಕಠಿಣ ರೋಗರಕ್ಷಾ ಪ್ರತಿಕ್ರಿಯೆಯಾಗಿದ್ದು, ಅದು ತೀವ್ರವಾಗಿ ಅಥವಾ ರಕ್ತ ಪೂರಣವಾಗಿ ಕೆಲವು ದಿನಗಳ ಮೇಲೆ ನಿಧಾನವಾಗಿ ಸಂಭವಿಸಬಹುದು. ಇದರಿಂದ [ಮೂತ್ರಪಿಂಡದ] ತೀವ್ರ ಮುರಿದು ಬೀಳುವಿಕೆ, ಧಕ್ಕೆ (shock), ರಕ್ತ ಪರಿಚಲನಾಂಗಗಳ ಹೆಪ್ಪುಗಟ್ಟುವಿಕೆ ಮತ್ತು ಮರಣ ಸಹ ಸಂಭವಿಸಬಹುದು.”—ನ್ಯಾಷನಲ್‌ ಇನ್‌ಸ್ಟಿಟ್ಯೂಟ್ಸ್‌ ಆಫ್‌ ಹೆಲ್ತ್‌ (NIH) ಕಾನ್‌ಫರೆನ್ಸ್‌, 1988.

[ಪುಟ 0 ರಲ್ಲಿರುವ ಚೌಕ]

ಡೇನಿಷ್‌ ವಿಜ್ಞಾನಿ ನೀಲ್ಸ್‌ ಜರ್ನ್‌ 1984ರ ವೈದ್ಯಕೀಯ ವಿಜ್ಞಾನದ ನೋಬೆಲ್‌ ಪಾರಿತೋಷಕದಲ್ಲಿ ಪಾಲಿಗರಾದರು. ನೀವೇಕೆ ರಕ್ತ ಪೂರಣವನ್ನು ನಿರಾಕರಿಸಿದಿರಿ ಎಂದು ಕೇಳಲಾಗಿ ಅವರು ಹೇಳಿದ್ದು: “ಒಬ್ಬನ ರಕ್ತ ಅವನ ಬೆರಳೊತ್ತಿನಂತಿದೆ—ಪೂರ್ತಿ ಸಮಾನವಾಗಿರುವ ಎರಡು ನಮೂನೆಯ ರಕ್ತಗಳಿಲ್ಲ.”

[ಪುಟ 21 ರಲ್ಲಿರುವ ಚೌಕ]

ರಕ್ತ, ಹಾಳಾದ ಪಿತ್ತಜನಕಾಂಗ, ಮತ್ತು . . .

“ಹಾಸ್ಯವ್ಯಂಗ್ಯವಾದ ವಿಷಯವೇನಂದರೆ, ರಕ್ತ ರವಾನಿತ ಏಯ್ಡ್ಸ್‌ . . . ಇತರ ರೋಗಗಳಷ್ಟು—ದೃಷ್ಟಾಂತಕ್ಕೆ, ಯಕೃತ್ತಿನ ಊತ (hepatitis)—ಮಹಾ ಅಪಾಯಕಾರಿಯಾಗಿ ಎಂದಿಗೂ ಇದ್ದದ್ದಿಲ್ಲ.” ಎಂದಿತು ವಾಷಿಂಗ್ಟನ್‌ ಪೋಸ್ಟ್‌.

ಹೌದು, ಯಾವ ನಿರ್ದಿಷ್ಟ ಔಷಧವೂ ಇಲ್ಲದ ಇಂಥ ಹೆಪಟೈಟಿಸ್‌ನಿಂದ ಅನೇಕರು ತೀರಾ ಕಾಯಿಲೆ ಬಿದ್ದು ಸತ್ತಿದ್ದಾರೆ. ಯು. ಎಸ್‌. ನ್ಯೂಸ್‌ ಆ್ಯಂಡ್‌ ವರ್ಲ್ಡ್‌ ರಿಪೋರ್ಟ್‌ (ಮೇ 1, 1989) ಪತ್ರಿಕೆಗನುಸಾರ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿ, ರಕ್ತ ಕೊಡಲ್ಪಡುವವರಲ್ಲಿ 5 ಸೇಕಡಾ ಜನರಿಗೆ—ಅಂದರೆ ವರ್ಷಕ್ಕೆ 1,75,000 ಜನರಿಗೆ ಹೆಪಟೈಟಿಸ್‌ ಬರುತ್ತದೆ. ಇವರಲ್ಲಿ ಅರ್ಧಾಂಶ ಜನರು ಬಹುಕಾಲದ ವಾಹಕರಾಗುತ್ತಾರೆ ಮತ್ತು ಕಡಿಮೆಪಕ್ಷ 5 ಜನರಲ್ಲಿ 1 ವ್ಯಕ್ತಿ, ಯಕೃತ್ತಿನ ಸಿರೋಸಿಸ್‌ ಅಥವಾ ಕ್ಯಾನ್ಸರನ್ನು ಪಡೆಯುತ್ತಾನೆ. 4,000 ಜನರು ಸಾಯುತ್ತಾರೆಂದು ಅಂದಾಜು ಮಾಡಲಾಗುತ್ತದೆ. ಒಂದು ಜಂಬೊ ಜೆಟ್‌ ವಿಮಾನ ಅಪಘಾತಕ್ಕೀಡಾಗಿ ಸರ್ವ ಯಾತ್ರಿಗಳನ್ನು ಕೊಲ್ಲುವುದಾದರೆ ಪತ್ರಿಕೆಗಳ ತಲೆಪಂಕ್ತಿ ಹೇಗಿರಬಹುದೆಂದು ಯೋಚಿಸಿರಿ. ಆದರೆ 4,000 ಮರಣಗಳು, ಪ್ರತಿ ತಿಂಗಳಲ್ಲಿ ಒಂದು ಪೂರ್ತಿ ಜಂಬೊ ಜೆಟ್‌ ನಾಶವಾಗುವುದಕ್ಕೆ ಸಮಾನವಾಗಿದೆ!

ಸ್ವಲ್ಪ ಕಡಿಮೆ ಶಕ್ತಿಯ ಹೆಪಟೈಟಿಸ್‌ (ಟೈಪ್‌ ಎ) ಅಶುದ್ಧ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆಂದು ವೈದ್ಯರಿಗೆ ದೀರ್ಘ ಸಮಯದಿಂದ ಗೊತ್ತಿತ್ತು. ಆದರೆ ಬಳಿಕ, ರಕ್ತದ ಮೂಲಕ ಹೆಚ್ಚು ಗಂಭೀರ ರೀತಿಯ ಹೆಪಟೈಟಿಸ್‌ ಹರಡುವುದನ್ನು ಅವರು ಕಂಡು ಹಿಡಿದರು ಮತ್ತು ರಕ್ತ ಪರೀಕೆಗ್ಷೆ ಅವರಿಗೆ ಯಾವ ದಾರಿಯೂ ಇರಲಿಲ್ಲ. ಕ್ರಮೇಣ, ನಿಪುಣ ವಿಜ್ಞಾನಿಗಳು ಈ ವೈರಸಿನ (ಟೈಪ್‌ ಬಿ) ಹೆಜ್ಜೆಗುರುತುಗಳನ್ನು” ಹೇಗೆ ಕಂಡು ಹಿಡಿಯುವುದೆಂದು ಕಲಿತರು. 1970ರ ದಶಕದ ಆದಿಭಾಗದಿಂದ ಹಿಡಿದು, ಕೆಲವು ದೇಶಗಳಲ್ಲಿ ರಕ್ತ ಪರೀಕ್ಷೆಯನ್ನು ಮಾಡಲಾಯಿತು. ರಕ್ತ ಸಂಗ್ರಹ ಅಪಾಯರಹಿತವೆಂದೂ ರಕ್ತಕ್ಕೆ ಶುಭ್ರ ಭವಿಷ್ಯವಿದೆಯೆಂದೂ ತೋರಿಬಂತು. ಅಥವಾ ಅದು ನಿಜವಾಗಿತ್ತೋ?

ಸ್ವಲ್ಪದರಲ್ಲಿ, ಪರೀಕ್ಷಿಸಲ್ಪಟ್ಟ ರಕ್ತವು ಕೊಡಲ್ಪಟ್ಟ ಸಾವಿರಾರು ಮಂದಿ ಸಹ ಹೆಪಟೈಟಿಸ್‌ ರೋಗ ಪಡೆಯುತ್ತಾರೆಂಬುದು ಸ್ಪಷ್ಟವಾಯಿತು. ರೋಗ ನಿತ್ರಾಣದಿಂದ ಬಳಲಿದ ಅನೇಕರಿಗೆ ಅವರ ಪಿತ್ತಜನಕಾಂಗ ಹಾಳಾಗಿ ಹೋದದ್ದು ತಿಳಿದು ಬಂತು. ಆದರೆ ರಕ್ತವು ಪರೀಕ್ಷೆಗೊಳಗಾಗಿದ್ದಲ್ಲಿ, ಇದೇಕೆ ಸಂಭವಿಸಿತು? ಏಕಂದರೆ. ರಕ್ತದಲ್ಲಿ ಇನ್ನೊಂದು ವಿಧದ ನಾನ್‌-ಎ, ನಾನ್‌-ಬಿ (NANB) ರೋಗಾಣುವಿತ್ತು. ಹತ್ತು ವರ್ಷಗಳ ತನಕ ಇದು ರಕ್ತ ಪೂರಣಗಳನ್ನು ಪೀಡಿಸಿತು—ಇಟೆಲಿ, ಜಪಾನ್‌, ಸ್ಪೆಯ್ನ್‌, ಸ್ವೀಡನ್‌ ಮತ್ತು ಯುನೊಯಿಟೆಡ್‌ ಸ್ಟೇಟ್ಸ್‌ನಲ್ಲಿ ರಕ್ತ ತಕ್ಕೊಂಡವರಲ್ಲಿ 8 ರಿಂದ 17 ಸೇಕಡಾ ಮಂದಿಗೆ ರೋಗ ಬಂತು.

ಆ ಬಳಿಕ, “ರಹಸ್ಯಗರ್ಭಿತ ಹೆಪಟೈಟಿಸ್‌ ನಾನ್‌-ಎ, ನಾನ್‌-ಬಿ ವೈರಸನ್ನು ಬೇರ್ಪಡಿಸಲಾಗಿದೆ”; “ರಕ್ತದಲ್ಲಿರುವ ಜ್ವರವನ್ನು ಮುರಿಯುವುದು”, ಎಂಬಂಥ ತಲೆಪಂಕ್ತಿಗಳು ಬಂದವು. ‘ತಪ್ಪಿಸಿ ಕೊಂಡಿರುವ ಆಸಾಮಿ ಸಿಕ್ಕಿದೆ!” ಎಂಬುದೇ ಇದರ ಸಂದೇಶವಾಗಿತ್ತು. 1989ರ ಏಪ್ರಿಲಿನಲ್ಲಿ, ಎನ್‌ಎಎನ್‌ಬಿ ಈಗ ಪರೀಕೆಗ್ಷೆ ಸಿದ್ಧವಾಗಿದೆ ಮತ್ತು ಅದಕ್ಕೆ ಈಗ ಹೆಪಟೈಟಿಸ್‌ ಸಿ ಎಂದು ಹೆಸರು ಎಂದು ಸಾರ್ವಜನಿಕರಿಗೆ ತಿಳಿಸಲ್ಪಟ್ಟಿತು.

ಈ ಉಪಶಮನ ಅಪಕವ್ವೋ ಎಂದು ನೀವು ಯೋಚಿಸಬಹುದು. ವಾಸ್ತವವೇನಂದರೆ, ಇಟಾಲಿಯನ್‌ ಸಂಶೋಧಕರು ವ್ಯತ್ಯಾಸರೂಪದ ಇನ್ನೊಂದು ಹೆಪಟೈಟಿಸ್‌ ರೋಗಾಣುವನ್ನು ಕಂಡುಹಿಡಿದ್ದಾರೆಂದು ವರದಿಯಾಯಿತು. ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಹೆಲ್ತ್‌ ಲೆಟರ್‌ (ನವಂಬರ 1989) ಅವಲೋಕಿಸಿದ್ದು: “ಕೆಲವು ಅಧಿಕಾರಿಗಳು, ಈ ಎ, ಬಿ, ಸಿ ಮತ್ತು ಡಿ ವೈರಸ್‌ಗಳು ಹೆಪಟೈಟಿಸಿನ ಪೂರ್ತಿ ಅಕ್ಷರ ಮಾಲೆಯಲ್ಲ; ಇತರ ವೈರಸ್‌ಗಳೂ ಮೇಲೆದ್ದು ಬರಬಹುದು” ಎಂದು ಚಿಂತಿಸುತ್ತಾರೆ.” ದ ನ್ಯೂ ಯೋರ್ಕ್‌ ಟೈಮ್ಸ್‌ (ಫೆಬ್ರವರಿ 13, 1990) ಹೇಳಿದ್ದು: “ಇತರ ವೈರಸ್‌ಗಳೂ ಹೆಪಟೈಟಿಸ್‌ನ್ನು ಬರಮಾಡಬಹುದೆಂದು ಪರಿಣತರು ಬಲವಾಗಿ ಎಣಿಸುತ್ತಾರೆ. ಅವು ಕಂಡುಹಿಡಿಯಲ್ಪಟ್ಟರೆ ಅವಕ್ಕೆ ಹೆಪಟೈಟಿಸ್‌ ಇ ಮುಂತಾದ ಹೆಸರಿರುವುದು.”

ರಕ್ತವನ್ನು ಸುರಕ್ಷಿತ ಮಾಡಲು ಇನ್ನೂ ದೀರ್ಘಕಾಲದ ಪರೀಕ್ಷೆಯ ಸಮಸ್ಯೆ ರಕ್ತನಿಧಿಗಳೆದುರಿಗೆ ಇದೆಯೋ? ಖರ್ಚಿನ ಸಮಸ್ಯೆಯ ಕುರಿತು, ಅಮೆರಿಕನ್‌ ರೆಡ್‌ ಕ್ರಾಸ್‌ನ ಒಬ್ಬ ಡೈರೆಕ್ಟರು ಈ ಗಾಬರಿಗೊಳಿಸುವ ಹೇಳಿಕೆ ನೀಡಿದರು: “ಹರಡುವ ಪ್ರತಿಯೊಂದು ರೋಗಾಣುವಿಗಾಗಿ ನಾವು ಒಂದು ಪರೀಕ್ಷೆಗೆ ಇನ್ನೊಂದು ಪರೀಕ್ಷೆಯನ್ನು ಕೂಡಿಸುತ್ತಾ ಹೋಗಸಾಧ್ಯವಿಲ್ಲ.”—ಮೆಡಿಕಲ್‌ ವರ್ಲ್ಡ್‌ ನ್ಯೂಸ್‌, ಮೇ 8, 1989.

ಹೆಪಟೈಟಿಸ್‌ ಬಿಯ ಪರೀಕ್ಷೆ ಸಹ ವಿಶ್ವಾಸಾರ್ಹವಲ್ಲ. ರಕ್ತದ ಮೂಲಕ ಅನೇಕರಿಗೆ ಅದು ಇನ್ನೂ ಸೋಂಕುತ್ತಾ ಇದೆ. ಇದಲ್ಲದೆ, ಪ್ರಕಟಿತವಾದ ಹೆಪಟೈಟಿಸ್‌ ಸಿಯ ಪರೀಕ್ಷೆಯಲ್ಲಿ ಜನರು ತೃಪ್ತರಾದರೋ? ರೋಗದ ಪ್ರತಿವಿಷವಸ್ತು ಪರೀಕ್ಷೆಯಿಂದ ಕಂಡು ಹಿಡಿಯಲ್ಪಡುವ ಮೊದಲು ಒಂದು ವರ್ಷ ದಾಟೀತೆಂದು ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಎಸೋಸಿಯೇನ್‌ ತೋರಿಸಿತು. (ಜನವರಿ 5, 1990) ಈ ಮಧ್ಯೆ, ರಕ್ತ ಪೂರಣ ಮಾಡಲ್ಪಟ್ಟ ಜನರಿಗೆ ಹಾಳಾದ ಯಕೃತ್ತು ಮತ್ತು ಮರಣ ಪ್ರಾಪ್ತವಾಗಬಹುದು.

[ಪುಟ 22 ರಲ್ಲಿರುವ ಚೌಕ/ಚಿತ್ರಗಳು]

ರಕ್ತವು ದೂರದಲ್ಲಿರುವ ಜನರಿಗೆ ಹೇಗೆ ರೋಗವನ್ನು ರವಾನಿಸುತ್ತದೆಂದು ಷಾಗಸ್‌ ರೋಗ ಚಿತ್ರಿಸುತ್ತದೆ. “ದ ಮೆಡಿಕಲ್‌ ಪೋಸ್ಟ್‌” (ಜನವರಿ 16, 1990) ‘ಲ್ಯಾಟೀನ್‌ ಅಮೆರಿಕದ 100-120 ಲಕ್ಷ ಜನರು ಇದರಿಂದ ದೀರ್ಘಾವಧಿಯ ಪೀಡಿತರಾಗಿದ್ದಾರೆ’ ಎಂದ ವರದಿ ಮಾಡುತ್ತದೆ. “ದಕ್ಷಿಣ ಅಮೆರಿಕದ ರಕ್ತ ಪೂರಣದ ಅತಿ ದೊಡ್ಡ ಅಪಾಯಗಳಲ್ಲಿ ಇದು ಒಂದು” ಎಂದು ಕರೆಯಲ್ಪಟ್ಟಿದೆ. ಒಂದು “ಘಾತಕ ಹುಳು” ಮಲಗಿರುವವನ ಮುಖವನ್ನು ಕಚ್ಚಿ, ರಕ್ತ ಹೀರಿ, ಆ ಗಾಯದಲ್ಲಿ ಮಲವನ್ನು ವಿಸರ್ಜಿಸುತ್ತದೆ. ಬಳಿಕ ಆ ವ್ಯಕ್ತಿ ಅನೇಕ ವರ್ಷಗಳ ತನಕ ಈ ಷಾಗಸ್‌ ರೋಗವನ್ನು ಒಯ್ಯುತ್ತಾ (ಈ ಮಧ್ಯೆ ತನ್ನ ರಕ್ತ ದಾನ ಮಾಡಬಹುದು) ಬಳಿಕ ಮಾರಕವಾದ ಹೃದಯ ರೋಗ ಜಟಿಲತೆಗಳಿಗೆ ಒಳಗಾಗಬಹುದು.

ಆದರೆ ಇದು ದೂರದ ಭೂಖಂಡಗಳವರಿಗೆ ಏಕೆ ಚಿಂತೆ ಹುಟ್ಟಿಸಬೇಕು? “ದ ನ್ಯೂ ಯೋರ್ಕ್‌ ಟೈಮ್ಸ್‌” (ಮೇ 23, 1989) ನಲ್ಲಿ ಡಾ. ಎಲ್‌. ಕೆ ಆಲ್‌ಮ್ಟೆನ್‌, ರಕ್ತ ಪೂರಣವಾದ ಬಳಿಕ ಅಂಟಿದ್ದ ಷಾಗಸ್‌ ರೋಗಿಗಳ ಮತ್ತು ಯಾರಲ್ಲಿ ಒಬ್ಬನು ಸತ್ತಿದ್ದನೋ ಅಂಥ ರೋಗಿಗಳ ಕುರಿತು ವರದಿ ಮಾಡಿದರು. ಆಲ್‌ಮ್ಟೆನ್‌ ಬರೆದುದು: “ಇನ್ನು ಹೆಚ್ಚಿನ ರೋಗಗಳು ಕಂಡು ಹಿಡಿಯಲಾರದೆ ಹೋಗಿರ ಬಹುದು, ಏಕಂದರೆ [ಇಲ್ಲಿಯ ಡಾಕ್ಟರರಿಗೆ] ಷಾಗನ್‌ ರೋಗದ ಪರಿಚಯವೂ ಇಲ್ಲ, ರಕ್ತ ಪೂರಣಗಳಿಂದಅದು ಹರಡುತ್ತದೆಂಬ ತಿಳುವಳಿಕೆಯೂ ಇಲ್ಲ.” ಹೌದು, ಈ ರೋಗಗಳು ವ್ಯಾಪಕವಾಗಿ ಪ್ರಯಾಣಿಸಲು ರಕ್ತವು ರೋಗವಾಹಕವಾಗಿರಬಲ್ಲದು.

[ಪುಟ 23 ರಲ್ಲಿರುವ ಚೌಕ]

ಡಾ. ನೂಡ್‌ ಲಂಡ್‌-ಓಲ್‌ಸನ್‌ ಬರೆದುದು: “ಏಯ್ಡ್ಸ್‌ ಪರೀಕ್ಷೆಯೂ ಸ್ವಯಂ-ಚಾಲಕವಾಗಿ ನಡೆಯುತ್ತದೆಂದು ಹೇಳಿ ಹೆಚ್ಚು ಅಪಾಯದ ಗುಂಪುಗಳ ಕೆಲವರು ರಕ್ತದಾನಿಗಳಾಗುವುದರಿಂದ ರಕ್ತ ಪೂರಣವನ್ನು ಅಂಗೀಕರಿಸುವ ವಿಷಯದಲ್ಲಿ ಮನಸ್ಸು ತೋರಿಸದಿರಲು ಕಾರಣವಿದೆ ಎಂದು ನನ್ನ ಅಭಿಪ್ರಾಯ. ಯೆಹೋವನ ಸಾಕ್ಷಿಗಳು ಇದನ್ನು ಅನೇಕ ವರ್ಷಗಳಿಂದ ನಿರಾಕರಿಸಿದ್ದಾರೆ. ಅವರು ಭವಿಷ್ಯವನ್ನು ಪರೀಕ್ಷಿಸಿದ್ದರೋ?—“ಯೂಗೆಸ್‌ಸ್ಕ್ರಿಪ್ಟ್‌ ಫಾರ್‌ ಲೇಗರ್‌” (ಡಾಕ್ಟರ್ಸ್‌ ವೀಕ್ಲಿ), ಸಪ್ಟಂಬರ 26, 1988.

[ಪುಟ 0 ರಲ್ಲಿರುವ ಚಿತ್ರ]

ಪೋಪರು ಗುಂಡಿನೇಟಿನಿಂದ ಬದುಕಿ ಉಳಿದರು. ಆಸ್ಪತ್ರೆ ಬಿಟ್ಟು ಹೋದ ಎರಡು ತಿಂಗಳಲ್ಲಿ “ತುಂಬಾ ಕಷ್ಟಾನುಭವ ಪಡುವವರಾಗಿ” ಅವರನ್ನು ಹಿಂದೆ ಕೊಂಡೊಯ್ಯಲಾಯಿತು. ಏಕೆ? ಅವರು ಪಡೆದ ರಕ್ತದಿಂದ ಬಂದ, ಕೊಲ್ಲ ಸಾಮರ್ಥ್ಯವಿದ್ದ ಸೈಟೊಮೆಗಲೊವೈರಸ್‌ ರೋಗಾಣುವಿನ ಕಾರಣದಿಂದಲೇ

[ಕೃಪೆ]

UPI/Bettmann Newsphotos

[ಪುಟ 23 ರಲ್ಲಿರುವ ಚಿತ್ರ]

ಏಯ್ಡ್ಸ್‌ ವೈರಸ್‌

[ಕೃಪೆ]

CDC, Atlanta, Ga.